ರಾಹು ಗ್ರಹ ಶಾಂತಿ ಮಂತ್ರ ಮತ್ತು ಪರಿಹಾರ
ವೈದಿಕ ಜ್ಯೋತಿಷ್ಯದ ಪ್ರಕಾರ, ರಾಹು ಒಂದು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ರಾಹು ದೋಷದಿಂದ ಮಾನಸಿಕ ಒತ್ತಡ, ಆರ್ಥಿಕ ನಷ್ಟ, ಸಮನ್ವಯದ ಕೊರತೆ ಪ್ರಾರಂಭವಾಗುತ್ತದೆ. ಯಾವುದೇ ನಿರ್ಧಿಷ್ಟ ಸಮಯದಲ್ಲಿ ಪ್ರತಿ ಗ್ರಹವು ದುರುದ್ವೇಷಪೂರಿತ ಪರಿಣಾಮಗಳನ್ನು ನೀಡಲು ಪ್ರತಮಭಿಸುತ್ತದೆ. ಅಂತಹ ;ಪರಿಸ್ಥಿತಿಯಲ್ಲಿ, ಗ್ರಹ ಶಾಂತಿಗಾಗಿ ಪರಿಹಾರಗಳನ್ನು ಮಾಡಲಾಗುತ್ತದೆ. ರಾಹು ಗ್ರಹದ ಶಾಂತಿಗಾಗಿ ಅನೇಕ ಪರಿಹಾರಗಳನ್ನು ತಿಳಿಸಲಾಗಿದೆ. ಇವುಗಳಲ್ಲಿ ರಾಹುಗೆ ಸಂಬಂಧಿಸಿದ ವಸ್ತುಗಳ ದಾನ ಮಾಡುವುದು, ರತ್ನ, ರಾಹು , ರಾಹು ಮಂತ್ರ ಮತ್ತು ಗಿಡಮೂಲಿಕೆಗಳನ್ನು ಧರಿಸುವುದು ಪ್ರಮುಖ ಪರಿಹಾರಗಳಾಗಿವೆ. ರಾಹುವಿನ ಶುಭ ಪರಿಣಾಮದಿಂದಾಗಿ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ರಾಜನಾಗಬಹುದು, ಆದರೆ ದುರುದ್ವೇಷಪೂರಿತ ಫಲಿತಾಂಶಗಳನ್ನು ಪಡೆಯುವುದರಿಂದಾಗಿ ರಾಜನಿಂದ ಭಿಖ್ಸುಕನಾಗುತ್ತಾನೆ ಎಂದು ನಂಬಲಾಗಿದೆ. ನಿಮ್ಮ ಜಾತಕದಲ್ಲಿ ರಾಹುವು ದುರ್ಬಲವಾಗಿದ್ದರೆ, ರಾಹು ಗ್ರಹ ಶಾಂತಿಗಾಗಿ ಖಂಡಿತವಾಗಿಯೂ ಪರಿಹಾರಗಳನ್ನು ಮಾಡಿ. ಏಕೆಂದರೆ ಈ ಕಾರ್ಯಗಳ ಪರಿಣಾಮದಿಂದಾಗಿ ರಾಹುವು ಶುಭ ಫಲಿತಾಂಶಗಳನ್ನು ನೀಡುತ್ತಾರೆ ಮತ್ತು ನಿಮ್ಮ ಕಷ್ಟಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.
ಉಡುಗೆ ಮತ್ತು ಜೀವನಶೈಲಿಗೆ ಸಂಬಂಧಿಸಿದ ರಾಹು ಗ್ರಹದ ಶಾಂತಿ ಕ್ರಮಗಳು
ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ.
ನಿಮ್ಮ ಮಾವ, ಅಜ್ಜ - ಅಜ್ಜಿ ಮತ್ತು ರೋಗಿಗಳನ್ನು ಗೌರವಿಸಿ.
ಸಾರಾಯಿ ಮತ್ತು ಮಾಂಸವನ್ನು ಸೇವಿಸಬೇಡಿ.
ನಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ.
ವಿಶೇಷವಾಗಿ ಬೆಳಿಗ್ಗೆ ಮಾಡಲಾಗುವ ರಾಹು ಗ್ರಹದ ಪರಿಹಾರ
ತಾಯಿ ದುರ್ಗೆಯನ್ನು ಪೂಜಿಸಿ.
ವರಾಹಿ ದೇವಿಯನ್ನು ಆರಾಧಿಸಿ.
ಕಾಲಭೈರವೇಶ್ವರ ದೇವರ ಪೂಜೆ ಮಾಡಿ.
ದುರ್ಗಾ ಚಾಲೀಸವನ್ನು ಪಠಿಸಿ.
ರಾಹು ಶಾಂತಿಗಾಗಿ ದಾನ ಮಾಡಿ
ರಾಹುವಿನ ದುರುದ್ವೇಷಪೂರಿತ ದಶೆಯಿಂದ ತಪ್ಪಿಸಲು ರಾಹು ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ಬುಧವಾರ ಸಂಜೆ ಮತ್ತು ರಾತ್ರಿಯಲ್ಲಿ ರಾಹು ನಕ್ಷತ್ರದಲ್ಲಿ ( ಆರ್ದ್ರ, ಸ್ವಾತಿ, ಶತಭಿಷಾ ) ದಾನ ಮಾಡಿ.
ದೇಣಿಗೆ ವಸ್ತುಗಳು - ಬಾರ್ಲಿ, ಸಾಸಿವೆ, ನಾಣ್ಯ, ಏಳು ಬಗೆಯ ಧಾನ್ಯಗಳು ( ಬಾರ್ಲಿ, ಎಳ್ಳು, ಅಕ್ಕಿ, ಸಂಪೂರ್ಣ ಹೆಸರು ಬೇಳೆ, ಗೋಧಿ, ಕಂಗುನಿ, ಗ್ರಾಂ ), ಗೋಮೇಧಿಕ ರತ್ನ, ನೀಲಿ ಅಥವಾ ಕಂದು ಬಣ್ಣದ ಬಟ್ಟೆಗಳು, ಗಾಜಿನ ವಸ್ತುಗಳು ಇತ್ಯಾದಿ.
ರಾಹುಗಾಗಿ ರತ್ನ
ರಾಹುಗಾಗಿ ಗೋಮೇಧಿಕ ರತ್ನವಿದೆ. ಈ ರತ್ನವನ್ನು ಧರಿಸುವುದರಿಂದ ಜನರು ರಾಹು ದೋಷವನ್ನು ತೊಡೆದುಹಾಕುತ್ತಾರೆ ಮತ್ತು ವ್ಯಕ್ತಿಯು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ರಾಹು ಯಂತ್ರ
ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಮತ್ತು ವೈಭವವನ್ನು ಹೆಚಿಸುವುದು, ಇದ್ದಕ್ಕಿದ್ದಂತೆ ಸಂಭವಿಸಲಾಗುವ ಅಡೆತಡೆಗಳು ಮತ್ತು ರೋಗಗಳಿಂದ ತಪ್ಪಿಸಲು ರಾಹು ಯಂತ್ರವನ್ನು ಪೂಜಿಸಬೇಕು. ರಾಹು ಯಂತ್ರವನ್ನು ಬುಧವಾರ ರಾಹು ನಕ್ಷತ್ರದಲ್ಲಿ ಧರಿಸಿ.
ರಾಹು ಗ್ರಹಕ್ಕೆ ಗಿಡಮೂಲಿಕೆ
ರಾಹು ಗ್ರಹದ ದುಷ್ಪರಿಣಾಮಗಳನ್ನು ತಪ್ಪಿಸಲು ಬುಧವಾರ ತುಂಗೆ ಗೆಡ್ಡೆಯನ್ನು ರಾಹು ನಕ್ಷತ್ರದ ಸಮಯದಲ್ಲಿ ಧರಿಸಿ.
ರಾಹುಗಾಗಿ ರುದ್ರಾಕ್ಷ
राहु दोष निवारण के लिए 8 मुखी रुद्राक्ष धारण करना लाभदायक होता है। ರಾಹು ದೋಷವನ್ನು ನಿವಾರಿಸಲು 8 ಮುಖಿ ರುದ್ರಾಕ್ಷವನ್ನು ಧರಿಸುವುದು ಪ್ರಯೋಜನಕಾರಿ.
ಎಂಟು ಮುಖಿ ರುಧ್ರಾಕ್ಷವನ್ನು ಧರಿಸಲು ಮಂತ್ರ:
ಓಂ ಹೂಂ ನಮಃ।
ಓಂ ಹ್ರಾಂ ಗ್ರೀಂ ಲುಂ ಶ್ರೀ।।
ರಾಹು ಮಂತ್ರ
ರಾಹು ಮಹಾ ದಶೆಯ ನಿವಾರಣೆಗಾಗಿ ರಾಹು ಬೀಜ ಮಂತ್ರವನ್ನು ಉಚ್ಚರಿಸಬೇಕು. ಮಂತ್ರ - ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹವೇ ನಮಃ!
ರಾಹು ಮಂತ್ರವನ್ನು 18000 ಬಾರಿ ಜಪಿಸಿ. ಆದರೆ ದೇಶ-ಕಾಲ-ಪಾತ್ರ ಸಿಂದ್ಧಾಂತದ ಪ್ರಕಾರ ಕಲಿಯುಗದಲ್ಲಿ ಈ ಮಂತ್ರವನ್ನು ಗರಿಷ್ಟ 72000 ಬಾರಿ ಜಪಿಸಬೇಕು.
ನೀವು ಈ ಮಂತ್ರವನ್ನು ಸಹ ಜಪಿಸಬಹುದು - ಓಂ ರಾಂ ರಾಹವೇ ನಮಃ!
ರಾಹು ಗ್ರಹದ ಶಾಂತಿಗಾಗಿ ಪರಿಹಾರಗಳನ್ನು ಮಾಡುವುದರಿಂದ ವ್ಯಕ್ತಿಯು ರಾಹು ದೋಷದಿಂದ ಮುಕ್ತಿ ಪಡೆಯುತ್ತಾನೆ. ರಹುವು ನೆರಳಿನ ಗ್ರಹ. ಇದು ಯಾವುದೇ ಭೌತಿಕ ರೂಪವನ್ನು ಹೊಂದಿಲ್ಲ. ಹಿಂದೂ ಶಾಸ್ತ್ರದ ಪ್ರಕಾರ, ರಾಹು ಗ್ರಹವು ಕಾಲಭೈರವ ದೇವರನ್ನು ಪ್ರತಿನಿಧಿಸುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹುವನ್ನು ಪಾಪ ಗ್ರಹವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮದಿಂದಾಗಿ ಸ್ಥಳೀಯನು ಅನೇಕ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಇದು ಒಬ್ಬ ವ್ಯಕ್ತಿಗೆ ಶುಭ ಮತ್ತು ದುರುದ್ವೇಷಪೂರಿತ ಎರಡೂ ಫಲಿತಾಂಶಗಳನ್ನು ನೀಡುತ್ತದೆಆದರೆ ಇದರ ಅಶುಭ ಪರಿಣಾಮಗಳನ್ನು ತಪ್ಪಿಸಲು ರಾಹು ಮಂತ್ರವನ್ನು ಜಪಿಸಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುವು ಜಾತಕದಲ್ಲಿ ಕಾಳಸರ್ಪ ದೋಷವನ್ನು ರಚಿಸುತ್ತವೆ. ಈ ದೋಷವನ್ನು ತಪ್ಪಿಸಲು ರಾಹು ಶಾಂತಿಯ ಪರಿಹಾರಗಳು ಪ್ರಯೋಜನಕಾರಿ. ರಾಹು ಯಂತ್ರವನ್ನು ಸ್ಥಾಪಿಸುವುದು ಮತ್ತು ಅದನ್ನು ಪೂಜಿಸುವುದರಿಂದಲೂ ಒಬ್ಬ ವ್ಯಕ್ತಿಯ ಶಿಕ್ಷಣ, ವ್ಯಾಪಾರ, ವೃತ್ತಿ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ನಿವಾರಿಸಬಹುದು. ರಾಹು ದೋಷದ ಪರಿಹಾರಗಳು ಗುಪ್ತ ಶತ್ರುಗಳು, ಗುಪ್ತವಾಗಿ ಬರುತ್ತಿದ್ದ ಅಡೆತಡೆಗಳು, ವಂಚನೆ, ಪಿತೂರಿ, ಗುಪ್ತ ರೋಗಗಳು, ಸಾಮಾಜಿಕ ಮತ್ತು ತಾರತಮ್ಯದಿಂದ ರಕ್ಷಿಸುತ್ತವೆ.
ರಾಹು ಗ್ರಹ ಶಾಂತಿ ಮಂತ್ರ ಮತ್ತು ಸಂಬಂಧಿಸಿದ ಈ ಲೇಖನವು ನಿಮಗೆ ಪ್ರಯೋಜನಕಾರಿ ಮತ್ತು ಪ್ರಬುದ್ಧತೆಯನ್ನು ಸಾಬೀತುಪಡಿಸುತ್ತದೆ ಎಂದು ನಾವು ಭಾವಿಸುತ್ತೇವೆ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
AstroSage TVSubscribe
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025