ಫೆಬ್ರವರಿ 2025 ಮುನ್ನೋಟ
ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಫೆಬ್ರವರಿಯು ವರ್ಷದ ಎರಡನೇ ತಿಂಗಳು ಮತ್ತು ಕ್ಯಾಲೆಂಡರ್‌ನಲ್ಲಿ ಅತ್ಯಂತ ಕಡಿಮೆ ತಿಂಗಳು ಅಂದರೆ ಕೇವಲ 28 ದಿನಗಳನ್ನು ಹೊಂದಿರುತ್ತದೆ ಅಥವಾ ಅಧಿಕ ವರ್ಷವಾಗಿದ್ದರೆ, ಫೆಬ್ರವರಿಯು 29 ದಿನಗಳನ್ನು ಹೊಂದಿರುತ್ತದೆ. ಇಂದು ನಾವು ಇಲ್ಲಿಫೆಬ್ರವರಿ 2025 ಮುನ್ನೋಟ ಎಂಬ ಲೇಖನದಲ್ಲಿ ಈ ತಿಂಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳೋಣ. ವೈದಿಕ ಜ್ಯೋತಿಷ್ಯದಲ್ಲಿ, ಫೆಬ್ರವರಿ ತಿಂಗಳನ್ನು ಪ್ರೀತಿ, ಬದಲಾವಣೆ ಮತ್ತು ವಸಂತಕಾಲದ ಆಗಮನದ ತಿಂಗಳು ಎಂದು ಕರೆಯಲಾಗುತ್ತದೆ.
ವಸಂತ ಋತುವು ಫೆಬ್ರವರಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಹವಾಮಾನದಲ್ಲಿ ಬದಲಾವಣೆಗಳು ಗೋಚರಿಸುತ್ತವೆ. ಈ ತಿಂಗಳು ಮಾಘ ಹುಣ್ಣಿಮೆ ಮತ್ತು ಶಿವರಾತ್ರಿ ಮುಂತಾದ ಅನೇಕ ಉಪವಾಸಗಳು ಮತ್ತು ಹಬ್ಬಗಳ ಆಗಮನವನ್ನು ಸೂಚಿಸುತ್ತದೆ. ಇದು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭವನ್ನು ಸಹ ಸೂಚಿಸುತ್ತದೆ. ಜನವರಿಗೆ ಹೋಲಿಸಿದರೆ ಈ ತಿಂಗಳಲ್ಲಿ ದಿನದ ಅವಧಿ ಸ್ವಲ್ಪ ಹೆಚ್ಚು.
ಫೆಬ್ರವರಿ ಮಾಸಿಕ ಜಾತಕ 2025 ರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಅತ್ಯುತ್ತಮ ಜ್ಯೋತಿಷಿ ಗಳೊಂದಿಗೆ ಮಾತನಾಡಿ
ವೈದಿಕ ಜ್ಯೋತಿಷ್ಯದಲ್ಲಿ, ಫೆಬ್ರವರಿ ತಿಂಗಳನ್ನು ಶಕ್ತಿ ಮತ್ತು ಸಮತೋಲನವನ್ನು ತರುವ ಅವಧಿ ಎಂದು ಪರಿಗಣಿಸಲಾಗುತ್ತದೆ. ಫೆಬ್ರವರಿ ತಿಂಗಳು ತುಂಬಾ ಆಹ್ಲಾದಕರವಾಗಿರುತ್ತದೆ ಏಕೆಂದರೆ ಈ ಸಮಯದಲ್ಲಿ ಸ್ವಲ್ಪ ಚಳಿ ಇರುತ್ತದೆ. ಈ ತಿಂಗಳಲ್ಲಿ ಜನರು ತಮ್ಮ ಪ್ರೀತಿಯ ಜೀವನದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಇದಲ್ಲದೆ, ಈ ತಿಂಗಳ ಬಗ್ಗೆ ಜನರ ಮನಸ್ಸಿನಲ್ಲಿ ತಮ್ಮ ವೃತ್ತಿಜೀವನ ಹೇಗಿರುತ್ತದೆ, ಆರೋಗ್ಯವು ಸ್ಥಿರವಾಗಿರುತ್ತದೆಯೇ ಅಥವಾ ಇಲ್ಲವೇ, ಕೌಟುಂಬಿಕ ಜೀವನದಲ್ಲಿ ಸಂತೋಷ ಅಥವಾ ಉದ್ವಿಗ್ನತೆ ಇರುತ್ತದೆಯೇ ಮುಂತಾದ ಹಲವು ರೀತಿಯ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಬರುತ್ತವೆ.
ಫೆಬ್ರವರಿ 2025 ಮುನ್ನೋಟ ಎಂಬ ಈ ವಿಶೇಷ ಆಸ್ಟ್ರೋಸೇಜ್ ಎಐ ಬ್ಲಾಗ್‌ನಲ್ಲಿ ಜನರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುತ್ತಾರೆ. ಇದರೊಂದಿಗೆ ಈ ತಿಂಗಳ ಗ್ರಹಗತಿಗಳು, ಬ್ಯಾಂಕ್ ರಜೆಗಳು ಮತ್ತು ಮಂಗಳಕರ ವಿವಾಹ ಮುಹೂರ್ತಗಳ ಬಗ್ಗೆ ಓದುಗರಿಗೆ ತಿಳಿಯುತ್ತದೆ.
ನಿಮ್ಮ ಜೀವನಕ್ಕೆ ಸಂಬಂಧಿಸಿದ ಗ್ರಹಗತಿಗಳ ಒಳನೋಟಗಳು ಬೇಕೇ? ರಾಶಿಭವಿಷ್ಯ 2025 ಅನ್ವೇಷಿಸಿ ಮತ್ತು ನಿಮ್ಮ ರಾಶಿಗಾಗಿ ಕಾಯುತ್ತಿರುವ ಅವಕಾಶಗಳನ್ನು ಅನ್ವೇಷಿಸಿ!
ಫೆಬ್ರವರಿ ಯಾಕೆ ವಿಶೇಷ?
ಈ ಕೆಳಗಿನ ವಿಷಯಗಳು ಫೆಬ್ರುವರಿ ತಿಂಗಳನ್ನು ವಿಶೇಷವಾಗಿಸುತ್ತವೆ.
- ಫೆಬ್ರವರಿಯಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಈ ಲೇಖನ ಹೇಳುತ್ತದೆ.
- ತಿಂಗಳ ಬ್ಯಾಂಕ್ ರಜೆಗಳನ್ನು ತಿಳಿಸುತ್ತದೆ.
- ಫೆಬ್ರವರಿ 2025 ರಲ್ಲಿ ಗ್ರಹಗಳು ಯಾವಾಗ ಮತ್ತು ಯಾವ ದಿನಾಂಕ ಅಥವಾ ರಾಶಿಚಕ್ರದ ಚಿಹ್ನೆಯಲ್ಲಿ ಸಾಗುತ್ತವೆ? ಈ ತಿಂಗಳು ಗ್ರಹಣ ಬರುತ್ತದೋ ಇಲ್ಲವೋ?
- ಅಲ್ಲದೆ, ಫೆಬ್ರವರಿ 2025 ರಲ್ಲಿ 12 ರಾಶಿಚಕ್ರ ಚಿಹ್ನೆಗಳ ಭವಿಷ್ಯವನ್ನು ತಿಳಿದುಕೊಳ್ಳಬಹುದು.
ಫೆಬ್ರವರಿಯಲ್ಲಿ ಜನಿಸಿದವರ ಗುಣಲಕ್ಷಣಗಳು
ಫೆಬ್ರವರಿಯಲ್ಲಿ ಜನಿಸಿದ ಜನರು ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಹೊಸ ಆಲೋಚನೆಗಳು ಯಾವಾಗಲೂ ಅವರ ಮನಸ್ಸಿನಲ್ಲಿ ಬರುತ್ತವೆ. ಇವರು ಸ್ವಭಾವತಃ ಕುತೂಹಲದಿಂದ ಕೂಡಿರುತ್ತಾರೆ ಮತ್ತು ಹೊಸ ಪರಿಕಲ್ಪನೆಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಇವರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ತಮ್ಮದೇ ಮಾರ್ಗದಲ್ಲಿ ಸಾಗುತ್ತಾರೆ ಮತ್ತು ಸಮಾಜವು ಸಿದ್ಧಪಡಿಸಿದ ನಿಯಮಗಳು ಮತ್ತು ರೂಢಿಗಳನ್ನು ಅನುಸರಿಸಲು ಇಷ್ಟಪಡುವುದಿಲ್ಲ. ತುಂಬಾ ಬುದ್ಧಿವಂತರು ಮತ್ತು ಸಹಾನುಭೂತಿ ಮತ್ತು ದಯೆಯ ಪ್ರಜ್ಞೆಯನ್ನು ಹೊಂದಿದ್ದಾರೆ.
ಈ ತಿಂಗಳಲ್ಲಿ ಜನಿಸಿದವರು ಆಕರ್ಷಕರಾಗಿರುತ್ತಾರೆ ಮತ್ತು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ. ಇವರು ಬುದ್ಧಿವಂತರು, ಇದರಿಂದಾಗಿ ಅನೇಕ ಜನರು ಅವರತ್ತ ಆಕರ್ಷಿತರಾಗುತ್ತಾರೆ. ಇವರು ಹರ್ಷಚಿತ್ತದ ಸ್ವಭಾವವನ್ನು ಹೊಂದಿದ್ದಾರೆ, ಈ ಕಾರಣದಿಂದಾಗಿ ಸಮಾಜದಲ್ಲಿ ಜನಪ್ರಿಯರಾಗಿದ್ದಾರೆ. ಬದಲಾವಣೆಗಳಿಗೆ ಹೊಂದಿಕೊಳ್ಳಲು ಅವರಿಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಅವರು ಕಷ್ಟದ ಸಮಯವನ್ನು ಶಾಂತವಾಗಿ ನಿರ್ವಹಿಸುತ್ತಾರೆ.
ಅದೃಷ್ಟದ ಸಂಖ್ಯೆಗಳು: 4, 5, 16, 90, 29
ಅದೃಷ್ಟದ ಬಣ್ಣ: ಮೆರೂನ್, ಬೇಬಿ ಪಿಂಕ್
ಅದೃಷ್ಟದ ದಿನಗಳು: ಗುರುವಾರ, ಶನಿವಾರ
ಅದೃಷ್ಟದ ರತ್ನಗಳು: ಪದ್ಮರಾಗ
ಜ್ಯೋತಿಷ್ಯ ಸಂಗತಿಗಳು ಮತ್ತು ಹಿಂದೂ ಕ್ಯಾಲೆಂಡರ್‌ನ ಲೆಕ್ಕಾಚಾರಗಳು
ಫೆಬ್ರವರಿ 2025 ಶತಭಿಷಾ ನಕ್ಷತ್ರ ದ ಅಡಿಯಲ್ಲಿ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಪ್ರಾರಂಭವಾಗುತ್ತದೆ ಮತ್ತು ಅದೇ ತಿಂಗಳ ಪೂರ್ವಭಾದ್ರಪದ ನಕ್ಷತ್ರದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಕೊನೆಗೊಳ್ಳುತ್ತದೆ ಎಂದುಫೆಬ್ರವರಿ 2025 ಮುನ್ನೋಟ ಲೇಖನ ಸಿದ್ಧಪಡಿಸಿದ ಜ್ಯೋತಿಷಿಗಳು ಹೇಳುತ್ತಾರೆ.
ಉಪವಾಸ ಮತ್ತು ಹಬ್ಬಗಳ ದಿನಾಂಕಗಳು
ದಿನಾಂಕ | ದಿನ | ಹಬ್ಬಗಳು ಮತ್ತು ಉಪವಾಸಗಳು |
02 ಫೆಬ್ರವರಿ 2025 | ಭಾನುವಾರ | ವಸಂತ ಪಂಚಮಿ |
02 ಫೆಬ್ರವರಿ 2025 | ಭಾನುವಾರ | ಸರಸ್ವತಿ ಪೂಜೆ |
08 ಫೆಬ್ರವರಿ 2025 | ಶನಿವಾರ | ಜಯಾ ಏಕಾದಶಿ |
09 ಫೆಬ್ರವರಿ 2025 | ಭಾನುವಾರ | ಪ್ರದೋಷ ಉಪವಾಸ (ಶುಕ್ಲ) |
12 ಫೆಬ್ರವರಿ 2025 | ಬುಧವಾರ | ಕುಂಭ ಸಂಕ್ರಾಂತಿ |
12 ಫೆಬ್ರವರಿ 2025 | ಬುಧವಾರ | ಮಾಘ ಹುಣ್ಣಿಮೆ ಉಪವಾಸ |
16 ಫೆಬ್ರವರಿ 2025 | ಭಾನುವಾರ | ಸಂಕಷ್ಟಿ |
24 ಫೆಬ್ರವರಿ 2025 | ಸೋಮವಾರ | ವಿಜಯ ಏಕಾದಶಿ |
25 ಫೆಬ್ರವರಿ 2025 | ಮಂಗಳವಾರ | ಪ್ರದೋಷ ಉಪವಾಸ (ಕೃಷ್ಣ) |
26 ಫೆಬ್ರವರಿ 2025 | ಬುಧವಾರ | ಮಹಾಶಿವರಾತ್ರಿ |
26 ಫೆಬ್ರವರಿ 2025 | ಬುಧವಾರ | ಮಾಸಿಕ ಶಿವರಾತ್ರಿ |
27 ಫೆಬ್ರವರಿ 2025 | ಗುರುವಾರ | ಫಲ್ಗುಣ ಅಮಾವಾಸ್ಯೆ |
ವಸಂತ ಏಕಾದಶಿ: ವಸಂತ ಪಂಚಮಿ ಹಬ್ಬವನ್ನು 02 ಫೆಬ್ರವರಿ 2025 ರಂದು ಆಚರಿಸಲಾಗುತ್ತದೆ. ಈ ದಿನವನ್ನು ವಿದ್ಯಾರಂಭಕ್ಕೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ತಾಯಿ ಸರಸ್ವತಿ ಮತ್ತು ಕಾಮದೇವನನ್ನು ಪೂಜಿಸಲಾಗುತ್ತದೆ. ವಸಂತ ಪಂಚಮಿಯ ಸಂದರ್ಭವು ಮದುವೆ, ಗೃಹಪ್ರವೇಶ, ಅನ್ನಪ್ರಾಶನ, ಮುಂಡನ ಮತ್ತು ನಾಮಕರಣ ಮುಂತಾದ ವಿವಿಧ ಕಾರ್ಯಗಳಿಗೆ ಮಂಗಳಕರವಾಗಿದೆ.
ರಾಜಯೋಗದ ಸಮಯವನ್ನು ತಿಳಿಯಲು, ಈಗಲೇ ಆರ್ಡರ್ ಮಾಡಿ: ರಾಜಯೋಗ ವರದಿ
ಸಂಕಷ್ಟಿ ಚತುರ್ಥಿ: ಸಂಕಷ್ಟಿ ಚತುರ್ಥಿ ಉಪವಾಸವನ್ನು 16 ಫೆಬ್ರವರಿ 2025 ರಂದು ಆಚರಿಸಲಾಗುತ್ತದೆ. ಗಣೇಶನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದ ಪಡೆಯಲು ಸಂಕಷ್ಟಿ ಚತುರ್ಥಿಯಂದು ಉಪವಾಸವನ್ನು ಆಚರಿಸುವುದು ಮತ್ತು ಪೂಜೆ ಮಾಡುವುದು ವಾಡಿಕೆ. ಸಂಕಷ್ಟ ಚತುರ್ಥಿ ಎಂದರೆ ತೊಂದರೆಗಳನ್ನು ನಿವಾರಿಸುವ ಚತುರ್ಥಿ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಮತ್ತು ತೊಂದರೆಗಳನ್ನು ತೊಡೆದುಹಾಕಲು ಈ ದಿನ ಗಣೇಶನನ್ನು ಪೂಜಿಸುತ್ತಾರೆ.
ಮಹಾಶಿವರಾತ್ರಿ: ಫೆಬ್ರವರಿ 26 ರಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಫಲ್ಗುಣ ಅಮಾವಾಸ್ಯೆ: ಫಲ್ಗುಣ ಅಮಾವಾಸ್ಯೆ ಫೆಬ್ರವರಿ 27ರಂದು ಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಫಲ್ಗುಣ ಮಾಸದಲ್ಲಿ ಬರುವ ಅಮವಾಸ್ಯೆಯಾದ್ದರಿಂದ ಇದನ್ನು ಫಲ್ಗುಣ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಪೂರ್ವಜರಿಗೆ ನೀರನ್ನು ಅರ್ಪಿಸಲು ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದಾನ ಮಾಡುವ ವಿಷಯದಲ್ಲಿ ಈ ದಿನ ಬಹಳ ವಿಶೇಷವಾಗಿದೆ.
ಬ್ಯಾಂಕ್ ರಜೆಗಳು
ದಿನಾಂಕ | ರಜೆ | ರಾಜ್ಯ |
02 ಫೆಬ್ರವರಿ 2025 | ವಸಂತ ಪಂಚಮಿ | ಹರಿಯಾಣ, ಒರಿಸ್ಸಾ, ತ್ರಿಪುರಾ, ಪಶ್ಚಿಮ ಬಂಗಾಳ |
19 ಫೆಬ್ರವರಿ 2025 | ಛತ್ರಪತಿ ಶಿವಾಜಿ ಮಹಾರಾಜ ಜಯಂತಿ | ಮಹಾರಾಷ್ಟ |
26 ಫೆಬ್ರವರಿ 2025 | ಮಹಾಶಿವರಾತ್ರಿ | ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ದೆಹಲಿ, ಗೋವಾ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳನ್ನು ಬಿಟ್ಟು ಬೇರೆಡೆಗಳಲ್ಲಿ ರಾಷ್ಟ್ರೀಯ ರಜಾದಿನ |
ಫೆಬ್ರವರಿಯಲ್ಲಿ ಮದುವೆ ಮುಹೂರ್ತಗಳು
ದಿನಾಂಕ ಮತ್ತು ದಿನ | ನಕ್ಷತ್ರ | ಮುಹೂರ್ತ ಸಮಯ |
02 ಫೆಬ್ರವರಿ 2025, ಭಾನುವಾರ | ಉತ್ತರಾಭಾದ್ರ ಮತ್ತು ರೇವತಿ | ಬೆಳಿಗ್ಗೆ 09:13 ರಿಂದ ಮರುದಿನ ಬೆಳಿಗ್ಗೆ 07:09 ರವರೆಗೆ |
03 ಫೆಬ್ರವರಿ 2025, ಸೋಮವಾರ | ರೇವತಿ | ಬೆಳಿಗ್ಗೆ 07:09 ರಿಂದ ಸಂಜೆ 05:40 ರವರೆಗೆ |
06 ಫೆಬ್ರವರಿ 2025, ಗುರುವಾರ | ರೋಹಿಣಿ | ಬೆಳಿಗ್ಗೆ 07:29 ರಿಂದ ಮರುದಿನ ಬೆಳಿಗ್ಗೆ 07:08 ರವರೆಗೆ |
07 ಫೆಬ್ರವರಿ 2025, ಶುಕ್ರವಾರ | ರೋಹಿಣಿ | ಬೆಳಿಗ್ಗೆ 07:08 ರಿಂದ ಸಂಜೆ 04:17 ರವರೆಗೆ |
12 ಫೆಬ್ರವರಿ 2025, ಬುಧವಾರ | ಮಾಘ | ರಾತ್ರಿ 01:58 ರಿಂದ ಬೆಳಿಗ್ಗೆ 07:04 ರವರೆಗೆ |
13 ಫೆಬ್ರವರಿ 2025, ಗುರುವಾರ | ಮಾಘ | ಬೆಳಿಗ್ಗೆ 07:03 ರಿಂದ ಬೆಳಿಗ್ಗೆ 07:31 ರವರೆಗೆ |
14 ಫೆಬ್ರವರಿ 2025, ಶುಕ್ರವಾರ | ಉತ್ತರ ಫಲ್ಗುಣ | ರಾತ್ರಿ 11:09 ರಿಂದ ಬೆಳಿಗ್ಗೆ 07:03 ರವರೆಗೆ |
15 ಫೆಬ್ರವರಿ 2025, ಶನಿವಾರ | ಉತ್ತರ ಫಲ್ಗುಣ ಮತ್ತು ಹಸ್ತಾ | ರಾತ್ರಿ 11:51 ರಿಂದ ಬೆಳಿಗ್ಗೆ 07:02 ರವರೆಗೆ |
16 ಫೆಬ್ರವರಿ 2025, ಭಾನುವಾರ | ಹಸ್ತಾ | ಬೆಳಿಗ್ಗೆ 07:08 ರಿಂದ ಬೆಳಿಗ್ಗೆ 08:06 ರವರೆಗೆ |
18 ಫೆಬ್ರವರಿ 2025, ಮಂಗಳವಾರ | ಸ್ವಾತಿ | ಬೆಳಿಗ್ಗೆ 09:52 ರಿಂದ ಮರುದಿನ ಬೆಳಿಗ್ಗೆ 07 ರವರೆಗೆ |
19 ಫೆಬ್ರವರಿ 2025, ಬುಧವಾರ | ಸ್ವಾತಿ | ಬೆಳಿಗ್ಗೆ 06:58 ರಿಂದ ಬೆಳಿಗ್ಗೆ 07:32 ರವರೆಗೆ |
21 ಫೆಬ್ರವರಿ 2025, ಶುಕ್ರವಾರ | ಅನುರಾಧ | ಬೆಳಿಗ್ಗೆ 11:59 ರಿಂದ ಮಧ್ಯಾಹ್ನ 03:54 ರವರೆಗೆ |
23 ಫೆಬ್ರವರಿ 2025, ಭಾನುವಾರ | ಮೂಲಾ | ಮಧ್ಯಾಹ್ನ 01:55 ರಿಂದ ಸಂಜೆ 06:42 ರವರೆಗೆ |
25 ಫೆಬ್ರವರಿ 2025, ಮಂಗಳವಾರ | ಉತ್ತರಾಷಾಢ | ಬೆಳಿಗ್ಗೆ 08:15 ರಿಂದ ಸಂಜೆ 06:30 ರವರೆಗೆ |
ಫೆಬ್ರವರಿ 2025 ರಲ್ಲಿ ಗ್ರಹಣಗಳು ಮತ್ತು ಸಂಚಾರಗಳು
ಫೆಬ್ರವರಿ 2025 ಮುನ್ನೋಟ ಲೇಖನ ಸಿದ್ಧಪಡಿಸಿದ ಜ್ಯೋತಿಷಿಗಳ ಪ್ರಕಾರ ಈ ತಿಂಗಳು ಸಂಚಾರಗಳು ಹೀಗಿವೆ.
ಗುರುವಿನ ನೇರ ಸಂಚಾರ: 04 ಫೆಬ್ರವರಿ 2025 ರಂದು ಗುರುಗ್ರಹವು ಮಿಥುನ ರಾಶಿಯಲ್ಲಿ ನೇರವಾಗಿ ಸಂಚರಿಸಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಶಿಕ್ಷಕನ ಅಂಶವಾದ ಗುರುಗ್ರಹದ ಈ ನೇರ ಸಂಚಾರ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
ಬುಧ ಸಂಚಾರ: ಫೆಬ್ರವರಿ 11, 2025 ರಂದು ಬುಧ ಗ್ರಹವು ಶನಿಯ ಹಪಠ್ಯವಿರುವ ಕುಂಭರಾಶಿಯಲ್ಲಿ ಸಂಚರಿಸಲಿದೆ. ಕುಂಭ ಬುದ್ಧಿವಂತಿಕೆಗೆ ಹೆಸರಾದರೆ, ಬುಧವು ವ್ಯಾಪಾರ-ವ್ಯವಹಾರಗಳ ಮೇಲೆ ಪ್ರಭಾವ ಬೀರುತ್ತದೆ.
ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ
ಸೂರ್ಯ ಸಂಚಾರ: ಫೆಬ್ರವರಿ 12, 2025 ರಂದು ಸೂರ್ಯದೇವನು ಕುಂಭರಾಶಿಯಲ್ಲಿ ಸಂಚರಿಸಲಿದ್ದಾನೆ. ಸೂರ್ಯದೇವ ಯಶಸ್ಸನ್ನು ಸೂಚಿಸುತ್ತಾನೆ.
ಶನಿ ಅಸ್ತಂಗತ: 22 ಫೆಬ್ರವರಿ 2025 ರಂದು ಶನಿಯು ತನ್ನದೇ ಅಧಿಪತ್ಯದ ಕುಂಭರಾಶಿಯಲ್ಲಿ ಅಸ್ತಂಗತನಾಗುತ್ತಾನೆ. ಇದು ರಾಶಿಚಕ್ರಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಮಂಗಳನ ನೇರ ಸಂಚಾರ: 24 ಫೆಬ್ರವರಿ 2025 ರಂದುಮಂಗಳವು ಬುಧದ ರಾಶಿಯಾದ ಮಿಥುನದಲ್ಲಿ ನೇರವಾಗಿ ಸಂಚರಿಸುತ್ತದೆ. ಮಂಗಳ ಆಕ್ರಮಣ ಮತ್ತು ಧೈರ್ಯದ ಪ್ರತಿನಿಧಿಯಾಗಿದೆ.
ಬುಧ ಉದಯ: ಫೆಬ್ರವರಿ 26, 2025ರಂದು ಕುಂಭ ರಾಶಿಯಲ್ಲಿ ಬುಧ ಉದಯಿಸಲಿದೆ. ಕೆಲವು ರಾಶಿಗಳಿಗೆ ಇದು ಸಕಾರಾತ್ಮಕವಾದರೆ, ಇನ್ನುಳಿದವುಗಳಿಗೆ ನಕಾರಾತ್ಮಕ ಫಲಿತಾಂಶ ನೀಡುತ್ತದೆ.
ಬುಧ ಸಂಚಾರ: 27 ಫೆಬ್ರವರಿ 2025 ರಂದು ಮೀನರಾಶಿಯಲ್ಲಿ ಬುಧ ಸಂಚಾರ ನಡೆಯಲಿದೆ. ಹಾಗಾಗಿ ಈ ತಿಂಗಳು ಬಹಳ ಮಹತ್ವದಾಯಕವಾಗಿದೆ.
ಗಮನಿಸಿ: ಫೆಬ್ರವರಿ 2025ರಲ್ಲಿ ಯಾವುದೇ ಗ್ರಹಣಗಳು ಇರುವುದಿಲ್ಲ.
12 ರಾಶಿಗಳಿಗೆ ಜ್ಯೋತಿಷ್ಯ ಮುನ್ಸೂಚನೆಗಳು
ಮೇಷ
ಮೇಷ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲ ದೊರೆಯುವ ನಿರೀಕ್ಷೆ ಇದೆ. ಸರ್ಕಾರಿ ವಲಯದಿಂದ ಲಾಭವನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಆದಾಯವೂ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಬುದ್ಧಿವಂತಿಕೆಯನ್ನು ಪ್ರಶಂಸಿಸಲಾಗುತ್ತದೆ. ಈ ತಿಂಗಳು ನಿಮಗೆ ಕೆಲಸದ ಒತ್ತಡ ಹೆಚ್ಚಿರಬಹುದು ಎಂದುಫೆಬ್ರವರಿ 2025 ಮುನ್ನೋಟ ಲೇಖನ ಸಿದ್ಧಪಡಿಸಿದ ಜ್ಯೋತಿಷಿಗಳು ಹೇಳುತ್ತಾರೆ.ವ್ಯಾಪಾರಸ್ಥರಿಗೆ ವಿದೇಶಿ ಸಂಪರ್ಕದಿಂದ ಲಾಭವಾಗಲಿದೆ. ವಿದ್ಯಾರ್ಥಿಗಳು ತುಂಬಾ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ಈ ತಿಂಗಳು ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆ ಉತ್ತಮವಾಗಿರುತ್ತದೆ. ಮೇಷ ರಾಶಿಯವರು ಈ ತಿಂಗಳು ಪ್ರೀತಿಯ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಪರಸ್ಪರ ವಾದಗಳು ಇರಬಹುದು. ವಿವಾಹಿತರಿಗೆ, ಸಂಗಾತಿಯೊಂದಿಗೆ ಪ್ರಣಯ ಸಮಯವನ್ನು ಕಳೆಯಲು ಅವಕಾಶ ಸಿಗುತ್ತದೆ. ನಿಮ್ಮ ಖರ್ಚುಗಳು ಹೆಚ್ಚಾಗುವ ಲಕ್ಷಣಗಳಿವೆ. ಆದಾಗ್ಯೂ, ಹಣವನ್ನು ಉಳಿಸಲು ಸಹ ಸಾಧ್ಯವಾಗುತ್ತದೆ. ನೀವು ಸೋಂಕುಗಳಿಗೆ ಗುರಿಯಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು.
ಪರಿಹಾರ: ನೀವು ಬುಧವಾರ ಸಂಜೆ ಕಪ್ಪು ಎಳ್ಳನ್ನು ದಾನ ಮಾಡಬೇಕು.
ವೃಷಭ
ವೃಷಭ ರಾಶಿಯವರಿಗೆ ಫೆಬ್ರವರಿ ತಿಂಗಳು ಅನುಕೂಲಕರವಾಗಿರುತ್ತದೆ. ನೀವು ಚೆನ್ನಾಗಿ ಯೋಚಿಸಲು ಮತ್ತು ಜನರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗುತ್ತದೆ. ವೃತ್ತಿಯಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ ಆದರೆ ನಿಮ್ಮ ಶ್ರಮದ ಫಲವನ್ನು ನೀವು ಪಡೆಯುವುದಿಲ್ಲ. ವ್ಯಾಪಾರಸ್ಥರಿಗೆ ಈ ತಿಂಗಳು ಉತ್ತಮವಾಗಿದೆ. ನಿಮ್ಮ ವ್ಯಾಪಾರದಿಂದ ನೀವು ಉತ್ತಮ ಲಾಭ ಪಡೆಯುತ್ತೀರಿ. ಈ ತಿಂಗಳು ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಅಥವಾ ಅಗತ್ಯಕ್ಕಿಂತ ಹೆಚ್ಚು ಗಮನಹರಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.ಕುಟುಂಬದಲ್ಲಿ ಸಮಸ್ಯೆಗಳ ಸಾಧ್ಯತೆಯಿದೆ. ನಿಮ್ಮ ಕೆಲಸದಲ್ಲಿ ನೀವು ತುಂಬಾ ನಿರತರಾಗಿರುತ್ತೀರಿ, ಕುಟುಂಬಕ್ಕೆ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ.ಪ್ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ. ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆ ಮತ್ತು ಅನುಮಾನಗಳು ಉಂಟಾಗಬಹುದು.ನಿಮ್ಮ ಆದಾಯದಲ್ಲಿ ಭಾರಿ ಏರಿಕೆ ಕಂಡುಬರಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ನಿರಂತರ ಸುಧಾರಣೆ ಇರುತ್ತದೆ.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮಗೆ ಹೊಟ್ಟೆಯ ಸೋಂಕು, ಹೊಟ್ಟೆ ನೋವು, ಅಜೀರ್ಣ, ಆಮ್ಲೀಯತೆ ಇರಬಹುದು.
ಪರಿಹಾರ: ನೀವು ಶುಕ್ರವಾರದಂದು ಶ್ರೀ ಲಕ್ಷ್ಮೀ ನಾರಾಯಣ ಜಿಯನ್ನು ಪೂಜಿಸಬೇಕು.
ಉಚಿತ ಆನ್‌ಲೈನ್ ಜನ್ಮ ಜಾತಕ
ಮಿಥುನ
ಮಿಥುನ ರಾಶಿಯವರಿಗೆ ಈ ತಿಂಗಳು ಏರಿಳಿತಗಳಿಂದ ಕೂಡಿರುತ್ತದೆ. ಕೋಪವು ಅವರ ವೈಯಕ್ತಿಕ ಜೀವನದಲ್ಲಿ ಮತ್ತು ಕೆಲಸದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ನಡವಳಿಕೆಯು ಉತ್ತಮವಾಗಿರುತ್ತದೆ. 27 ರ ನಂತರ, ಕಚೇರಿಯಲ್ಲಿ ಯಾರೊಂದಿಗಾದರೂ ನೀವು ಜಗಳವಾಡಬಹುದು. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ.ನಿಮ್ಮ ಕೌಟುಂಬಿಕ ಸಂತೋಷ ಕಡಿಮೆಯಾಗಬಹುದು. ಕುಟುಂಬದ ಹಿರಿಯ ಸದಸ್ಯರು ಆರೋಗ್ಯ ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು.ನಿಮ್ಮ ಸಂಗಾತಿಯೊಂದಿಗೆ ನೀವು ಸಂತೋಷವಾಗಿರುತ್ತೀರಿ ಮತ್ತು ಆಹ್ಲಾದಕರ ಸಮಯವನ್ನು ಕಳೆಯಬಹುದು. ತಿಂಗಳ ಉತ್ತರಾರ್ಧದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು.ಈ ತಿಂಗಳು ನಿಮ್ಮ ಖರ್ಚುಗಳಲ್ಲಿ ಹೆಚ್ಚಳವನ್ನು ನೀವು ನೋಡುತ್ತೀರಿ. ಆದಾಗ್ಯೂ, ನಿಮ್ಮ ಅಗತ್ಯಗಳನ್ನು ನೀವು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ.ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಆಗಾಗ್ಗೆ ಕಾಡುತ್ತವೆ. ನೀವು ಬಿಪಿ, ಚರ್ಮ ಸಂಬಂಧಿ ಸಮಸ್ಯೆಗಳು, ಅಲರ್ಜಿಯಿಂದ ಬಳಲುವ ಸಾಧ್ಯತೆ ಇದೆ.
ಪರಿಹಾರ: ನೀವು ಬುಧ ಗ್ರಹದ ಬೀಜ ಮಂತ್ರವನ್ನು ಪ್ರತಿದಿನ ಜಪಿಸಬೇಕು.
ಕರ್ಕ
ಕರ್ಕ ರಾಶಿಯವರು ಖರ್ಚುಗಳಲ್ಲಿ ಹೆಚ್ಚಳವನ್ನು ನೋಡುತ್ತಾರೆ ಆದರೆ ನಿಮ್ಮ ಆದಾಯವೂ ಹೆಚ್ಚಾಗುತ್ತದೆ. ಈ ತಿಂಗಳು ವಿನೋದ ಮತ್ತು ಸಂತೋಷದಿಂದ ಕಳೆಯಬಹುದು. ಈ ತಿಂಗಳು ಹೆಚ್ಚಿನ ಕೆಲಸ ಇರಬಹುದು ಮತ್ತು ನಿಮ್ಮ ಸಂಬಳ ಹೆಚ್ಚಾಗಬಹುದು.ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡುವಲ್ಲಿ ಯಶಸ್ಸನ್ನು ಪಡೆಯಬಹುದು. ಕಠಿಣ ಪರಿಶ್ರಮದಿಂದ, ನೀವು ಅಧ್ಯಯನದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ.ಫೆಬ್ರವರಿ 2025 ಮುನ್ನೋಟ ಪ್ರಕಾರ ಕುಟುಂಬ ಸದಸ್ಯರ ನಡುವೆ ವಾತ್ಸಲ್ಯ ಇರುತ್ತದೆ. ಪರಸ್ಪರ ಒಳ್ಳೆಯ ಸಮಯವನ್ನು ಕಳೆಯುವರು.ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸ್ವಲ್ಪ ಅಂತರವಿರಬಹುದು. ನೀವು ಮದುವೆಯ ಬಗ್ಗೆ ನಿಮ್ಮ ಪ್ರೇಮಿಯೊಂದಿಗೆ ಮಾತನಾಡಬಹುದು.ಈ ತಿಂಗಳು ನಿಮಗೆ ಖರ್ಚುಗಳಿಂದ ತುಂಬಿರುತ್ತದೆ. ಖರ್ಚುಗಳನ್ನು ನಿಭಾಯಿಸಲು ನಿಮಗೆ ಕಷ್ಟವಾಗಬಹುದು. ಹಣಕಾಸಿನ ನಷ್ಟದ ಸಾಧ್ಯತೆಗಳಿವೆ.ನೀವು ಮಾನಸಿಕ ಒತ್ತಡಕ್ಕೆ ಬಲಿಯಾಗಬಹುದು. ವ್ಯಾಯಾಮ ಮಾಡಿ ಮತ್ತು ಬೆಳಿಗ್ಗೆ ನಡೆಯಲು ಹೋಗಿ. ಹೊಸ ದಿನಚರಿಯನ್ನು ಅಳವಡಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.
ಪರಿಹಾರ: ಗುರುವಾರದಂದು ಬ್ರಾಹ್ಮಣರಿಗೆ ಆಹಾರ ನೀಡಿ.
ಸಿಂಹ
ಈ ತಿಂಗಳು ಸಿಂಹ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು. ಈ ಸಮಯವು ವೈವಾಹಿಕ ಸಂಬಂಧಗಳಿಗೆ ಏರಿಳಿತಗಳಿಂದ ಕೂಡಿದೆ. ಕೆಲಸದ ಸ್ಥಳದಲ್ಲಿ ಏರಿಳಿತಗಳಿರಬಹುದು. ನಿಮ್ಮ ಗಮನವು ಕೆಲಸದಿಂದ ಬೇರೆಡೆಗೆ ಹೋಗಬಹುದು. ದೀರ್ಘಾವಧಿಯ ಯೋಜನೆಗಳನ್ನು ಮಾಡುವುದರಿಂದ ಉದ್ಯಮಿಗಳು ಲಾಭ ಪಡೆಯಬಹುದು.ನೀವು ಕಲಿತ ಮತ್ತು ಅಧ್ಯಯನ ಮಾಡಿದ ಎಲ್ಲವೂ ನಿಮಗೆ ಉಪಯುಕ್ತವಾಗಿರುತ್ತದೆ. ನಿಮ್ಮ ಕೋಪವನ್ನು ಹತೋಟಿಯಲ್ಲಿಡಿ.ಆಸ್ತಿ ಅಥವಾ ಇನ್ನಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರ ನಡುವೆ ವಾದಗಳು ಉಂಟಾಗಬಹುದು.ನಿಮ್ಮ ಪ್ರೇಮ ಸಂಬಂಧದಲ್ಲಿ ಏರಿಳಿತದ ಸಾಧ್ಯತೆಗಳಿವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಆಗಾಗ್ಗೆ ಜಗಳಗಳು ಉಂಟಾಗಬಹುದು.ನೀವು ಹಣವನ್ನು ಗಳಿಸುವಲ್ಲಿ ಸಮಸ್ಯೆಗಳನ್ನು ಹೊಂದಿರಬಹುದು. ಈ ಸಮಯದಲ್ಲಿ ನೀವು ಯಾವುದೇ ರೀತಿಯ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ತಪ್ಪು ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಇದೆ.
ಪರಿಹಾರ: ಶುಕ್ರವಾರದಂದು ಹುಡುಗಿಯರಿಗೆ ಕೆಲವು ಬಿಳಿ ಆಹಾರ ಪದಾರ್ಥಗಳನ್ನು ಉಡುಗೊರೆಯಾಗಿ ನೀಡಿ.
ಕನ್ಯಾ
ಕನ್ಯಾ ರಾಶಿಯವರಿಗೆ ನಿಮ್ಮ ಮತ್ತು ನಿಮ್ಮ ಮಕ್ಕಳ ಬುದ್ಧಿವಂತಿಕೆಯು ಹೆಚ್ಚಾಗುತ್ತದೆ ಮತ್ತು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಬಲಗೊಳ್ಳುತ್ತದೆ. ನೀವು ಬಡ್ತಿ ಪಡೆಯಬಹುದು. ಭವಿಷ್ಯದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನಿಮಗೆ ಸಹಾಯ ಮಾಡುವ ಕೆಲವು ಜನರೊಂದಿಗೆ ನೀವು ಸಂಬಂಧವನ್ನು ಬೆಳೆಸಿಕೊಳ್ಳುತ್ತೀರಿ. ನೀವು ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಅದ್ಭುತ ಯಶಸ್ಸನ್ನು ಪಡೆಯಬಹುದು.ಕುಟುಂಬದ ಚರ ಮತ್ತು ಸ್ಥಿರ ಆಸ್ತಿಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಮಕ್ಕಳು ಪ್ರಗತಿ ಹೊಂದುತ್ತಾರೆ ಮತ್ತು ನಿಮ್ಮ ಒಡಹುಟ್ಟಿದವರ ಸಮಸ್ಯೆಗಳು ಸಹ ಕೊನೆಗೊಳ್ಳುತ್ತವೆ.ನಿಮ್ಮ ಸಂಗಾತಿಯೊಂದಿಗೆ ನೀವು ಎಲ್ಲೋ ಹೋಗಬಹುದು. ವಿವಾಹಿತರಿಗೆ ಈ ತಿಂಗಳು ಏರಿಳಿತಗಳಿಂದ ತುಂಬಿರುತ್ತದೆ.ನಿಮ್ಮ ಆದಾಯದಲ್ಲಿ ಸ್ಥಿರವಾದ ಹೆಚ್ಚಳವನ್ನು ನೀವು ನೋಡುತ್ತೀರಿ. ಕೆಲಸದ ಬೆಳವಣಿಗೆಯಿಂದಾಗಿ, ನೀವು ಹಣವನ್ನು ಗಳಿಸುವ ಅವಕಾಶವನ್ನು ಹೊಂದಿರುತ್ತೀರಿ.ನೀವು ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಬೇಕು. ಸಣ್ಣ ನಿರ್ಲಕ್ಷ್ಯ ಕೂಡ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಪರಿಹಾರ: ನೀವು ಬುಧ ಗ್ರಹದ ಬೀಜ ಮಂತ್ರವನ್ನು ಪಠಿಸಬೇಕು.
ತುಲಾ
ತುಲಾ ರಾಶಿಯವರು ತಿಂಗಳ ಆರಂಭದಿಂದ ಅಂತ್ಯದವರೆಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ನಿಮ್ಮ ಖರ್ಚುಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕೆಲಸದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ.ಫೆಬ್ರವರಿ 2025 ಮುನ್ನೋಟ ಪ್ರಕಾರ ಶಿಸ್ತನ್ನು ಕಾಯ್ದುಕೊಳ್ಳುವ ಮೂಲಕ ಮತ್ತು ಟೈಮ್ ಟೇಬಲ್ ಮಾಡುವ ಮೂಲಕ ಅಧ್ಯಯನ ಮಾಡಲು ಸಲಹೆ ನೀಡಲಾಗುತ್ತದೆ. ನಿಮ್ಮ ತಪ್ಪುಗಳನ್ನು ಸರಿಮಾಡಿಕೊಳ್ಳುವ ಮೂಲಕ ಮುಂದುವರಿಯಲು ಪ್ರಯತ್ನಿಸುತ್ತೀರಿ.ಕೌಟುಂಬಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಹಿರಿಯರ ಆಶೀರ್ವಾದ ಹಾಗೂ ಅವರ ಮಾರ್ಗದರ್ಶನವನ್ನು ಪಡೆಯುತ್ತೀರಿ.ನೀವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಪರಸ್ಪರರ ಜೀವನಕ್ಕೆ ಕೊಡುಗೆ ನೀಡಲು ಪ್ರಯತ್ನಿಸುತ್ತೀರಿ. ಇದು ನಿಮ್ಮ ಪ್ರೀತಿಯ ಸಂಬಂಧವನ್ನು ಬಲಪಡಿಸುವ ಅವಕಾಶವನ್ನು ನೀಡುತ್ತದೆ.ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ ಮತ್ತು ನೀವು ಹಣವನ್ನು ಸ್ವೀಕರಿಸುತ್ತೀರಿ. ನಿಮ್ಮ ಆದಾಯ ಹೆಚ್ಚಾಗುತ್ತದೆ.ನಿಮ್ಮ ದೈಹಿಕ ಸಮಸ್ಯೆಗಳು ಹೆಚ್ಚಾಗುವ ಲಕ್ಷಣಗಳಿವೆ. ಈ ತಿಂಗಳು ನೀವು ಹೊಟ್ಟೆಯ ಕಾಯಿಲೆಗಳು, ಅಜೀರ್ಣ, ಆಮ್ಲೀಯತೆ, ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳು, ಕಣ್ಣಿನ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು.
ಪರಿಹಾರ: ನೀವು ಪ್ರತಿದಿನ ದುರ್ಗಾ ದೇವಿಯನ್ನು ಪೂಜಿಸಬೇಕು.
ಪ್ರೇಮ ಸಮಸ್ಯೆಗಳಿಗೆ ಪರಿಹಾರ ಬೇಕೇ ಜ್ಯೋತಿಷಿಗಳಲ್ಲಿ ಕೇಳಿ
ವೃಶ್ಚಿಕ
ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸಲಹೆ ನೀಡಲಾಗುತ್ತದೆ. ಕುಟುಂಬ ಮತ್ತು ವೈವಾಹಿಕ ಸಂಬಂಧಗಳು ಸುಧಾರಿಸುತ್ತವೆ. ಕೆಲಸದ ಸ್ಥಳದಲ್ಲಿ ನಿಮ್ಮ ಬುದ್ಧಿವಂತಿಕೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನೂ ನೀವು ಪಡೆಯುತ್ತೀರಿ.ನಿಮ್ಮ ಅಧ್ಯಯನದ ಮೇಲೆ ನೀವು ಗಮನಹರಿಸುವುದಿಲ್ಲ. ಇದು ನಿಮಗೆ ಹಾನಿಯಾಗಬಹುದು. ನೀವು ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡಲು, ಮನರಂಜನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಮಯ ಕಳೆಯಲು ಇಷ್ಟಪಡುತ್ತೀರಿ.ನಿಮ್ಮ ತಾಯಿಯ ಆರೋಗ್ಯವು ಹದಗೆಡಬಹುದು ಮತ್ತು ಅವರಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ಮಾನಸಿಕ ಆತಂಕವನ್ನು ಹೆಚ್ಚಿಸುತ್ತದೆ.ನಿಮ್ಮ ಪ್ರೀತಿಯು ಅರಳುತ್ತದೆ. ನೀವು ಪರಸ್ಪರ ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ಪ್ರೇಮ ವಿವಾಹದ ಸಾಧ್ಯತೆಗಳಿವೆ.ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ ಮತ್ತು ನಿಮ್ಮ ಆದಾಯದಲ್ಲಿ ಹೆಚ್ಚಳವನ್ನು ನೀವು ನೋಡುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭ ಪಡೆಯಬಹುದು.ನೀವು ಎದೆಯ ಸೋಂಕು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು. ನೀವು ಗಾಯಗೊಳ್ಳುವ ಅಥವಾ ಅಪಘಾತಕ್ಕೊಳಗಾಗುವ ಅಪಾಯವಿದೆ.
ಪರಿಹಾರ: ಶನಿವಾರದಂದು ಅಂಗವಿಕಲರಿಗೆ ಆಹಾರ ನೀಡಿ.
ಧನು
ಧನು ರಾಶಿಯ ಸ್ಥಳೀಯರು ಈ ತಿಂಗಳು ನಿಮ್ಮ ಕೆಲಸದಲ್ಲಿ ಏರಿಳಿತಗಳನ್ನು ಅನುಭವಿಸಬಹುದು. ಕೌಟುಂಬಿಕ ಮಟ್ಟದಲ್ಲಿನ ಅನೇಕ ಸವಾಲುಗಳು ನಿಮ್ಮನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತವೆ. ನೀವು ನಡುವೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ ಆದರೆ ನಿಮ್ಮ ವಿರೋಧಿಗಳು ನಿಮಗೆ ತೊಂದರೆ ನೀಡಬಹುದು. ವ್ಯಾಪಾರಸ್ಥರು ಜನರೊಂದಿಗೆ ಕೋಪದಿಂದ ವರ್ತಿಸಬಹುದು, ಅದು ವ್ಯವಹಾರಕ್ಕೆ ಅನುಕೂಲಕರವಾಗಿರುವುದಿಲ್ಲ.ನೀವು ಧೈರ್ಯ ಮತ್ತು ಕಠಿಣ ಪರಿಶ್ರಮದಿಂದ ಶಿಕ್ಷಣದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಬಹುದು. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.ನೀವು ಹೊಸ ಕಾರು ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶವನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರಲ್ಲಿ ಸಮನ್ವಯದ ಕೊರತೆ ಇರಬಹುದು.ನಿಮಗೆ ಪ್ರೇಮ ವಿವಾಹದ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯು ಕುಟುಂಬಕ್ಕೆ ಕೊಡುಗೆ ನೀಡುತ್ತಾರೆ. ಅವರಿಗೆ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗಬಹುದು.ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಏರಿಳಿತಗಳು ಕಂಡುಬರುತ್ತವೆ. ಹಣವನ್ನು ಗಳಿಸುವಲ್ಲಿ ಮತ್ತು ಉಳಿಸುವಲ್ಲಿ ನೀವು ಯಶಸ್ಸನ್ನು ಪಡೆಯಬಹುದು.ನಿಮ್ಮ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಅಜೀರ್ಣ, ಆಮ್ಲೀಯತೆ, ಗ್ಯಾಸ್ಟ್ರಿಕ್ ಸಮಸ್ಯೆಗಳು, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರಬಹುದು.
ಪರಿಹಾರ: ನೀವು ವಿಷ್ಣುವನ್ನು ಆರಾಧಿಸಬೇಕು.
ಮಕರ
ಮಕರ ರಾಶಿಯವರು ಸಣ್ಣ ಪ್ರವಾಸಗಳಿಗೆ ಹೋಗಬೇಕಾಗಬಹುದು. ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ನಿಕಟತೆ ಹೆಚ್ಚಾಗುತ್ತದೆ. ಆರ್ಥಿಕವಾಗಿ, ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ.ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರೊಂದಿಗೆ ಸಣ್ಣ ಪಾರ್ಟಿ ಇತ್ಯಾದಿಗಳನ್ನು ಆಯೋಜಿಸುತ್ತೀರಿ. ಅವರೊಂದಿಗಿನ ನಿಮ್ಮ ಸಂಬಂಧವು ಸೌಹಾರ್ದಯುತವಾಗಿರುತ್ತದೆ. ಇದು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುವ ಸಾಧ್ಯತೆಯಿದೆ.ನೀವು ಶಿಕ್ಷಣ ಕ್ಷೇತ್ರದಲ್ಲಿ ಪ್ರಯತ್ನಗಳನ್ನು ಹೆಚ್ಚಿಸುವಿರಿ ಮತ್ತು ಇದು ಪರೀಕ್ಷೆಯಲ್ಲಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶ ಸಿಗಲಿದೆ.ಕುಟುಂಬದಲ್ಲಿ ಜಗಳಗಳು ಮತ್ತು ಘರ್ಷಣೆಗಳು ಉಂಟಾಗಬಹುದು. ನಿಮ್ಮ ತಾಯಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.ನಿಮ್ಮ ಸಂಗಾತಿಯ ಪ್ರೀತಿಯಲ್ಲಿ ನೀವು ಮುಳುಗುತ್ತೀರಿ. ನಿಮ್ಮ ಪ್ರೇಮಿಯ ಜ್ಞಾನದಿಂದ ನೀವು ಬಹಳಷ್ಟು ಕಲಿಯುವಿರಿ ಮತ್ತು ಅರ್ಥಮಾಡಿಕೊಳ್ಳುವಿರಿ.ನಿಮ್ಮ ಖರ್ಚುಗಳು ನಿಯಂತ್ರಣದಲ್ಲಿರುತ್ತವೆ ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಹೆಚ್ಚು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.ನೀವು ರೋಗಗಳ ವಿರುದ್ಧ ಹೋರಾಡುವ ಧೈರ್ಯ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತೀರಿ. ದೀರ್ಘಕಾಲದ ಕಾಯಿಲೆಗಳಿಂದಲೂ ನೀವು ಪರಿಹಾರವನ್ನು ಪಡೆಯಬಹುದು.
ಪರಿಹಾರ: ಶುಕ್ರವಾರದಂದು ಮಹಾಲಕ್ಷ್ಮಿ ದೇವಿಯನ್ನು ಆರಾಧಿಸಿ.
ಕುಂಭ
ನೀವು ಆರೋಗ್ಯ ಸಮಸ್ಯೆಗಳನ್ನು ಮತ್ತು ಕೆಲಸದಲ್ಲಿ ವಿಳಂಬವನ್ನು ಎದುರಿಸಬಹುದು. ಈ ಸಮಯದಲ್ಲಿ, ಕುಂಭ ರಾಶಿಯವರು ಹಣವನ್ನು ಗಳಿಸಬಹುದು ಮತ್ತು ಹಣವನ್ನು ಖರ್ಚು ಮಾಡಬಹುದು. ನೀವು ನಿಮ್ಮ ಕೆಲಸವನ್ನು ಕಳೆದುಕೊಳ್ಳಬಹುದು ಅಥವಾ ನೀವು ಹೊಸ ಕೆಲಸವನ್ನು ಪಡೆಯಬಹುದು. ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ. ನಿಮ್ಮ ಸಹೋದ್ಯೋಗಿಗಳು ಸಹ ನಿಮಗೆ ಸಹಾಯ ಮಾಡುತ್ತಾರೆ.ಈ ತಿಂಗಳು ವಿದ್ಯಾರ್ಥಿಗಳು ಖಿನ್ನತೆಯಿಂದ ದೂರವಿರಬೇಕು ಮತ್ತು ಯಾವುದೇ ರೀತಿಯ ಕೋಪದಿಂದ ದೂರವಿರಬೇಕು ಇಲ್ಲದಿದ್ದರೆ ಶಿಕ್ಷಣದಲ್ಲಿ ಏರಿಳಿತಗಳು ಉಂಟಾಗಬಹುದು.ಕುಟುಂಬ ಸದಸ್ಯರು ಪರಸ್ಪರ ಸಾಮರಸ್ಯದಿಂದ ಬದುಕುತ್ತಾರೆ. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ.ನಿಮ್ಮ ಪ್ರೇಮ ಸಂಬಂಧದಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷ ಉಂಟಾಗಬಹುದು. ನಿಮ್ಮ ಸಂಗಾತಿಯಿಂದ ಅಂತರ ಕಡಿಮೆ ಮಾಡಲು ನೀವು ಪ್ರಯತ್ನಿಸುತ್ತೀರಿ.ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ನೀವು ಅದನ್ನು ನಿಮ್ಮ ಮಕ್ಕಳು ಅಥವಾ ಅವರ ಶಿಕ್ಷಣಕ್ಕಾಗಿ ಖರ್ಚು ಮಾಡಬಹುದು. ಕಣ್ಣಿನ ಸಮಸ್ಯೆಗಳು, ಚರ್ಮದ ತೊಂದರೆಗಳು ಮತ್ತು ಕೆಲವು ರೀತಿಯ ಸೋಂಕಿನಿಂದ ನೀವು ತೊಂದರೆಗೊಳಗಾಗಬಹುದು.
ಪರಿಹಾರ: ರಾಹುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು, ದುರ್ಗಾ ದೇವಿಯನ್ನು ಪೂಜಿಸಬೇಕು.
ಮೀನ
ಮೀನ ರಾಶಿಯವರು ಈ ತಿಂಗಳು ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳ ಬೆಂಬಲವನ್ನು ಪಡೆಯಬಹುದು ಮತ್ತು ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸಲಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಉತ್ತಮವಾಗಿರುತ್ತದೆ.ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸೋಮಾರಿತನದಿಂದ ದೂರವಿರಬೇಕು ಮತ್ತು ಶ್ರಮವಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ತಿಂಗಳು ತುಂಬಾ ಫಲಪ್ರದವಾಗಿದೆ.ನಿಮ್ಮ ತಾಯಿ ಆರೋಗ್ಯ ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು ಮತ್ತು ಕುಟುಂಬದ ವಾತಾವರಣವು ಅಸ್ಥಿರವಾಗಿರಬಹುದು.ಫೆಬ್ರವರಿ 2025 ರಲ್ಲಿ ನಿಮ್ಮ ಪ್ರೇಮ ಸಂಬಂಧವು ಬಲವಾಗಿರುತ್ತದೆ. ವಿವಾಹಿತರಿಗೆ ಈ ತಿಂಗಳು ದುರ್ಬಲವಾಗಿರುತ್ತದೆ. ನಿಮ್ಮ ನಡುವೆ ಜಗಳಗಳ ಸಂದರ್ಭಗಳನ್ನು ಎದುರಿಸಬಹುದು.ವಿದೇಶಿ ಮೂಲಗಳ ಮೂಲಕ ನಿಧಿಯ ಲಾಭದ ಹೆಚ್ಚಿನ ಅವಕಾಶಗಳಿವೆ. ಇವರು ತಮ್ಮ ವ್ಯವಹಾರದಿಂದ ಹಣವನ್ನು ನಿರೀಕ್ಷಿಸಬಹುದು.ನೀವು ತಿಂಗಳ ಪೂರ್ತಿ ಸೋಮಾರಿತನವನ್ನು ತಪ್ಪಿಸಬೇಕು. ಫೆಬ್ರವರಿ 2025 ಮುನ್ನೋಟ ಪ್ರಕಾರ ಈ ಅವಧಿಯಲ್ಲಿ, ವೈರಸ್ ಹರಡುವ ಸಮಸ್ಯೆಯು ನಿಮ್ಮನ್ನು ತೊಂದರೆಗೊಳಿಸಬಹುದು.
ಪರಿಹಾರ: ಮಂಗಳವಾರ ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡಬೇಕು.
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನೀವು ನಮ್ಮ ಬ್ಲಾಗ್ ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ಕುಟುಂಬದ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಹೆಚ್ಚು ಆಸಕ್ತಿದಾಯಕ ಬ್ಲಾಗ್‌ಗಳಿಗಾಗಿ, ನಮ್ಮೊಂದಿಗೆ ಸಂಪರ್ಕದಲ್ಲಿರಿ!
ಹೆಚ್ಚಾಗಿ ಕೇಳುವ ಪ್ರಶ್ನೆಗಳು
1. ಫೆಬ್ರವರಿ ತಿಂಗಳಲ್ಲಿ ಬರುವ ಸಂಕ್ರಾಂತಿ ಯಾವುದು?
ಫೆಬ್ರವರಿ ತಿಂಗಳಲ್ಲಿ ಬರುವ ಸಂಕ್ರಾಂತಿಯನ್ನು ಕುಂಭ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
2. ಫೆಬ್ರವರಿಯಲ್ಲಿ ಯಾವ ಹಬ್ಬ ಬರುತ್ತದೆ?
ಫೆಬ್ರವರಿ 2025 ರಲ್ಲಿ, ಮಹಾಶಿವರಾತ್ರಿ ಹಬ್ಬವನ್ನು ಪೂರ್ಣ ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.
3. ಫೆಬ್ರವರಿಯಲ್ಲಿ ಮದುವೆಗೆ ಯಾವುದೇ ಶುಭ ದಿನಾಂಕಗಳಿವೆಯೇ?
ಹೌದು, ಫೆಬ್ರವರಿ 2025 ರಲ್ಲಿ ಮದುವೆ ಸಮಾರಂಭಕ್ಕೆ ಅನೇಕ ಮಂಗಳಕರ ದಿನಾಂಕಗಳಿವೆ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025