ಸಂಖ್ಯಾಶಾಸ್ತ್ರ ವಾರ ಭವಿಷ್ಯ: 09 - 15 ಫೆಬ್ರವರಿ 2025

ಸಂಖ್ಯಾಶಾಸ್ತ್ರವು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಖ್ಯಾಶಾಸ್ತ್ರವು ನಮ್ಮ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಏಕೆಂದರೆ ಸಂಖ್ಯೆಗಳು ನಮ್ಮ ಜನ್ಮ ದಿನಾಂಕಗಳೊಂದಿಗೆ ಎಲ್ಲವನ್ನೂ ಹೊಂದಿವೆ. ವ್ಯಕ್ತಿಯ ಮೂಲ ಸಂಖ್ಯೆಯೆಂದರೆ ಅವನ/ಅವಳ ಜನ್ಮ ದಿನಾಂಕವನ್ನು ಕೂಡಿಸಿರುವುದಾಗಿರುತ್ತದೆ ಮತ್ತು ಇದು ವಿವಿಧ ಗ್ರಹಗಳ ಆಡಳಿತದ ಅಡಿಯಲ್ಲಿ ಬರುತ್ತದೆ.

Image for Numerology Weekly 09 - 15 Feb

ಸಂಖ್ಯೆ 1 ಅನ್ನು ಸೂರ್ಯ, 2 ನೇ ಚಂದ್ರ, 3 ನೇ ಗುರು, 4 ನೇ ರಾಹು, 5 ನೇ ಬುಧ, 6 ನೇ ಶುಕ್ರ, 7 ನೇ ಕೇತು, 8 ನೇ ಶನಿ ಮತ್ತು 9 ನೇ ಸ್ಥಾನವನ್ನು ಮಂಗಳ ಆಳುತ್ತಾನೆ. ಈ ಗ್ರಹಗಳ ಸಂಚಾರದಿಂದಾಗಿ ಒಬ್ಬರ ಜೀವನದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ ಮತ್ತು ಅವುಗಳಿಂದ ನಿರ್ವಹಿಸಲ್ಪಡುವ ಸಂಖ್ಯೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ವರ್ಷದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಅತ್ಯುತ್ತಮ ಜ್ಯೋತಿಷಿ ಗಳೊಂದಿಗೆ ಮಾತನಾಡಿ

ನಿಮ್ಮ ಮೂಲ ಸಂಖ್ಯೆಯನ್ನು (ಮೂಲಾಂಕ) ತಿಳಿಯುವುದು ಹೇಗೆ?

ನಾವು ಸಂಖ್ಯಾಶಾಸ್ತ್ರ ವಾರ ಭವಿಷ್ಯ 2024 ಅನ್ನು ಪ್ರಾರಂಭಿಸುವ ಮೊದಲು ಮತ್ತು ಅದರ ವಿವಿಧ ಅಂಶಗಳನ್ನು ಅನ್ವೇಷಿಸುವ ಮೊದಲು, ನಿಮ್ಮ ಮೂಲ ಸಂಖ್ಯೆಯನ್ನು ಹೇಗೆ ನಿರ್ಧರಿಸುವುದು ಎಂಬುದನ್ನು ತಿಳಿಯೋಣ. ನಿಮ್ಮ ಜನ್ಮ ದಿನಾಂಕವನ್ನು ತೆಗೆದುಕೊಂಡು ಅದನ್ನು ಒಂದೇ ಅಂಕೆಗೆ ಪರಿವರ್ತಿಸುವ ಮೂಲಕ ನಿಮ್ಮ ಮೂಲ ಸಂಖ್ಯೆಯನ್ನು ಕಂಡುಹಿಡಿಯಬಹುದು; ಇದು ಸಾಕಷ್ಟು ನೇರವಾದ ಪ್ರಕ್ರಿಯೆಯಾಗಿದೆ. ಉದಾಹರಣೆಗೆ, ನೀವು ಯಾವುದೇ ತಿಂಗಳ 11 ರಂದು ಜನಿಸಿದರೆ, ನಿಮ್ಮ ಮೂಲ ಸಂಖ್ಯೆ 1+1 ಆಗಿರುತ್ತದೆ, ಇದು 2 ಕ್ಕೆ ಸಮನಾಗಿರುತ್ತದೆ, ಇದು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನಿಮ್ಮ ಮೂಲ ಸಂಖ್ಯೆ 2 ಆಗಿರುತ್ತದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಭವಿಷ್ಯ 2025

ಸಂಖ್ಯಾಶಾಸ್ತ್ರ ವಾರ ಭವಿಷ್ಯ: 09 - 15 ಫೆಬ್ರವರಿ 2025

ಮೂಲ ಸಂಖ್ಯೆ 1

(ನೀವು ಯಾವುದೇ ತಿಂಗಳ 1, 10, 19, 28 ರಂದು ಜನಿಸಿದ್ದರೆ)

ಈ ವಾರ ನೀವು ಅತ್ಯಂತ ಧೈರ್ಯಶಾಲಿ ಮತ್ತು ನಿರ್ಭೀತರಾಗಿರುತ್ತೀರಿ. ಆದರೆ ದಯವಿಟ್ಟು ನಿಮ್ಮ ಮಾತು ಅಥವಾ ಆಂಗಿಕ ಭಾಷೆಯಲ್ಲಿ ಅಹಂಕಾರ ಅಥವಾ ಆಕ್ರಮಣಕಾರಿ ಆಗದಂತೆ ಎಚ್ಚರಿಕೆ ವಹಿಸಿ.

ಪ್ರಣಯ ಸಂಬಂಧ - ಈ ವಾರ ಪ್ರತಿಕೂಲವಾದ ಸಂಖ್ಯೆಗಳ ಕಾರಣ, ತಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಂಘರ್ಷಗಳನ್ನು ತಪ್ಪಿಸಲು ಪ್ರಯತ್ನಿಸುವುದು ಮತ್ತು ಶಾಂತವಾಗಿರಲು ಧ್ಯಾನವನ್ನು ಅಭ್ಯಾಸ ಮಾಡುವುದು ಉತ್ತಮ. ಏಕೆಂದರೆ ನೀವು ಅತ್ಯಂತ ನಿಂದನೀಯ ಮೌಖಿಕ ವಾಗ್ವಾದಗಳಿಗೆ ಒಳಗಾಗಬಹುದು.

ಶಿಕ್ಷಣ - ನೀವು ಇಂಜಿನಿಯರಿಂಗ್ ಕೋರ್ಸ್‌ ಪ್ರವೇಶಕ್ಕಾಗಿ ತಯಾರಿ ನಡೆಸುತ್ತಿದ್ದರೆ ಅಥವಾ ಇಂಜಿನಿಯರಿಂಗ್ ಓದುತ್ತಿದ್ದರೆ, ಈ ವಾರ ನಿಮಗೆ ಅನುಕೂಲಕರವಾಗಿರುತ್ತದೆ.

ವೃತ್ತಿ - ಈ ವಾರ ನೀವು ನಾಯಕತ್ವ ವಹಿಸಿಕೊಳ್ಳುತ್ತೀರಿ ಮತ್ತು ಸಹೋದ್ಯೋಗಿಗಳು-ಉದ್ಯೋಗದಾತರನ್ನು ನೀವು ಮುನ್ನಡೆಸಲು ಮತ್ತು ಸಮರ್ಥಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ನೀವು ಉತ್ತಮ ನಾಯಕರಾಗುತ್ತೀರಿ ಮತ್ತು ನಿಮ್ಮ ಪ್ರಯತ್ನಗಳು ನಿಮಗೆ ಮನ್ನಣೆಯನ್ನು ನೀಡುತ್ತವೆ. ನೀವು ಹೆಚ್ಚು ಗೌರವವನ್ನು ಗಳಿಸುವಿರಿ.

ಆರೋಗ್ಯ - ನಿಮ್ಮ ಆರೋಗ್ಯದ ವಿಷಯದಲ್ಲಿ, ಈ ಸಮಯದಲ್ಲಿ ನೀವು ಉತ್ಸಾಹ ಮತ್ತು ಶಕ್ತಿಯಿಂದ ಇರುತ್ತೀರಿ. ಇದರಿಂದ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿಯಂತ್ರಣದಲ್ಲಿದ್ದುಕೊಂಡು ನಿರಾಳವಾಗಿರಿ.

ಪರಿಹಾರ- ಪ್ರತಿದಿನ ಮುಂಜಾನೆ ಸೂರ್ಯನಿಗೆ ನೀರನ್ನು ಅರ್ಪಿಸಿ.

ಮೂಲ ಸಂಖ್ಯೆ 2

(ನೀವು ಯಾವುದೇ ತಿಂಗಳ 2, 11, 20, 29 ರಂದು ಜನಿಸಿದ್ದರೆ)

ಈ ವಾರ ನಿಮ್ಮ ಗೊಂದಲ ಮತ್ತು ಮಾನಸಿಕ ಸ್ಪಷ್ಟತೆಯ ಕೊರತೆಯಿಂದಾಗಿ, ನಿಮ್ಮ ಭಾವನೆಗಳನ್ನು ತಿಳಿಸಲು ನಿಮಗೆ ಕಷ್ಟವಾಗುತ್ತದೆ. ಆದ್ದರಿಂದ, ಧ್ಯಾನ ಮಾಡಲು ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯಲು ಸಲಹೆ ನೀಡಲಾಗುತ್ತದೆ.

ಪ್ರಣಯ ಸಂಬಂಧ - ತಪ್ಪು ತಿಳುವಳಿಕೆಯನ್ನು ತಡೆಗಟ್ಟಲು ಮತ್ತು ನಿಮ್ಮ ಸಂಬಂಧವನ್ನು ಬಲಪಡಿಸಲು ಈ ವಾರ ಭಾವನಾತ್ಮಕ ಬೆಂಬಲ ನೀಡುವಂತೆ ಸಂಗಾತಿಯ ಬಳಿ ಕೇಳಿಕೊಳ್ಳಿ.

ಶಿಕ್ಷಣ - ವಿದ್ಯಾರ್ಥಿಗಳು ಈ ಅವಧಿಯಲ್ಲಿ ಗಮನವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ ಏಕೆಂದರೆ ಭಾವನಾತ್ಮಕ ಗೊಂದಲಗಳು, ವಿಚಲಿತರಾಗಲು ಕಾರಣವಾಗಬಹುದು.

ವೃತ್ತಿ - ಕೆಲಸದ ಸ್ಥಳದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು, ಮತ್ತು ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಾಕಷ್ಟು ನೆರವು ಇಲ್ಲದಿರಬಹುದು. ಆದ್ದರಿಂದ, ಈ ವಾರ ಸಂಘರ್ಷವನ್ನು ತಪ್ಪಿಸಲು ಮತ್ತು ತಾಳ್ಮೆಯಿಂದಿರಲು ಸಲಹೆ ನೀಡಲಾಗುತ್ತದೆ.

ಆರೋಗ್ಯ - ಆರೋಗ್ಯದ ದೃಷ್ಟಿಯಿಂದ, ನೀವು ಉತ್ತಮ ವಾರವನ್ನು ಹೊಂದಿಲ್ಲ. ಮಾನಸಿಕ ಒತ್ತಡ ಮತ್ತು ಆತಂಕವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹವನ್ನು ಅತಿಯಾಗಿ ದಂಡಿಸುವುದು ಮತ್ತು ಅತಿಯಾದ ಒತ್ತಡವನ್ನು ತಪ್ಪಿಸಲು ಶಿಫಾರಸು ಮಾಡಲಾಗಿದೆ.

ಪರಿಹಾರ - ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಲು ಪ್ರಯತ್ನಿಸಿ ಮತ್ತು ಅದಕ್ಕಾಗಿ ಧ್ಯಾನ ಮಾಡಿ.

250+ ಪುಟಗಳು ವೈಯಕ್ತೀಕರಿಸಿದ ಆಸ್ಟ್ರೋಸೇಜ್ ಬೃಹತ್ ಜಾತಕ ವು ಮುಂಬರುವ ಎಲ್ಲಾ ಘಟನೆಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ

ಮೂಲ ಸಂಖ್ಯೆ 3

(ನೀವು ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ್ದರೆ)

ನೀವು ಆಧ್ಯಾತ್ಮಿಕ ಸಾಧಕರಾಗಿದ್ದರೆ, ಈ ವಾರ ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ನಿಮ್ಮ ಧ್ಯಾನ ಮತ್ತು ಆಧ್ಯಾತ್ಮಿಕತೆಯನ್ನು ಮುನ್ನಡೆಸಲು ಮತ್ತು ದೀರ್ಘಾವಧಿಯ ಆಧ್ಯಾತ್ಮಿಕ ಸಾರ್ಥಕತೆ ಸಾಧಿಸಲು ಸಾಧ್ಯವಾಗುತ್ತದೆ.

ಪ್ರಣಯ ಸಂಬಂಧ - ನೀವು ವಿವಾಹಿತರಾಗಿದ್ದರೆ ಈ ವಾರ ನಿಮ್ಮ ಜೀವನ ಸಂಗಾತಿಯನ್ನು ತೀರ್ಥಯಾತ್ರೆಗೆ ಕರೆದೊಯ್ಯಬಹುದು. ಇಲ್ಲವಾದರೆ ಮನೆಯಲ್ಲಿ ಹೋಮ ಅಥವಾ ಸತ್ಯನಾರಾಯಣ ಕಥೆಯಂತಹ ಆಧ್ಯಾತ್ಮಿಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ.

ಶಿಕ್ಷಣ - ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸದಲ್ಲಿ ಸಂಶೋಧನೆ ನಡೆಸುತ್ತಿರುವ ಅಥವಾ ಪಿಎಚ್‌ಡಿ ಮಾಡಡುವ ವಿದ್ಯಾರ್ಥಿಗಳು ಉತ್ತಮ ವಾರವನ್ನು ಹೊಂದಿದ್ದಾರೆ. ನೀವು ಪುರಾಣ, ನಿಗೂಢ ವಿಜ್ಞಾನ ಮತ್ತು ಜ್ಯೋತಿಷ್ಯದಲ್ಲಿ ಆಸಕ್ತಿ ಹೊಂದಿರುತ್ತೀರಿ.

ವೃತ್ತಿ - ಶಿಕ್ಷಕರು, ಮಾರ್ಗದರ್ಶಕರು, ಧರ್ಮ ಗುರುಗಳು ಅಥವಾ ಪ್ರೇರಕ ಭಾಷಣಕಾರರಾಗಿ ಕೆಲಸ ಮಾಡುವವರಿಗೆ ಇದು ಉತ್ತಮ ವಾರ. ಏಕೆಂದರೆ ನೀವು ಇತರರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.

ಆರೋಗ್ಯ - ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ವಾರ ಅತ್ಯುತ್ತಮವಾಗಿದೆ. ನೀವು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತೀರಿ ಮತ್ತು ದೈಹಿಕವಾಗಿ ಬಲಶಾಲಿಯಾಗುತ್ತೀರಿ.

ಪರಿಹಾರ - ಹನುಮಂತನನ್ನು ಪೂಜಿಸಿ.

ಮೂಲ ಸಂಖ್ಯೆ 4

(ನೀವು ಯಾವುದೇ ತಿಂಗಳ 4, 13, 22, 31 ರಂದು ಜನಿಸಿದ್ದರೆ)

ಈ ವಾರ ನೀವು ಉದ್ವಿಗ್ನರಾಗಬಹುದು ಮತ್ತು ಹಿಂಜರಿಯಬಹುದು ಮತ್ತು ಕ್ಷುಲ್ಲಕ ವಿಷಯಗಳಿಂದ ನೀವು ಗೊಂದಲಕ್ಕೊಳಗಾಗಬಹುದು.

ಪ್ರಣಯ ಸಂಬಂಧ - ನಿಮ್ಮ ಸಮಸ್ಯೆಗಳು ಮತ್ತು ಭಾವನೆಗಳ ಕಾರಣದಿಂದಾಗಿ ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸುವ ಅಥವಾ ಅಗೌರವಿಸುವ ಸಂದರ್ಭ ಬರುತ್ತದೆ, ಇದು ವಾದಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ವಾರ ನಿಮ್ಮ ಸಂಬಂಧಕ್ಕೆ ಸಮಾನ ಆದ್ಯತೆ ನೀಡಿ.

ಶಿಕ್ಷಣ - ಈ ವಾರ ವಿದ್ಯಾರ್ಥಿಗಳಿಗೆ ಸ್ವಲ್ಪ ಸವಾಲಾಗಿರಬಹುದು ಏಕೆಂದರೆ ನಿಮ್ಮ ನವೀನ ಅಧ್ಯಯನ ವಿಧಾನಗಳನ್ನು ಅಥವಾ ಕಲಿಕೆಯ ಶೈಲಿಯನ್ನು ವಿವರಿಸಲು ನಿಮಗೆ ಕಷ್ಟವಾಗಬಹುದು. ಆದ್ದರಿಂದ, ಇತರರನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಿ.

ವೃತ್ತಿ - MNC ಗಳಲ್ಲಿ ಕೆಲಸ ಮಾಡುವ ಅಥವಾ ರಫ್ತು ಮತ್ತು ಆಮದು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮೂಲ ಸಂಖ್ಯೆ 4 ಸ್ಥಳೀಯರು ಉತ್ತಮ ವಾರವನ್ನು ಹೊಂದಿರುತ್ತಾರೆ.

ಆರೋಗ್ಯ - ಮೂಲ ಸಂಖ್ಯೆ 4 ಸ್ಥಳೀಯರಿಗೆ, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ನಿಮ್ಮ ಮಾನಸಿಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುವುದರಿಂದ ವಿಷಯಗಳನ್ನು ಅತಿಯಾಗಿ ಯೋಚಿಸಿ ಮತ್ತು ಖಿನ್ನತೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ.

ಪರಿಹಾರ- ನಿತ್ಯವೂ ದುರ್ಗಾ ಮಾತೆಯನ್ನು ಪೂಜಿಸಿ.

ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಲು: ನಿಮ್ಮ ಕಾಗ್ನಿಆಸ್ಟ್ರೋ ವರದಿಯನ್ನು ಈಗಲೇ ಆರ್ಡರ್ ಮಾಡಿ!

ಮೂಲ ಸಂಖ್ಯೆ 5

(ನೀವು ಯಾವುದೇ ತಿಂಗಳ 5, 14, 23 ರಂದು ಜನಿಸಿದ್ದರೆ)

ಈ ವಾರ ಈ ಸಂಖ್ಯೆಯವರು ಸಂವಹನ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ನೇರ ಮಾತುಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಪ್ರಣಯ ಸಂಬಂಧ - ಇತ್ತೀಚಿಗೆ ಪ್ರೇಮ ಸಂಬಂಧವನ್ನು ಪ್ರವೇಶಿಸಿದವರಿಗೆ ಇದು ಪರೀಕ್ಷಾ ಅವಧಿಯಾಗಿರುತ್ತದೆ. ನೀವು ನಿಜವಾಗಿಯೂ ಪ್ರೀತಿಯಲ್ಲಿದ್ದರೆ, ನಿಮ್ಮ ಸಮಬಂಧ ಉಳಿಯಬಹುದು. ಇಲ್ಲವಾದರೆ ಮುರಿಯಬಹುದು.

ಶಿಕ್ಷಣ - ಹಣಕಾಸು ಮತ್ತು ಅಂಕಿಅಂಶಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಲಿದೆ. ಆದರೆ ಸಮೂಹ ಸಂವಹನದಂತಹ ಸೃಜನಾತ್ಮಕ ಅಧ್ಯಯನದ ವಿದ್ಯಾರ್ಥಿಗಳಿಗೆ ತಮ್ಮ ಐಡಿಯಾಗಳನ್ನು ತಲುಪಿಸಲು ಕಷ್ಟವಾಗುತ್ತದೆ.

ವೃತ್ತಿ - ಉದ್ಯೋಗಸ್ಥರು ತಮ್ಮ ಕೆಲ್ಸದಲ್ಲಿ ಸ್ಥಿರವಾಗಿರುತ್ತಾರೆ. ಬದಲಾವಣೆಗೆ ಯೋಜಿಸುತ್ತಿದ್ದರೆ ಮುಂದೂಡುವುದು ಒಳಿತು.

ಆರೋಗ್ಯ - ಈ ಸಮಯದಲ್ಲಿ ಚರ್ಮ ಮತ್ತು ಅಲರ್ಜಿ ಸಮಸ್ಯೆಗಳಿಂದ ನೀವು ಕೆಲವು ರೀತಿಯ ತೊಂದರೆಗಳನ್ನು ಅನುಭವಿಸಬಹುದು. ಋತುಬಂಧ ಮತ್ತು ಹಾರ್ಮೋನ್ ಸಂಬಂಧಿತ ಸಮಸ್ಯೆಗಳು ಮಹಿಳೆಯರ ಮೇಲೆ ಪ್ರಭಾವ ಬೀರಬಹುದು.

ಪರಿಹಾರ- ಹಸುಗಳಿಗೆ ಪ್ರತಿದಿನ ಹಸಿರು ಎಲೆಗಳ ತರಕಾರಿಗಳನ್ನು ನೀಡಿ.

ಮೂಲ ಸಂಖ್ಯೆ 6

(ನೀವು ಯಾವುದೇ ತಿಂಗಳ 6, 15, 24 ರಂದು ಜನಿಸಿದ್ದರೆ)

ಈ ವಾರ, ನೀವು ಇತರರಿಗೆ ಸಹಾಯ ಮಾಡಲು ಹೆಚ್ಚು ಒಲವು ತೋರುತ್ತೀರಿ.

ಪ್ರಣಯ ಸಂಬಂಧ - ಕಳೆದ ವಾರಕ್ಕೆ ಹೋಲಿಸಿದರೆ, ನೀವು ಈ ವಾರ ನಿಮ್ಮ ಸಂಗಾತಿಯ ಭಾವನಾತ್ಮಕ ಮತ್ತು ದೈಹಿಕ ಅಗತ್ಯಗಳನ್ನು ಹೆಚ್ಚು ಪರಿಗಣಿಸಬೇಕು, ನಿರ್ಲಕ್ಷಿಸುವುದು ಅವರ ಆರೋಗ್ಯಕ್ಕೆ ಮತ್ತು ನಿಮ್ಮಿಬ್ಬರ ಸಂಬಂಧಕ್ಕೆ ಹಾನಿಕಾರಕ.

ಶಿಕ್ಷಣ - ಸುಜನಾತ್ಮಕ ಬರವಣಿಗೆ ಅಧ್ಯನ ಮಾಡುವ ವಿದ್ಯಾರ್ಥಿಗಳು, ಈ ವಾರ ಗಮನ ಕೊಡಲು ಮತ್ತು ತಮ್ಮ ಐಡಿಯಾಗಳನ್ನು ವ್ಯಕ್ತಪಡಿಸಲು ಅಸಮರ್ಥರಾಗುತ್ತಾರೆ. ಟ್ಯಾರೋ ಓದುವಿಕೆ ಅಥವಾ ವೈದಿಕ ಜ್ಯೋತಿಷ್ಯದಂತಹ ನಿಗೂಢ ವಿಜ್ಞಾನಗಳ ಬಗ್ಗೆ ಕಲಿಯಲು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ.

ವೃತ್ತಿ - ಈ ವಾರ ನೀವು ನಿಮ್ಮ ವೃತ್ತಿ ಜೀವನವನ್ನು ಉನ್ನತಿಗೇರಿಸುವಲ್ಲಿ ಹೆಚ್ಚು ಗಮನ ನೀಡಬೇಕು ಮತ್ತು ಕೆಲಸ ಮಾಡಬೇಕು. ನೀವು ಹೊಸ ಬೆಳವಣಿಗೆಯ ಆಲೋಚನೆಗಳೊಂದಿಗೆ ಬರಬಹುದು ಮತ್ತು ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸಬಹುದು, ಆದರೆ ನೀವು ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತೀರಿ.

ಆರೋಗ್ಯ - ನೀವು ಉತ್ತಮ ನೈರ್ಮಲ್ಯವನ್ನು ಕಾಪಾಡಲು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ಸಿಹಿ ಮತ್ತು ಜಿಡ್ಡಿನ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ದೂರವಿರಿ. ಹೆಚ್ಚುವರಿಯಾಗಿ, ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿ.

ಪರಿಹಾರ- ಅದೃಷ್ಟಕ್ಕಾಗಿ ಹಲವಾರು ಸುಗಂಧ ದ್ರವ್ಯಗಳು, ವಿಶೇಷವಾಗಿ ಶ್ರೀಗಂಧದ ಪರಿಮಳವನ್ನು ಹೊಂದಿರುವವುಗಳನ್ನು ಪ್ರತಿದಿನ ಬಳಸಬೇಕು.

ಮೂಲ ಸಂಖ್ಯೆ 7

(ನೀವು ಯಾವುದೇ ತಿಂಗಳ 7, 16, 25 ರಂದು ಜನಿಸಿದ್ದರೆ)

ಈ ವಾರ, ನೀವು ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತೀರಿ ಮತ್ತು ನೀವು ಅದೃಷ್ಟಶಾಲಿಯಾಗುತ್ತೀರಿ. ಇಲ್ಲಿಯವರೆಗಿನ ನಿಮ್ಮ ಎಲ್ಲಾ ಶ್ರಮದ ಪ್ರತಿಫಲವನ್ನು ನೀವು ಪಡೆಯುತ್ತೀರಿ.

ಪ್ರಣಯ ಸಂಬಂಧ - ಈ ವಾರ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಕಷ್ಟವಾಗಬಹುದು ಮತ್ತು ವರ್ಷದ ಅತ್ಯಂತ ರೋಮ್ಯಾಂಟಿಕ್ ವಾರದಲ್ಲಿ ಭಾವನೆಗಳ ಕೊರತೆಯಿಂದಾಗಿ ನಿಮ್ಮ ಸಂಗಾತಿಯಿಂದ ನೀವು ಟೀಕೆಗಳನ್ನು ಎದುರಿಸಬಹುದು. ಆದ್ದರಿಂದ ನಿಮ್ಮ ಸಂಗಾತಿಯ ಭಾವನಾತ್ಮಕ ಅಗತ್ಯವನ್ನು ನೋಡಿಕೊಳ್ಳಲು ಮತ್ತು ಅವರಿಗೆ ಕೆಲವು ಸರ್ಪ್ರೈಸ್ ಯೋಜಿಸಲು ನಿಮಗೆ ಸಲಹೆ ನೀಡಲಾಗುತ್ತದೆ.

ಶಿಕ್ಷಣ - ಸೇನೆ ಅಥವಾ ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ಆಕಾಂಕ್ಷಿಗಳು ಯಶಸ್ವಿಯಾಗುತ್ತಾರೆ. ಅವರು ತಮ್ಮ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತಾರೆ.

ವೃತ್ತಿ - ನೀವು ಈ ವಾರ ನಿಮ್ಮ ಕೆಲಸದಲ್ಲಿ ವೇತನ ಹೆಚ್ಚಳ, ಬಡ್ತಿ ಅಥವಾ ಇತರ ಬದಲಾವಣೆಗಳನ್ನು ಪಡೆಯಬಹುದು. ಕೆಲಸದಲ್ಲಿ, ನೀವು ಹೆಚ್ಚು ಉತ್ಸಾಹಭರಿತರಾಗಿರುತ್ತೀರಿ ಮತ್ತು ನಿಮ್ಮ ನಾಯಕತ್ವದ ಸಾಮರ್ಥ್ಯಗಳಿಗೆ ಮನ್ನಣೆ ದೊರಕುತ್ತದೆ.

ಆರೋಗ್ಯ - ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ವಾರ ಅತ್ಯುತ್ತಮವಾಗಿದೆ. ನಿಮ್ಮ ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು, ನೀವು ಸಮತೋಲಿತ ಆಹಾರ, ವ್ಯಾಯಾಮ ಮತ್ತು ಧ್ಯಾನ ಮಾಡಬೇಕು.

ಪರಿಹಾರ- ಭಾನುವಾರದಂದು ಕಾಲ ಭೈರವನ ಪೂಜೆ ಮಾಡಿ.

ನೀವು ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ನಿಮಗೆ ಬೇಕಾದಂತೆ ಆನ್‌ಲೈನ್ ಪೂಜೆ ಮಾಡಲು ಜ್ಞಾನವುಳ್ಳ ಅರ್ಚಕರನ್ನು ಸಂಪರ್ಕಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಿರಿ!

ಮೂಲ ಸಂಖ್ಯೆ 8

(ನೀವು ಯಾವುದೇ ತಿಂಗಳ 8, 17, 26 ರಂದು ಜನಿಸಿದ್ದರೆ)

ಸ್ವಯಂ ನಿಯಂತ್ರಣವನ್ನು ಕಾಪಾಡಿಕೊಳ್ಳಲು ನೀವು ಧ್ಯಾನ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯಲು ಸೂಚಿಸಲಾಗಿದೆ.

ಪ್ರಣಯ ಸಂಬಂಧ - ಪ್ರಣಯ ಸಂಬಂಧದಲ್ಲಿರುವವರಿಗೆ ವಾರವು ನೀರಸವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ತಣ್ಣನೆಯ ವರ್ತನೆ ಮತ್ತು ಪ್ರಣಯ ವಿಚಾರಗಳಿಗೆ ಪ್ರತಿಕ್ರಿಯಿಸಲು ವಿಫಲವಾಗುವುದು ನಿಮ್ಮ ಸಂಗಾತಿಯನ್ನು ಅಸಂತೋಷಗೊಳಿಸುತ್ತದೆ.

ಶಿಕ್ಷಣ - ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸದಲ್ಲಿ ಸಂಶೋಧನೆ ನಡೆಸುತ್ತಿರುವ ಅಥವಾ ಪಿಎಚ್‌ಡಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಉತ್ತಮ ವಾರವನ್ನು ಹೊಂದಿದ್ದಾರೆ. ಜ್ಯೋತಿಷ್ಯ, ನಿಗೂಢ ವಿಜ್ಞಾನ ಅಥವಾ ಪೌರಾಣಿಕ ಅಧ್ಯಯನಗಳು ನಿಮ್ಮ ಆಸಕ್ತಿಯನ್ನು ಕೆರಳಿಸುತ್ತದೆ.

ವೃತ್ತಿ - ಈ ವಾರ ನಿಮ್ಮ ಕೆಲಸದ ಜೀವನದಲ್ಲಿ ನೀವು ತುಂಬಾ ಅತೃಪ್ತರಾಗುತ್ತೀರಿ ಮತ್ತು ನೀವು ಹೊಸದನ್ನು ಪ್ರಾರಂಭಿಸಲು ಬಯಸುತ್ತೀರಿ ಅದು ನಿಮ್ಮ ಉದ್ದೇಶವನ್ನು ಪೂರೈಸುತ್ತದೆ. ನಿಮಗೆ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀವನಕ್ಕೆ ಹೊಸ ಉದ್ದೇಶವನ್ನು ನೀಡುತ್ತದೆ.

ಆರೋಗ್ಯ - ಆತ್ಮೀಯ ಸ್ಥಳೀಯರೇ ಈ ವಾರ ಜನರ ಶಕ್ತಿಯ ಮಟ್ಟವು ತುಂಬಾ ಹೆಚ್ಚಾಗಿರುತ್ತದೆ ಮತ್ತು ಕ್ಷಿಪ್ರವಾಗಿರುತ್ತದೆ. ಆದ್ದರಿಂದ ನೀವು ಶಕ್ತಿಯನ್ನು ನಿಭಾಯಿಸಲು ಕಷ್ಟಪಡುತ್ತೀರಿ ಮತ್ತು ವಾರವಿಡೀ ಸ್ವಲ್ಪ ಆಯಾಸವನ್ನು ಅನುಭವಿಸುವಿರಿ.

ಪರಿಹಾರ- ಮಂಗಳವಾರ ಅಥವಾ ಶನಿವಾರದಂದು, ಹನುಮಂತನಿಗೆ ಚೋಳ ಅರ್ಪಿಸಿ.

ಮೂಲ ಸಂಖ್ಯೆ 9

(ನೀವು ಯಾವುದೇ ತಿಂಗಳ 9, 18, 27 ರಂದು ಜನಿಸಿದ್ದರೆ)

ಈ ವಾರ, ನಿಮ್ಮ ಜೀವನದ ಉದ್ದೇಶಗಳನ್ನು ಸಾಧಿಸಲು ನೀವು ಅತ್ಯಂತ ಬದ್ಧರಾಗಿರುತ್ತೀರಿ.

ಪ್ರಣಯ ಸಂಬಂಧ - ನಿಮ್ಮ ಮುಂಗೋಪ ಮತ್ತು ಅಹಂಕಾರದ ಬಗ್ಗೆ ನೀವು ಜಾಗರೂಕರಾಗಿರಬೇಕು. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ.

ಶಿಕ್ಷಣ - ಮೂಲ ಸಂಖ್ಯೆ 9ರ ವಿದ್ಯಾರ್ಥಿಗಳು ಯಾವುದೇ ರೀತಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದರೆ, ನೀವು ಯಶಸ್ವಿಯಾಗಲು ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉತ್ತಮ ಅವಕಾಶವಿದೆ. ಪೊಲೀಸ್ ಪಡೆ ಅಥವಾ ರಕ್ಷಣಾ ಪಡೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ವಾರವನ್ನು ಹೊಂದಿರುತ್ತಾರೆ.

ವೃತ್ತಿ - ಮೂಲ ಸಂಖ್ಯೆ 9 ರ ಸ್ಥಳೀಯರು ಕಾನೂನು ಜಾರಿ, ರಕ್ಷಣೆ ಅಥವಾ ಕ್ರೀಡೆಗಳಲ್ಲಿ ಕೆಲಸ ಮಾಡುವವರಿಗೆ ಈ ವಾರ ಅತ್ಯುತ್ತಮವಾಗಿದೆ. ಕೆಲಸದಲ್ಲಿ, ನೀವು ಹೆಚ್ಚು ಉತ್ಸಾಹಭರಿತರಾಗಿರುತ್ತೀರಿ ಮತ್ತು ನಿಮ್ಮ ನಾಯಕತ್ವದ ಸಾಮರ್ಥ್ಯಗಳಿಗೆ ಮನ್ನಣೆ ಸಿಗುತ್ತದೆ.

ಆರೋಗ್ಯ - ಆರೋಗ್ಯದ ವಿಷಯದಲ್ಲಿ, ಈ ವಾರ ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ; ಎಚ್ಚರಿಕೆಯಿಂದ ಚಾಲನೆ ಮಾಡಬೇಕಾಗುತ್ತದೆ ಮತ್ತು ಪ್ರಯಾಣಿಸುವಾಗ ಜಾಗರೂಕರಾಗಿರಿ.

ಪರಿಹಾರ- ಮಂಗಳವಾರದಂದು ಐದು ಕೆಂಪು ಗುಲಾಬಿಗಳನ್ನು ಆಂಜನೇಯನಿಗೆ ಅರ್ಪಿಸಿ.

ರತ್ನಗಳು, ಯಂತ್ರ, ಇತ್ಯಾದಿ ಸೇರಿದಂತೆ ಜ್ಯೋತಿಷ್ಯ ಪರಿಹಾರಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗಾಗಿ ಟ್ಯೂನ್ ಮಾಡಿ!

ಹೆಚ್ಚಾಗಿ ಕೇಳುವ ಪ್ರಶ್ನೆಗಳು

1. ನಿಮ್ಮ ಮೂಲಾಂಕವನ್ನು ನೀವು ಹೇಗೆ ಪಡೆಯುತ್ತೀರಿ?

ನಿಮ್ಮ ಜನ್ಮ ದಿನಾಂಕವನ್ನು ಸಂಖ್ಯೆಯಲ್ಲಿ ಬರೆಯಿರಿ ಮತ್ತು ನಂತರ ನೀವು ಒಂದು ಅಂಕಿಯನ್ನು ಪಡೆಯುವವರೆಗೆ ಎಲ್ಲವನ್ನೂ ಕೂಡಿಸಿ.

2. ಯಾವ ಜೀವನ ಪಥದ ಸಂಖ್ಯೆಯನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ?

ಸಂಖ್ಯಾಶಾಸ್ತ್ರದ ಪ್ರಕಾರ, ಜೀವನ ಪಥ ಸಂಖ್ಯೆ 7 ಸಾಕಷ್ಟು ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

3. ಜೀವನ ಪಥ ಸಂಖ್ಯೆ 4 ರ ಸಮಯ ಹೇಗಿರುತ್ತದೆ?

ಈ ತಿಂಗಳು, ಅನುಕೂಲಕರ ಫಲಿತಾಂಶಗಳನ್ನು ಸಾಧಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer