ಸೂರ್ಯ ಗ್ರಹಣ 2021 - Solar Eclipse 2021 in Kannada
ಸೂರ್ಯ ಗ್ರಹಣ 2021 (Surya Grahan 2021) ರ, ನಮ್ಮ ಈ ಲೇಖನದಲ್ಲಿ ನೀವು ವರ್ಷ 2021 ರಲ್ಲಿ ಸಂಭವಿಸುವ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಗ್ರಹಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ. ಇದರೊಂದಿಗೆ ಪ್ರತಿ ಸೂರ್ಯ ಗ್ರಹಣದ ದಿನಾಂಕ, ಗ್ರಹಣದ ಧಾರ್ಮಿಕ ನಂಬಿಕೆಗಳು, ಅದರ ಸೂತಕ ಸಮಯ ಮತ್ತು ಅದರ ಪರಿಣಾಮವನ್ನು ತಿಳಿಯಲು ಸಹ ಸಾಧ್ಯವಾಗುತ್ತದೆ.
ಜೀವನದಲ್ಲಿ ಯಾವುದೇ ದೊಡ್ಡ ಸಮಯೇ ಬರುತ್ತಿದೆಯೇ? ಸರಿಯಾದ ಜ್ಯೋತಿಷ್ಯಪರಿಹಾರವನ್ನುಪಡೆಯಿರಿ - ಪ್ರಶ್ನೆ ಕೇಳಿ
ಸೂರ್ಯ ಗ್ರಹಣ 2021 ರ ಬಗ್ಗೆ ಮಾತನಾಡಿದರೆ, ಆಧುನಿಕ ವಿಜ್ಞಾನದಲ್ಲಿ ಸೂರ್ಯ ಗ್ರಹಣವನ್ನು ಯಾವಾಗಲೂ ಖಗೋಳ ಘಟನೆಯಾಗಿ ಕಾಣಲಾಗುತ್ತದೆ. ಆದರೆ ವೈದಿಕ ಜ್ಯೋತಿಷ್ಯದಲ್ಲಿ ಇದು ಪ್ರತಿಯೊಂದು ಜೀವಿಗಳ ಮೇಲೆ ಬೀಳುವ ಅನೇಕ ದೊಡ್ಡ ಬದಲಾವಣೆಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಪ್ರತಿಯೊಬ್ಬ ವ್ಯಕ್ತಿಯು ಗ್ರಹಣದ ಬಗ್ಗೆ ವಿಚಿತ್ರ ಭಯವನ್ನು ಹೊಂದಿರುವುದನ್ನು ಕಾಣಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸೂರ್ಯ ಗ್ರಹಣ 2021 ರ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಹಲವು ರೀತಿಯ ಪ್ರಶ್ನೆಗಳು ಉದ್ಭವಿಸುತ್ತವೆ.
Click here to Read in English- Solar Eclipse 2021
ಸೂರ್ಯಗ್ರಹಣ 2021
ವರ್ಷ 2021 ರಲ್ಲಿ ಒಟ್ಟು ಎರಡು ಸೂರ್ಯ ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಮೊದಲ ಗ್ರಹಣವು ಕಂಕಣ ಸೂರ್ಯ ಗ್ರಹಣವಾಗಿದೆ ಮತ್ತು ಎದರಡನೇಯದು ಪೂರ್ಣ ಸೂರ್ಯ ಗ್ರಹಣವಾಗಿದೆ. ಅಂತಹ ಪರಿಷ್ಟಿತಿಯಲ್ಲಿ ಈ ಸೂರ್ಯ ಗ್ರಹಣಗಳು ಯಾವಾಗ ಸಂಭವಿಸುತ್ತವೆ ಮತ್ತು ಯಾವ ದೇಶಗಳು ಅವುಗಳ ಗೋಚರತೆಯನ್ನು ಹೊಂದಿರುತ್ತವೆ ಎಂಬುದರ ಬಗ್ಗೆ ತಿಳಿಯೋಣ. ಇದರೊಂದಿಗೆ ಸೂರ್ಯ ಗ್ರಹಣ 2021 (Surya Grahan 2021) ರ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿ ಯಾವ ವಿಷಯಗಳ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕೆಂದು ಸಹ ನಿಮಗೆ ತಿಳಿಯುತ್ತದೆ. ಶಾಸ್ತ್ರಗಳ ಪ್ರಕಾರ, ಪ್ರತಿಯೊಂದು ಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಮತ್ತು ತಮ್ಮ ಜೀವನವನ್ನು ಯಶಸ್ವಿಗೊಳಿಸಲು ಸೂರ್ಯ ಗ್ರಹಣದ ಸಮಯದಲ್ಲಿ ಪ್ರತಿಯೊಬ್ಬ ಸ್ಥಳೀಯರು ತಮ್ಮ ಜಾತಕದ ಪ್ರಕಾರ, ಸೂಕ್ತವಾದ ಜ್ಯೋತಿಷ್ಯ ಪರಿಹಾರಗಳನ್ನು ಮಾಡಬೇಕು.
ಅರೋಗ್ಯ ಸಮಾಲೋಚನೆಯ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಜ್ಯೋತಿಷ್ಯ ಪರಿಹಾರ
ಯಾವ ಪರಿಸ್ಥಿತಿಯಲ್ಲಿ ಸೂರ್ಯ ಗ್ರಹಣ ಸಂಭವಿಸುತ್ತದೆ ವಿಜ್ಞಾನಿಗಳ ಪ್ರಕಾರ, ಭೂಮಿ, ಚಂದ್ರ ಮತ್ತು ಸೂರ್ಯ ಮೂವರು ಸರಳ ರೇಖೆಯಲ್ಲಿ ಬಂದು ಆಯಾ ಸುತ್ತುತ್ತಿರುವ ಚಕ್ರಗಳನ್ನು ಪೂರ್ಣಗೊಳಿಸಿದಾಗ ಸೂರ್ಯ ಗ್ರಹಣವು ಸಂಭವಿಸುತ್ತದೆ. ಈ ಸಮಯದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತಾನೆ ಮತ್ತು ಇದರಿಂದಾಗಿ ಸೂರ್ಯನ ಬೆಳಕು ಪ್ರಭಾವಿತವಾಗುತ್ತದೆ. ಈ ಸ್ಥಿತಿಯಲ್ಲಿ ಸೂರ್ಯನ ಬೆಳಕು ಭೂಮಿಯನ್ನು ತಳಿಪುವುದಿಲ್ಲ, ಇದರಿಂದಾಗಿ ಒಂದು ರೀತಿಯ ಕತ್ತಲೆ ಉಂಟಾಗುತ್ತದೆ. ಈ ಪರಿಸ್ಥಿತಿಯನ್ನು ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಸೂರ್ಯ ಗ್ರಹಣ 2021 ರ ಪೌರಾಣಿಕ ಮಹತ್ವ
ವೈಜ್ಞಾನಿಕ ಪ್ರಾಮುಖ್ಯತೆಯ ಹೊರತಾಗಿ, ಸೂರ್ಯ ಗ್ರಹಣದ ತನ್ನದೇ ಒಂದು ವಿಶೇಷ ಪೌರಾಣಿಕ ಮಹತ್ವವನ್ನು ಸಹ ತಿಳಿಸಲಾಗಿದೆ. ಇದನ್ನು ಮತ್ಸ್ಯಪುರಾಣದ ಒಂದು ಪೌರಾಣಿಕ ಕಥೆಯಲ್ಲಿ ಉಲ್ಲೇಖಿಸಲಾಗಿದೆ. ಅದೇ ದಂತಕಥೆಯ ಪ್ರಕಾರ, ಸಾಗರ ಮಂಥನದ ಮೂಲಕ ಅಮೃತವನ್ನು ಹೊರತೆಗೆಯಲಾಯಿತು, ಅದನ್ನು ಕುಡಿಯಲು ಎಲ್ಲಾ ದೇವರುಗಳು ಮತ್ತು ಅಸುರರ ನಡುವೆ ಯುದ್ಧ ನಡೆಯಿತು. ಈ ಸಮಯದಲ್ಲಿ ಒಂದೆಡೆ ಅಸುರರು ಅಮೃತವನ್ನು ಕುಡಿಯಲು ಬಯಸುತ್ತಿದ್ದರೆ, ಅದೇ ಸಮಯದಲ್ಲಿ ಮತ್ತೊಂದೆಡೆ ದೇವರುಗಳು ಸಹ ಅದನ್ನು ಪಡೆಯಲು ಬಯಸುತ್ತಿದ್ದರು. ಈ ಸಮಯದಲ್ಲಿ ರಾಹು ಎಂಬುವ ಒಬ್ಬ ಅಸುರನು ಬಹಳ ಜಾಣತನದಿಂದ ತನ್ನ ತಂತ್ರದ ಪ್ರಕಾರ ದೇವರುಗಳಿಂದ ಅಡಗಿಕೊಂಡು ಆ ಅಮೃತವನ್ನು ಕುಡಿದನು. ಆದರೆ ಈ ಸಮಯದಲ್ಲಿ ಆ ಅಸುರನನ್ನು ಸೂರ್ಯ ದೇವ ಮತ್ತು ಚಂದ್ರ ದೇವ ನೋಡಿದರು.
ಅಸುರ ರಾಹುವಿನ ಈ ತಂತ್ರವು ವಿಷ್ಣು ದೇವರಿಗೆ ತಿಳಿದ ಕೂಡಲೇ, ಅವರು ಕೋಪಗೊಂಡು ಅಸುರ ಸ್ವರಭಾನುವಿನ ಈ ಕೃತ್ಯದ ಕಾರಣದಿಂದಾಗಿ ಅವನನ್ನು ಶಿಕ್ಷಿಸಲು ತನ್ನ ಸುದರ್ಶನ ಚಕ್ರವನ್ನು ಚಲಾಯಿಸಿದರು, ಇದರಿಂದಾಗಿ ಅವನ ತಲೆ ಮತ್ತು ಮುಂಡವು ಪರಸ್ಪರ ಬೇರೆಯಾಯಿತು. ಆದರೆ ಅವನು ಸಾಯಲಿಲ್ಲ, ಏಕೆಂದರೆ ಅವನು ಅಮೃತವನ್ನು ಕುಡಿದಿದ್ದನು, ಇದರ ಪರಿಣಾಮವಾಗಿ ಅವನು ಸಾಯಲಿಲ್ಲ. ಅಂತಹ ಪರಿಷ್ಟಿತಿಯಲ್ಲಿ ಸೂರ್ಯ ಮತ್ತು ಚಂದ್ರನಿಂದ ಪ್ರತೀಕಾರವನ್ನು ತೆಗೆದುಕೊಳ್ಳಲು ರಾಹುವು ಪ್ರತಿವರ್ಷ ಅವರಿಬ್ಬರ ಮೇಲೆ ಗ್ರಹಣವನ್ನು ಹಾಕುತ್ತಾನೆ. ಇದನ್ನು ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಎಂದು ತಿಳಿಯಲಾಗಿದೆ.
ಸೂರ್ಯ ಗ್ರಹಣಗಳ ಪ್ರಕಾರವು ಯಾವುವು
ಸಾಮಾನ್ಯವಾಗಿ ಮೂರು ರೀತಿಯ ಸೂರ್ಯ ಗ್ರಹಣಗಳಿವೆ:-
- ಪೂರ್ಣ ಸೂರ್ಯ ಗ್ರಹಣ: ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದು, ಸೂರ್ಯನ ಬೆಳಕನ್ನು ತನ್ನ ಹಿಂದೆ ಸಂಪೂರ್ಣವಾಗಿ ಆವರಿಸಿದಾಗ ಇದು ಸಂಭವಿಸುತ್ತದೆ. ಈ ಘಟನೆಯನ್ನು ಸಂಪೂರ್ಣ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.
- ಆಂಶಿಕ ಸೂರ್ಯ ಗ್ರಹಣ: ಈ ಗ್ರಹಣ ಗೋಚರಿಸಿದಾಗ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಸೂರ್ಯನನ್ನು ತನ್ನ ಹಿಂದೆ ಆಂಶಿಕವಾಗಿ ಆವರಿಸುತ್ತದೆ. ಈ ಸಮಯದಲ್ಲಿ ಸೂರ್ಯನ ಪೂರ್ಣ ಬೆಳಕು ಭೂಮಿಯನ್ನು ತಲುಪುವುದಿಲ್ಲ ಮತ್ತು ಈ ಸ್ಥಿತಿಯನ್ನು ಆಂಶಿಕ ಸೂರ್ಯ ಗ್ರಹಣ ಎಂದು ಕರೆಲಾಗುತ್ತದೆ.
- ಕಂಕಣ ಸೂರ್ಯ ಗ್ರಹಣ: ಸೂರ್ಯ ಗ್ರಹಣದ ಈ ಸ್ಥಿತಿಯಲ್ಲಿ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಸೂರ್ಯನನ್ನು ಸಂಪೂರ್ಣವಾಗಿ ಅವರಿಸುವುದಿಲ್ಲ. ಅದರ ಮಧ್ಯ ಭಾಗವನ್ನು ಮಾತ್ರ ಅವರಿಸುತ್ತದೆ. ಈ ಸಮಯದಲ್ಲಿ ಭೂಮಿಯಿಂದ ನೋಡಿದಾಗ, ಸೂರ್ಯನು ಒಂದು ಉಂಗುರದಂತೆ ಕಾಣಿಸಿಕೊಳ್ಳುತ್ತಾನೆ, ಇದನ್ನು ನಾವು ಕಂಕಣ ಸೂರ್ಯ ಗ್ರಹಣ ಎಂದು ಕರೆಯುತ್ತೇವೆ.
ಗ್ರಹಣ 2021 ಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ:- ಇಲ್ಲಿ ಕ್ಲಿಕ್ ಮಾಡಿ
ಸೂರ್ಯ ಗ್ರಹಣ 2021 ರ ಸೂತಕ
ಸೂರ್ಯ ಗ್ರಹಣದಿಂದ ಮೊದಲಿನ ಒಂದು ನಿಗದಿತ ಸಮಯವನ್ನು ಗ್ರಹಣದ ಸೂತಕ ಸಮಯವೆಂದು ಪರಿಗಣಿಸಲಾಗಿದೆ. ಸನಾತನ ಧರ್ಮದ ಪ್ರಕಾರ, ಭೂಮಿಯ ಮೇಲೆ ಅತ್ಯಂತ ದುಷ್ಪರಿಣಾಮವನ್ನು ಬೀರುವ ಸಮಯ ಇದು. ಈ ಸೂತಕ ಅವಧಿಯ ದುರುದ್ವೇಷಪೂರಿತ ಪರಿಣಾಮಗಳನ್ನು ತಪ್ಪಿಸಲು ಸೂರ್ಯ ಗ್ರಹಣಕ್ಕೆ ಸಂಬಂಧಿಸಿದ ಕೆಲವು ವಿಶೇಷ ಮುನ್ನೆಚ್ಚರಿಕೆಗಳು ಅವಶ್ಯಕ.
ಸೂರ್ಯ ಗ್ರಹಣ 2021 ರ ಸೂತಕ ಸಮಯ
ಸೂರ್ಯ ಗ್ರಹಣ 2021 ರ ಸೂತಕ ಸಮಯವೂ ಸಂಪೂರ್ಣವಾಗಿ ಗ್ರಹಣದ ಅವಧಿ ಮತ್ತು ಅದರ ಸಮಯದ ಮೇಲೆ ಅವಲಂಬಿಸಿರುತ್ತದೆ. ಪಂಚಾಗದ ಪ್ರಕಾರ, ಸೂರ್ಯ ಗ್ರಹಣದಿಂದ ಮೊದಲಿನ ನಾಲ್ಕು ಗಂಟೆಗಳ ಸಮಯವನ್ನು ಸೂತಕವೆಂದು ಪರಿಗಣಿಸಲಾಗುತ್ತದೆ. ಪಂಚಾಂಗದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಒಟ್ಟು ಎಂಟು ಸಮಯವಿರುತ್ತದೆ. ಆದ್ದರಿಂದ ಸೂರ್ಯ ಗ್ರಹಣದ ಪ್ರಾರಂಭವಾಗುವ ಹನ್ನೆರಡು ಗ್ರಂತೆಗಳ ಮೊದಲು ಸೂತಕ ಆಧಿ ಪ್ರಾರಂಭವಾಗುತ್ತದೆ. ಇದು ಗ್ರಹಣದ ಅಂತ್ಯದೊಂದಿಗೆ ಕೊನೆಗೊಳ್ಳುತ್ತದೆ.
ವರ್ಷ 2021 ಸಂಭವಿಸಲಾಗುವ ಸೂರ್ಯ ಗ್ರಹಣ
ನಾವು ಹೇಳಿದಂತೆ ವಿಜ್ಞಾನದಲ್ಲಿ ಸೂರ್ಯ ಗ್ರಹಣವನ್ನು ಒಂದು ಖಗೋಳ ಘಟನೆಯೆಂದು ಪರಿಗಣಿಸಲಾಗಿದೆ ಮತ್ತು ಇದು ಪ್ರತಿ ವರ್ಷ ಸಂಭವಿಸುತ್ತದೆ. ಈ ವರ್ಷದ ಬಗ್ಗೆ ಮಾತನಾಡಿದರೆ, 2021 ರಲ್ಲಿ ಒಟ್ಟು ಎರಡು ಗ್ರಹಗಳು ಸಂಭವಿಸಲಿವೆ.
- ವರ್ಷ 2021 ರಲ್ಲಿನ ಮೊದಲನೇ ಸೂರ್ಯ ಗ್ರಹಣವು 10 ಜೂನ್ ರಂದು ಸಂಭವಿಸುತ್ತದೆ, ಇದು ಕಂಕಣ ಸೂರ್ಯ ಗ್ರಹಣ.
- ವರ್ಷದ ಎರಡನೇ ಸೂರ್ಯ ಗ್ರಹಣವು ವರ್ಷದ ಅಂತ್ಯದಲ್ಲಿ 4 ಡಿಸೆಂಬರ್ ರಂದು ಸಂಭವಿಸುತ್ತದೆ, ಇದು ಪೂರ್ಣ ಸೂರ್ಯ ಗ್ರಹಣ.
ಮೊದಲನೇ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಇದು ಉತ್ತರ ಅಮೇರಿಕಾದ ಉತ್ತರ ಭಾಗದಲ್ಲಿ, ಯುರೋಪ್ ಮತ್ತು ಏಷಿಯಾ, ಉತ್ತರ ಕೆನಡಾ, ಗ್ರೀನ್ಲ್ಯಾಂಡ್ ಮತ್ತು ರುಸ್ ನ ಹೆಚ್ಚಿನ ಭಾಗದಲ್ಲಿ ಕಾಣಿಸುತ್ತದೆ.
ಎರಡನೇ ಸೃಯ ಗ್ರಹಣವು ವರ್ಷದ ಅಂತ್ಯದಲ್ಲಿ 4 ಡಿಸೆಂಬರ್ ರಂದು ಸಂಭವಿಸಲಿದೆ, ಈ ಸೂರ್ಯ ಗ್ರಹಣವು ಸಹ ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಅಂಟಾರ್ಕ್ಟಿಕ, ದಕ್ಷಿಣ ಆಫ್ರಿಕಾ, ಅಟ್ಲಾಂಟಿಕ ದಕ್ಷಿಣ ಭಾಗ, ಆಸ್ಟ್ರೇಲಿಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಗೋಚರಿಸುತ್ತದೆ.
ಈಗ ಆಸ್ಟ್ರೋಸೇಜ್ ವಾರ್ತಾ ಮೂಲಕ ಜ್ಯೋತಿಷಿಗಳೊಂದಿಗೆ ನೇರ ಮಾತನಾಡಿ
2021 ರಲ್ಲಿ ಸಂಭವಿಸಲಾಗುವ ಸೂರ್ಯ ಗ್ರಹಣದ ಸಮಯ
ಮೊದಲ ಸೂರ್ಯ ಗ್ರಹಣ 2021 | |||
ದಿನಾಂಕ | ಸೂರ್ಯ ಗ್ರಹಣ ಆರಂಭ | ಸೂರ್ಯ ಗ್ರಹಣ ಅಂತ್ಯ | ಗೋಚರಿಸುವ ಕ್ಷೇತ್ರ |
10 ಜೂನ್ | 13:42 ರಿಂದ | 18:41 ವರೆಗೆ | ಉತ್ತರ ಅಮೇರಿಕ ಉತ್ತರ ಭಾಗ, ಯುರೋಪ್ ಮತ್ತು ಏಷಿಯಾದಲ್ಲಿ ಆಂಶಿಕ ಮತ್ತು ಉತ್ತರ ಕೆನಡಾ, ಗ್ರೀನ್ಲ್ಯಾಂಡ್ ಮತ್ತು ಸಂಪೂರ್ಣ ರೂಸ್ |
ಸೂಚನೆ: ಮೇಲಿನ ಕೋಷ್ಟಕದಲ್ಲಿ ನೀಡಲಾಗಿರುವ ಸಮಯವೂ ಭಾರತದ ಸಮಯಕ್ಕೆ ಅನುಗುಣವಾಗಿದೆ. ಈ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಭಾರತದಲ್ಲಿ ಈ ಸೂರ್ಯಗ್ರಹಣದ ಧಾರ್ಮಿಕ ಪರಿಣಾಮ ಮತ್ತು ಸೂತಕ ಸಮಯ ಇರುವುದಿಲ್ಲ.
ಮೊದಲ ಸೂರ್ಯ ಗ್ರಹಣ 10 ಜೂನ್ 2021
- ವರ್ಷದ ಮೊದಲ ಸೂರ್ಯ ಗ್ರಹಣವು ಕಂಕಣ ಸೂರ್ಯ ಗ್ರಹಣವಾಗಿದೆ. ಇದು ವರ್ಷದ ಮಧ್ಯದಲ್ಲಿ ಅಂದರೆ 10 ಜೂನ್ 2021 ರಂದು ಸಂಭವಿಸುತ್ತದೆ.
- ಹಿಂದೂ ಪಂಚಾಂಗವನ್ನು ನಂಬಿದರೆ, ಈ ಸೂರ್ಯ ಗ್ರಹಣದ ಸಮಯವೂ 10 ಜೂನ್ ರಂದು, ಮಧ್ಯಾಹ್ನ 13:42 ಸಾಯಂಕಾಲ 18:41 ವರೆಗೆ ಇರುತ್ತದೆ.
- ಇದರೊಂದಿಗೆ ಹಿಂದೂ ಪ್ರಾಂಚಾಂಗದ ಪ್ರಕಾರ, ಮೊದಲ ಸೂರ್ಯ ಗ್ರಹಣವು ವಿಕ್ರಮ ಸಂವತ 2078 ರಲ್ಲಿ ಬೈಶಾಖ ಮಾಸದ ಅಮಾವಾಸ್ಯದಂದು ಸಂಭವಿಸಲಿದೆ. ಇದು ವೃಷಭ ರಾಶಿ ಮತ್ತು ಮೃಗಶಿರಾ ನಕ್ಷತ್ರದಲ್ಲಿ ಹೆಚ್ಚಿನ ಪರಿನವನ್ನು ಬೀರುತ್ತದೆ.
- ಈ ಸೂರ್ಯ ಗ್ರಹಣ 2021 ಭಾರತದಲ್ಲಿ ಗೋಚರಿಸದಿರುವ ಕಾರಣದಿಂದಾಗಿ ಇದರ ಸೂತಕ ಸಮಯವೂ ಸಹ ಪರಿಣಾಮ ಬೀರುವುದಿಲ್ಲ.
- ಇದು ಕಂಕಣ ಸೂರ್ಯ ಗ್ರಹಣ, ಇದರಲ್ಲಿ ಚಂದ್ರನು ಭೂಮಿಯನ್ನು ಪರಿಭ್ರಮಿಸುವಾಗ ಸಾಮಾನ್ಯಕ್ಕೆ ಹೋಲಿಸಿದರೆ, ಅದರಿಂದ ಹೆಚ್ಚು ದೂರ ಹೋಗುತ್ತಾನೆ ಮತ್ತು ಈ ಸಮಯದಲ್ಲಿ ಅದು ಅದರ ಗಾತ್ರದಲ್ಲಿಯೂ ಚಿಕ್ಕದಾಗಿ ಕಂಡುಬರುತ್ತದೆ ಮತ್ತು ಸೂರ್ಯನ ಮುಂದೆ ಬಂದು ಅದನ್ನು ಆವರಿಸುತ್ತದೆ. ಆದರೆ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಚಂದ್ರನ ಹೊರ ಅಂಚಿನಲ್ಲಿ ಸೂರ್ಯನ ಬೆಳಕು ಉಂಗುರದಂತೆ ಕಾಣಿಸುತ್ತದೆ. ಇದನ್ನು ನಾವು ಕಂಕಣ ಸೂರ್ಯ ಗ್ರಹಣ ಎಂದು ಕರೆಯುತ್ತೇವೆ.
ಎರಡನೇ ಸೂರ್ಯ ಗ್ರಹಣ 2021 | |||
ದಿನಾಂಕ | ಸೂರ್ಯ ಗ್ರಹಣದಆರಂಭ | ಸೂರ್ಯ ಗ್ರಹಣದ ಅಂತ್ಯ | ಗೋಚರಿಸುವ ಕ್ಷೇತ್ರ |
4 ಡಿಸೆಂಬರ್ | 10:59 ಗಂಟೆಯಿಂದ | 15:07ಗಂಟೆಯ ವರೆಗೆ | ಅಂಟಾರ್ಕಟಿಕಾ, ದಕ್ಷಿಣಆಫ್ರಿಕಾ, ಅಟ್ಲಾಂಟಿಕ ದಕ್ಷಿಣ ಭಾಗ, ಆಸ್ಟ್ರೇಲಿಯ, ದಕ್ಷಿಣ ಅಮೇರಿಕ |
ಸೂಚನೆ: ಮೇಲಿರುವ ಕೋಷ್ಟಕದಲ್ಲಿ ನೀಡಲಾಗಿರುವ ಸಮಯವೂ ಭಾರತದ ಸಮಯಕ್ಕೆ ಅನುಗುಣವಾಗಿದೆ. ಈ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಭಾರತದಲ್ಲಿ ಈ ಸೂರ್ಯ ಗ್ರಹಣದ ಧಾರ್ಮಿಕ ಪ್ರಭಾವ ಮತ್ತು ಸೂತಕ ಸಮಯವೂ ಮಾನ್ಯವಾಗಿಲ್ಲ.
ಎರಡನೇ ಸೂರ್ಯ ಗ್ರಹಣ 4 ಡಿಸೆಂಬರ್ 2021
- ವರ್ಷ 2021 ರ ಎರಡನೇ ಮತ್ತು ಕೊನೆ ಸೂರ್ಯ ಗ್ರಹಣವು 4 ಡಿಸೆಂಬರ್ ರಂದು ಸಂಭವಿಸಲಿದೆ ಮತ್ತು ಇದು ಸಂಪೂರ್ಣ ಸೂರ್ಯ ಗ್ರಹಣ.
- ಹಿಂದೂ ಪಂಚಾಂಗದ ಪ್ರಕಾರ, ವರ್ಷದ ಎರಡನೇ ಸೂರ್ಯ ಗ್ರಹಣವು ವಿಕ್ರಮ ಸಂವತ 2078 ರಲ್ಲಿ ಕಾರ್ತಿಕ ಮಾಸದ ಅಮಾವಾಸ್ಯದಂದು ಸಂಭವಿಸುತ್ತದೆ, ಇದು ವೃಶ್ಚಿಕ ರಾಶಿ ಮತ್ತು ಜ್ಯೇಷ್ಠ ನಕ್ಷತ್ರದಲ್ಲಿ ಹೆಚ್ಚು ಪರಿಣಾಮವನ್ನು ಬೀರುತ್ತದೆ.
- ಭಾರತೀಯ ಸಮಯದ ಪ್ರಕಾರ, ಈ ಗ್ರಹಣವು ಶನಿವಾರ ಬೆಳಿಗ್ಗೆ 10:59 ಗಂಟೆಗೆ ಆರಂಭವಾಗಿ ಮಧ್ಯಾಹ್ನ 15:07 ವರೆಗೆ ಸಂಭವಿಸುತ್ತದೆ.
- ಭಾರತದಲ್ಲಿ ಈ ಗ್ರಹಣದ ಗೋಚರತೆ ಶೂನ್ಯವಾಗಿರುತ್ತದೆ. ಆದ್ದರಿಂದ ಇದರ ಸೂತಕ ಸಮಯವೂ ಸಹ ಪರಿಣಾಮಕಾರಿಯಾಗುವುದಿಲ್ಲ.
- ಚಂದ್ರನು ಸೂರ್ಯನ ಮುಂದೆ ಬಂದು, ಅದರ ಬೆಳಕನ್ನು ಸಂಪೂರ್ಣವಾಗಿ ಆವರಿಸಿದಾಗ ಪೂರ್ಣ ಸೂರ್ಯ ಗ್ರಹಣ ಸಂಭವಿಸುತ್ತದೆ.
ನಿಮ್ಮ ರಾಶಿಚಕ್ರದ ಪ್ರಕಾರ ವರ್ಷ 2021 ರ ಎಲ್ಲಾ ಮುನ್ಸೂಚನೆಗಳು - ರಾಶಿ ಭವಿಷ್ಯ 2021
ಸೂರ್ಯ ಗ್ರಹಣ 2021 ರ ಸಮಯದಲ್ಲಿ ಗಮನ ಹರಿಸಬೇಕಾದ ವಿಷಯಗಳು
- ಸೂರ್ಯ ಗ್ರಹಣದ ಸಮಯದಲ್ಲಿ ಎಲ್ಲಾ ದುರುದ್ವೇಷಪೂರಿತ ರಾಶಿಚಕ್ರದ ಸ್ಥಳೀಯರು, ರೋಗಿಗಳು ಮತ್ತು ಎಲ್ಲಾ ಗರ್ಭವತಿ ಮಹಿಳೆಯರು ಗ್ರಹಣವನ್ನು ನೋಡುವುದನ್ನು ತಪ್ಪಿಸಬೇಕೆಂದು ನಂಬಲಾಗಿದೆ.
- ಸೂರ್ಯ ಗ್ರಹಣದ ಸಮಯದಲ್ಲಿ ದೇವರ ಆರಾಧನೆ, ಸೂರ್ಯ ಮಂತ್ರ, ಧ್ಯಾನ ಇತ್ಯಾದಿಗಳನ್ನು ಮಾಡುವುದರಿಂದ ಸೂರ್ಯನ ದುರುದ್ವೇಷಪೂರಿತ ಫಲಿತಾಂಶಗಳು ದೂರವಾಗುತ್ತವೆ.
- ಸೂರ್ಯ ಗ್ರಹಣದ ಸಮಯದಲ್ಲಿ “ ಓಂ ಆದಿತ್ಯಾಯ್ ವಿದ್ಮಹೇ ದಿವಾಕರಾಯ್ ಧೀಮಹಿ ತನ್ನೋ ಸೂರ್ಯಾಯ್ ಪ್ರಚೋದಯಾತ್” ಮಂತ್ರವನ್ನು ಜಪಿಸಬೇಕು.
- ಸೂರ್ಯ ಗ್ರಹಣದ ಮೊದಲು ಎಲ್ಲಾ ರೀತಿಯ ಆಹಾರ ಪದಾರ್ಥಗಳು, ಬೇಯಿಸಿದ ಆಹಾರ, ಹಾಲು, ಮೊಸರು, ತುಪ್ಪ, ಬೆಣ್ಣೆ, ಉಪ್ಪಿನಕಾಯಿ, ನೀರು ಇತ್ಯಾದಿಗಳಲ್ಲಿ ತುಳಸಿ ಎಲೆಯನ್ನು ಹಾಕುವುದು ಶುಭ.
ಸೂರ್ಯ ಗ್ರಹಣ 2021 ರ ಸೂತಕ ಸಮಯದಲ್ಲಿ ಏನು ಮಾಡಬಾರದು
- ಸೂತಕ ಸಮಯದಲ್ಲಿ ಯಾವುದೇ ಹೊಸ ಅಥವಾ ಮಂಗಲಿಕ ಕಾರ್ಯವನ್ನು ಆರಂಭಿಸಬೇಡಿ.
- ಸೂತಕ ಸಮಯದಲ್ಲಿ ಅಡಿಗೆ ಅಥವಾ ಊಟವನ್ನು ಮಾಡಬಾರದು.
- ಶೌಚಾಲಯ ಇತ್ಯಾದಿಗಳನ್ನು ತಪ್ಪಿಸಿ.
- ದೇವರ ವಿಗ್ರಹ ಮತ್ತು ತುಳಸಿಯನ್ನು ಮುಟ್ಟಬಾರದು.
- ಹಲ್ಲುಗಳ ಸ್ವಚ್ಛತೆ, ಕೂದಲು ಬಾಚಿಸುವುದು, ಹೊಸ ಬಟ್ಟೆಗಳನ್ನು ಧರಿಸುವುದು, ವಾಹನ ಚಲಾಯಿಸುವುದು ಇತ್ಯಾದಿಗಳಂತಹ ವೈಯಕ್ತಿಕ ಕಾರ್ಯಗಳನ್ನು ತಪ್ಪಿಸಬೇಕು.
- ಮನೆಯಿಂದ ಹೊರಹೋಗಬಾರದು.
- ಸೂತಕದ ಸಮಯದಲ್ಲಿ ನಿದ್ರೆ ಮಾಡಬಾರದು.
ಕಾಗ್ನಿಆಸ್ಟ್ರೋ ವೃತ್ತಿ ಸಮಾಲೋಚನೆ ರಿಪೋರ್ಟ್ ಮೂಲಕ ನಿಮ್ಮ ವೃತ್ತಿಜೀವನದಲ್ಲಿ ಸರಿಯಾದ ಆಯ್ಕೆಯನ್ನು ಆರಿಸಿ!
ಸೂರ್ಯ ಗ್ರಹಣ 2021 ಸೂತಕ ಸಮಯದಲ್ಲಿ ಮಾಡಲಾಗುವ ಕೆಲಸಗಳು
- ಯೋಗ, ಧ್ಯಾನ, ಭಜನೆ, ದೇವರ ಆರಾಧನೆ ಇತ್ಯಾದಿಗಳನ್ನು ಮಾಡುವುದು ಶುಭ.
- ಸೂರ್ಯ ದೇವರ ಬೀಜ ಮಂತ್ರವನ್ನು ಜಪಿಸಿ.
- ಸೂತಕ ಸಮಯದ ಅಂತ್ಯದ ನಂತರ, ಗಂಗಾ ನೀರನ್ನು ಸಿಂಪಡಿಸಿ ಮನೆಯನ್ನು ಶುದ್ಧೀಕರಿಸಿ ಮತ್ತು ದೇವರುಗಳ ವಿಗ್ರಹಗಳನ್ನು ಶುದ್ಧೀಕರಿಸಿ.
- ಸೂತಕ ಕಾಲ ಅಂತ್ಯದ ನಂತರ ಸ್ನಾನ ಮಾಡಿ.
- ಸೂತಕ ಸಮಯ ಕೊನೆಗೊಂಡ ನಂತರ, ತಾಜಾ ಆಹಾರವನ್ನು ತಯಾರಿಸಿ ಮತ್ತುಅದನ್ನು ಮಾತ್ರ ಸೇವಿಸಿ. ಇದರೊಂದಿಗೆ ಸೂತಕ ಸಮಯಕ್ಕಿಂತ ಮೊದಲಿನ ಆಹಾರವನ್ನು ವ್ಯರ್ಥ ಮಾಡಬೇಡಿ, ಅದರಲ್ಲಿ ತುಳಸಿ ಎಲೆಯನ್ನು ಹಾಕಿಡಿ. ಇದರಿಂದಾಗಿ ಆಹಾರದಲ್ಲಿನ ಗ್ರಹಣದ ದುರುದ್ವೇಷಪೂರಿತ ದೋಷಗಳು ನಿವಾರಣೆಯಾಗುತ್ತವೆ.
ಸೂರ್ಯ ಗ್ರಹಣ 2021 ರ ಸಮಯದಲ್ಲಿ ಗರ್ಭಿಣಿಯರು ಜಾಗರೂಕರಾಗಿರಬೇಕು
- ಸೂರ್ಯ ಗ್ರಹಣದ ಸೂತಕ ಸಮಯದಲ್ಲಿ ಎಲ್ಲಾ ಗರ್ಭಿಣಿಯರು ವಿಶೇಷವಾಗಿ ಜಾಗರೂಕರಾಗಿರಬೇಕು .
- ಈ ಸಮಯದಲ್ಲಿ ಮನೆಯಿಂದ ಹೊರ ಹೋಗುವುದು ಮತ್ತು ಯಾವುದೇ ರೀತಿಯ ಗ್ರಹಣವನ್ನು ನೋಡುವುದನ್ನು ತಪ್ಪಿಸಬೇಕು.
- ಸೂತಕ ಸಮಯದಲ್ಲಿ ಗರ್ಭಿಣಿಯರು ಹೋಲಿಗೆ, ಕಸೂತಿ, ಸ್ವಚ್ಛ, ಕತ್ತರಿಸುವಂತಹ ಕೆಲಸಗಳನ್ನು ಸೂರ್ಯ ಗ್ರಹಣದ ಸಮಯದಲ್ಲಿ ಮಾಡಬಾರದು.
- ಸೂರ್ಯ ಗ್ರಹಣದ ಸಮಯದಲ್ಲಿ ಚಾಕು ಮತ್ತು ಸೂಜಿಯನ್ನು ಬಳಸಬಾರದು. ಏಕೆಂದರೆ ಅದನ್ನು ಮಾಡುವುದರಿಂದ ಗರ್ಭದಲ್ಲಿ ಬೆಳೆಯುವ ಮಗುವಿನ ಅಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.
ಸೂರ್ಯ ಗ್ರಹಣ 2021 ಗೆಸಂಬಂಧಿಸಿದ ಈ ಲೇಖನವು ನಿಮಗೆ ಇಷ್ಟವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಲೇಖನವನ್ನು ಇಷ್ಟಪಟ್ಟ ಮತ್ತು ಓಡಿದ್ದಕ್ಕಾಗಿ ಧನ್ಯವಾದಗಳು!
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025