ವೃಶ್ಚಿಕ ರಾಶಿ ಭವಿಷ್ಯ 2021 - Scorpio Horoscope 2021 in Kannada

ವೃಶ್ಚಿಕ ರಾಶಿ ಭವಿಷ್ಯ 2021 ವೃಶ್ಚಿಕ ರಾಶಿ ಭವಿಷ್ಯ 2021 ( vrushchika rashi bhavishya 2021 ) ರ ಪ್ರಕಾರ, ಮುಂಬರುವ ಹೊಸ ವರ್ಷವು ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬಹಳಷ್ಟು ಬದಲಾವಣೆ ಮತ್ತು ಉಡುಗೊರೆಯನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನವು ಕೆಲವು ಸವಾಲುಗಳಿಂದ ತುಂಬಿರಬಹುದು. ಶನಿಯ ಪ್ರಭಾವದಿಂದಾಗಿ ನೀವು ನಿಮ್ಮ ಕೆಲಸದ ಸ್ಟಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆಗ ಮಾತ್ರ ಶನಿ ದೇವ ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತಾರೆ. ಶನಿ ಸಂಚಾರದ ಸಮಯದಲ್ಲಿ ನಿಮ್ಮಲ್ಲಿ ಸೋಮಾರಿತನವು ಹೆಚ್ಚಾಗುತ್ತದೆ. ಇದರಿಂದ ಯಾವುದೇ ಕೆಲಸದಲ್ಲಿ ನೀವು ಮನಸ್ಸು ಹೊಂದುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಸಮಯದ ಮೌಲ್ಯವನ್ನು ಅರ್ಥಮಾಡಿಕೊಂಡು ಅದರ ಲಾಭವನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಕೆಲಸದ ಬಗ್ಗೆ ಮಾತ್ರ ಗಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದರೆ, ನೀವು ತೊಂದರೆಕ್ಕೊಳಗಾಗಬಹುದು. ವೃಶ್ಚಿಕ ರಾಶಿ ಭವಿಷ್ಯ 2021 ಪ್ರಕಾರ, ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಅದಕ್ಕಾಗಿ ಸಮಯ ಉತ್ತಮಾಗಿರುತ್ತದೆ. ಈ ವರ್ಷ ನೀವು ಹಣವನ್ನು ಪಡೆಯುತ್ತೀರಿ, ಆದರೆ ಇದರೊಂದಿಗೆ ನಿಮ್ಮ ವೆಚ್ಚಗಳು ಸಹ ಹೆಚ್ಚಾಗುತ್ತವೆ. ಈ ವರ್ಷ ನೀವು ನಿಮ್ಮ ಹಣವನ್ನು ಉಳಿಸುವುದು ಮತ್ತು ಅದರ ಸರಿಯಾದ ಹೂಡಿಕೆ ಮಾಡುವುದನ್ನು ಕಲಿಯಬೇಕು. ಇಲ್ಲದಿದ್ದರೆ ಮುಂದಿನ ಸಮಯದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ನಿಮ್ಮ ವೃತ್ತಿ ಸಮಾಲೋಚನೆ ರಿಪೋರ್ಟ್ ಅನ್ನು ಪಡೆಯಿರಿ

ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಈ ವರ್ಷ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ಅದಕ್ಕಾಗಿ ನೀವು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ನೀವು ಅಧ್ಯಯನದಲ್ಲಿ ಹೆಚ್ಚು ಮನಸ್ಸು ಹೊಂದಿರುವುದಿಲ್ಲ ಇದಕ್ಕೆ ಕಾರಣ ನಿಮ್ಮ ಕೆಟ್ಟ ಸಹವಾಸವಾಗಿರಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಗುರಿಯನ್ನು ನೆನಪಿನಲ್ಲಿಟ್ಟು, ನಿಮ್ಮ ಶಿಕ್ಷಣದ ಬಗ್ಗೆ ಮಾತ್ರ ಗಮನ ಹರಿಸಿ. ಈ ಸಮಯದಲ್ಲಿ ಯಾವುದೇ ಸಮಸ್ಯೆಯನ್ನು ಅನುಭವಿಸಿದರೆ, ಅದನ್ನು ಮರೆಮಾಚುವ ಬದಲು, ನಿಮ್ಮ ಪೋಷಕರು ಅಥವಾ ಶಿಕ್ಷಕರೊಂದಿಗೆ ಹಂಚಿಕೊಳ್ಳಿ. ಕುಟುಂಬ ಜೀವನದಲ್ಲಿ ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ತಂದೆ ತಾಯಿಯ ಆರೋಗ್ಯವು ಹದಗೆಡಬಹುದು, ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಮೇಲೆ ಬೀರುತ್ತದೆ. ಆದಾಗ್ಯೂ ಈ ವರ್ಷ ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುತ್ತೀರಿ. ಇದರಿಂದ ಕೆಲಸದ ಸ್ಥಳದಲ್ಲಿ ನೀವು ಮೊದಲಿಗಿಂತ ಹೆಚ್ಚು ಉತ್ತಮ ಮಾಡಲು ಸಾಧ್ಯವಾಗುತ್ತದೆ.

ವಿವಾಹಿತ ಸ್ಥಳೀಯರಿಗೆ ಅವರ ವೈವಾಹಿಕ ಜೀವನದಲ್ಲಿ ಈ ವರ್ಷ ಕೆಲವು ಸಮಸ್ಯೆಗಳ ಸಾಧ್ಯತೆಗಳಿವೆ. ನಿಮ್ಮ ಮತ್ತು ಜೀವನ ಸಂಗಾತಿಯ ಅನಗತ್ಯ ವಿಷಯಗಳಿಂದ ಜಗಳವಾಗಬಹುದು. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಆರೋಗ್ಯದ ಮೇಲೆ ಬೀರಬಹುದು. ಮಕ್ಕಳ ಬದಿಯಿಂದ ಸಂತೋಷವನ್ನು ಪಡೆಯುತ್ತೀರಿ ಮತ್ತು ಅವರು ಉತ್ತಮ ಪ್ರದರ್ಶನ ಮಾಡಿ ಮನೆ ಕುಟುಂಬದ ಸದಸ್ಯರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿ ಜೀವನದಲ್ಲಿ ಪ್ರೀತಿ ತುಂಬಿರುತ್ತದೆ. ಆದರೆ ನಡು ನಡುವೆ ಪ್ರೀತಿಪಾತ್ರರ ಕೋಪವನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ನಿಮ್ಮನ್ನು ಮುಂದಿಡದೆ, ನಿಮ್ಮ ಸಂಬಂಧವನ್ನು ಮುಂದಿಡುವುದು ಉತ್ತಮ. ಪ್ರೀತಿಯ ಮದುವೆಯಲ್ಲಿ ಯಶಸ್ಸು ಪಡೆಯುವಿರಿ. ನಿಮ್ಮ ಆರೋಗ್ಯವನ್ನು ನೋಡಿದರೆ, ಈ ವರ್ಷ ಗ್ರಹಗಳ ಪರಾಭವವು ನಿಮ ದೈಹಿಕ ಕಷ್ಟವನ್ನು ನೀಡಬಹುದು. ವಿಶೇಷವಾಗಿ ಆರಂಭದ ತಿಂಗಳಲ್ಲಿ ಆರೋಗ್ಯದ ನಷ್ಟ ಸಧ್ಯ. ಎಲ್ಲಾ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ, ದೀರ್ಘಕಾಲದ ವರೆಗೆ ನಿಮ್ಮನ್ನು ಕಾಡುತ್ತಿರಬಹುದು.

Read in English - Scorpio Horoscope 2021

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according to Scorpio Yearly Horoscope 2021

ವೃಶ್ಚಿಕ ರಾಶಿ ಭವಿಷ್ಯ 2021 ಪ್ರಕಾರ, ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ರಲ್ಲಿ ವೃತ್ತಿ ಜೀವನದಲ್ಲಿ ಕೆಅಲ್ವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ವರ್ಷ ಕಾಲಪುರುಷ ಜಾತಕದ ಪ್ರಕಾರ ಶನಿ ನಿಮ್ಮ ಮೂರನೇ ಮನೆಯಲ್ಲಿ ಕುಳಿತಿರುತ್ತಾರೆ, ಇದರಿಂದಾಗಿ ನೀವು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನೀವು ಸ್ವಭಾವತಃ ಸೋಮಾರಿತನವನ್ನು ಹೊಂದಿರುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಅಭ್ಯಾಸಗಳನ್ನು ತೊಡೆದುಹಾಕಿ, ಮುಂದುವರಿಯಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಫಲಿತಾಂಶಳಾಗುತ್ತವೆ. ಗ್ರಹಗಳ ಚಲನೆಯ ಕಾರಣದಿಂದಾಗಿ ನಿಮ್ಮ ಸೋಮಾರಿತನವು ನಿಮ್ಮ ಕೆಲಸದ ಸ್ಟಳದಲ್ಲಿ ಸವಾಲುಗಳನ್ನು ತರುತ್ತವೆ. ವಿಶೇಷವಾಗಿ ಈ ವರ್ಷದ ಜನವರಿ ತಿಂಗಳಿನಿಂದ ಮಧ್ಯೆ ಫೆಬ್ರವರಿ, ಮಧ್ಯೆ ಮಾರ್ಚ್, ಮಧ್ಯೆ ಏಪ್ರಿಲ್, ಜೂನ್ ಮತ್ತು ಜೂಲೈ ತಿಂಗಳ ಸಮಯವೂ ನಿಮಗೆ ಅತ್ಯಂತ ಕಷ್ಟಕರವಾಗಲಿವೆ. ಅಂದರೆ ಆರಂಭದ 6 ತಿಂಗಳಲ್ಲಿ ನೀವು ಹೆಚ್ಚು ಎಚ್ಚರದಿಂದ ಕೆಲಸದ ಬಗ್ಗೆ ಗಮನ ಹರಿಸನೇಕು. ಯಾವುದೇ ಹೊಸ ಕಾರ್ಯವನ್ನು ತೆಗೆದುಕೊಳ್ಳುವ ಮೊದಲು ನೀವು ಆ ಕೆಲಸದ ತಂತ್ರವನ್ನು ತಯಾರಿಸಿ ನಡೆಯಬೇಕು. ಈ ಸಮಯದಲ್ಲಿ ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳುವಂತಹ ಯಾವುದನ್ನೂ ಮಾಡಬೇಡಿ.

ಆದಾಗ್ಯೂ , ಜೂಲೈ ನಂತರವು ಪರಿಸ್ಥಿತಿಗಳು ಸುಧಾರಿಸುವುದನ್ನು ಕಾಣಲಾಗುತ್ತದೆ ಮತ್ತು ಆಗಸ್ಟ್ ತಿಂಗಳು ನಿಮಗೆ ವಿಶೇಷವಾಗಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಇಂದು ಹೊಸ ಆರಂಭದೊಂದಿಗೆ ಕೆಲಸ ಮಾಡುವುದನ್ನು ಕಾಣಲಾಗುತ್ತದೆ ಮತ್ತು ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗದಲ್ಲಿರುವ ಜನರು ಮತ್ತು ತಮ್ಮ ವರ್ಗಾವಣೆಯ ಬಗ್ಗೆ ಯೋಚಿಸುತ್ತಿರುವವರಿಗೆ ಜೂಲೈ ತಿಂಗಳು ಉತ್ತಮವಾಗಿರಲಿದೆ. ವರ್ಷದ ಅಂತ್ಯದಲ್ಲಿ ನೀವು ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು ಎಂದು ವೃಶ್ಚಿಕ ರಾಶಿ ಭವಿಷ್ಯ 2021 ಸೂಚಿಸುತ್ತಿದೆ. ಇದರ ಮೂಲಕ ನೀವು ಹಣಕಾಸು ಗಳಿಸುವಲ್ಲಿ ಯಶಸ್ವಿಯಾಗುವಿರಿ.

ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ಅವರಿಗೆ ವರ್ಷ 2021 ರ ಆರಂಭವು ಉತ್ತಮವಾಗಿರಲಿದೆ. ಮಾರ್ಚ್ ರಿಂದ ಅಕ್ಟೋಬರ್ ತಿಂಗಳು ನಿಮಗೆ ಹೆಚ್ಚು ಅದೃಷ್ಟವಾಗಿರಲಿದೆ. ಈ ಸಮಯದಲ್ಲಿ ಅನೇಕ ಹೊಸ ಹೂಡಿಕೆದಾರರನ್ನು ನೀವು ಸಂಪರ್ಕಿಸಬಹುದು ಮತ್ತು ಇದರಿಂದ ಭವಿಷ್ಯದಲ್ಲಿ ನಿಮಗೆ ಲಾಭವಾಗುತ್ತದೆ.

ಈಗ ಆಸ್ಟ್ರೋಸೇಜ್ ವಾರ್ತಾ ಮೂಲಕ ಉತ್ತಮ ಮತ್ತು ಪರಿಣಿತ ಜ್ಯೋತಿಷಿಗಳೊಂದಿಗೆ ನೇರವಾಗಿ ಕಾಲ್ ನಲ್ಲಿ ಮಾತನಾಡಿ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according to Scorpio yearly horoscope 2021

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಆದಾಗ್ಯೂ ಆರಂಭದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಿರುತ್ತವೆ. ಈ ಸಮಯದಲ್ಲಿ ನಿಮ್ಮ ಯಾವುದೇ ಸಂಪತ್ತು ಅಥವಾ ಹಣಕಾಸಿನ ಬಗ್ಗೆ ವಿವಾದದ ಸಾಧ್ಯತೆ ಇದೆ. ಹೇಗಾದರೂ, ಇದರ ನಂತರ ನಿಮಗೆ ಹಣದ ಲಾಭವಾಗುವ ಸಾಧ್ಯತೆ ಕಂಡುಬರುತ್ತಿದೆ. 2021 ರ ಮುನ್ಸೂಚನೆಯ ಪ್ರಕಾರ, ಹಣಕ್ಕೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯದಲ್ಲಿ ಅಮಾನತುಗೊಳಿಸಿದ್ದರೆ, ಈ ವರ್ಷ ಅದರ ನಿರ್ಧಾರವು ನಿಮ್ಮ ಪರವಾಗಿ ಬರಬಹುದು. ಹಣದ ಲಾಭದೊಂದಿಗೆ ನಿಮ್ಮ ವೆಚ್ಚಗಳು ಸಹ ನಿರಂತರವಾಗಿ ಹೆಚ್ಚಾಗುತ್ತಲೇ ಇರುತ್ತವೆ. ದೀರ್ಘಕಾಲದಿಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿರುವವರಿಗೆ ಈ ವರ್ಷದಲ್ಲಿ ಸಮಸ್ಯೆಗಳು ಉಂಟಾಗಬಹುದು.

ಆದಾಗ್ಯೂ ಗ್ರಹಗಳ ಸಂಚಾರವು ನಿಮ್ಮ ಪರವಾಗಿರುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತದೆ ಮತ್ತು ಇದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ನಿಯಂಗೆ ಕೆಲವು ಸಮಸ್ಯೆಗಳು ಇರುತ್ತವೆ. ಈ ಸಮಯದಲ್ಲಿ ಮನೆ-ಕುಟುಂಬ ಮತ್ತು ನಿಮ್ಮ ಕೆಲವು ಆಸೆಗಳನ್ನು ಪೂರ್ಣಗೊಳಿಸಲು ನೀವು ಖರ್ಚು ಮಾಡುವುದನ್ನು ಕಾಣಲಾಗುತ್ತದೆ. ಮನೆಯಲ್ಲಿ ಯಾವುದೇ ಮಂಗಲಿಕ ಕಾರ್ಯವನ್ನು ಯೋಜಿಸಬಹುದು. ಇದಲ್ಲದೆ ಜೂಲೈ ಮತ್ತು ಆಗಸ್ಟ್ ತಿಂಗಳ ಸಮಯವೂ ನಿಮಗೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Scorpio yearly horoscope 2021 ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಿಂದಿನ ಸಮಯಕ್ಕಿಂತ ಹೆಚ್ಚು ಕಠಿಣ ಪರಿಶ್ರಮಿಸಬೇಕುತ್ತದೆ. ಅಧ್ಯಯನದಲ್ಲಿ ನೀವು ಸಾಮಾನ್ಯ ವಿಧ್ಯಾರ್ಥಿಯಾಗಿದ್ದರೆ, ಯಶಸ್ವಿಯಾಗಲು ನಿಮಗೆ ನಿಮ್ಮ ಗುರುಗಳ ಮತ್ತು ಶಿಕ್ಷಕರ ಅಗತ್ಯವಿರಬಹುದು. ಅಂತಹ ಸಂದರ್ಭದಲ್ಲಿ ಅವರ ಸಹಾಯ ಮತ್ತು ಬೆಂಬಲವನ್ನು ಪಡೆಯಲು ಖಂಡಿತವಾಗಿಯೂ ಹಿಂಜರಿಯಬೇಡಿ. ಶಿಕ್ಷಣ ಮುನ್ಸೂಚನೆಯ ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಯಶಸ್ಸು ಪಡೆಯುತ್ತಾರೆ. ಆ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರು ಸಹ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ಐದನೇ ಮನೆಯ ಅಧಿಪತಿ ಗ್ರಹ ಗುರುವಿನ ಅನುಗ್ರಹದಿಂದ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಜನವರಿ ರಿಂದ ಏಪ್ರಿಲ್ ವರೆಗಿನ ಸಮಯದಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಯಾವುದೇ ಉತ್ತಮ ಸ್ಥಳದಲ್ಲಿ ಪ್ರವೇಶ ಪಡೆಯಲು ಅವಕಾಶವನ್ನು ಪಡೆಯುತ್ತೀರಿ. ವಿದೇಶದಲ್ಲಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವ ಜನರ ಕನಸು ಜನವರಿ, ಏಪ್ರಿಲ್ ಅಮ್ತ್ತು ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ಎಲ್ಲ ಕಾಗದಪತ್ರಗಳನ್ನು ಮೊದಲೇ ಸಂಗಹಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according to Scorpio yearly horoscope 2021

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ವೃಶ್ಚಿಕ ರಾಶಿಚಕ್ರದ ಸ್ಥಳೀಯರು ವರ್ಷ 2021 ರಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಲಿದೆ. ಏಕೆಂದರೆ ಗ್ರಹಗಳ ದೃಷ್ಟಿಯು ನಿಮ್ಮ ಕುಟುಂಬ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ತಂದೆ ತಾಯಿಯ ಅರೋಗ್ಯ ಸಂಬಂಧಿತ ಸಮಸ್ಯೆ ನಿಮಗೆ ಒತ್ತಡವನ್ನು ನೀಡುತ್ತದೆ. ವಿಶೇಷವಾಗಿ ಜನವರಿ ಮಧ್ಯದಿಂದ ಫೆಬ್ರವರಿ ಮಧ್ಯದ ವರೆಗೆ ತಂದೆಯ ಆರೋಗ್ಯವು ಕುಸಿಯಬಹುದು. ಇದರಿಂದಾಗಿ ಅವರ ಸ್ವಭಾವವು ನಿಮ್ಮ ಕಡೆಗೆ ಸ್ವಲ್ಪ ಕೋಪದಿಂದಿರುತ್ತದೆ. ಆದಾಗ್ಯೂ ಏಪ್ರಿಲ್ ತಿಂಗಳ ಮೊದಲನೇ ವಾರದಿಂದ ಸೆಪ್ಟೆಂಬರ್ ಮತ್ತು ನಂತರ 20 ನವೆಂಬರ್ ರಿಂದ ವರ್ಷದ ಅಂತ್ಯದ ವರೆಗೆ ಸಮಯ ತುಂಬಾ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುವಿರಿ ಮತ್ತು ಕೆಲಸದ ಸ್ಥಳದಲ್ಲೂ ಮನೆಯ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ಮನೆ-ಕುಟುಂಬದಲ್ಲಿ ಮಂಗಲಿಕ ಕಾರ್ಯಕ್ರಮದ ಆಯೋಜನೆಯಿಂದಾಗಿ, ಮನೆಯಲ್ಲಿ ಸಂತೋಷ ಶಾಂತಿ ಇರುತ್ತದೆ. ಅತಿಥಿಗಳು ಮತ್ತು ಸಂಬಂಧಿಕರ ಆಗಮನವು ಮನೆಯ ವಾತಾವರಣವನ್ನು ಹೆಚ್ಚು ಸಂತೋಷಪಡಿಸುತ್ತದೆ. ಈ ವರ್ಷ ನೀವು ನಿಮ್ಮ ಕುಟುಂಬದ ಸದಸ್ಯರೊಂದ್ಗಿಯೇ ಯಾವುದೇ ಯಾತ್ರೆಗೆ ಹೋಗಲು ಯೋಜಿಸಬಹುದು. ಆದಾಗ್ಯೂ 15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯೆ ತಂದೆಯ ಆರೋಗ್ಯವು ಹದಗೆಡಬಹುದು. ಇದರ ಹಿಂದಿನ ಕಾರಣ ಅವರ ಮಾನಸಿಕ ಒತ್ತಡ. ಅಂತಹ ಪರಿಸ್ಥಿತಿಯಲ್ಲಿ ಅವರ ಬಗ್ಗೆ ಕಾಳಜಿ ವಹಿಸುವುದು ನಿಮ್ಮ ಕರ್ತವ್ಯ. ಈ ವರ್ಷ ನಿಮ್ಮ ಕುಟುಂಬದ ಸದಸ್ಯರ ಬಗ್ಗೆ ಸಕಾರಾತ್ಮಕ ನಡವಳಿಕೆಯನ್ನು ತೋರಿಸುವುದು ಅತ್ಯಂತ ಅಗತ್ಯವಾಗಿರುತ್ತದೆ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Married life according to Scorpio yearly horoscope 2021

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ವಿವಾಹಿತ ಜೀವನದಲ್ಲಿ ಅನೇಕ ಏರಿಳಿತಗಳು ಉಂಟಾಗುತ್ತವೆ. ಏಕೆಂದರೆ ರಾಹುವು ಈ ವರ್ಷ ನಿಮ್ಮ ರಾಶಿಚಕ್ರದಿಂದ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಬಳಲುತ್ತಿರುವ ಸಾಧ್ಯತೆ ಇದೆ. ವಿಶೇಷವಾಗಿ 22 ಫೆಬ್ರವರಿ ರಿಂದ 14 ಏಪ್ರಿಲ್ ಮಧ್ಯೆ ವೈವಾಹಿಕ ಜೀವನಕ್ಕೆ ಸ್ವಲ್ಪ ಒತ್ತಡದಿಂದ ತುಂಬಿರಲಿದೆ. ಯಾವುದೇ ವಿಷಯದ ಬಗ್ಗೆ ಜೀವನ ಸಂಗಾತಿಯೊಂದಿಗೆ ವಿವಾದವಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ಜಗಳವಾಗುತ್ತಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನಿಮ್ಮ್ಮ ಕಳಪೆ ಆರೋಗ್ಯದ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಮೇ ತಿಂಗಳಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು ಎಂದು ವೃಶ್ಚಿಕ ರಾಶಿ ಭವಿಷ್ಯ 2021 ಸೂಚಿಸುತ್ತಿದೆ. ಏಕೆಂದರೆ ಈ ಸಮಯದಲ್ಲಿ ಸೂರ್ಯ ಸಂಚಾರವು ನಿಮ್ಮ ಏಳನೇ ಮನೆಯಲ್ಲಿ ರಾಹುವಿನೊಂದಿಗೆ ಇರುತ್ತದೆ ಮತ್ತು ನೀವು ಯಾವುದೇ ಮಾತುಗಳನ್ನು ನಿರ್ಲಕ್ಷಿಸಿದರೆ, ನಿಮ್ಮ ಸಣ್ಣ ವಿಷಯವು ದೊಡ್ಡವಾಗಲು ತಡವಾಗುವುದಿಲ್ಲ. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಕುಳಿತು ಮಾತನಾಡುವುದು ಮತ್ತು ಎಲ್ಲಾ ಸಮಸ್ಯೆಯನ್ನು ಪರಿಹರಿಸುವುದು ಉತ್ತಮ.

ನಿಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಜನವರಿ ತಿಂಗಳಿಂದ ಅಕ್ಟೋಬರ್ ತಿಂಗಳ ವರೆಗಿನ ಸಮಯವೂ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿಯನ್ನು ಹೊಂದುತ್ತಾರೆ. ಇದರೊಂದಿಗೆ ಅವರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನ ಮಾಡುವುದನ್ನು ಕಾಣಲಾಗುತ್ತದೆ. ನಿಮ್ಮ ಮತ್ತು ಮಕ್ಕಳ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಜೀವನ ಸಂಗಾತಿ ಸಂತೋಷವಾಗಿರುತ್ತಾರೆ. ವೈವಾಹಿಕ ಜೀವನಕ್ಕೆ ಆಗಸ್ಟ್ ತಿಂಗಳು ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ಸುತ್ತಾಡಲು ಹೋಗಬಹುದು. ಅವರ ಸಹಾಯದ ಮೂಲಕ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಗ್ರಹಗಳ ಸಂಚಾರದ ಪರಿಣಾಮವಾಗಿ ನಿಮ್ಮ ಮಕ್ಕಳು ಸೆಪ್ಟೆಂಬರ್ ರಿಂದ ನವೆಂಬರ್ ತಿಂಗಳಲ್ಲಿ ಯಾವುದೇ ದೊಡ್ಡ ಸಾಧ್ಯನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according to Scorpio yearly horoscope 2021

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಪ್ರೀತಿ ಜೀವನದಲ್ಲಿ ಏರಿಳಿತಗಳು ತುಂಬಿರುತ್ತವೆ. ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಶನಿಯ ದೃಷ್ಟಿಯು ಐದನೇ ಮನೆಯಲ್ಲಿರುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಆದಾಗ್ಯೂ ಆಳವಾದ ಪ್ರೀತಿಯಲ್ಲಿರುವವರ ಪ್ರೀತಿಯು ಈ ವರ್ಷ ಇನ್ನಷ್ಟು ಆಳವಾಗಿರುತ್ತದೆ. ಒಬ್ಬಂಟಿಯಾಗಿರುವವರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಪ್ರೀತಿ ಜೀವನದಲ್ಲಿ ಪ್ರೀತಿಪಾತ್ರರ ಬಗೆಗಿನ ನಿಮ್ಮ ನಂಬಿಕೆಯು ಸ್ವಲ್ಪ ದುಬಲವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಅಂತಹ ಸಂದರ್ಭದಲ್ಲಿ ಎಲ್ಲ ರೀತಿಯ ತಪ್ಪು ಗ್ರಹಿಕೆಗಳನ್ನು ಅರ್ಥಮಾಡಿಕೊಳ್ಳುವುದು ವಿವೇಕಯುತವಾಗಿರುತ್ತದೆ. ಈ ಮಧ್ಯೆ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಅನುಮತಿಸಬೇಡಿ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳು ನಿಮಗೆ ಸ್ವಲ್ಪ ಪ್ರತಿಕೂಲವಾಗಿ ಕಂಡುಬರುತ್ತಿವೆ. ಯಾವುದೇ ಕಾರಣದಿಂದಾಗಿ ನೀವಿಬ್ಬರು ದೂರ ಹೋಗಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಸಮಯವಿದ್ದಾಗ, ಪರಸ್ಪರರೊಂದಿಗೆ ಸಂಭಾಷಣೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಪರಸ್ಪರರೊಂದಿಗೆ ನಿಮ್ಮ ಮಾತುಗಳನ್ನು, ನಿಮ್ಮ ಆಲೋಚನೆಗಳನ್ನು ಮತ್ತು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತೀರಿ. ಮಾರ್ಚ್ ತಿಂಗಳಲ್ಲಿ ಶುಕ್ರ ಸಂಚಾರವು ಐದನೇ ಮನೆಯಲ್ಲಿರುವ ಪರಿಣಾಮವಾಗಿ ಮಾರ್ಚ್ ರಿಂದ ಏಪ್ರಿಲ್ ವರೆಗಿನ ಸಮಯವೂ ಪ್ರೇಮಿ ಜೋಡಿಗಳಿಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಆದಾಗ್ಯೂ ಇದರ ನಂತರ ಏಪ್ರಿಲ್ ಅಂತ್ಯದಿಂದ ಕೆಲವು ವಿವಾದಗಳು ಹೊರಬರುತ್ತವೆ. ಸೆಪ್ಟೆಂಬರ್ ರಿಂದ ಮುಂದಿನ ಸಮಯವು ಪ್ರೀತಿಯ ಮದುವೆಯ ಸಾಧ್ಯತೆಯನ್ನು ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಬಯಸುತ್ತಿದ್ದರೆ, ಪ್ರೀತಿಯ ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ನಿರ್ಧಾರಗಳಲ್ಲಿ ನಿಮ್ಮ ಕುಟುಂಬದ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ.

ಅರೋಗ್ಯ ಸಮಾಲೋಚನೆ ಯೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರವನ್ನು ಪಡೆಯಿರಿ

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ ಜೀವನ - Health life according to Scorpio yearly horoscope 2021

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ಅರೋಗ್ಯ ಜೀವನದಲ್ಲಿ ಈ ವರ್ಷ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಈ ವರ್ಷ ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ ಆದರೆ ನಿಮ್ಮ ರಾಶಿಯಲ್ಲಿ ಕೇತುವಿನ ಉಪಸ್ಥಿತಿಯಿಂದಾಗಿ ನಿಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳುತ್ತ, ನಡು ನಡುವೆ ನಿಮಗೆ ದೈಹಿಕ ಕಷ್ಟವನ್ನು ನೀಡುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಸಾಧ್ಯವಾದಷ್ಟು ಹುರಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಈ ವರ್ಷ ನಿಮಗೆ ಉದ್ಭವಿಸುವ ರೋಗಗಳು ದೀರ್ಘಕಾಲದವರೆಗೆ ನಿಮ್ಮನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಕೇಯಿಲೆಯನ್ನು ನಿರ್ಲಕ್ಷಿಸಬೇಡಿ, ತಕ್ಷಣವೇ ಚಿಕಿತ್ಸೆಯನ್ನು ಪಡೆದುಕೊಳ್ಳಿ. ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ, ವಿಶೇಷವಾಗಿ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳು ನಿಮಗೆ ದುರ್ಬಲವೆಂದು ಸಾಬೀತುಪಡಿಸಬಹುದು. ಈ ಸಮಯದ ಹೊರೆತಾಗಿ ನೀವು ವರ್ಷದುದ್ದಕ್ಕೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರಗಳು - Astrological remedies according to Scorpio yearly horoscope 2021

  • ಉತ್ತಮ ಗುಣಮಟ್ಟದ ಹವಳ ದ ರತ್ನವನ್ನು ಧರಿಸುವುದು ನಿಮಗೆ ಶುಭವಾಗಿರುತ್ತದೆ.
  • ಬೆಳ್ಳಿಯ ಅರ್ಧಚಂದ್ರಾಕಾರದಲ್ಲಿ ಮುತ್ತು ರತ್ನವನ್ನು ತಯಾರಿಸಿ ಅದನ್ನು ನಿಮ್ಮ ಕುತ್ತಿಗೆಗೆ ಧರಿಸಿ. ಇದರಿಂದ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
  • ಪ್ರತಿದಿನ ಮನೆಯಿಂದ ಹೊರಹೋಗುವ ಮೊದಲು ನಿಮ್ಮ ಹಣೆಯ ಮೇಲೆ ಶುದ್ಧವಾದ ಕೇಸರಿ ಅಥವಾ ಹಳದಿಯ ತಿಲಕವನ್ನು ಹಚ್ಚಿಸಿ. ಇದರಿಂದ ನಿಮ್ಮ ದಿನವೂ ಶುಭವಾಗಿ ಕಳೆಯುತ್ತದೆ.
  • ಸಾಧ್ಯವಾದರೆ, ನಿಮ್ಮ ವಾಸಸ್ಥಳದಲ್ಲಿ ಕುಟುಂಬದೊಂದಿಗೆ ರುದ್ರಾಭಿಷೇಕದ ಪೂಜೆಯನ್ನು ಆಯೋಜಿಸಿ.
  • ತಾಮ್ರದ ಮತ್ತು ಕೆಲವು ಧಾನ್ಯಗಳ ಸಕ್ಕರೆಯನ್ನು ಬೆರೆಸಿ ಆ ನೀರನ್ನು ಉದಯಿಸುತ್ತಿರುವ ಸೂರ್ಯ ದೇವರಿಗೆ ಅರ್ಪಿಸಿ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳಿಂದ ಮುಕ್ತರಾಗಬಹುದು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer