ಬುಧ ಸಂಚಾರ ಮಿಥುನ ರಾಶಿಯಲ್ಲಿ - Retrograde Mercury Transit in Gemini in Kannada
ಬುಧ ಗ್ರಹವನ್ನು ಬುದ್ಧಿ, ತಾರ್ಕಿಕ ಶಕ್ತಿ, ಗಣಿತ, ವ್ಯಾಪಾರ, ಅಂಕಿಅಂಶಗಳು ಮತ್ತು ಪ್ರಯಾಣದ ಅಂಶವೆಂದು ಪರಿಗಣಿಸಲಾಗಿದೆ. ಇದು 18 ಜೂನ್ , 2020 ರಂದು ಬೆಳಿಗ್ಗೆ 09 ಗಂಟೆ 52 ನಿಮಿಷಕ್ಕೆ ವಕ್ರವಾಗುತ್ತಿದೆ. ಬುಧ ಗ್ರಹದ ಈ ಬದಲಾವಣೆ 12 ಜೂಲೈ 2020, 13 ಗಂಟೆ 29 ನಿಮಿಷದ ವರೆಗೆ ಇರುತ್ತದೆ. ಅಲ್ಲಿಂದ ಅದು ಮತ್ತೆ ಅದೇ ಮಾರ್ಗ ವೇಗದಲ್ಲಿ ಮುಂದುವರಿಯುತ್ತದೆ. ಈ ಅವಧಿಯಲ್ಲಿ ವಕ್ರ ಬುಧನ ಸಂಚಾರವು ಖಂಡಿತವಾಗಿಯೂ ವ್ಯಕ್ತಿಯ ವ್ಯಕ್ತಿತ್ವ ಮತ್ತು ಚಿತ್ರದ ಮೇಲೆ ಪರಿಣಾಮ ಬೀರುತ್ತದೆ.
ಈ ಸಾಗಣೆಯ ಪರಿಣಾಮದಿಂದಾಗಿ ವ್ಯಕ್ತಿಯ ನಡವಳಿಕೆಯಲ್ಲಿ ಬಂದಿರುವ ಬದಲಾವಣೆಯನ್ನು ಬಹಳ ಸುಲಭವಾಗಿ ಕಾಣಬಹುದು. ವಕ್ರ ಬುಧನ ಸಾಕಷ್ಟು ನಕಾರಾತ್ಮಕ ಪರಿಣಾಮವು ನಮ್ಮ ಜೀವನದ ಮೇಲೆ ಬೀರುತ್ತದೆ. ಏಕೆಂದರೆ ಒಂದೆಡೆ ಬುಧ ಗ್ರಹವು ಸಾಮಾನ್ಯವಾಗಿ ನಮಗೆ ಉತ್ತಮ ಫಲಿತಾಂಶಗಳನ್ನು ನೀಡಿದರೆ, ಅಲ್ಲೇ ಮತ್ತೊಂದೆಡೆ, ವಕ್ರ ದಿಕ್ಕಿನಲ್ಲಿ ಅದು ನಮಗೆ ವಿರುದ್ಧ ಪರಿಣಾಮಗಳನ್ನು ನೀಡುತ್ತದೆ.ಈ ಸಮಯದಲ್ಲಿ ವ್ಯಕ್ತಿಯ ಸಂವಹನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಕೆಲವು ಪರಿಸ್ಥಿತಿಗಳಲ್ಲಿ ನಾವು ಅನೇಕ ಬಾರಿ ನಮಗೆ ಸರಿ ಎಂದು ಸಾಬೀತುಪಡಿಸದಿರುವಂತಹ ನಿರ್ಧಾರಗಳನ್ನು ಸಹ ತೆಗೆದುಕೊಳ್ಳುತ್ತೇವೆ ಮತ್ತು ಭವಿಷ್ಯದಲ್ಲಿ ನಾವು ಅದರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.
ನಡೆಯಿರಿ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ವಕ್ರ ಬುಧವು ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.
- ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ವಕ್ರ ಬುಧ ಗ್ರಹವು ಅವರ ಮೂರನೇ ಮನೆಗೆ ಸಾಗಾಣಿಸುತ್ತದೆ. ಪರಿಣಾಮವಾಗಿ, ನಿಮ್ಮ ಸಹೋದರ ಸಹೋದರಿಯರಿಂದಿಗಿನ ಸಂಬಂಧವನ್ನು ಸಮನ್ವಯಗೊಳಿಸಲು ಈ ಸಮಯವು ಬಹಳ ಉತ್ತಮವೆಂದು ಸಾಬೀತುಪಡಿಸುತ್ತದೆ ಮತ್ತು ನೀವು ಅವರೊಂದಿಗೆ ಕೆಲವು ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಬಹುದು ಎಂದು ನರವಾಗಿ ಈ ಕಡೆಗೆ ಸೂಚಿಸುತ್ತಿದೆ. ಮೂರನೇ ಮನೆ ಸುತ್ತಾಡುವ ಮತ್ತು ಸಣ್ಣ ಪ್ರವಾಸಗಳನ್ನು ತೋರಿಸುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಪ್ರಯಾಣಕ್ಕೆ ಹೋಗುವ ಮೊದಲು ಅಗತ್ಯವಿರುವ ಎಲ್ಲಾ ಕಾಗದಪತ್ರಗಳು ಮತ್ತು ಮೀಸಲಾತಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಂತರ ನೀವು ತೊಂದರೆಯನ್ನು ಎದುರಿಸಬೇಕಾಗಬಹುದು. ಬಹಳ ಮುಖ್ಯವಿಲ್ಲದಿದ್ದರೆ 12 ಜೂಲೈ ವರೆಗೆ ಯಾವುದೇ ಪ್ರಯಾಣವನ್ನು ತಪ್ಪಿಸಿ.
ಇದಲ್ಲದೆ, ಮೂರನೇ ಮನೆ ಎಲೆಕ್ಟ್ರಾನಿಕ್ ಸಾಧನಗಳನ್ನು ಸಹ ಪ್ರತಿನಿಧಿಸುತ್ತದೆ, ಇದು ಈ ಅವಧಿಯಲ್ಲಿ ನೀವು ಅವುಗಳ ನಿರ್ವಹಣೆ ಮತ್ತು ಫಿಟ್ನೆಸ್ಗೆ ಕೆಲವು ಅನಗತ್ಯ ಖರ್ಚುಗಳನ್ನು ಮಾಡಬೇಕಾಗಬಹುದು ಎಂದು ಸಹ ಸೂಚಿಸುತ್ತದೆ. ಈ ಸಮಯದಲ್ಲಿ ಯಾವುದೇ ವಿಷಯವನ್ನು ಹೇಳುವ ಮೊದಲು ಪದಗಳ ಆಯ್ಕೆ ಬಹಳ ಬುದ್ಧಿವಂತಿಕೆಯಿಂದ ಮಾಡಿ, ಏಕೆಂದರೆ ಈ ಸಮಯದಲ್ಲಿ ನಿಮ್ಮ ಪದಗಳನ್ನು ಬೇರೆ ರೀತಿಯಲ್ಲಿ ಕೂಡ ತೆಗೆದುಕೊಳ್ಳಬಹುದು, ಈ ಕಾರಣದಿಂದಾಗಿ ಯಾರೊಂದಿಗಾದರೂ ನಿಮ್ಮ ವಿವಾದ ಅಥವಾ ಜಗಳವಾಗುವ ಸಾಧ್ಯತೆ ಇದೆ. ಇದರೊಂದಿಗೆ ಯಾವುದೇ ರೀತಿಯ ಭರವಸೆಯನ್ನು ನೀಡುವ ಮೊದಲು ಪರಿಸ್ಥಿತಿಯ ವಾಸ್ತವತೆಯನ್ನು ಸಹಪರಿಶೀಲಿಸಿ. ಇಲ್ಲದಿದ್ದರೆ, ನೀವು ಅನಗತ್ಯ ಒತ್ತಡ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪರಿಹಾರ - ಈ ಸಮಯದಲ್ಲಿ ನಿಮ್ಮ ಆಫೀಸ್ ಅಥವಾ ಮನೆಯಲ್ಲಿ ಕರ್ಪುರವನ್ನು ಬೆಳಗಿಸಿ.
- ವೃಷಭ ರಾಶಿ
ವಕ್ರ ಬುಧನ ಈ ಸಂಚಾರವು ವೃಷಭ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಯಲ್ಲಿರುತ್ತದೆ, ಇದು ಸಂಗ್ರಹಿಸಲಾದ ಹಣ, ಸಂಭಾಷಣೆ ಮತ್ತು ಕುಟುಂಬವನ್ನು ಪ್ರತಿನಿಧಿಸುತ್ತದೆ. ಈ ರಾಶಿಚಕ್ರದ ಸ್ಥಳೀಯರಿಗೆ ತಮ್ಮ ಆದಾಯಕ್ಕೆ ಹೊಸ ಸಾಧನೆಗಳು ಮತ್ತ್ತು ಹೊಸ ಆಲೋಚನೆಗಳನ್ನು ಹುಡುಕಲು ಇದು ಉತ್ತಮ ಸಮಯವೆಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ಕೆಲವು ಮೂಲ ಸ್ಥಳೀಯರಿಗೆ ನೀಡಲಾಗಿದ್ದ ಸಾಲ ಅಥವಾ ಬಾಕಿ ಆದಾಯವನ್ನು ಮರಳಿ ಪಡೆಯಬಹುದು. ಆದಾಗ್ಯೂ ಈ ಸಮಯದಲ್ಲಿ ಹಣ ಸಂಗ್ರಹಿಸಲು ನಿಮಗೆ ಸಲಹೆ ನೀಡಲಾಗಿದೆ. ಆದರೆ ಈ ಸಂಚಾರದ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ. ಉದ್ಯೋಗಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು ಆದರೆ ಈ ಸಮಯದಲ್ಲಿ ಅವರು ಸ್ವಲ್ಪ ಕಾಯುವ ಅಗತ್ಯವಿದೆ.
ಈ ಸಮಯವನ್ನು ಹಾದುಹೋಗಲು ಅನುಮತಿಸಿ ನಂತರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ. ಸಂಬಂಧದ ದೃಷ್ಟಿಯಿಂದ ನಿಮ್ಮ ಸಂಗಾತಿಯ ಅವಶ್ಯಕತೆ ಮತ್ತು ಆಸೆಗಳ ಬಗ್ಗೆ ತಿಳಿಯಲು ಇದು ಉತ್ತಮ ಸಮಯ. ಅದನ್ನು ಮಾಡುವುದರಿಂದ ನಿಮ್ಮ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ವೃಷಭ ರಾಶಿಚಕ್ರದ ಸ್ಥಳೀಯರ ಶಿಕ್ಷಣದ ಐದನೇ ಮನೆಯನ್ನು ನಿಯಂತ್ರಿಸುತ್ತದೆ, ಆದ್ದರಿಂದ ಈ ಸಮಯದಲ್ಲಿ ವಿದ್ಯಾರ್ಥಿಗಳು, ವಿಶೇಷವಾಗಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದವರು, ವಿಷಯಗಳ ಆಯ್ಕೆಯ ಬಗ್ಗೆ ಸ್ವಲ್ಪ ಗೊಂದಲಕ್ಕೊಳಗಾಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಸಾಮರ್ಥ್ಯದ ಬಗ್ಗೆ ಗಮನ ಹರಿಸುವ ಮತ್ತು ನಿಮ್ಮ ಶಿಕ್ಷಕ ಅಥವಾ ಗುರುವಿನೊಂದಿಗೆ ಸಲಹೆಯನ್ನು ಪಡೆದ ನಂತರ ಮಾತ್ರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಪ್ರತಿದಿನ ನಿಯಮಿತವಾಗಿ ತಾಯಿ ಸರಸ್ವತಿಯನ್ನುಪೂಜಿಸಿ ,
- ಮಿಥುನ ರಾಶಿಚಕ್ರ
ಬುಧವು ನಿಮ್ಮ ಲಗ್ನದ ಮನೆಯಲ್ಲಿ ವಕ್ರವಾಗುತ್ತಿದೆ. ಇದು ವ್ಯಕ್ತಿತ್ವ, ಆತ್ಮ, ಚಿತ್ರವನ್ನು ಪ್ರತಿನಿಧಿಸುತ್ತದೆ. ಅಂದರೆ ಇದು ನಿಮ್ಮ ಮೊದಲನೇ ಮನೆಯಲ್ಲಿ ಸಾಗಣಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ ವಕ್ರ ಬುಧ ಸಾಗಣೆಯ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಅವಸರ ತೋರಿಸಿದರೆ ಅಥವಾ ನಿಮಗೆ ಏನೂ ಸರಿಹೊಂದುವುದಿಲ್ಲ ಎಂಬ ಆಲೋಚನೆಗಳಿಂದ ಸುತ್ತುವರಿದಿದ್ದರೆ, ವಿಷಯಗಳ ಬಗ್ಗೆ ಗೊಂದಲಕ್ಕೊಳಗಾಗಬಹುದು, ಸ್ವಭಾವತಃ ಕಿರಿಕಿರಿಯನ್ನು ಹೊಂದಬಹುದು, ವಿಷಯಗಳನ್ನುಮರೆತುಬಿಡುವ ಅಥವಾ ಯಾವುದೇ ರೀತಿಯ ಅಪಘಾತಕ್ಕೆ ಬಲಿಯಾಗುವ ಸಂಪೂರ್ಣ ಸಾಧ್ಯತೆ ಇದೆ. ಮೊದಲನೇ ಮನೆ ಕ್ರಿಯೆಗೆ ಸಂಬಂಧಿಸಿರುವುದರಿಂದ, ಈ ಸಮಯದಲ್ಲಿ ನೀವು ಸ್ವಲ್ಪ ತಡವಾಗಿಯಾದರೂ, ಚಿಂತನಶೀಲವಾಗಿ ಕೆಲಸ ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಯಾವುದೇ ಹೊಸ ಕೆಲಸ ಅಥವಾ ಯೋಜನೆಯನ್ನು ಆರಂಭಿಸಲು ಈ ಸಮಯ ಉತ್ತಮವಾಗಿಲ್ಲ, ಆದ್ದರಿಂದ ಈ ಸಮಯದಲ್ಲಿ ನಿಮ್ಮ ದೀರ್ಘಕಾಲದ ಮತ್ತು ಅಪೂರ್ಣ ಕೆಲಸಗಳನ್ನು ಹೊಸ ರೀತಿಯಲ್ಲಿ ಮತ್ತು ಹೊಸ ವಿಚಾರಗಳ ಮೂಲಕ ಪೂರ್ಣಗೊಳಿಸಲು ಪ್ರಯತ್ನಿಸಿ. ಇದರಿಂದ ಕಳೆದುಹೋದ ನಿಮ್ಮ ಆತ್ಮವಿಶ್ವಾಸವನ್ನು ಜಾರುತಗೊಳಿಸಲು ಸಹ ಸಹಾಯ ಪಡೆಯುತ್ತೀರಿ. ಈ ರಾಶಿಚಕ್ರದ ಕೆಲವು ಸ್ಥಳೀಯರು ಹಿಂದಿನ ಸಮಯದಲ್ಲಿ ಅವರ ಮೂಲಕ ನಿರ್ಲಕ್ಷಿಸಲಾದ ಉದ್ಯೋಗ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ಅವಕಾಶಗಳ ಬಗ್ಗೆ ಮರುಪರಿಶೀಲಿಸಬೇಕಾಗಬಹುದು. ಮಿಥುನ ರಾಶಿ, ಸಂವಹನ ಮತ್ತು ಮಾಹಿತಿಯ ಅಂಶವಾಗಿರುವುದರಿಂದ, ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದ ಸಮಯದಲ್ಲಿ, ನೀವು ಯಾರಿಗಾದರೂ ಇಮೇಲ್ , ಕಾಗದದ ದಾಖಲೆ ಅಥವಾ ಸಂದೇಶವನ್ನು ಕೆಳುಹಿಸುತ್ತಿದ್ದರೆ, ಅದನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮಾತ್ರ ಅದನ್ನು ಕಳುಹಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮೂಲಕ ಯಾವುದೇ ದೊಡ್ಡ ತಪ್ಪು ಸಂಭವಿಸುವ ಸಾಧ್ಯತೆ ಇದೆ. ಮಿಥುನ ರಾಶಿ ಕುಟುಂಬದ ಅಂಶವಾಗಿದೆ, ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿಯ ವರೆಗೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ವ್ಯಕ್ತಪಡಿಸಲು ಸಾಧ್ಯವಾಗದಿದ್ದಂತಹ ಭಾವನೆಗಳನ್ನು ವ್ಯಕ್ತಪಡಿಸವು ಇದು ಉತ್ತಮ ಸಮಯ ಎಂದು ಸಾಬೀತುಪಡಿಸಬಹುದು. ಇದು ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪರಿಹಾರ - “ ಸಂಕಟ ನಾಶನ” ಗಣೇಶ ಸ್ತ್ರೋತದೊಂದಿಗೆ ಭಗವಂತ ಗಣೇಶ ದೇವರನ್ನು ಪೂಜಿಸಿ.
- ಕರ್ಕ ರಾಶಿಚಕ್ರ
ವಕ್ರ ಬುಧ ಸಂಚಾರವು ಕರ್ಕ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಾಗುತ್ತಿದೆ. ಇದು ವಿದೇಶ ಪ್ರಯಾಣ ಮತ್ತು ವೆಚ್ಚವನ್ನು ಪ್ರತಿನಿಧಿಸುತ್ತದೆ. ವಿದೇಶದಲ್ಲಿ ವಾಸಿಸಲು ಬಯಸುತ್ತಿರುವವರಿಗೆ ಅಥವಾ ವಿದೇಶದ ಮೂಲಕ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿರುವ ಜನರಿಗೆ ಈ ಸಮಯವು ಸಕಾರಾತ್ಮಕ ಸುದ್ಧಿಯನ್ನು ತರಬಹುದು ಎಂಬುವ ವಿಷಯದ ಬಗ್ಗೆ ಇದು ಸೂಚಿಸುತ್ತದೆ. ಯಾವುದೇ ಕಾರಣದಿಂದಾಗಿ ಅವರ ಕೈಯಿಂದ ಕಳೆದುಕೊಂಡಿದ್ದ ಕೆಲವು ಸುವರ್ಣ ಅವಕಾಶಗಳನ್ನು ಅವರು ಮತ್ತೆ ಪಡೆಯಬಹುದು. ಇದಲ್ಲದೆ, ಈ ಸಮಯದಲ್ಲಿ ಅಜಾಗರೂಕತೆಯಿಂದ ನಿಮ್ಮ ಮೂಲಕ ಕಳೆದುಹೋದ ಯಾವದೇ ವಸ್ತುವನ್ನು ಸಹ ನೀವು ಮತ್ತೆ ಪಡೆಯಬಹುದು. ಈ ಕಾರಣದಿಂದ ಜೀವನದಲ್ಲಿ ಸಂತೋಷದ ವಾತಾವರಣ ಉಳಿದಿರುತ್ತದೆ. ಆದಾಗ್ಯೂ ಈ ಸಂಚಾರದ ಸಮಯದಲ್ಲಿ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳೀಯರ ವೆಚ್ಚಗಳು ಅವರ ಆದಾಯಕ್ಕಿಂತ ಹೆಚ್ಚಾಗಲಿವೆ ಈ ಕಾರಣದಿಂದಾಗಿ ನೀವು ಸ್ವಲ್ಪ ಆಂತಕ ಮತ್ತು ತೊಂದರೆಕ್ಕೊಳಗಾಗಬಹುದು. ಆದ್ದರಿಂದ ನಿಮ್ಮ ವೆಚ್ಚಗಳ ಬಗ್ಗೆ ಮೊದಲಿನಿಂದಲೇ ಯೋಜನೆಯನ್ನು ಮಾಡಿಕೊಳ್ಳಿ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು, ವಿಶೇಷವಾಗಿ ಕಣ್ಣು ಮತ್ತು ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಮತ್ತೆ ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈಯಕ್ತಿಕವಾಗಿ ಈ ಸಮಯದಲ್ಲಿ ಯಾವುದೇ ಹಳೆಯ ವಿಷಯವು ನಿಮ್ಮ ಜೀವನದಲ್ಲಿ ಮರಳಿ ಬರಬಹುದು. ಆದಾಗ್ಯೂ ಆ ಸಮಸ್ಯೆಯ ಮೂಲವನ್ನು ಕಂಡುಹಿಡಿಯಲು ಮತ್ತು ಅದನ್ನು ಪರಿಹರಿಸಲು ಈ ಸಮಯವೂ ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ. ಪರಿಹಾರ - ಬುಧವಾರದಂದು ಗಣೇಶ ದೇವರಿದ ದುರ್ವಾವನ್ನು ಅರ್ಪಿಸಿ.
- ಸಿಂಹ ರಾಶಿಚಕ್ರ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ವಕ್ರ ಬುಧನ ಈ ಸಂಚಾರವು ಅವರ ಹನ್ನೊಂದನೇ ಮನೆಯಲ್ಲಿರುತ್ತದೆ, ಇದು ಲಾಭ, ಯಶಸ್ಸು ಮಾತು ಪ್ರಯೋಜನವನ್ನು ಪ್ರತಿನಿಧಿಸುತ್ತದೆ, ಈ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರ ಹಳೆಯ ಗ್ರೂಪ್ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಮತ್ತೊಮ್ಮೆ ಅವರೊಂದಿಗೆ ಸೇರಲು ಕೆಲವು ಅವಕಾಶಗಳನ್ನು ಪಡೆಯಬಹುದು. ಇದರಿಂದ ನೀವು ಹಳೆಯ ನೆನಪುಗಳನ್ನು ಮತ್ತೆ ತಾಜಾಗೊಳಿಸಲು ಮತ್ತು ಸಂತೋಷವಾಗಲು ಸಾಧ್ಯವಾಗುತ್ತದೆ. ಇದಲ್ಲದೆ, ಕೆಲವು ಸ್ಥಳೀಯರು ಅವರ ಮೂಲಕ ಮಾಡಲಾದ ಮೊದಲಿನ ಯಾವುದೇ ಹೂಡಿಕೆಯಿಂದ ಈ ಸಮಯದಲ್ಲಿ ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ.
ಇದರೊಂದಿಗೆ ಈ ಸಮಯವೂ ಕಳೆದ ಸಮಯದಲ್ಲಿ ನೀವು ಬಿಟ್ಟುಬಿಟ್ಟಿದ್ದ, ಆದಾಯಕ್ಕೆ ಸಂಬಂಧಿಸಿದ ಅವಕಾಶಗಳನ್ನು ಮತ್ತೊಂದು ಬಾರಿ ನಿಮ್ಮ ಮುಂದೆ ತರಬಹುದು. ವಿಶೇಷವಾಗಿ ಉದ್ಯೋಗಕ್ಕೆ ಸಂಬಂಧಿಸಿದ ಜನರು ಬಡ್ತಿ ಅಥವಾ ಸಂಬಳದ ಹೆಚ್ಚಳವನ್ನು ಬಯಸುತ್ತಿದ್ದವರು ಈ ಸಮಯದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಬುಧ ಗ್ರಹವು ರಾಹುವಿನೊಂದಿಗೆ ಸೇರಿದೆ, ಇದು ಇತ್ತೀಚಿನ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತದೆ, ವ್ಯಾಪಾರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಈ ಸಂಚಾರದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ, ಮಾರ್ಕೆಟ್ ಪ್ರವೃತ್ತಿಗೆ ಅನುಗುಣವಾಗಿ ಅವರು ತಮ್ಮ ಉತ್ಪನ್ನಗಳನ್ನು ಹೊಸ ಪ್ಯಾಕೇಜಿಂಗ್ ನೊಂದಿಗೆ ಮತ್ತು ಪ್ರವೃತ್ತಿಗಳಿಗೆ ಆಗುಣವಾಗಿ ಪುನಃ ಕ್ಷೇತ್ರದಲ್ಲಿ ಇಳಿಸಬೇಕು. ಪರಿಹಾರ - ಯಾವುದೇ ಪ್ರಮುಖ ಕೆಲಸಕ್ಕಾಗಿ ಮನೆಯಿಂದ ಹೊರಡುವ ಮೊದಲು ಬೆರಳಿಣಿಕೆಯಷ್ಟು ಏಲಕ್ಕಿ ಬೀಜಗಳನ್ನು ನಿಮ್ಮ ಜೇಬಿನಲ್ಲಿ ಇರಿಸಿ.
- ಕನ್ಯಾ ರಾಶಿಚಕ್ರ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ವಕ್ರ ಬುಧನ ಈ ಸಂಚಾರವು ಅವರ ಹತ್ತನೇ ಮನೆಯಲ್ಲಿರುತ್ತದೆ, ಇದು ವೃತ್ತಿ, ಉದ್ಯೋಗ, ತಂದೆ ಮತ್ತು ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ತಂದೆಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೃತ್ತಿಪರವಾಗಿ, ಈ ಅವಧಿಯಲ್ಲಿ ನೀವು ಮೊದಲು ಪಡೆಯದೇ ಇದ್ದಂತಹ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಉದ್ಯಮಿಗಳಿಗೆ, ಹಿಂದೆ ಸಂಪರ್ಕವನ್ನು ಕಳೆದುಕೊಂಡಿರುವ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಈ ಸಮಯ ಅತ್ಯಂತ ಉತ್ತಮ ಸಮಯವೆಂದು ಸಾಬೀತುಪಡಿಸಬಹುದು.
ಇದಲ್ಲದೆ, ನಿಮ್ಮಲ್ಲಿ ಕೆಲವು ಕನ್ಯಾ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಪ್ರಶಂಸೆ ಮತ್ತು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ ಅದಕ್ಕಾಗಿ ನೀವು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿ ಜೀವನದೊಂದಿಗೆ ಮುಂದುವರಿಯಲು ಹಿಂದೆ ನಿರ್ಲಕ್ಷಿಸಲ್ಪಟ್ಟ ಪ್ರದೇಶಗಳನ್ನು ಪುನರ್ವಿಮರ್ಶಿಸಲು ನಿಮಗೆ ಅಗತ್ಯವಾಗಬಹುದು. ಆದಾಗ್ಯೂ ಬುಧನ ಸಂಚಾರದ ಕಾರಣದಿಂದಾಗಿ, ನಿಮ್ಮಲ್ಲಿ ಕೆಲವು ಸ್ಥಳೀಯರು ಈ ಸಮಯದಲ್ಲಿ ಅವರ ವೃತ್ತಿ ಜೀವನದಲ್ಲಿ ಅನಗತ್ಯ ವಿಳಂಬ ಅಥವಾ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ಚೆನ್ನಾಗಿ ಪರಿಶೀಲಿಸಿ, ಏಕೆಂದರೆ ನಂತರ ಅವುಗಳನ್ನು ಬದಲಾಯಿಸಬೇಕಾಗಬಹುದು ಅಥವಾ ಮೌಲ್ಯಮಾಪನ ಮಾಡಬೇಕಾಗಬಹುದು.
ಅಂತಹ ಸಂದರ್ಭದಲ್ಲಿ ಸಾಧ್ಯವಾದರೆ, 12 ಜೂಲೈ ವರೆಗೆ ಯಾವುದೇ ಅಗತ್ಯವಾದ ಕಾಗದಪತ್ರಗಳ ಮೇಲೆ ಕೊನೆಯ ಮುದ್ರೆ ಹಾಕುವುದನ್ನು ತಪ್ಪಿಸಿ. ಇದಲ್ಲದೆ ನಿಮ್ಮ ಬಾಸ್ ಅಥವಾ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಸ್ಪಷ್ಟರಾಗಿರಿ ಮತ್ತು ಸಾಧ್ಯವಾದಷ್ಟು ನೀವೇ ಅವರೊಂದಿಗೆ ಮಾತನಾಡಿ, ಏಕೆಂದರೆ ನಿಮ್ಮ ಸಂದೇಶವನ್ನು ಯಾವುದೇ ಇತರ ಮಾಧ್ಯಮದ ಮೂಲಕ ಸಂವಹನ ಮಾಡುವಲ್ಲಿ ನಿಮ್ಮ ಪದಗಳ ಅರ್ಥವನ್ನು ಬದಲಾಯಿಸಬಹುದು ಮತ್ತು ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪರಿಹಾರ - ಈ ಸಮಯದಲ್ಲಿ ಭಗವಂತ ವಿಷ್ಣುವಿನ ಪೂಜೆ ಮಾಡಿ ಅಥವಾ “ ವಿಷ್ಣು ಸಹಸ್ತ್ರನಾಮವನ್ನು “ಜಪಿಸಿ.
- ತುಲಾ ರಾಶಿಚಕ್ರ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಅವರ ಒಂಬತ್ತನೇ ಮನೆಯಲ್ಲಿ ಸಂಭವಿಸುತ್ತಿದೆ. ಇದನ್ನು ಭರವಸೆ, ಗುರು ಮತ್ತು ಅದೃಷ್ಟದ ಮನೆಯೆಂದು ಪರಿಗಣಿಸಲಾಗಿದೆ. ಇದಲ್ಲದೆ, ಈ ಮನೆಯು ಕಲೆಯನ್ನು ಸಹ ಪ್ರತಿನಿಧಿಸುತ್ತದೆ, ಅಂತಹ ಸಂದರ್ಭದಲ್ಲಿ ನಿಮ್ಮ ಕಲೆಯನ್ನು ಪರಿಷ್ಕರಿಸಲು ಇದು ಉತ್ತಮ ಸಮಯವೆಂದು ಸಾಬೀತುಪಡಿಸುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ನೀವು ಇದರ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ. ಇದಲ್ಲದೆ ವಿದ್ಯಾರ್ಥಿಗಳಿಗೆ ಈ ಸಮಯವೂ ಸಾಕಷ್ಟು ಉತ್ತಮವಾಗಿರಲಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಯಾವುದೇ ವಿಷಯದ ಮತ್ತೆ ಪರೀಕ್ಷೆ ನೀಡಲು ಬಯಸುತ್ತಿದ್ದರೆ ಅಥವಾ ನೀವು ತೊಂದರೆ ಎದುರಿಸುತ್ತಿರುವ ಯಾವುದೇ ಕಠಿಣ ವಿಷಯವನ್ನು ಅಧ್ಯಯನ ಮಾಡಬೇಕೆಂದರೆ, ಈ ಸಮಯದಲ್ಲಿ ನೀವು ಇದರಲ್ಲಿ ಪ್ರಯತ್ನಿಸಬಹುದು ಮತ್ತು ನೀವು ಯಶಸ್ಸು ಪಡೆಯುತ್ತೀರಿ ಎಂದು ನಿರೀಕ್ಷಿಸಲಾಗಿದೆ.
ಇದಲ್ಲದೆ, ನಿಮ್ಮ ಯಾವುದೇ ಹಳೆಯ ಶಿಕ್ಷಕ, ಗುರು ಅಥವಾ ಅಧಿಕಾರಿಯನ್ನು ಭೇಟಿಸಲು ಈ ಸಮಯವೂ ಶುಭವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಸಹಾಯವಾಗುವಂತಹ ಸಲಹೆಯನ್ನು ಈ ಜನರ ಮೂಲಕ ನೀವು ಪಡೆಯುತ್ತೀರಿ ಎಂದು ನಿರೀಕ್ಷಿಸಲಾಗಿದೆ. ದೀರ್ಘಕಾಲದ ಪ್ರಯಾಣದ ಬಗ್ಗೆ ಯೋಜಿಸುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ, ಇಲ್ಲದಿದ್ದರೆ ವಿಳಂಬ ಅಥವಾ ಯಾವುದೇ ಅಪಘಾತವನ್ನು ನೀವು ಎದುರಿಸಬೇಕಾಗಬಹುದು.
ವೃತ್ತಿಪರವಾಗಿ, ದೀರ್ಘಾವಧಿಯಲ್ಲಿ ಏನನ್ನಾದರೂ ಊಹಿಸಲು ಇದುಉತ್ತಮ ಸಮಯವಲ್ಲ, ಹಾಗೆ ಮಾಡುವುದರಿಂದ ನೀವು ಅಸಮಾಧಾನ, ಪ್ರಕ್ಷುಬ್ಧ ಅಥವಾ ಬೇಸರಕ್ಕೆ ಬಲಿಯಾಗಬಹುದು. ಈ ಕಾರಣದಿಂದ ತಪ್ಪಾಗುವ ಸಂಪೂರ್ಣ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಮಹತ್ವಾಕಾಂಕ್ಷೆಗಳನ್ನು ಸಣ್ಣ ಭಾಗಗಳಾಗಿ ವಿಂಗಡಿಸಿ ಮತ್ತು ಅವುಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರೆ ನಿಮಗೆ ಉತ್ತಮ. ಇದರಿಂದ ತಪ್ಪುಗಳು ಕಡಿಮೆಯಾಗುತ್ತವೆ ಮತ್ತು ನಿಮ್ಮ ಉತ್ಪಾದಕತೆ ಮತ್ತು ಆತ್ಮವಿಶ್ವಾಸವು ಬೆಳೆಯುತ್ತದೆ.
ಪರಿಹಾರ - ಬುಧನ ಹೋರಾ ಸಮಯದಲ್ಲಿ ಬುಧ ಮಂತ್ರವನ್ನು ಜಪಿಸಿ.
- ವೃಶ್ಚಿಕ ರಾಶಿಚಕ್ರ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ಅವರ ಎಂಟನೇ ಮನೆಯಲ್ಲಿರುತ್ತದೆ. ಇದು ಬದಲಾವಣೆ ಮತ್ತು ಆರೋಗ್ಯದ ಮನೆಯನ್ನು ಪ್ರತಿನಿಧಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಚರ್ಮ, ಅಲರ್ಜಿಗಳು ಮತ್ತು ಹಾರ್ಮೋನುಗಳಂತಹ ಕೆಲವು ಅನಗತ್ಯ ಅರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ನೀವು ಭಯಪಡುವ ಅವಶ್ಯಕತೆಯಿಲ್ಲ, ಏಕೆಂದರೆ ಈ ಸಮಯದಲ್ಲಿ ನಿಮ್ಮಆರೋಗ್ಯದ ಬಗ್ಗೆ ಸರಿಯಾದ ಗಮನ ಹರಿಸಲು ಮತ್ತು ಅಂತಹ ಯಾವುದೇ ರೋಗವನ್ನು ಮುಕ್ತರಾಗಲು ಸಾಧ್ಯವಾಗುತ್ತದೆ.
ನಿಮ್ಮಲ್ಲಿ ಕೆಲವರು ಇದ್ದಕ್ಕಿದ್ದಂತೆ ಪೂರ್ವಜರ ಆಸ್ತಿಯನ್ನು ಪಡೆಯಬಹುದು. ಹಳೆಯ ಸಾಲಗಳನ್ನು ನಿವಾರಿಸಲು ಮತ್ತು ಹಿಂದಿನ ಬಾಕಿಯನ್ನು ಮರುಪಾವತಿಸಲು ಕೂಡ ಈ ಸಮಯವೂ ಸಹಾಯಕರವೆಂದು ಸಾಬೀತುಪಡಿಸಲಿದೆ. ಇದಲ್ಲದೆ ಈ ಸಮಯದಲ್ಲಿ ಯಾವುದೇ ಗುಪ್ತ ಕೆಲಸ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಂಟನೇ ಮನೆ ನಿಮ್ಮ ಸಂಗಾತಿಯ ಮೂಲಕ ಸಂಗ್ರಹಿಸಲಾದ ಹಣಕಾಸಿಗೆ ಸಂಬಂಧಿಸಿದೆ, ಅಂತಹ ಪರಿಸ್ಥಿತಿಯಲ್ಲಿ ಸಂಚಾರದ ಈ ಸಮಯದಲ್ಲಿ ಅವರು ಕೆಲವು ಅನಗತ್ಯ ವೆಚ್ಚಗಳನ್ನು ಎದುರಿಸಬೇಕಾಗಬಹುದು. ಇದು ಅವರ ಉಳಿತಾಯದ ಮೇಲೆ ಪೈನಾಮ ಬೀರುತ್ತದೆ.
ಪರಿಹಾರ - ಹಸುವಿಗೆ ಹಸಿರು ಮೇವು ತಿನ್ನಿಸಿ.
- ಧನು ರಾಶಿಚಕ್ರ
ಧನು ರಾಶಿಚಕ್ರದ ಸ್ಥಳೀಯರಿಗೆ ವಕ್ರ ಬುಧನ ಸಂಚಾರವು ಅವರ ಏಳನೇ ಮನೆಯಲ್ಲಾಗಲಿದೆ. ಪೈನಾಮವಾಗಿ, ಪಾಲುದಾರರೊಂದಿಗಿನ ನಿಮ್ಮ ಹಳೆಯ ವಿವಾದ ಅಥವಾ ವಿರೋಧಾಭಾಸವನ್ನು ನಿವಾರಿಸಲು ಈ ಸಮಯ ಉತ್ತಮವೆಂದು ಸಾಬೀತುಪಡಿಸಬಹುದು. ಆದಾಗ್ಯೂ ಈ ಸಮಯದಲ್ಲಿ ನೀವು ಮದುವೆಯ ತಯಾರಿಯಲ್ಲಿ ತೊಡಗಿದ್ದರೆ ಅಥವಾ ಮದುವೆಯ ದಿನಾಂಕವನ್ನು ನಿರ್ಧರಿಸುವ ಬಗ್ಗೆ ಯೋಚಿಸುತ್ತಿದ್ದರೆ, 12 ಜೂಲೈ ವರೆಗೆ ಇದರ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಒಂದು ಬಾರಿ ಬುಧ ಗ್ರಹವು ಮಾರ್ಗಿಯಾದ ನಂತರ ಈ ವಿಷಯದ ಬಗ್ಗೆ ಮುಂದುವರಿಯಿರಿ.
ನೀವು ಉದ್ಯಮಿಯಾಗಿದ್ದರೆ, ಈ ಹಿಂದೆ ಯಾವುದೇ ಕಾರಣಕ್ಕಾಗಿ ನಿಮ್ಮ ಮೂಲಕ ನಿರ್ಲಕ್ಷಿಸಲಾದ ಪಾಲುದಾರಿಕೆಗಳ ಒಪ್ಪಂದಗಳು ಮತ್ತು ಅವುಗಳಿಗೆ ಸಂಬಂಧಿಸಿದ ನಿಯಮಗಳನ್ನು ಪುನರ್ವಿಮರ್ಶಿಸಲು ಇದು ಉತ್ತಮ ಸಮಯ.ಬುಧವು ಧನು ರಾಶಿಚಕ್ರದ ಸ್ಥಳೀಯರ ವೃತ್ತಿಯ ಮನೆಯನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಈ ಸಮಯದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಸಮಯದಲ್ಲಿ ಯಾವುದೇ ಒಳ್ಳೆಯ ಸುದ್ಧಿಯನ್ನು ಪಡೆಯಬಹುದು. ಆದಾಗ್ಯೂ ಈ ಉದ್ಯೋಗವು ನಿಮ್ಮಅಪೇಕ್ಷಿತ ಕ್ಷೇತ್ರ ಅಥವಾ ಸ್ಥಾನ ಇರದಿರಬಹುದು. ಆದರೆ ಅದನ್ನು ತೆಗೆದುಕೊಳ್ಳಲು ಖಂಡಿತವಾಗಿಯೂ ಹಿಂದೆ ಹಿಂಜರಿಯಬೇಡಿ ಏಕೆಂದರೆ ಭವಿಷ್ಯದಲ್ಲಿ ಅದು ನಿಮಗೆ ಸಹಾಯಕರವೆಂದು ಸಾಬೀತುಪಡಿಸಲಿದೆ.
ಪರಿಹಾರ - ಬುಧವಾರದಂದು ವಿಷ್ಣು ಸಹಸ್ತ್ರನಾಮವನ್ನು ಜಪಿಸಿ.
- ಮಕರ ರಾಶಿಚಕ್ರ
ಮಕರ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಅವರ ಆರನೇ ಮನೆಯಲ್ಲಾಗುತ್ತಿದೆ. ಈ ಸಮಯದಲ್ಲಿ ನೀವು ಯಾವುದೇ ರೀತಿಯ ವಹಿವಾಟಿನ ವಿಷಯದಲ್ಲಿ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ವ್ಯಪಾಸ್ಥರು ಅವರ ಕಠಿಣ ಪರಿಶ್ರಮದ ಫಲಿತಾಂಶವನ್ನು ಖಂಡಿತವಾಗಿಯೂ ಪಡೆಯುತ್ತಾರೆ. ಈ ರಾಶಿಚಕ್ರದ ವೃತ್ತಿಪರರು ಈ ಸಂಚಾರದ ಸಮಯದಲ್ಲಿ ಹೆಚ್ಚು ಎಚ್ಚರದಿಂದಿರುವ ಅಗತ್ಯವಿರುತ್ತದೆ. ಈ ಸಮಯದಲ್ಲಿ ನೀವು ಯಾವುದೇ ಮಾಹಿತಿ ಅಥವಾ ಕಾಗದಪತ್ರಗಳನ್ನು ಯಾರಿಗಾದರೂ ಕಳುಹಿಸುತ್ತಿದ್ದರೆ, ಅವುಗಳನ್ನು ಚೆನ್ನಾಗಿ ಪರಿಶೀಲಿಸಿ. ಇಲ್ಲದಿದ್ದರೆ, ನಿಮ್ಮ ಮೂಲಕ ಯಾವುದೇ ದೊಡ್ಡ ತಪ್ಪಾಗುವ ಪ್ರಬಲ ಸಾಧ್ಯತೆ ಇದೆ.
ಈ ಸಮಯದಲ್ಲಿ ನೀವು ಹೆಚ್ಚು ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ತಪ್ಪು ಗ್ರಹಿಕೆಗಳ ಕಾರಣದಿಂದಾಗಿ ನಿಮ್ಮ ಮತ್ತು ಸಹೋದ್ಯೋಗಿಗಳ ಮಧ್ಯೆ ಜಗಳವಾಗುವ ಸಾಧ್ಯತೆ ಇದೆ. ಇದರ ಕೆಲವು ಪ್ರತಿಕೂಲ ಪರಿಣಾಮಗಳು ಬೀರಬಹುದು.
ಬುಧನ ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು,ಆದ್ದರಿಂದ ಅದರ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಗಮನ ಹರಿಸಿ ಮತ್ತು ನಿಮ್ಮ ವ್ಯಾಯಾಮದ ದಿನಚರಿಯನ್ನು ಸಿರಿಯಾಗಿ ಅನುಸರಿಸಿ. ಇದರೊಂದಿಗೆ ಕೆಟ್ಟ ಹವ್ಯಾಸಗಳನ್ನು ತ್ಯಜಿಸಿ. ಇದಲ್ಲದೆ ಸಾಧ್ಯವಾದರೆ ಒಂದು ಬಾರಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಸಂಚಾರದ ಸಮಯದಲ್ಲಿ, ವಾಹನ ಚಲಾಯಿಸುವಾಗ ನೀವು ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಏಕೆಂದರೆ ನೀವು ಯಾವುದೇ ಅಪಘಾತ ಅಥವಾ ಗಾಯಕ್ಕೆ ಬಲಿಯಾಗಬಹುದು.
ಪರಿಹಾರ - ಉತ್ತಮ ಗುಣಮಟ್ಟದ 5-6 ಕ್ಯಾರೆಟ್ ಪಚ್ಛೆ ರತ್ನವನ್ನು ಚಿನ್ನ ಅಥವಾ ಬೆಳ್ಳಿಯಲ್ಲಿ ತಯಾರಿಸಿ ಬುಧವಾರದಂದು ಧರಿಸಿ.
- ಕುಂಭ ರಾಶಿಚಕ್ರ
ಕುಂಭ ರಾಶಿಚಕ್ರದ ಸ್ಥಳೀಯರಿಗೆ 18 ಜೂನ್ ರಂದು ಸಂಭವಿಸುತ್ತಿರುವ ವಕ್ರ ಬುಧ ಸಂಚಾರವು ಸ್ವಲ್ಪ ಸವಾಲುಗಳಿಂದ ತುಂಬಿರಲಿದೆ ಏಕೆಂದರೆ ಈ ಸಮಯದಲ್ಲಿ ತಮ್ಮಲ್ಲಿ ಆತ್ಮವಿಶ್ವಾಸ, ಸೃಜನಶೀಲತೆಯ ಕೊರತೆಯನ್ನು ಅನುಭವಿಸಬಹುದು. ಈ ಸಮಯದಲ್ಲಿ ಹೊಸ ಆಲೋಚನೆಗಳಲ್ಲಿ ಕೊರತೆಯಂತಹ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ಸರಿಯಾಗಿ ನಡೆಯುತ್ತಿರುವ ನಿಮ್ಮ ಯೋಜನೆಗಳು ಅಥವಾ ನಿಮ್ಮ ಮೂಲಕ ಆರಂಭಿಸಿರುವ ವಿಷಯಗಳಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಕುಂಭ ರಾಶಿಚಕ್ರದ ಐದನೇ ಮನೆಯಲ್ಲಿ ವಕ್ರ ಬುಧನ ಈ ಸಂಚಾರವು ಅರಮಕ್ಕೆ ಸರಿಯಾದ ಸಮಯವಾಗಿದೆ, ಈ ಸಮಯದಲ್ಲಿ ನಿಮ್ಮ ಕಾರ್ಯನಿರತತೆಯ ಜೀವನದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಮತ್ತು ನೀವು ಮಾಡಲು ಇಷ್ಟಪಡುವ ನಿಮ್ಮ ಹಳೆಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಇದು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ರಾಶಿಚಕ್ರದ ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯ ಸರಿಯಿಲ್ಲ, ಆದಾಗ್ಯೂ ನಿಮ್ಮ ಯಾವುದೇ ಹಳೆಯ ಪ್ರೀತಿ ನಿಮ್ಮ ಜೀವನದಲ್ಲಿ ಮತ್ತೆ ಬರಬಹುದು. ಇದಲ್ಲದೆ ವಿವಾಹಿತ ಸ್ಥಳೀಯರ ಜೀವನದಲ್ಲಿ ಅವರ ಮಕ್ಕಳ ಕಡೆಯಿಂದ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಇದರ ಬಗ್ಗೆ ನೀವು ವಿಶೇಷ ಗಮನ ಹರಿಸುವ ಅಗತ್ಯವಿದೆ. ಈ ಸಮಯದಲ್ಲಿ ನಿಮ್ಮ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಲು, ಅವರೊಂದಿಗೆ ಮಾತನಾಡಲು ಅತ್ಯಂತ ಶುಭವಾಗಿರುತ್ತದೆ. ಇದರಿಂದ ನಿಮ್ಮಿಬ್ಬರ ನಡುವಿನ ವಿರೋಧಾಭಾಸವನ್ನು ಕೊನೆಗೊಳಿಸಲು ಸಹ ಸಾಧ್ಯವಾಗುತ್ತದೆ.
ಇದಲ್ಲದೆ ಕುಟುಂಬವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದ್ದರೆ, 12 ಜೂಲೈ ವರೆಗೆ ನಿಲ್ಲಲು ನಿಮಗೆ ಸಲಹೆ ನೀಡಲಾಗಿದೆ. ಐದನೇ ಮನೆ ಮಂತ್ರಗಳನ್ನು ಜಪಿಸುವುದರೊಂದಿಗೆ ಸಂಬಂಧಿಸಿದೆ, ಅಂತಹ ಸಂದರ್ಭದಲ್ಲಿ ಈ ದಿಕ್ಕಿನ ಕಡೆಗೆ ನೀವು ಮುಂದುವರಿಯಬಹುದು.
ಪರಿಹಾರ - ಅಗತ್ಯವಿರುವವರಿಗೆ ಮತ್ತು ಸ್ವತಃ ಪುಸ್ತಕಗಳನ್ನು ಖರೀದಿಸಲು ಸಾಧ್ಯವಿಲ್ಲದಂತಹ ಜನರಿಗೆ ಪುಸ್ತಕಗಳ ದಾನ ಮಾಡಿ.
- ಮೀನಾ ರಾಶಿಚಕ್ರ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ವಕ್ರ ಬುಧನ ಈ ಸಂಚಾರವು ಅವರ ನಾಲ್ಕನೇ ಮನೆಯಲ್ಲಾಗುತ್ತಿದೆ. ಇದು ತಾಯಿ, ಭೂಮಿ - ಸಂಪತ್ತು, ಅಂತರಾತ್ಮ ಮತ್ತು ಸಂತೋಷಗಳನ್ನುಪ್ರತಿನಿಧಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಖರೀದಿ- ಮಾರಾಟ, ಸಂಪತ್ತಿನ ಸ್ಥಳಾಂತರ ಅಥವಾ ಈ ರೀತಿಯ ಭೂಮಿ ಸಂಪತ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಸಾಧ್ಯವಾದರೆ ಇಂತಹ ನಿರ್ಧಾರಗಳನ್ನು ಹನ್ನೆರಡು ಜೂಲೈ ನಂತರ ತಗೆದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನಂತರ ನೀವು ವಿಷಾದಿಸಬೇಕಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲೇ, ಸೋರಿಕೆಗಳನ್ನು ಸರಿಪಡಿಸುವುದು ಅಥವಾ ಮನೆಯ ಪೀಠೋಪಕರಣಗಳನ್ನು ಸರಿಪಡಿಸಲು ನೀವು ಹಿಂದೆ ನಿರ್ಲಕ್ಷಿಸಿರುವಂತಹ ಕೆಲಸಗಳಲ್ಲಿ ಕಳೆಯುತ್ತೀರಿ. ಇದಲ್ಲದೆ, ಸಾಧ್ಯವಾದಷ್ಟು ನಿಮ್ಮ ತಾಯಿಯೊಂದಿಗೆ ಸಮಯವನ್ನು ಕಳೆಯಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಸಂಬಂಧವನ್ನು ಬಲಪಡಿಸಲು ಸಾಧ್ಯವಾಗುತ್ತದೆ.
ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಸಂಗಾತಿ ತಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನ ಅಥವಾ ಸಂಬಳದ ಹೆಚ್ಚಳವನ್ನು ಪಡೆಯಬಹುದು. ಇದಲ್ಲದೆ , ಈ ಸಮಯವು ಆಂತರಿಕ ಆತ್ಮದೊಂದಿಗೆ ಸಂಬಂಧವನ್ನು ಸ್ಥಾಪಿಸಲು ಮತ್ತು ನಕಾರಾತ್ಮಕ ಚಿಂತನೆಯ ಮಾದರಿಗಳನ್ನು ಗುರುತಿಸಲು ಮತ್ತು ಅದನ್ನು ನಿಮ್ಮ ಜೀವನದಿಂದ ತೆಗೆದುಹಾಕಲು ಸಾಕಷ್ಟು ಉತ್ತಮವೆಂದು ಸಾಬೀತುಪಡಿಸಬಹುದು. ನಿಮ್ಮ ಜೀವನಕ್ಕೆ ಹೊಸ ದೃಷ್ಟಿಕೋನ ಮತ್ತು ಅರ್ಥವನ್ನು ನೀಡಲು ಇದು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಜೀವನದಲ್ಲಿ ತೃಪ್ತಿ ಮತ್ತು ಸಂತೋಷವನ್ನು ತರುತ್ತದೆ
ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯೋದಯದ ಸಮಯದಲ್ಲಿ “ಓಂ ನಮೋ ಭಾಗವತೇ ವಾಸುದೇವಾಯ “ ಮಾತ್ರವನ್ನು ಜಪಿಸಿ
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025