ಮಕರ ರಾಶಿಯಲ್ಲಿ ಮಾರ್ಗಿ ಗುರು (18th October 2021 )
ವೈಜ್ಞಾನಿಕ ದುರ್ಷ್ಟಿಕೋನದಿಂದ ಗುರುವನ್ನು ಸೌರಮಂಡಲದ ಅತ್ಯಂತ ದೊಡ್ಡ ಗ್ರಹವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ವೈದಿಕ ಜ್ಯೋತಿಷ್ಯದ ಪ್ರಕಾರ, ಗುರುವನ್ನು ಜ್ಞಾನ ಮತ್ತು ಅನುಗ್ರಹದ ಗ್ರಹವೆಂದು ಪರಿಗಣಿಸಲಾಗಿದೆ. ಇದಲ್ಲದೆ ಗುರು ಗ್ರಹವನ್ನು ಗುರು ಎಂದು ಸಹ ಕರೆಯಲಾಗುತ್ತದೆ. ಇದರ ಅಕ್ಷರಶಃ ಅರ್ಥ ‘ಶಿಕ್ಷಕ’. ಈ ಹೆಸರಿನಂತೆಯೇ ಗುರುವು ಯಾವುದೇ ವ್ಯಕ್ತಿಯ ಜೀವನದಲ್ಲಿ ಶಿಕ್ಷಕ ಅಥವಾ ಗುರುವಿನ ಅಂಶವಾಗಿದೆ. ಮಹಿಳೆಯ ಜಾತಕದಲ್ಲಿ ಇದು ಗಂಡನನ್ನು ಪ್ರತಿನಿಧಿಸುತ್ತದೆ ಇದಲ್ಲದೆ, ಧರ್ಮದತ್ತ ವ್ಯಕ್ತಿಯ ಒಲವು ಮತ್ತು ಭಕ್ತಿಯ ಅಂಶವಾಗಿಯೂ ಇದನ್ನು ಪರಿಗಣಿಸಲಾಗಿದೆ. ಇದನ್ನು ಸಂತೋಷ ಮತ್ತು ಸಮೃದ್ಧಿಯ ಗ್ರಹವಾಗಿ ಸಹ ಪರಿಗಣಿಸಲಾಗಿದೆ
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ಗುರುವು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷದ ವರೆಗೆ ಇರುತ್ತಾರೆ. ಗುರುವು ತನ್ನ ಸಂಯೋಜನೆ, ದೀರ್ಘ ಸಾರಿಗೆ ಮತ್ತು ಸ್ಥಳೀಯರ ಜೀವನದ ಮೇಲೆ ತನ್ನ ಪರಿಣಾಮದ ಕಾರಣದಿಂದಾಗಿ ವೈದಿಕ ಜ್ಯೋತಿಷ್ಯದಲ್ಲಿ ಇದು ಒಂದು ಪ್ರಮುಖ ಗ್ರಹವಾಗಿದೆ. ಗುರುವಿನ ಸಂಚಾರವು ಒಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ತರುತ್ತದೆ. ಆದರೆ ಶನಿ ಮತ್ತು ಗುರುವಿನ ಸಂಚಾರವು ಸ್ಥಳೀಯರ ಜೀವನದಲ್ಲಿ ಮದುವೆ ಮತ್ತು ಮಕ್ಕಳ ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ಇದರೊಂದಿಗೆ ಗುರುವಿನ ಪರಿಣಾಮವು ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರುವು ಬಲವಾದ ಸ್ಥಿತಿಯಲ್ಲಿದ್ದರೆ, ಇದು ಸ್ಥಳೀಯನಿಗೆ ನೈತಿಕತೆ, ತೃಪ್ತಿ, ಆಶಾವಾದ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತದೆ. ಆದರೆ ಜನ್ಮ ಜಾತಕದಲ್ಲಿ ಗುರುವು ದುರ್ಬಲ ಸ್ಥಿತಿಯಲ್ಲಿದ್ದರೆ, ಅಂತಹ ವ್ಯಕ್ತಿಯು ತಮ್ಮ ಶಿಕ್ಷಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದಿಲ್ಲ ಮತ್ತು ಅವರಲ್ಲಿ ದುರಹಂಕಾರ ಮತ್ತು ಅಪಕ್ವತೆ ಬೆಳೆಯುತ್ತದೆ. ಇದರೊಂದಿಗೆ ಇದು ನಿಮ್ಮ ಸಂತೋಷದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಕ್ರೀ ಗುರುವು ಸಾಮಾನ್ಯವಾಗಿ ಅನಿಶ್ಚಿತ ಫಲಿತಾಂಶಗಳನ್ನು ನೀಡುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಇದರ ಪರಿಣಾಮಗಳು ಹೆಚ್ಚಾಗುತ್ತವೆ. ಗುವುವಿನ ಪ್ರಭಾವದಲ್ಲಿರುವ ವ್ಯಕ್ತಿಯು, ವೃತ್ತಿ ದೃಷ್ಟಿಕೋನದಿಂದ ಸರಿಯಾದ ಅಥವಾ ತಪ್ಪು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಬದಲು ತನ್ನ ಆಸಕ್ತಿಯ ಕೆಲಸದಲ್ಲಿ ಹೆಚ್ಚು ಉತ್ಸುಕರಾಗಿರುತ್ತಾರೆ. ಈ ಸಮಯದಲ್ಲಿ ಸ್ಥಳೀಯರ ಸ್ವಭಾವದಲ್ಲಿ ಅಹಂಕಾರದ ಭಾವನೆ ಹೆಚ್ಚಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಗುರುವಿನ ವಕ್ರ ಸ್ಥಿತಿಯಿಂದ ಹೊರಬರುವುದು ಗುರುವಿನ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ.
ಗುರುವು 18 ಅಕ್ಟೋಬರ್, 2021 ರಂದು ಬೆಳಿಗ್ಗೆ 11 ಗಂಟೆ 39 ನಿಮಿಷಕ್ಕೆ ಮಕರ ರಾಶಿಯಲ್ಲಿ ಮಾರ್ಗಿಯಾಗುತ್ತದೆ ಮತ್ತು 20 ನವೆಂಬರ್, 2021 ಅಂದರೆ ಕುಂಭ ರಾಶಿಯಲ್ಲಿ ಸಾಗುವವರೆಗೆ ಇದೇ ರಾಶಿಯಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಡೆಯಿರಿ ಮಾರ್ಗಿ ಗುರುವು 12 ರಾಶಿಗಳ ಜೀವನದಲ್ಲಿ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
Read in English: Jupiter Direct in Capricorn (18 October, 2021)
मेष राशि / ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಒಂಬತ್ತನೇ ಮತ್ತು ಹನ್ನೆರಡನೇ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ಹತ್ತನೇ ಮನೆ ಅಂದರೆ ಕರ್ಮದ ಮನೆಯಲ್ಲಿ ಮಾರ್ಗಿಯಾಗಲಿದೆ. ವೃತ್ತಿಪರ ದೃಷ್ಟಿಕೋನದಿಂದ ನೋಡಿದರೆ, ವೃತ್ತಿಪರ ಸ್ಥಳೀಯರಿಗೆ ಈ ಅವಧಿಯು ಸರಾಸರಿ ಫಲಪ್ರದವಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅಭಿವೃದ್ಧಿ ನಿಧಾನವಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಬಡ್ತಿಗಾಗಿ ಕಾಯುತ್ತಿರುವ ಜನರು, ಅದಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಆದಾಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ, ಈ ಕಾರಣದಿಂದಾಗಿ ನಿಮ್ಮ ಆರ್ಥಿಕ ಒತ್ತಡ ಹೆಚ್ಚಾಗಬಹುದು.
ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ನಕಾರಾತ್ಮಕ ಫಲಿತಾಂಶವನ್ನು ಪಡೆಯಬಹುದು. ವೈಯಕ್ತಿಕ ಜೀವನದ ದೃಷ್ಠಿಕೋನದಿಂದ ಈ ಸಮಯದಲ್ಲಿ ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗದಿರಬಹುದು. ಈ ಕಾರಣದಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಏರಿಳಿತಗಳು ಉಂಟಾಗಬಹುದು. ಇದರೊಂದಿಗೆ ಈ ಅವಧಿಯಲ್ಲಿ ಅದೃಷ್ಟವು ಸಹ ನಿಮ್ಮನ್ನು ಹೆಚ್ಚು ಬೆಂಬಲಿಸುವುದಿಲ್ಲ, ಈ ಕಾರಣದಿಂದಾಗಿ ಈ ಸಮಯದಲ್ಲಿ ವೈಯಕ್ತಿಕ ಜೀವನದಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳುವುದಾಗಲಿ ಅಥವಾ ವೃತ್ತಿಪರ ಜೀವನದಲ್ಲಿ ನಿಮ್ಮ ಮೇಲಧಿಕಾರಿಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳುವುದಾಗಲಿ, ಈ ಸಮಯದಲ್ಲಿ ನೀವು ಅಗತ್ಯಕ್ಕಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.
ಪರಿಹಾರ - ಪ್ರತಿದಿನ ಹಣೆಯ ಮೇಲೆ ಹಳದಿ ತಿಲಕವನ್ನು ಹಚ್ಚಿಸಿ. .
वृषभ राशि / ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ಅವರ ಒಂಬತ್ತನೇ ಮನೆ ಅಂದರೆ ತಂದೆ, ಪ್ರವಾಸ ಮತ್ತು ಅದೃಷ್ಟದ ಮನೆಯಲ್ಲಿ ಮಾರ್ಗಿಯಾಗಲಿದೆ. ಈ ಸಮಯದಲ್ಲಿ ನಿಮ್ಮ ತಂದೆಗೆ ಕೆಲವು ಅರೋಗ್ಯ ಸಮಸ್ಯೆಗಳಾಗುವ ಸಾಧ್ಯತೆ ಇದೆ, ಈ ಕಾರಣದಿಂದಾಗಿ ನೀವು ಮಾನಸಿಕ ಒತ್ತಡವನ್ನು ಅನುಭವಿಸಬಹುದು. ಈ ಸಮಯದಲ್ಲಿ ನೀವು ಯಾವುದೇ ಕೆಲಸದ ವಿಷಯದಿಂದಾಗಿ ಕೆಲವು ಪ್ರವಾಸಗಳನ್ನು ಸಹ ಮಾಡಬಹುದು. ಇದು ನಿಮಗೆ ಹೆಚ್ಚು ಫಲಪ್ರದವಾಗದಿರಬಹುದು. ಅಂತಹ ಪರಿಸ್ಥಿತಿಯಲ್ಲಿ ಈ ಪ್ರಯಾಣಗಳನ್ನು ಮಾಡುವಾಗ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ನೀವು ಯಾವುದೇ ಆಭರಣವನ್ನು ಅಥವಾ ಯಾವುದೇ ಅಮೂಲ್ಯವಾದ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮಲ್ಲಿ ನಾಸ್ತಿಕ ಮನೋಭಾವ ಅರಳಬಹುದು. ಈ ಕಾರಣದಿಂದಾಗಿ ನೀವು ಧಾರ್ಮಿಕ ಸ್ಥಳಗಳಿಗೆ ಹೋಗಲು ಹಿಂಜರಿಯಬಹುದು.
ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವೂ ಕುಸಿಯಬಹುದು, ಇದು ನಿಮ್ಮಲ್ಲಿ ಅನೇಕ ನಕಾರಾತ್ಮಕ ಆಲೋಚನೆಗಳನ್ನು ಜನಿಸಬಹುದು. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಹೊರತಾಗಿಯೂ ಈ ಅವಧಿಯಲ್ಲಿ ನೀವು ನಿರೀಕ್ಷೆಗೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ನಿಮ್ಮ ಜೀವನದಲ್ಲಿ ಸ್ಥಿರತೆ ಉಳಿದಿರಬಹುದು. ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ಯಾವುದೇ ವಿಷಯದ ಬಗ್ಗೆ ನಿಮ್ಮ ಮೇಲಧಿಕಾರಿಗಳೊಂದಿಗೆ ವಿವಾದ ಅಥವಾ ಜಗಳವಾಗಬಹುದು. ಇದರಿಂದಾಗಿ ನಿಮ್ಮ ಬೋಸ್ ದೃಷ್ಟಿಯಲ್ಲಿ ನಿಮ್ಮ ನಕಾರಾತ್ಮಕ ಚಿತ್ರ ಉಂಟಾಗಬಹುದು. ಆದ್ದರಿಂದ ನಿಮ್ಮ ಗ್ರಾಹಕರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ ಮತ್ತು ನಿಮ್ಮ ನಿರ್ವಹಣೆಯೊಂದಿಗೆ ಯಾವುದೇ ಉಗ್ರ ಸಂಭಾಷಣೆಯನ್ನು ತಪ್ಪಿಸಿ.
ಪರಿಹಾರ - ಗುರುವಾರ ಮಕ್ಕಳಿಗೆ ಹಳದಿ ಬಣ್ಣದ ಬಟ್ಟೆಗಳ ದಾನ ಮಾಡಿ.
मिथुन राशि / ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಅದು ನಿಮ್ಮ ಎಂಟನೇ ಮನೆ ಅಂದರೆ ವ್ಯವಹಾರದಲ್ಲಿ ಕಠೋರತೆ, ನಷ್ಟ ಮತ್ತು ರಹಸ್ಯದ ಮನೆಯಲ್ಲಿ ಮಾರ್ಗಿಯಾಗಲಿದೆ. ವೃತ್ತಿಪರವಾಗಿ ಈ ಅವಧಿಯು ನಿಮಗೆ ಸರಾಸರಿ ಫಲಪ್ರದಾಗಲಿದೆ ಎಂದು ಸಾಬೀತುಪಡಿಸುತ್ತದೆ. ಆದ್ದರಿಂದ ವೃತ್ತಿಪರವಾಗಿ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ನೀವು ಯಾವುದೇ ತಪ್ಪು ಡೀಲಿಂಗ್/ ಒಪ್ಪಂದದಲ್ಲಿ ಸಿಲುಕಿಕೊಳ್ಳಬಹುದು. ಮಾರ್ಕೆಟ್ ನಲ್ಲಿ ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬೇಡಿಕೆ ಕಡಿಮೆಯಾಗಬಹುದು. ಆದ್ದರಿಂದ ನಿಮ್ಮ ಪ್ರಸ್ತುತ ಗ್ರಾಹಕರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ ಮತ್ತು ನಿಮ್ಮ ಉತ್ಪನ್ನಗಳನ್ನು ಖರೀದಿಸಲು ನಿಮ್ಮ ಗ್ರಾಹಕರನ್ನು ಮನವೊಲಿಸಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿ.
ಈ ಸಮಯದಲ್ಲಿ ಯಾವುದೇ ಅಲ್ಪಾವಧಿಯ ಪೋಲಿಸಿಗಳಲ್ಲಿ ಹೂಡಿಕೆ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಆರ್ಥಿಕ ದೃಷ್ಟಿಕೋನದಿಂದ ಈ ಸಮಯದಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರು ತಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈಯಕ್ತಿಕವಾಗಿ ನೋಡಿದರೆ, ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಬಗ್ಗೆ ನೀವು ಹೆಚ್ಚು ವಿನಮ್ರ ಮತ್ತು ಸಮರ್ಪಿತವಾಗಿ ಕಾಣುವಿರಿ. ಈ ಅವಧಿಯಲ್ಲಿ ನೀವು ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವಿರಿ ಮತ್ತು ಅವರ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಆಸೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಪೂರೈಸಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಆದರೆ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನೀವು ಅತೃಪ್ತರಾಗಿರಬಹುದು, ಏಕೆಂದರೆ ಅವರು ನಿಮಗೆ ಹೆಚ್ಚು ತಿಳುವಳಿಕೆ ಮತ್ತು ಸಹಕಾರಿ ಎಂದು ಕಾಣಿಸುವುದಿಲ್ಲ.
ಪರಿಹಾರ - ವಿಷ್ಣು ದೇವರನ್ನು ಪೂಜಿಸಿ ಮತ್ತು ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.
कर्क राशि / ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ಏಳನೇ ಅಂದರೆ ವ್ಯಾಪಾರ, ಮದುವೆ ಮತ್ತು ಪಾಲುದಾರಿಕೆಯ ಮನೆಯಲ್ಲಿ ಮಾರ್ಗಿಯಾಗುತ್ತದೆ. ವೃತ್ತಿಪರವಾಗಿ, ಈ ಸಮಯದಲ್ಲಿ ನೀವು ತಂಡದ ಸದಸ್ಯರು ಮತ್ತು ಸಹೋದ್ಯೋಗಿಗಳೊಂದಿಗೆ ಯಾವುದೇ ವಿಷಯದ ಬಗ್ಗೆ ವಾದಿಸಬಹುದು. ಇದರಿಂದಾಗಿ ನಿಮ್ಮ ಮಾನಸಿಕ ಶಾಂತಿ ಗೊಂದಲಕ್ಕೆ ಒಳಗಾಗಬಹುದು. ಇದಲ್ಲದೆ ನೀವು ಮುಂಚಿತವಾಗಿ ಊಹಿಸಿಲ್ಲದ ಯಾವುದೇ ಖರ್ಚುಗಳನ್ನು ಸಹ ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ನಿಮ್ಮ ಬಜೆಟ್ ಹದಗೆಡಬಹುದು. ಕೆಲಸದ ಸ್ಥಳದಲ್ಲಿ ಅತಿಯಾದ ಕೆಲಸದ ಕಾರಣದಿಂದಾಗಿ ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಸ್ವಂತ ವ್ಯಾಪಾರವನ್ನು ಹೊಂದಿರುವ ಕರ್ಕ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ವ್ಯಾಪಾರದ ವಿಸ್ತರಣೆ ಮತ್ತು ಬೆಳವಣಿಗೆಗಾಗಿ ಯಾವುದೇ ಹೊಸ ಬದಲಾವಣೆಯನ್ನು ಮಾಡದಿರಲು ಸಲಹೆ ನೀಡಲಾಗಿದೆ. ಏಕೆಂದರೆ ಇದರಿಂದ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯದಿರುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವೈವಾಹಿಕ ಜೀವನವನ್ನು ಹೊಂದಿರುವವರು, ಪ್ರತಿ ವಿಷಯದ ಬಗ್ಗೆ ತಮ್ಮ ಜೀವನ ಸಂಗಾತಿಯೊಂದಿಗೆ ಜಗಳವಾಡಬಹುದು. ಮತ್ತು ನಿಮ್ಮಿಬ್ಬರ ನಡುವೆ ಪರಸ್ಪರ ತಿಳುವಳಿಕೆಯಲ್ಲಿ ಅತ್ಯಂತ ಕೊರತೆಯನ್ನು ಕಾಣಬಹುದು. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಗೆ ಅನಾರೋಗ್ಯಕ್ಕೆ ಒಳಗಾಗಬಹುದು. ಇದರ ಹೊರತಾಗಿ ನೀವು ಲೀವೆರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ, ನಿಮ್ಮ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಲು ನಿಮಗೆ ಸೂಚಿಸಲಾಗಿದೆ, ಇಲ್ಲದಿದ್ದರೆ ಮುಂಬರುವ ಸಮಯದಲ್ಲಿ ಆ ಸಮಸ್ಯೆಯು ಗಂಭೀರವಾಗಬಹುದು.
ಪರಿಹಾರ - ಪ್ರತಿದಿನ ಶಿವ ದೇವರನ್ನು ಪೂಜಿಸಿ ಮತ್ತು ಶಿವಲಿಂಗದ ಮೇಲೆ ನೀರನ್ನು ಅರ್ಪಿಸಿ.
सिंह राशि / ಸಿಂಹ ರಾಶಿ
ಸಿಂಹ ರಾಶಿಚ್ಕ್ರಾ ಸ್ಥಳೀಯರಿಗೆ ಗುರು ದೇವ ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ಆರನೇ ಮನೆ ಅಂದರೆ ಶತ್ರು, ಸಾಲ ಮತ್ತು ರೋಗದ ಮನೆಯಲ್ಲಿ ಮಾರ್ಗಿಯಾಗಿ ಪ್ರವೇಶಿಸುತ್ತದೆ. ವೃತ್ತಿಪರವಾಗಿ ನೋಡಿದರೆ, ಈ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ಸ್ವಲ್ಪ ಬೆಳವಣಿಗೆಯನ್ನು ಕಾಣಬಹುದು. ನಿಮ್ಮ ಕೌಶಲ್ಯವನ್ನು ಸಾಬೀತುಪಡಿಸಲು ಮತ್ತು ಉತ್ತಮ ಪ್ರೋತ್ಸಾಹವನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗಬಹುದು. ಕೆಲಸದ ಸ್ಥಳದಲ್ಲಿ ಕೆಲಸದ ವಾತಾವರಣವು ಅಸ್ತವ್ಯಸ್ತವಾಗಿರುವ ಸಾಧ್ಯತೆ ಇದೆ. ಆದರೆ ನಿಮ್ಮ ಕೆಲಸದ ಮೇಲೆ ಉತ್ತಮ ಹಿಡಿತವನ್ನು ಹೊಂದಿದ್ದರೆ, ವಿಷಯಗಳು ನಿಮಗೆ ಉತ್ತಮವಾಗಿರುವ ಸಾಧ್ಯತೆ ಇದೆ. ಹೊಸ ವ್ಯಾಪಾರವನ್ನು ಆರಂಭಿಸಲು ಯೋಜಿಸುತ್ತಿದ್ದವರು, ಈ ಕಾರ್ಯಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗಬಹುದು.
ಆರ್ಥಿಕವಾಗಿ, ಈ ಸಮಯದಲ್ಲಿ ವ್ಯಾಪಾರಸ್ಥರು ತಮ್ಮ ವ್ಯಾಪಾರದ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಮಾರ್ಕೆಟ್ ನಿಂದ ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ಪ್ರೀತಿಯ ಸಂಬಂಧದಲ್ಲಿರುವ ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಸಮಯ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಸಂಬಂಧವು ಸುಧಾರಿಯಿಸಬಹುದು ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ತಿಳುವಳಿಕೆಯನ್ನು ಬೆಳೆಸಿಕೊಳ್ಳಬಹುದು. ನಿಮ್ಮ ಸಂಬಂಧವನ್ನು ನೀವು ಒಂದು ಹಂತ ಮುಂದುವರಿಸಲು ಯೋಜಿಸುತ್ತಿದ್ದರೆ, ನವೆಂಬರ್ ವರೆಗೆ ನೀವು ಕಾಯಬೇಕಾಗುತ್ತದೆ.
ಪರಿಹಾರ - ನಿಮ್ಮ ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿಸಿ.
ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಯಾವಾಗ ತೆರೆಯುತ್ತದೆ ಮತ್ತು ನಿಮ್ಮ ಜೀವನದಲ್ಲಿ ಯಾವಾಗ ಸಂತೋಷ ಬರುತ್ತದೆ ಎಂಬುದನ್ನು ತಿಳಿಯಿರಿ
कन्या राशि / ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ಐದನೇ ಮನೆ ಅಂದರೆ ಮಕ್ಕಳು, ಪ್ರೀತಿ ಮತ್ತು ಪ್ರಣಯದ ಮನೆಯಲ್ಲಿ ಮಾರ್ಗಿಯಾಗುತ್ತದೆ. ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ನೀವು ಹೊಸ ಯೋಜನೆಗಳು ಮತ್ತು ಹಲವು ಹೊಸ ಕೆಲಸಗಳಿಂದ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸಂಘರ್ಷಗಳು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಮೂಲಕ ಮೂಲಕ ಮಾಡಲಾಗುವ ಪರಿಶ್ರಮ ಮತ್ತು ಪ್ರಯತ್ನಗಳನ್ನು ನಿರ್ಲಕ್ಷಿಸಬಹುದು. ಆದಾಗ್ಯೂ, ನಿಮ್ಮ ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಸೌಹಾರ್ದಯುತವಾಗಿರುವ ಸಾಧ್ಯತೆ ಇದೆ. ಶಿಕ್ಷಣದ ದೃಷ್ಟಿಕೋನದಿಂದ ವಿದ್ಯಾರ್ಥಿಗಳಿಗೆ ಈ ಅವಧಿಯು ಸರಾಸರಿ ಫಲಪ್ರದವಾಗಿರಬಹುದು.
ವಿದ್ಯಾರ್ಥಿಗಳು ತಮ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅವುಗಳನ್ನು ನೆನಪಿಟ್ಟುಕೊಳ್ಳುವಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಪರೀಕ್ಷೆಯ ಫಲಿತಾಂಶಗಳ ಮೇಲೆ ಬೀಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಲಸ್ಯವನ್ನು ತ್ಯಜಿಸಿ ಮತ್ತು ಅಧ್ಯಯನದತ್ತ ಗಮನವನ್ನು ಕೇಂದ್ರೀಕರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಪ್ರೀತಿಯ ಸಂಬಂಧದಲ್ಲಿರುವ ಕನ್ಯಾ ರಾಶಿಚಕ್ರದ ಸ್ಥಳೀಯರು ಸಮಯದಲ್ಲಿ ತಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು ವಿವಾದಗಳನ್ನು ಎದುರಿಸಬೇಕಾಗಬಬಹುದು. ಇದರೊಂದಿಗೆ ಈ ಸಮಯದಲ್ಲಿ ತಿಳುವಳಿಕೆಯನ್ನು ಪರಿಚಯಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ನಿಮ್ಮಿಬ್ಬರಿಗೂ ಸಾಧ್ಯವಾಗದಿರಬಹುದು. ಈ ಕಾರಣದಿಂದಾಗಿ ನಿಮ್ಮ ನಡುವೆ ವಿವಾದ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಪರಿಹಾರ - ಗುರುವಾರ ನಾರಾಯಣ ದೇವರನ್ನು ಪೂಜಿಸಿ ಮತ್ತು ಅವರಿಗೆ ಹಳದಿ ಹೂವುಗಳನ್ನು ಅರ್ಪಿಸಿ.
ಬೃಹತ್ ಕುಂಡಲಿ: ನಿಮ್ಮ ಜೀವನದ ಮೇಲೆ ಗ್ರಹಗಳ ಪರಿಣಾಮ ಮತ್ತು ಪರಿಹಾರವನ್ನು ತಿಳಿಯಿರಿ
तुला राशि / ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಗುರುವು ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ನಾಲ್ಕನೇ ಅಂದರೆ ಸಂತೋಷ, ವಿಶ್ರಾಂತಿ ಮತ್ತು ತಾಯಿಯ ಮನೆಗೆ ಮಾರ್ಗಿಯಾಗಿ ಪ್ರವೇಶಿಸುತ್ತದೆ. ತುಲಾ ರಾಶಿಚಕ್ರದ ವ್ಯಾಪಾರಸ್ಥರಿಗೆ ಈ ಸಮಯವು ಅನುಕೂಲಕರವಾಗಿರುವ ಸಾಧ್ಯತೆ ಇದೆ. ಏಕೆಂದರೆ ಅವರ ಮೂಲಕ ಮಾಡಲಾದ ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ತರಬಹುದು. ಇದರ ಹೊರತಾಗಿ, ಆಹಾರ ಉದ್ಯಮ ಅಥವಾ ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುವ ಜನರಿಗೆ ಈ ಅವಧಿಯು ಅಂಕೋಲಕರವಾಗಿರಬಹುದು. ಏಕೆಂದರೆ ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅಂತಹ ಉಪಕರಣಗಳ ಬೇಡಿಕೆ ಹೆಚ್ಚಾಗಬಹುದು. ಈ ಸಮಯದಲ್ಲಿ ನೀವು ಬೆಟ್ಟಿಂಗ್ ಮಾರ್ಕೆಟ್, ಶೇರ್ ಮಾರ್ಕೆಟ್ ಮತ್ತು ಸ್ಟಾಕ್ ಮಾರ್ಕೆಟ್ ಇತ್ಯಾದಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ ಎಂದು ಸಲಹೆ ನೀಡಲಾಗಿದೆ. ಏಕೆಂದರೆ ಇದರಲ್ಲಿ ನಿಮಗೆ ನಷ್ಟವಾಗುವ ಸಾಧ್ಯತೆ ಹೆಚ್ಚು.
ವಕೀಲರಾಗಲು ಅಥವಾ ನ್ಯಾಯಾಧೀಶರಾಗಲು ಅಭ್ಯಾಸ ಮಾಡುತ್ತಿರುವವರು ಈ ಸಮಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆಯನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ತುಲಾ ರಾಶಿಚಕ್ರದ ವಿದ್ಯಾರ್ಥಿಗಳು ಒತ್ತಡವನ್ನು ಅನುಭವಿಸಬಹುದು. ಏಕೆಂದರೆ ಈ ಅವಧಿಯಲ್ಲಿ ಅವರ ಪಠ್ಯಕ್ರಮ ಹೆಚ್ಚಾಗಬಹುದು. ಆದರೆ ಕೊನೆಯಲ್ಲಿ ಅವರ ಕಠಿಣ ಪರಿಶ್ರಮವು ಅವರಿಗೆ ಧನಾತ್ಮಕ ಫಲಿತಾಂಶಗಳನ್ನು ತರಬಹುದು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಯಾವುದೇ ಹೊಸ ನಿರ್ಮಾಣ ಕಾರ್ಯಕ್ಕಾಗಿ ಅಥವಾ ನಿಮ್ಮ ಮನೆಯನ್ನು ನವೀಕರಿಸಲು ನಿಮ್ಮ ಹಣವನ್ನು ನೀವು ಖರ್ಚು ಮಾಡಬಹುದು. ಇದರ ಹೊರತಾಗಿ, ಯಾವುದೇ ಹಳೆಯ ಆಸ್ತಿಯಲ್ಲೂ ನೀವು ಹೂಡಿಕೆ ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಅಶಾಂತಿ ಮತ್ತು ಅಸಮಾಧಾನವನ್ನು ಅನುಭವಿಸಬಹುದು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮನೆಯ ಸದಸ್ಯರು ನಿಮ್ಮ ಮೇಲೆ ಆನೆಯ ರೀತಿಯ ನಿರ್ಬಂಧಗಳು ಅಥವಾ ನಿಷೇಧಗಳನ್ನು ವಿಧಿಸಬಹುದು.
ಪರಿಹಾರ - ಅಗತ್ಯವಿರುವ ಮಕ್ಕಳಿಗೆ ಸ್ಟೇಷನರಿ ಮತ್ತು ಯುನಿಫಾರ್ಮ್ ಅನ್ನು ದಾನ ಮಾಡಿ
वृश्चिक राशि / ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಅದು ನಿಮ್ಮ ಮೂರನೇ ಮನೆ ಅಂದರೆ ಸಂವಹನ, ಪ್ರಯಾಣ, ಬಲ ಮತ್ತು ಸಹೋದರ-ಸಹೋದರಿಯರ ಮನೆಗೆ ಮಾರ್ಗಿಯಾಗಿ ಪ್ರವೇಶಿಸಲಿದೆ. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಉದ್ಯೋಗದಲ್ಲಿರುವ ಜನರು ಈ ಸಮಯದಲ್ಲಿ ನಿಧಾನಗತಿಯಲ್ಲಿ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ವರ್ಕ್ ಪ್ರೊಫೈಲ್ ನಿಂದಾಗಿ ಯಾವುದೇ ರೀತಿಯ ವರ್ಗಾವಣೆ ಅಥವಾ ವಲಸೆಗೆ ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗವನ್ನು ಹುಡುಕುತ್ತಿರುವವರು ಅಥವಾ ತಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಯೋಜಿಸುತ್ತಿರುವವರು ಸಹ, ನವೆಂಬರ್ ವರೆಗೆ ಅಂದರೆ ಗುರು ಗ್ರಹವು ಮುಂದಿನ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿ ಮಾರ್ಗಿಯಾಗುವ ವರೆಗೆ, ಈ ಕಾರ್ಯಕ್ಕಾಗಿ ಕಾಯಬೇಕಾಗಬಹುದು.
ವೈಯಕ್ತಿಕವಾಗಿ ಈ ಸಮಯದಲ್ಲಿ ನೀವು ಹೆಚ್ಚು ಶಕ್ತಿಯುತರಾಗಿರಬಹುದು. ಆದರೆ ನಿಮ್ಮ ಉತ್ಸಾಹ ಮತ್ತು ಶಕ್ತಿಯಲ್ಲಿ ಕೊರತೆ ಉಂಟಾಗಬಹುದು. ಈ ಕಾರಣದಿಂದಾಗಿ ನಿಮ್ಮ ಪ್ರಯತ್ನಗಳ ಹೊರತಾಗಿಯೂ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಹೋದರ-ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸರಾಸರಿಗಿಂತ ಉತ್ತಮವಾಗಿರಬಹುದು. ಆದರೆ ನಿಮ್ಮ ನಡುವೆ ಪ್ರೀತಿ ಮತ್ತು ಸ್ನೇಹದ ಕೊರತೆಯನ್ನು ಕಾಣಬಹುದು. ಇದರ ಹೊರತಾಗಿ ನಿಮ್ಮ ಮತ್ತು ನಿಮ್ಮ ಸ್ನೇಹಿತರ ನಡುವೆ ಕೆಲವು ತಪ್ಪು ಗ್ರಹಿಕೆಗಳು ಉಂಟಾಗಬಹುದು, ಇದು ನಿಮ್ಮ ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ತಂದೆಯ ಮೂಲಕ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನೀವು ಸಹಕಾರವನ್ನು ಪಡೆಯಬಹುದು.
ಪರಿಹಾರ - ಗುರುವಾರ ಉಪವಾಸ ಮಾಡಿ ಮತ್ತು ಉಪವಾಸದ ದಿನ ಒಮ್ಮೆ ಕಡ್ಲೆ ಹಿಟ್ಟಿನ ಸಿಹಿ ತಿಂಡಿಯನ್ನು ತಿನ್ನಿರಿ.
ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್
धनु राशि / ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೊದಲನೇ ಮನೆ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಮಯದಲ್ಲಿ ಇದು ನಿಮ್ಮ ಎರಡನೇ ಮನೆ ಅಂದರೆ ಕುಟುಂಬ, ಧ್ವನಿ ಮತ್ತು ಸಂವಹನದ ಮನೆಯಲ್ಲಿ ಮಾರ್ಗಿಯಾಗಿ ಪ್ರವೇಶಿಸುತ್ತದೆ. ವೈಯಕ್ತಿಕ ಜೀವನದಲ್ಲಿ ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯಲ್ಲಿ ನೀವು ಸುಧಾರಣೆಯನ್ನು ಕಾಣುವಿರಿ. ಈ ಸಮಯದಲ್ಲಿ ನಿಮ್ಮ ಹಿಂದಿನ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಮಾನಸಿಕವಾಗಿ ನೀವು ನಿರಾಳರಾಗಿರುವಂತೆ ಅನುಭವಿಸಬಹುದು. ಈ ಸಮಯದಲ್ಲಿ ನಿಮ್ಮ ಸಂವಹನ ಶೈಲಿಯಲ್ಲೂ ಹೊಳಪು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಧನು ರಾಶಿಚಕ್ರದ ವಿವಾಹಿತ ಜನರು ಈ ಸಮಯದಲ್ಲಿ ಕುಟುಂಬದ ಒತ್ತಡದಿಂದಾಗಿ ತಮ್ಮ ಸಂಬಂಧಗಳಲ್ಲಿ ಕೆಲವು ಏರಿಳಿತಗಳು ಮತ್ತು ಒತ್ತಡಗಳನ್ನು ಎದುರಿಸಬೇಕಾಗಬಹುದು.
ನಿಮ್ಮ ಜೀವನ ಸಂಗಾತಿಯೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ಮತ್ತು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಿಮ್ಮ ಸಂಬಂಧಗಳಲ್ಲಿ ನೀವು ಕೆಲವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೃತ್ತಿಪರವಾಗಿ ನೋಡಿದರೆ, ಉದ್ಯೋಗವನ್ನು ಹುಡುಕುತ್ತಿರುವವರು, ಕೆಲವು ಉತ್ತಮ ಪ್ರಸ್ತಾಪಗಳನ್ನು ಪಡೆಯಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಆರೋಗ್ಯದ ದೃಷ್ಟಿಕೋನದಿಂದ, ಈಗಾಗಲೇ ಕೆಲವು ರೋಗಗಳಿಂದ ಬಳಲುತ್ತಿರುವ ಜನರಿಗೆ ಈ ಅವಧಿಯು ಉತ್ತಮವಾಗಿರುತ್ತದೆ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ತಮ್ಮ ಆರೋಗ್ಯದ ಸಮಸ್ಯೆಗಳಿಗೆ ಸರಿಯಾದ ಚಿಕಿತ್ಸೆಯನ್ನು ಪಡೆಯುವ ಸಾಧ್ಯತೆ ಇದೆ.
ಪರಿಹಾರ - ಪ್ರತಿದಿನ ನಿಮ್ಮ ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿಸಿ.
मकर राशि / ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ತನ್ನ ರಾಶಿಯಲ್ಲಿ ಮಾರ್ಗಿಯಾಗಲಿದೆ. ಈ ಸಮಯದಲ್ಲಿ ಮಕರ ರಾಶಿಚಕ್ರದ ಸ್ಥಳೀಯರು ಹೆಚ್ಚು ಪ್ರಾಯೋಗಿಕವಾಗಿರಬಹುದು ಮತ್ತು ಯಾವುದೇ ಕೆಲಸವನ್ನು ಮಾಡುವ ಮೊದಲು ಅದರ ಬಗ್ಗೆ ನೀವು ಎರಡು ಬಾರಿ ಯೋಚಿಸುವುದನ್ನು ಕಾಣಬಹುದು. ನೀವು ಪ್ರೀತಿಯ ಸಂಬಂಧದಲ್ಲಿದ್ದರೆ, ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವಿಅಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಇದರ ಹೊರತಾಗಿ, ನಿಮ್ಮ ಮನೆಯ ಸದಸ್ಯರೊಂದಿಗಿನ ಸಂಬಂಧಗಳಲ್ಲೂ ನೀವು ಸ್ವಲ್ಪ ಶುಷ್ಕತೆಯನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಶಾಂತಿಯನ್ನು ಪರಿಚಯಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಕೆಲವು ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯಲ್ಲಿ ನೀವು ಸುಧಾರಣೆಯನ್ನು ಕಾಣಬಹುದು.
ಆರ್ಥಿಕ ದೃಷ್ಟಿಕೋನದಿಂದ ನೋಡಿದರೆ, ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವುದನ್ನು ತಪ್ಪಿಸಲು ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಇದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಇದಲ್ಲದೆ ಯಾರಿಗೂ ಸಾಲ ನೀಡಬೇಡಿ ಮತ್ತು ನಿಮ್ಮ ಅಮೂಲ್ಯವಾದ ವಸ್ತುಗಳ ಬಗ್ಗೆ ಕಾಳಜಿ ವಹಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ಕಳ್ಳತನ ಅಥವಾ ದೊಡ್ಡ ನಷ್ಟಕ್ಕೆ ಬಲಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆರೋಗ್ಯದ ದೃಷ್ಟಿಕೋನದಿಂದ, ಬದಲುತ್ತಿರುವ ಋತುವಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಅರೋಗ್ಯ ದುರ್ಬಲವಾಗಿರಬಹುದು.
ಪರಿಹಾರ - ಗುರುವಾರ ಬಡ ಮಕ್ಕಳಿಗೆ ಅಥವಾ ವೃದ್ಧರಿಗೆ ಬಾಳೆಹಣ್ಣು ದಾನ ಮಾಡಿ.
कुंभ राशि / ಕುಂಭ ರಾಶಿ
ಕುಂಭ ರಾಶಿಚಕ್ರದ ಜನರಿಗೆ ಗುರು ಗ್ರಹವು ಅವರ ಎರಡನೇ ಮನೆ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಅವರ ಹನ್ನೆರಡನೇ ಮನೆ ಅಂದರೆ ವೆಚ್ಚ, ನಷ್ಟ ಮತ್ತು ಆಧ್ಯಾತ್ಮಿಕತೆಯ ಮನೆಯಲ್ಲಿ ಮಾರ್ಗಿಯಾಗಲಿದೆ. ಈ ಸಮಯದಲ್ಲಿ ಯಾವುದೇ ಸಂಪತ್ತನ್ನು ಖರೀದಿ ಅಥವಾ ಮಾರಾಟ ಮಾಡಬಹುದು. ಏಕೆಂದರೆ ಈ ಅವಧಿಯಲ್ಲಿ ಉತ್ತಮ ಒಪ್ಪಂದವನ್ನು ಮಾಡುವಲ್ಲಿ ನೀವು ಯಶಸ್ವಿಯಾಗಬಹುದು. ಇದಲ್ಲದೆ ಈ ಅವಧಿಯಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಅರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹ ನೀವು ಯಶಸ್ವಿಯಾಗಬಹುದು. ವೈಯಕ್ತಿಕ ಜೀವನದಲ್ಲಿ ಈ ಸಮಯದಲ್ಲಿ ಆಧ್ಯಾತ್ಮಿಕತೆಯ ಕಡೆಗೆ ನೀವು ಹೆಚ್ಚು ಒಲವು ಹೊಂದಿರಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೀವು ಯೋಗ ಮತ್ತು ಧ್ಯಾನದಂತಹ ಚಟುವಟಿಕೆಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಸೇರಿಸಿಕೊಳ್ಳಬಹುದು.
ಆದಾಗ್ಯೂ, ಈ ಸಮಯದಲ್ಲಿ ನಿಮ್ಮಲ್ಲಿ ಆಧ್ಯಾತ್ಮಿಕ ಒಲವಿನಿಂದಾಗಿ ನೀವು ಯಾವುದೇ ಗುರುವನ್ನು ಹೊಂದುವ ಪ್ರಬಲ ಬಯಕೆಯನ್ನು ಹೊಂದಿರಬಹುದು. ಆದರೆ ಈ ಕಾರ್ಯದಲ್ಲಿ ನೀವು ವಿಫಲರಾಗಬಹುದು. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ವಿದೇಶಿ ಮಾರುಕಟ್ಟೆ ಅಥವಾ ವಿದೇಶಿ ಗ್ರಾಹಕರೊಂದಿಗೆ ಒಪ್ಪಂದದ ಕೆಲಸವನ್ನು ಮಾಡುವ ಜನರಿಗೆ ಈ ಸಮಯ ಉತ್ತಮವೆಂದು ಸಾಬೀತಾಗಬಹುದು. ಈ ಸಮಯದಲ್ಲಿ ನೀವು ಕೆಲವು ಉತ್ತಮ ಒಪ್ಪಂದಗಳನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರು ಈ ಸಮಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆಯನ್ನು ನೋಡಬಹುದು. ಏಕೆಂದರೆ ನಿಮ್ಮ ಉತ್ಪನ್ನಗಳ ಮಾರಾಟ, ನಿಮ್ಮ ಸೇವೆಗಳು ಮತ್ತು ಗ್ರಾಹಕರ ಬಗೆಗಿನ ನಿಮ್ಮ ನಡವಳಿಕೆಯು ಸುಧಾರಿಸುವ ಸಾಧ್ಯತೆಯೂ ಇದೆ.
ಪರಿಹಾರ - ಗುರುವಾರ ನಾರಾಯಣ ದೇವಸ್ಥಾನದಲ್ಲಿ ಹಳದಿ ಬೇಳೆಯ ದಾನ ಮಾಡಿ.
मीन राशि / ಮೀನ ರಾಶಿ
ಮೀನ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಅವರ ಹತ್ತನೇ ಮತ್ತು ಮೊದಲನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ಹನ್ನೊಂದನೇ ಮನೆಗೆ ಅಂದರೆ ಆಸೆ, ಲಾಭ ಮತ್ತು ಗಳಿಕೆಯ ಮನೆಯಲ್ಲಿ ಮಾರ್ಗಿಯಾಗುತ್ತದೆ. ವೃತ್ತಿಪರ ಜೀವನದಲ್ಲಿ ನೀವು ಉದ್ದೇಶಿತ ಆದಾಯವನ್ನು ಸಾಧಿಸುವಲ್ಲಿ ನೀವು ವಿಫಲರಾಗಬಹುದು. ಇದರೊಂದಿಗೆ ಮಾರ್ಗಿ ಗುರುವು ಈ ಅವಧಿಯಲ್ಲಿ ನಿಮ್ಮ ಹಣವನ್ನು ಎಲ್ಲಾದರೂ ಸಿಲುಕಿಸಬಹುದು. ಈ ಸಮಯದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಜಿಸುತ್ತಿರುವ ವ್ಯಾಪಾರಸ್ಥರು, ಗುರುವು ತನ್ನ ದುರ್ಬಲ ರಾಶಿಯಿಂದ ಹೊರಬರುವವರೆಗೂ ಸ್ವಲ್ಪ ಸಮಯ ಕಾಯಬೇಕೆಂದು ಸಲಹೆ ನೀಡಲಾಗಿದೆ.
ಈ ಸಮಯದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕಠಿಣ ಪರಿಶ್ರಮ ಮಾಡಬಹುದು. ಆದರೆ ನೀವು ಇದರ ತೃಪ್ತಿದಾಯಕ ಫಲಿತಾಂಶಗಳನ್ನು ಪಡೆಯದಿರುವ ಸಾಧ್ಯತೆ ಇದೆ, ಇದು ನಿಮಗೆ ಆತಂಕ ಮತ್ತು ಸ್ವಭಾವದಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ ನಿಮ್ಮ ಸಹೋದರ-ಸಹೋದರಿಯರೊಂದಿಗಿನ ಸಂಬಂಧವು ಉತ್ತಮವಾಗಿರುವ ಸಾಧ್ಯತೆ ಇದೆ. ಆದರೆ ನೀವು ಭಾವನಾತ್ಮಕವಾಗಿ ಅವರ ಕಡೆಗೆ ಒಲವು ಹೊಂದಿರುತ್ತೀರಿ ಮತ್ತು ಅವರ ಸಹಕಾರವನ್ನು ನೆನಪಿಸಿಕೊಳ್ಳಬಹುದು.
ಪರಿಹಾರ - ಕೆಲಸ ಮಾಡುವ ನಿಮ್ಮ ಕೈಯಲ್ಲಿ ಹಳದಿ ಬಣ್ಣದ ಇಂದ್ರಗೋಪ ಮಣಿ ಕಂಕಣವನ್ನು ಧರಿಸಿ.
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025