ಶುಕ್ರ ಸಂಚಾರ ಮಿಥುನ ರಾಶಿಯಲ್ಲಿ - Venus Transit in Gemini in Kannada
ಕಲೆ, ಸೌಂದರ್ಯದ ಅಂಶ ಶುಕ್ರನ ಸಾಗಣೆ 1 ಆಗಸ್ಟ್ 2020 ರಂದು 4 ಗಂಟೆ 56 ನಿಮಿಷಕ್ಕೆ ಮಿಥುನ ರಾಶಿಯಲ್ಲಿ ಸಂಭವಿಸಲಿದೆ. ಶುಕ್ರ ಗ್ರಹವು 1 ಸೆಪ್ಟೆಂಬರ್ ಬೆಳಿಗ್ಗೆ 1 ಗಂಟೆ 50 ನಿಮಿಷದ ವರೆಗೆ ಇದೆ ರಾಶಿಯಲ್ಲಿ ನೆಲೆಗೊಂಡಿರುತ್ತದೆ. ಶುಕ್ರನ ಸ್ಥಾನದ ಪರಿಣಾಮದಿಂದಾಗಿ ಎಲ್ಲಾ ರಾಶಿಚಕ್ರದ ಸ್ಥಳೀಯರ ಮೇಲೆ ವಿವಿಧ ಪರಿಣಾಮವನ್ನು ಬೀರುತ್ತದೆ. ನಡೆಯಿರಿ ಶುಕ್ರನ ಸಂಚಾರದಿಂದ ನಿಮ್ಮ ರಾಶಿಚಕ್ರದ ಮೇಲೆ ಏನು ಪರಿಮಾಣ ಬೀರಲಿದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
- ಮೇಷ ರಾಶಿ
ಶುಕ್ರ ದೇವರ ಸಂಚಾರವು ಮೇಷ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಯಲ್ಲಿರುತ್ತದೆ. ಈ ಮನೆ ಸಾಹಸ ಪರಾಕ್ರಮ ಮತ್ತು ಕಿರಿಯ ಸಹೋದರ ಸಹೋದರರೊಂದಿಗೆ ಸಂಬಂಧಿಸಿದೆ. ನಟನೆ, ಸಂಗೀತ ಇತ್ಯಾದಿ ಸೃಜನಶೀಲ ಕೆಲಸಗಳಲ್ಲಿ ನೀವು ಆಸಕ್ತಿ ಹೊಂದಿದ್ದರೆ, ಈ ಸಮಯದಲ್ಲಿ ನಿಮ್ಮ ಕಲೆಯನ್ನು ಪ್ರದರ್ಶಿಸಲು ನಿಮಗೆ ಸಂಪೂರ್ಣ ಅವಕಾಶ ಸಿಗುತ್ತದೆ. ಇದರೊಂದಿಗೆ ನೀವು ನಿಮ್ಮ ಸೃಜನಶೀಲ ಕೆಲಸವನ್ನು ವ್ಯವಹಾರದಲ್ಲಿ ಬದಲಾಯಿಸಬಹುದು. ಮೂರನೇ ಮನೆಯಲ್ಲಿ ಶುಕ್ರ ನೆಲಗೊಳ್ಳುವ ಕಾರಣದಿಂದಾಗಿ ನೆಚ್ಚಿನ ಸ್ಥಳದಲ್ಲಿ ಸುತ್ತಾಡಲು, ಈ ಸಮಯದಲ್ಲಿ ನೀವು ಅವಕಾಶಗಳನ್ನು ಪಡೆಯುತ್ತೀರಿ.
ಶುಕ್ರ ದೇವರನ್ನು ಪ್ರೀತಿಯ ಅಂಶವೆಂದು ನಂಬಲಾಗಿದೆ ಆದ್ದರಿಂದ ಈ ಸಮಯದಲ್ಲಿ ನಿಮ್ಮ ಪ್ರೀತಿ ಜೀವನವು ಸುಧಾರಿಸುವ ಸಂಪೂರ್ಣ ಸಾಧ್ಯತೆ ಇದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತದೆ. ಆದಾಗ್ಯೂ ಈ ಸಮಯದಲ್ಲಿ ನೀವು ದೇಹಕ್ಕಿಂತ ಹೆಚ್ಚು ಆತ್ಮಿಕವಾಗಿ ನಿಮ್ಮ ಸಂಗಾತಿಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸಬೇಕು. ಈ ರಾಶಿಚಕ್ರದ ಸ್ಥಳೀಯರು ಸಾಮಾಜಿಕ ಮಟ್ಟದಲ್ಲೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಹೊಸದಾಗಿ ನಿಮ್ಮ ಮದುವೆಯಾಗಿದ್ದರೆ, ನಿಮ್ಮ ಜೀವನದಲ್ಲಿ ಹೊಸ ಅತಿಥಿ ಬಾಗಿಲು ತಟ್ಟುವ ಸಂಪೂರ್ಣ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಈ ಸಂಚಾರವು ಉತ್ತಮವಾಗಿರುತ್ತದೆ ಆದರೆ ಹೆಚ್ಚು ಶೀತದ ವಸ್ತುಗಳನ್ನು ಸೇವಿಸಬೇಡಿ. ಇಲ್ಲದಿದ್ದರೆ ನಿಮಗೆ ಶೀತವಾಗಬಹುದು.
ಪರಿಹಾರ - ಯಾವುದೇ ಕಾರ್ಯವನ್ನು ಪ್ರಾರಂಭಿಸುವ ಮೊದಲು ತಂದೆ ಅಥವಾ ತಂದೆಯಂತಹ ಜನರಿಂದ ಸಲಹೆಯನ್ನು ಪಡೆದುಕೊಳ್ಳಿ
ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜ್ಯೋತಿಷಿಯಿಂದ ಪ್ರಶ್ನೆ ಕೇಳಿ
- ವೃಷಭ ರಾಶಿ
ಶುಕ್ರ ದೇವ ವೃಷಭ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಗೆ ಸಂಚರಿಸುತ್ತಾರೆ. ಇದು ನಿಮ್ಮ ಕುಟುಂಬ ಮತ್ತು ಹಣಕಾಸಿನ ಮನೆಯಾಗಿದೆ. ಈ ಮನೆಯಲ್ಲಿ ಶುಕ್ರನ ಸ್ಥಾನದ ಪರಿಣಾಮವಾಗಿ ನಿಮ್ಮ ಕುಟುಂಬ ಜೀವನ ಸುಧಾರಿಸುತ್ತದೆ. ನೀವು ಕೆಲಸದಿಂದ ಸಮಯ ತೆಗೆದುಕೊಂಡು ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಬಯಸುತ್ತೀರಿ. ಎಲ್ಲಾದರೂ ಸುತ್ತಾಡಲು ಕೂಡ ಯೋಜಿಸಬಹುದು. ಈ ಸಂಚಾರವು ನಿಮಗೆ ಮನೋಬಲವನ್ನು ಒದಗಿಸುತ್ತದೆ ಮತ್ತು ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ನೀವು ನಿಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡುತ್ತೀರಿ.
ನಿಮ್ಮ ಧ್ವನಿಯಲ್ಲಿ ಸಿಹಿ ಉಳಿದಿರುತ್ತದೆ. ಇದರಿಂದ ನಿಮ್ಮ ಸುತ್ತಲಿನ ಜನರು ಆಕರ್ಷಿತರಾಗುತ್ತಾರೆ. ಒಬ್ಬ ಆಪ್ತರಿಗೆ ನೀಡಲಾದ ಸಲಹೆ ಸರಿಯೆಂದು ಸಾಬೀತುಪಡಿಸಬಹುದು. ಎರಡನೇ ಮನೆಯನ್ನು ಹಣಕಾಸಿನ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆಯಲ್ಲಿ ಸೌಂದರ್ಯದ ಅಂಶ ಶುಕ್ರ ಗ್ರಹ ನೆಲೆಗೊಂಡಿರುವ ಪರಿಣಾಮದಿಂದಾಗಿ ಈ ಸಮಯದಲ್ಲಿ ನೀವು ಸುಂದರವಾಗಿ ಕಾಣಿಸಲು ನಿಮ್ಮ ಮೇಲೆ ಹಣವನ್ನು ಖರ್ಚಿಸುತ್ತಿರಿ. ಆದಾಗ್ಯೂ ಈ ಸಮಯದಲ್ಲಿ ಸಾಧ್ಯವಾದಷ್ಟು ಉಳಿಸಲು ಪ್ರಯತ್ನಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಸಾಲ ನೀಡುವುದನ್ನು ಮತ್ತು ತೆಗೆದುಕೊಳ್ಳುವುದನ್ನು ತಪ್ಪಿಸಿ. ನೀವು ಸೃಜನಶೀಲತೆಗೆ ಸಂಬಂಧಿಸಿದ ಯಾವುದೇ ವ್ಯಾಪಾರದಲ್ಲಿ ತೊಡಗಿದ್ದರೆ ಅಥವಾ ನಟನೆ, ಸಂಗೀತ ಇತ್ಯಾದಿಯ ಶಿಕ್ಷಣ ಪಡೆಯುತ್ತಿದ್ದರೆ, ಈ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ವೆಚ್ಜಗಳು ಹೆಚ್ಚಾಗಬಹುದು. ಆದರೂ ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಒಟ್ಟಾರೆಯಾಗಿ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರನ ಸಂಚಾರವು ಅನುಕೂಲಕರವಾಗಿರಲಿದೆ.
ಪರಿಹಾರ - ಶುಕ್ರವಾರದ ದಿನದಂದು ಬಿಳಿ ವಸ್ತುಗಳ ದಾನ ಮಾಡಿ.
- ಮಿಥುನ ರಾಶಿ
ಶುಕ್ರನ ಸಿಂಹ ರಾಶಿ ಸಂಚಾರವು ಮಿಥುನ ರಾಶಿಯ ಲಗ್ನದ ಮನೆ ಅಂದರೆ ನಿಮ್ಮ ಮೊದಲನೆಯಲ್ಲಾಗುತ್ತಿದೆ. ಈ ಮನೆ ನಿಮ್ಮ ದೇಹ, ವ್ಯಕ್ತಿತ್ವ, ಬುದ್ಧಿ ಮತ್ತು ಅದೃಷ್ಟದ ಮಾಹಿತಿಯನ್ನು ನೀಡುತ್ತದೆ. ಈ ಮನೆಯಲ್ಲಿ ಶುಕ್ರ ಗ್ರಹವು ನೆಲೆಗೊಳ್ಳುವ ಕಾರಣದಿಂದಾಗಿ ನೀವು ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಮಾಡಲು ಪ್ರಯತ್ನಿಸುತ್ತೀರಿ. ನಿಮ್ಮನ್ನು ಉತ್ತಮವಾಗಿ ತೋರಿಸಲು ನೀವು ಯೋಗ , ವ್ಯಾಯಾಮ ಇತ್ಯಾದಿಯನ್ನು ಆಶ್ರಯಿಸಬಹುದು ಮತ್ತು ಇದರೊಂದಿಗೆ ಸೌಂದರ್ಯ ವಸ್ತುಗಳನ್ನು ಬಳಸುವಲ್ಲಿ ಸಹ ನೀವು ಹಿಂಜರಿಯುವುದಿಲ್ಲ. ಶಿಕ್ಷಣದ ಕ್ಷೇತ್ರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯಬಹುದು.
ಶಿಕ್ಷಣದ ಕ್ಷೇತ್ರದಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಪ್ರೀತಿಯಲ್ಲಿರುವ ಈ ರಾಶಿಚಕ್ರದ ಸ್ಥಳೀಯರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮಲ್ಲಿ ಪ್ರಯಾಣದ ಹೆಚ್ಚಳವನ್ನು ಕಾಣಲಾಗುತ್ತದೆ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಆಕರ್ಷಣೆಯನ್ನು ಅನುಭವಿಸುತ್ತಾರೆ. ಇನ್ನು ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಸಬಹುದು. ನೀವು ನಿಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸುವಲ್ಲಿ ಸಹ ಯಶಸ್ವಿಯಾಗುತ್ತೀರಿ ಮತ್ತು ನೆಚ್ಚಿದ ವಸ್ತುಗಳ ಮೇಲೆ ಹಣವನ್ನು ಖಾರ್ಹಿಸುತ್ತೀರಿ. ಹೇಗಾದರೂ, ನೀವು ಪ್ರದರ್ಶಿಸಲು ಯಾವುದೇ ರೀತಿಯ ವಸ್ತುವನ್ನು ಖರೀದಿಸಬಾರದು ಇಲ್ಲದಿದ್ದರೆ ಮುಂಬರುವ ಸಮಯದಲ್ಲಿ ಇದನ್ನು ನೀವು ವಿಷಾದಿಸುತ್ತೀರಿ. ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ಹೊಸದನ್ನು ಕಲಿಯಲು ಉತ್ಸುಕಾಗಿರುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಸಮಯದ ಬೆಲೆಯನ್ನು ಅರ್ಥಮಾಡಿಕೊಂಡು ಮುಂದುವರಿಯಬೇಕು. ಆರೋಗ್ಯದ ನೋಡಿದರೆ ಈ ಸಮಯವೂ ಸಾಮಾನ್ಯವಾಗಿರುತ್ತದೆ. ನಿಮಗೆ ಅಲೆರ್ಜಿ ಆಗುವ ಸಾಧ್ಯತೆ ಇದೆ. ಆದ್ದರಿಂದ ನಿಮಗೆ ಅಲರ್ಜಿ ಆಗುವಂತಹ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಯಾವುದೇ ದೊಡ್ಡ ರೋಗವಾಗುವ ಸಾಧ್ಯತೆ ಇಲ್ಲ.
ಪರಿಹಾರ - ಪೋಷಕರ ಆಶೀರ್ವಾದವನ್ನು ಪಡೆದ ನಂತರ ಮನೆಯಿಂದ ಹೊರಹೋಗಿ.
- ಕರ್ಕ ರಾಶಿ
ಶುಕ್ರ ಸಂಚಾರ ಕರ್ಕ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿರುತ್ತದೆ. ಹನ್ನೆರಡನೇ ಮನೆಯನ್ನು ನಷ್ಟದ ಮನೆಯೆಂದು ಸಹ ಕರೆಯಲಾಗುತ್ತದೆ ಮತ್ತು ಇದರಿಂದ ಹಾನಿ, ಪ್ರತ್ಯೇಕತೆ, ದೂರಸ್ಥ ಪ್ರಯಾಣ , ವಿದೇಶ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ವಿದೇಶದೊಂದಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅಥವಾ ವಿದೇಶಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ. ಆದರೆ ಉಳಿದ ಜನರು ಈ ಸಂಚಾರದ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಬಹಳ ಬುದ್ಧಿವಂತಿಕೆಯಿಂದ ಮುಂದುವರಿಯುವ ಅಗತ್ಯವಿದೆ.
ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ಹದಗೆಬಹುದು ಈ ಕಾರಣದಿಂದಾಗಿ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗಬಹುದು. ಅಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟು ನೀವು ನಿಮ್ಮ ತಾಯಿಯೊಂದಿಗೆ ಸಮಯವನ್ನು ಕಳೆಯಬೇಕು. ಈ ಸಮಯದಲ್ಲಿ ನೀವು ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಿದ್ದರೆ, ಆರಂಭದಲ್ಲಿ ಅದು ನಿಮಗೆ ಸರಿ ಅನಿಸಬಹುದು ಆದರೆ ಮುಂದೆ ನೀವು ಆ ಬದಲಾವಣೆಯ ಕಾರಣದಿಂದಾಗಿ ತೊಂದರೆಕ್ಕೊಳಗಾಗಬಹುದು. ಅಲ್ಲದೆ ಕರ್ಕ ರಾಶಿಚಕ್ರದ ಸ್ಥಳೀಯರು ಸುಲಭವಾಗಿ ಯಾವುದೇ ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಈ ರಾಶಿಚಕ್ರದ ವಿವಾಹಿತರ ಬಗ್ಗೆ ಮಾತನಾಡಿದರೆ, ಈ ಸಮಯವೂ ಅನುಕೂಲಕರವಾಗಿಲ್ಲ. ಜೀವನ ಸಂಗಾತಿಯೊಂದಿಗೆ ವಿವಾದದ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುವ ಮೊದಲು ಖಂಡಿತವಾಗಿಯೂ ಒಂದು ಬಾರಿ ಚೆನ್ನಾಗಿ ಯೋಚಿಸಬೇಕು.ಮತ್ತೊಂದೆಡೆ ನೀವು ಉದ್ಯೋಗದಲ್ಲಿದ್ದರೆ, ವಿಶೇಷವಾಗಿ ಸರ್ಕಾರಿ ಉದ್ಯೋಗದಲ್ಲಿರುವ ಜನರ ಬಯಸದಿರುವಂತಹ ಸ್ಥಳದಲ್ಲಿ ಅವರ ವರ್ಗಾವಣೆಯಾಗಬಹುದು. ಆರೋಗ್ಯದ ಬಗ್ಗೆ ಸಹ ನೀವು ಜಾಗರೂಕರಾಗಿರಬೇಕು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಈ ರಾಶಿಚಕ್ರದ ಸ್ಥಳೀಯರನ್ನು ಕಾಡಬಹುದು.
ಪರಿಹಾರ - ಮನೆ ಅಥವಾ ಕಚೇರಿಯಲ್ಲಿ ಶುಕ್ರ ಯಂತ್ರವನ್ನು ಸ್ಥಾಪಿಸಿ.
- ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮನೆಯಲ್ಲಿ ಶುಕ್ರ ಗ್ರಹದ ಸಂಚಾರವಾಗುತ್ತದೆ. ಹನ್ನೊಂದನೇ ಮನೆಯನ್ನು ಲಾಭದ ಮನೆಯೆಂದು ಕರೆಯಲಾಗುತ್ತದೆ. ಇದರಿಂದ ನಿಮ್ಮ ಬಯಕೆಗಳು, ಆಸೆಗಳು, ಹಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ತಿಳಿಯುತ್ತದೆ. ಈ ಮನೆಯಲ್ಲಿ ಶುಕ್ರನ ಸ್ಥಾನದ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. ನೀವು ದೀರ್ಘಕಾಲದಿಂದ ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಮತ್ತು ಇದು ವರೆಗೂ ಯಾವುದೇ ಯಶಸ್ಸು ಸಿಗದಿದ್ದರೆ, ಈ ಸಮಯದಲ್ಲಿ ಅದನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಉದ್ಯೋಗದಲ್ಲಿರುವ ಸ್ಥಳೀಯರು ಕೆಲಸದ ಸ್ಥಳದಲ್ಲಿ ಪ್ರಶಂಸೆಯನ್ನು ಪಡೆಯುತ್ತಾರೆ ಮತ್ತು ಪರಿಶ್ರಮದ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.
ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಯಾವುದೇ ಪ್ರಯಾಣವನ್ನು ಮಾಡಿದರೆ, ಅವರು ಪ್ರಯಾಣಗಳಿಂದ ಲಾಭವನ್ನು ಪಡೆಯುತ್ತಾರೆ. ನೀವು ಕುಟುಂಬದೊಂದಿಗೆ ಎಲ್ಲಾದರೂ ಸುತ್ತಾಡಲು ಯೋಜಿಸುತ್ತಿದ್ದರೆ, ಈ ಸಂಚಾರದ ಸಮಯದಲ್ಲಿ ಅದನ್ನು ಪೂರ್ಣಗೊಳಿಸಬಹುದು. ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಈ ರಾಶಿಚಕ್ರದ ಸ್ಥಳೀಯರಿಗೆ ಲಾಭವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ರಾಶಿಚಕ್ರದ ಸ್ಥಳೀಯರಿಗೆ ಮಹಿಳೆಯರ ಮೂಲಕ ಸಹ ಲಾಭವಾಗುತ್ತದೆ. ಈ ರಾಶಿಚಕ್ರದ ಪ್ರೇಮಿಗಳ ಬಗ್ಗೆ ಮಾತನಾಡಿದರೆ, ಈ ಸಮಯ ಉತ್ತಮವಾಗಿರುತ್ತದೆ. ನಿಮ್ಮಲ್ಲಿ ಪ್ರಣಯದ ಹೆಚ್ಚಳವಿರುತ್ತದೆ. ಸ್ಕೂಲ್ ಅಥವಾ ಕಾಲೇಜಿನಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಪ್ರತಿಭೆಯನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತಾರೆ.
ಪರಿಹಾರ - ಶುಕ್ರದ ಶುಭ ಫಲಿತಾಂಶಗಳನ್ನು ಪಡೆಯಲು ಪ್ರತಿದಿನ ಸೂರ್ಯೋದ್ಯಕ್ಕೆ ಮೊದಲು ಎದ್ದೇಳಿ.
- ಕನ್ಯಾ ರಾಶಿ
ಬುಧನ ಮಾಲೀಕತ್ವದ ಕನ್ಯಾ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಯಲ್ಲಿ ಶುಕ್ರನ ಸಂಚಾರವಾಗುತ್ತಿದೆ. ಕಾಲಪುರುಷ ಜಾತಕದಲ್ಲಿ ಹತ್ತನೇ ಮನೆ ಮಕರ ರಾಶಿಯದಾಗಿದೆ. ಈ ಮನೆಯ ಮೂಲಕ ನಿಮ್ಮ ವ್ಯಾಪಾರ, ಉದ್ಯೋಗ, ನಾಯಕತ್ವ, ತಂದೆ ಇತ್ಯಾದಿಗಳ ಬಗ್ಗೆ ತಿಳಿಯುತ್ತದೆ. ಈ ಮನೆಯಲ್ಲಿ ಶುಕ್ರನ ಸಂಹಾರದಿಂದಾಗಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಆರಂಭಿಸುತ್ತಿರೋ ಅದನ್ನು ಖಂಡಿತವಾಗಿಯೂ ಪೂರ್ಣಗೊಳಿಸುತ್ತೀರಿ. ಪ್ರತಿಯೊಂದು ಹೆಜ್ಜೆಯಲ್ಲಿ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಜೀವನದಲ್ಲಿ ಸಂತೋಷ ಸಂಪನ್ಮೂಲಗಳು ಹೆಚ್ಚಾಗುತ್ತವೆ. ಯಾವುದೇ ಹೊಸ ವಸ್ತುವನ್ನು ಖರೀದಿಸಲು ಬಯಸುತ್ತಿದ್ದರೆ, ಈ ಸಮಯ ಅನುಕೂಲಕರವಾಗಿದೆ.
ಮನೆ ಮತ್ತು ಕಚೇರಿಯಲ್ಲಿ ಉತ್ತಮ ವಾತಾವರಣದ ಕಾರಣದಿಂದಾಗಿ ನೀವು ಮಾನಸಿಕ ಶಾಂತಿಯನ್ನು ಅನುಭವಿಸುತ್ತೀರಿ. ಕುಟುಂಬದ ಸದಸ್ಯರು ಎಲ್ಲಾ ಪರಿಸ್ಥಿತಿಯಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ನೀವು ಕುಟುಂಬ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯವೂ ಪ್ರಯೋಜನಕಾರಿ ಮತ್ತು ವ್ಯಾಪಾರಕ್ಕೆ ಹೊಸ ದಿಕ್ಕು ಸಿಗಬಹುದು. ಚಲನಚಿತ್ರದ ಪ್ರಪಂಚಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಯಶಸ್ಸು ಗಳಿಸುತ್ತಾರೆ. ಯಾವುದೇ ಯೋಜನೆಗೆ ಸಂಬಂಧಿಸಿದ ಜನರು ಆದರ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಂಚಾರವು ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರವಾಗಿದೆ ಆದ್ದರಿಂದ ನೀವು ನಿಮ್ಮ ಪ್ರಯತ್ನಗಳನ್ನು ಪೂರ್ಣಗೊಳಿಸಲು ಸಾಧ್ಯವಾದಷ್ಟು ಪರಿಶ್ರಮಿಸಬೇಕು. ಇಂದು ಮಾಡಲಾಗುವ ಪರಿಶ್ರಮವೂ ಮುಂದಿನ ನಿಮ್ಮ ಭವಿಷ್ಯವನ್ನು ಸುಧಾರಿಸಬಹುದು.
ಪರಿಹಾರ - ಪ್ರತಿದಿನ ಬೆಳಿಗ್ಗೆ ಶುಕ್ರ ಬೀಜ ಮಂತ್ರವನ್ನು ಜಪಿಸಿ.
- ತುಲಾ ರಾಶಿ
ಶುಕ್ರನ ಸಂಚಾರವು ತುಲಾ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಯಲ್ಲಿ ಸಂಭವಿಸುತ್ತದೆ. ಗುರು ಗ್ರಹ ಇದರ ಮಾಲೀಕ. ಕಾಲಪುರುಷ ಜಾತಕದ ಈ ಮನೆಯಿಂದ ಧರ್ಮ, ಅದೃಷ್ಟ, ದೂರಸ್ಥ ಪ್ರಯಾಣ, ಅಧ್ಯಾತ್ಮ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದ ನಿಮ್ಮ ಬೌದ್ಧಿಕ ಸಾಮರ್ಥ್ಯಕ್ಕೆ ಬಲ ಸಿಗುತ್ತದೆ. ಸಂಶೋಧನೆಗೆ ಸಂಬಂಧಿಸಿದ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವೂ ಉತ್ತಮವೆದು ಸಾಬೀತುಪಡಿಸುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ವಿದ್ಯಾರ್ಥಿ ವರ್ಗವು ಈ ಸಮಯದಲ್ಲಿ ಕಠಿಣ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
ನಿರಂತರವಾಗಿ ನೀವು ನಿಮ್ಮ ಜ್ಞಾನವನ್ನು ಹೆಹಿಸಲು ಪ್ರಯತ್ನಿಸುತ್ತೀರಿ. ನಿಮ್ಮ ನಡವಳಿಕೆ ಮತ್ತು ಉತ್ತಮ ಧ್ವನಿಯಿಂದ ನಿಮ್ಮ ಕುಟುಂಬದ ವಾತಾವರಣದಲ್ಲಿ ಸಕಾರಾತ್ಮಕತೆಯನ್ನುತರಬಹುದು. ಪ್ರೀತಿಯಲ್ಲಿರುವ ತುಲಾ ರಾಶಿಚಕ್ರದ ಸ್ಥಳೀಯರ ಬಗ್ಗೆ ಮಾತನಾಡಿದರೆ, ಈ ಸಮಯವೂ ಪ್ರಣಯದಿಂದ ತುಂಬಿರುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಸಾಧಯವಾಗುತ್ತದೆ. ತಮ್ಮ ಪ್ರೀತಿಯನ್ನು ಮದುವೆಯಲ್ಲಿ ಬದಲಾಯಿಸಲು ಬಯಸುತ್ತಿರುವವರು ಈ ಸಮಯದಲ್ಲಿ ಯಶಸ್ವಿಯಾಗಬಹುದು. ಆದಾಗ್ಯೂ ನೀವು ಸುಂದರತೆ ಅಥವಾ ದೇಹಕ್ಕಿಂತ ಹೆಚ್ಚು ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಸೇರಬೇಕು. ಇದರಿಂದ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗುತ್ತದೆ. ಆರೋಗ್ಯದ ಬಗ್ಗೆ ಈ ರಾಶಿಚಕ್ರದ ಸ್ಥಳೀಯರು ಎಚ್ಚರದಿಂದಿರುವ ಅಗತ್ಯವಿದೆ. ಈ ಸಮಯದಲ್ಲಿ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು.
ಪರಿಹಾರ - ಗುರುಗಳನ್ನು ಗೌರವಿಸಿ ಮತ್ತು ಅವರ ಆಶೀರ್ವಾದವನ್ನು ಪಡೆದುಕೊಳ್ಳಿ.
- ವೃಶ್ಚಿಕ ರಾಶಿ
ಶುಕ್ರನ ಸಾಗಣೆ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಯಲ್ಲಿರುತ್ತದೆ. ಈ ಮನೆಯನ್ನು ಆಯುಷ್ಯದ ಮನೆಯೆಂದು ಕರೆಯಲಾಗುತ್ತದೆ. ಈ ಮನೆ ಜೀವನದಲ್ಲಿ ಬರಲಾಗುವ ಅಡಚಣೆ, ಪೂರ್ವಜರ ಆಸ್ತಿ, ಯುದ್ಧ, ಶತ್ರು ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಮನೆಯಲ್ಲಿ ಶುಕ್ರನ ಸಂಚಾರವು ನಿಮಗೆ ಉತ್ತಮವೆಂದು ಹೇಳಲಾಗುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ನೀವು ಬಹಳ ಜಾಗರೂಕರಾಗಿರಬೇಕು. ನಿಮ್ಮ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರು ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ನಿಮಗೆ ಅನಿಸಬಹುದು.
ಆದ್ದರಿಂದ ನಿಮ್ಮ ವಿಷಯಗಳನ್ನು ತುಂಬಾ ಸ್ಪಷ್ಟತೆಯೊಂದಿಗೆ ಇಡಬೇಕು. ದಾಂಪತ್ಯ ಜೀವನದಲ್ಲಿ ಜೀವನ ಸಂಗಾತಿಯ ಕಳಪೆ ಆರೋಗ್ಯದ ಕಾರಣದಿಂದಾಗಿ ನೀವು ತೊಂದರೆಕ್ಕೊಳಗಾಗಬಹುದು. ಅದೇ ಸಮಯದಲ್ಲಿ ನೀವು ಸಹ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಏಕೆಂದರೆ ಕಣ್ಣು ಮತ್ತು ಗುಪ್ತ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಸ್ವಚ್ಛತೆಯನ್ನು ಇರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.ಪ್ರೀತಿ ಜೀವನದಲ್ಲಿ ಸಂಗಾತಿಯೊಂದಿಗೆ ಅಹಂಕಾರದ ಸಂಹರ್ಷಣೆ ಉಂಟಾಗಬಹುದು, ಇದು ನಿಮ್ಮ ಸಂಬಂಧವನ್ನು ಸಹ ಹದಗೆಡಿಸಬಹುದು ಆದ್ದರಿಂದ ಈ ಸಮಯದಲ್ಲಿ ನೀವು ತಾಳ್ಮೆಯಿಂದಿರಿ ಮತ್ತು ನಿಮ್ಮ ಧ್ವನಿಯನ್ನು ನಿಯಂತ್ರಿಸಿ. ಆದರೂ ಈ ಸಮಯದಲ್ಲಿ ಈ ರಾಶಿಚಕ್ರದ ಕೆಲವು ಸ್ಥಳೀಯರು ಯಾವುದೇ ಉಡುಗೊರೆಯನ್ನು ಪಡೆಯಬಹುದು.
ಪರಿಹಾರ - ಶುಕ್ರವಾರದ ದಿನದಂದು ತಾಯಿ ಸಂತೋಷಿಯನ್ನು ಪೂಜಿಸಿ.
- ಧನು ರಾಶಿ
ಶುಕ್ರನ ಸಂಚಾರವು ಧನು ರಾಶಿಚಕ್ರದ ಸ್ಥಳೀಯರ ಏಳನೇ ಮನೆಯಲ್ಲಿರುತ್ತದೆ. ಈ ಮನೆ ಜೇವನ ಸಂಗಾತಿ ಮತ್ತು ಪಾಲುದಾರಿಕೆಯ ಮನೆಯಾಗಿದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ. ಕುಟುಂಬದ ಸದಸ್ಯರೊಂದಿಗೆ ವಿರೋಧಾಭಾಸ ನಡೆಯುತ್ತಿದ್ದರೆ ಅದು ದೂರವಾಗಬಹುದು. ತಂದೆ ತಾಯಿಯ ಆರೋಗ್ಯವು ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ಸಾಮಾಜಿಕ ಮಠದಲ್ಲಿ ಕೂಡ ನೀವು ಉತ್ತಮ ಪ್ರದರ್ಶನ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಸ್ನೇಹಿತರು ಅಥವಾ ನಿಮಗೆ ತಿಳಿದಿರುವ ಜನರ ಮೂಲಕ ನೀವು ಲಾಭವನ್ನು ಪಡೆಯಬಹುದು. ದಾಂಪತ್ಯ ಜೀವನವು ಉತ್ತಮವಾಗಿರುತ್ತದೆ ಆದರೆ ಜೀವನ ಸಂಗಾತಿಯ ಆರೋಗ್ಯವು ನಿಮ್ಮ ಸಮಸ್ಯೆಗೆ ಕಾರಣವಾಗಬಹುದು.
ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಸಾಧ್ಯವಾಷ್ಟು ಅವರೊಂದಿಗೆ ಸಮಯ ಕಳೆಯಿರಿ. ಇದರೊಂದಿಗೆ ನಿಮ್ಮ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಿ, ಈ ಸಮಯದಲ್ಲಿ ರೋಗಗಳನ್ನು ತಪ್ಪಿಸಲು ಸಾಧ್ಯವಾದಷ್ಟು ನೀರು ಕುಡಿಯಿರಿ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ವ್ಯಾಪಾರದಲ್ಲಿ ಪ್ರಯೋಜನ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಪರಿಗಣಿಸಬಹುದು. ಇನ್ನು ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಕೆಲವು ಸ್ಥಳೀಯರು ತಮ್ಮ ಸ್ನೇಹಿತರ ಅಥವಾ ಇಂಟರ್ನೆಟ್ ಮೂಲಕ ತಮ್ಮ ಸಂಗಾತಿಯನ್ನು ಪಡೆಯಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುತ್ತೀರಿ . ಈ ಕಾರಣದಿಂದಾಗಿ ಉತ್ತಮ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತೀರಿ
ಪರಿಹಾರ - ಶುಕ್ರ ಬೀಜ ಮಂತ್ರವನ್ನು ಪಠಿಸಿ.
- ಮಕರ ರಾಶಿ
ಶುಕ್ರ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಾಗುತ್ತದೆ. ಈ ಮನೆಯನ್ನು ರಿಪು ಮನೆಯೆಂದು ಕರೆಯಲಾಗುತ್ತದೆ ಮತ್ತು ಇದರಿಂದ ರೋಗ, ಋಣ, ಶತ್ರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಶುಕ್ರನ ಸಂಚಾರವು ಉತ್ತಮವೆಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ಕುಟುಂಬ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಣ್ಣ ಪುಟ್ಟ ವಿಷಯಗಳ ಬಗ್ಗೆ ಮನೆಯ ಸದಸ್ಯರೊಂದಿಗೆ ವಿರೋಧಾಭಾಸವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಧ್ವನಿಯನ್ನು ನಿಯಂತ್ರಿಸಬೇಕು ಮತ್ತು ಸಾಧ್ಯವಾದಷ್ಟು ಕಡಿಮೆ ಮಾತನಾಡಬೇಕು. ಇದರಿಂದ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ. .ಉದ್ಯೋಗದಲ್ಲಿರುವವರು ಮತ್ತು ವ್ಯಾಪಾರಸ್ಥರು ಈ ಸಮಯದಲ್ಲಿ ಜಾಗರೂಕರಾಗಿರುವ ಅಗತ್ಯವಿದೆ.
ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿಗಳೊಂದಿಗೆ ಬುದ್ಧಿವಂತಿಕೆಯೊಂದಿಗೆ ಮಾತನಾಡಿ ಇಲ್ಲದಿದ್ದರೆ ನಿಮ್ಮ ಗೌರವದ ಹಾನಿಯನ್ನು ಹೊಂದಿರಬಹುದು. ಪ್ರೀತಿಯಲ್ಲಿರುವ ಈ ರಾಶಿಚಕ್ರದ ಶತಾಳೀಯರಿಗೆ ಈ ಸಮಯವೂ ಉತ್ತಮವಾಗಿಲ್ಲ, ಯಾವುದೇ ಕಾರಣದಿಂದಾಗಿ ನಿಮ್ಮ ಸಂಗಾತಿ ನಿಮ್ಮಿಂದ ದೂರವಾಗಬಹುದು. ಅಂತಹ ಸಂದರ್ಭದಲ್ಲಿ ಶುಭ ಪಹಲಿತಾಂಶಗಳನ್ನು ಪಡೆಯಲು ನೀವು ದ್ವಿಗುಣ ಪರಿಶ್ರಮ ಮಾಡಬೇಕಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಯಾಸವನ್ನು ತ್ಯಜಿಸಿ ಮುಂದುವರಿಯಿರಿ.ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಅವರ ಮೂಲಕ ಯಾವುದೇ ಪಿತೂರಿ ರಚಿಸಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಹೆಚ್ಚು ಹುರಿದ ಆಹಾರ ಸೇವಿಸುವುದನ್ನು ನೀವು ತಪ್ಪಿಸಬೇಕು ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು.
ಪರಿಹಾರ - ಪರಶುರಾಮ ಚರಿತ್ರವನ್ನು ಪಠಿಸುವುದು ನಿಮಗೆ ಉತ್ತಮವಾಗಿರುತ್ತದೆ.
- ಕುಂಭ ರಾಶಿ
ಶುಕ್ರನ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರ ಐದನೇ ಮನೆಯಲ್ಲಿರುತ್ತದೆ. ಈ ಮನೆಯನ್ನು ಮಕ್ಕಳ ಮನೆಯೆಂದು ಸಹ ಕರೆಯಲಾಗುತ್ತದೆ. ಇದರಿಂದ ಶಿಕ್ಷಣ ಮತ್ತು ಪ್ರೀತಿ ಸಂಬಂಧದ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದ ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ. ಜನರ ಮಧ್ಯೆ ಸಾಮರಸ್ಯ ಉಳಿದಿರುತ್ತದೆ ಇದರಿಂದ ನೀವು ಸಹ ಸಂತೋಷಪಡುತ್ತೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಭವಿಷ್ಯದ ಬಗ್ಗೆ ಯಾವುದೇ ಹೊಸ ಯೋಜನೆಯನ್ನು ಮಾಡಬಹುದು. ಆರ್ಥಿಕ ಭಾಗವನ್ನು ಸುಧಾರಿಸಲು ಪೋಷಕರ ಸಲಹೆಯನ್ನು ಪಡೆಯುವುದು ನಿಮಗೆ ಲಾಭದಾಯಕವಾಗಿರುತ್ತದೆ. ಈ ರಾಶಿಚಕ್ರದ ವಿವಾಹಿತ ಜನರು ತಮ್ಮ ಮಕ್ಕಳಿಂದ ಲಾಭವನ್ನು ಪಡೆಯಬಹುದು.
ನಿಮ್ಮ ಮಕ್ಕಳು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಿಸುವಂತಹ ಕೆಲಸವನ್ನು ಮಾಡಬಹುದು. ನಿಮ್ಮ ತಾಯಿ ಉದ್ಯೋಗದಲ್ಲಿದ್ದರೆ ಸಂಚಾರದ ಈ ಸಮಯದಲ್ಲಿ ಅವರಿಗೂ ಲಾಭವಾಗುವ ಸಾಧ್ಯತೆ ಇದೆ. ಕುಂಭ ರಾಶಿಚಕ್ರದ ಸ್ಥಳೀಯರು ಅಷ್ಟು ಸುಲಭವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪೈಸುವುದಿಲ್ಲ ಈ ಕಾರಣದಿಂದ ಅವರು ತಮ್ಮನ್ನೇ ಸಮಸ್ಯೆಯಿಂದ ಕಾಡುತ್ತಾರೆ, ಈ ಸಮಯದಲ್ಲಿ ಅದನ್ನು ಮಾಡುವುದನ್ನು ತಪ್ಪಿಸಬೇಕು ಮತ್ತು ಸಾಧ್ಯವಾದಷ್ಟು ನಿಮಗೆ ಸಮಯ ನೀಡಲು ಪ್ರಯತ್ನಿಸಬೇಕು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅಥವಾ ನೀವು ವಿವಾಹಿತರಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮತ್ತು ತೆರೆದ ಮನಸ್ಸಿನೊಂದಿಗೆ ಮಾತನಾಡಿ ಇದರಿಂದ ಅವರಿಗೂ ಸಂತೋಷವಾಗುತ್ತದೆ.
ಪರಿಹಾರ - ಶ್ರೀ ಸೂಕ್ತವನ್ನು ಪಠಿಸುವುದು ನಿಮಗೆ ಉತ್ತಮವಾಗಿರುತ್ತದೆ.
- ಮೀನಾ ರಾಶಿ
ಶುಕ್ರನ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯಲ್ಲಿರುತ್ತದೆ. ಕಾಲಪುರುಷ ಜಾತಕದಲ್ಲಿ ಈ ಸ್ಥಾನವು ಕಾರ್ಕ ರಾಶಿಯದು ಮತ್ತು ಇದರಿಂದ ತಾಯಿ, ಸಂತೋಷ, ಭೂಮಿ, ಗುಪ್ತ ಪ್ರೀತಿ ಸಂಬಂಧ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಶುಕ್ರನ ಈ ಸಂಚಾರದ ಸಮಯದಲ್ಲಿ ನಿಮಗೆ ನಿಮ್ಮ ಸಹೋದರ ಸಹೋದರಿಯರ ಮೂಲಕ ಲಾಭವಾಗುತ್ತದೆ. ಅವರೊಂದಿಗೆ ಯಾವುದೇ ರೀತಿಯ ವಿರೋಧಾಭಾಸವಿದ್ದರೆ ಈ ಸಮಯದಲ್ಲಿ ಅದು ಕೂಡ ದೂರವಾಗಬಹುದು. ಮಾನಸಿಕವಾಗಿ ಶಾಂತರಾಗಿರುತ್ತೀರಿ ಆದರೆ ತಾಯಿಯ ಕಳಪೆ ಆರೋಗ್ಯವು ನಿಮ್ಮನ್ನು ತೊಂದರೆಗೊಳಿಸಬಹುದು.
ಕೆಲಸದ ಸ್ಥಲದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಮಾಡುತ್ತಿರುವ ಕೆಲಸಕ್ಕಾಗಿ ನಿಮ್ಮನ್ನು ರಚಿಸಲಾಗಿಲ್ಲ ಎಂದು ನೀವು ಭಾವಿಸುವ ಸಾಧ್ಯತೆ ಇದೆ. ಅಂತಹ ಸಂಧರ್ಭದಲ್ಲಿ ನೀವು ಅವಸರದಲ್ಲಿ ಉಯೋಗವನ್ನು ಬಿಡಲು ನಿರ್ಧರಿಸಬಾರದು. ಈ ಸಮಯದಲ್ಲಿ ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಸಮಯಕ್ಕೆ ಪೂರ್ಣಗಳಿಸಲು ಸಾಧ್ಯವಾಗದಿರುವಂತಹ ಯಾವುದೇ ಭರವಸೆಯನ್ನು ಸಂಗಾತಿಯೊಂದಿಗೆ ಮಾಡಬಾರದು. ದಾಂಪತ್ಯ ಜೀವನದಲ್ಲಿ ಪ್ರವೇಶಿಸಿರುವ ಜನರು ಈ ಸಮಯದಲ್ಲಿ ತಮ್ಮ ಎಲ್ಲ ದೂರುಗಳನ್ನು ನಿವಾರಿಸಿ ಮುಂದುವರಿಯಬೇಕು. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರ ಆರೋಗ್ಯವು ದುರ್ಬಲಗೊಳ್ಳಬಹುದು. ಕೆಮ್ಮು ಶೀತದಂತಹ ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳು ನಿಮ್ಮನ್ನು ಟೋನರಿಗೊಳಿಸಬಹುದು. ಈ ಸಮಯದಲ್ಲಿ ಶೀತದ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. .
ಪರಿಹಾರ - ಶುಕ್ರನನ್ನು ಬಲಪಡಿಸಲು ನೀವು ಸಕ್ಕರೆಯ ದಾನ ಮಾಡಬೇಕು.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025