ಪೆನಂಬ್ರಲ್ ಚಂದ್ರ ಗ್ರಹಣ - Lunar Eclipse on 5th july 2020 in Kannada
05 ಜೂಲೈ 2020 ರಂದು ವರ್ಷದ ಎರಡನೇ ಚಂದ್ರ ಗ್ರಹಣವು ಸಂಭವಿಸಲಿದೆ. ಈ ಚಂದ್ರ ಗ್ರಹಣವು ಉಪನೆರಳು ಚಂದ್ರ ಗ್ರಹಣವಾಗಲಿದೆ. 05 ಜೂನ್ 2020 ರಿಂದ ಪ್ರಾರಂಭವಾದ ಗ್ರಹಣ ಪ್ರಸಂಗದಲ್ಲಿ ಇದು ಮೂರನೇ ಗ್ರಹಣವಾಗಲಿದೆ. 05 ಜೂನ್ 2020 ರಿಂದ 2020 ರ ಜೂಲೈ 05 ರ ವರೆಗೆ ಮೂರು ಗ್ರಹಣಗಳಿವೆ. ಜ್ಯೋತಿಷ್ಯ ಜಗತ್ತಿನಲ್ಲಿ ಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಈ ಚಂದ್ರ ಗ್ರಹಣವು ಬೆಳಿಗ್ಗೆ 8 ಗಂಟೆ 37 ನಿಮಿಷಕ್ಕೆ ಆರಂಭವಾಗಿ, 11 ಗಂಟೆ 22 ನಿಮಿಷದಲ್ಲಿ ಕೊನೆಗೊಳ್ಳುತ್ತದೆ.10 ಗಂಟೆಗೆ ಉತ್ತುಂಗಕ್ಕೇರುತ್ತದೆ. ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿಯು ಬಂದಾಗ ಮತ್ತು ಸೂರ್ಯನ ಕಿರಣಗಳು ಚಂದ್ರನ ಬಳಿ ತಲುಪದಿದ್ದಾಗ, ಚಂದ್ರ ಗ್ರಹಣವು ಸಂಭವಿಸುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಉಪನೆರಳಿನ ಚಂದ್ರ ಗ್ರಹಣದ ಬಗ್ಗೆ ಮಾತನಾಡಿದರೆ, ಭೂಮಿಯ ನೆರಳು ಪ್ರದೇಶದಲ್ಲಿ ಚಂದ್ರ ಬಂದಾಗ ಮತ್ತು ಚಂದ್ರನ ಮೇಲೆ ಸೂರ್ಯನ ಬೆಳಕು ಕತ್ತರಿಸಲ್ಪಟ್ಟಂತೆ ಕಂಡಾಗ ಆ ಪರಿಸ್ಥಿತಿಯನ್ನು ಉಪನೆರಳು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.
ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಜ್ಯೋತಿಷಿಗಳನ್ನು ಪ್ರಶ್ನೆ ಕೇಳಿ
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ತಿಳಿಯಿರಿ ನಿಮ್ಮ ಚಂದ್ರ ರಾಶಿ
ಈ ಭಾಗಶಃ ಚಂದ್ರ ಗ್ರಹಣವು ಅಥವಾ ಪೆನಂಬ್ರಲ್ ಚಂದ್ರ ಗ್ರಹಣವು ರಾಶಿಯಲ್ಲಿ ನಡೆಯುತ್ತದೆ. ಇದನ್ನು ಆಧ್ಯಾತ್ಮಿಕತೆ, ಅಭಿವೃದ್ಧಿ ಮತ್ತು ದೃಷ್ಟಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ಒಬ ವ್ಯಕ್ತಿಯು ಸಕಾರಾತ್ಮಕವಾಗಿ ಉಳಿದಿದ್ದರೆ ಖಂಡಿತವಾಗಿಯೂ ಈ ಗ್ರಹಣವು ದೃಷ್ಟಿಯಿಂದ ಆ ಸ್ಥಳೀಯರಿಗೆ ಕೆಲವು ಆಶಾವಾದಿ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ. ಇದಲ್ಲದೆ ನಕ್ಷತ್ರದ ಬಗ್ಗೆ ಮಾತನಾಡಿದರೆ, ಈ ಗ್ರಹಣವು “ಪೂರ್ವಾಷಾಢ” ನಕ್ಷತ್ರದಲ್ಲಿ ಸಂಭವಿಸಲಿದೆ. ಇದು ಶಕ್ತಿ ಮತ್ತು ಸ್ಫೂರ್ತಿಗೆ ಸಂಬಂಧಿಸಿದ ನಕ್ಷತ್ರಪುಂಜವಾಗಿದೆ. ಆದ್ದರಿಂದ ಇದು ನಿಮ್ಮ ಪ್ರಯತ್ನಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ಈ ಗ್ರಹಣದ ಸಮಯದಲ್ಲಿ ನಿಮ್ಮ ಪ್ರಯತ್ನಗಳಲ್ಲಿ ದೃಢ ಮತ್ತು ಸ್ಥಿರವಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಆದಾಗ್ಯೂ ಈ ನಕ್ಷತ್ರವನ್ನು ನೀರಿನ ಮೂಲಕ ನಿಯಂತ್ರಿಸಲಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿದೆ.
ನಡೆಯಿರಿ ಈಗ ಈ ಚಂದ್ರ ಗ್ರಹಣವು ಎಲ್ಲಾ 12 ರಾಶಿಗಳ ಮೇಲೆ ಏನು ಪರಿಣಾಮ ಎಂಬುದರ ಬಗ್ಗೆ ತಿಲಯೋಣ.
ನೀವು 2020 ರಲ್ಲಿ ಸಂಭವಿಸಲಾಗುವ ಇತರ ಗ್ರಹಣಗಳ ಬಗ್ಗೆ ತಿಳಿಯಲು ಬಯಸುತ್ತಿದ್ದರೆ, ನೀವು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಪಡೆಯಬಹುದು!
- ಮೇಷ ರಾಶಿ ಭವಿಷ್ಯ
ಧನು ರಾಶಿಯಲ್ಲಿ ಸಂಭವಿಸುತ್ತಿರುವ ಈ ಚಂದ್ರ ಗ್ರಹಣವು, ಮೇಷ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ನಡೆಯಲಿದೆ. ಇದನ್ನು ಅದೃಷ್ಟ ಮತ್ತು ಉನ್ನತ ಶಿಕ್ಷಣದ ಮನೆಯೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ದಿನಚರಿಯಿಂದ ಹೊರಬಂದು ಯಾವುದೇ ಹೊಸ ಶಿಕ್ಷಣ, ಕೌಶಲ್ಯ ಅಥವಾ ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತೀರಿ. ಇದು ನಿಮ್ಮ ವೃತ್ತಿ ಜೀವನಕ್ಕೆ ಒಂದು ಹೊಸ ಎತ್ತರವನ್ನು ಒದಗಿಸುತ್ತದೆ. ಆದಾಗ್ಯೂ ಚಂದ್ರ ಮತ್ತು ನಿಮ್ಮ ಲಗ್ನದ ಮಾಲೀಕ ಮಂಗಳ ಕೂಡ ನೆಲೆಗೊಂಡಿರುವ ಹೆಚ್ಚಿನ ಗ್ರಹಗಳು ದ್ವಿಸ್ವಭಾವಿ ರಾಶಿಚಕ್ರದಲ್ಲಿ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಕೆಲವೊಮ್ಮೆ ವಿಚಲಿತರಾಗಬಹುದು ಮತ್ತು ಗೊಂದಲಕ್ಕೊಳಗಾಗಬಹುದು ಎಂದು ಸೂಚಿಸುತ್ತದೆ.
ಅಂತಹ ಸಂದರ್ಭದಲ್ಲಿ ಒಟ್ಟಾರೆಯಾಗಿ, ನಿಮ್ಮ ಗುರುಗಳು ಅಥವಾ ಶಿಕ್ಷಕರೊಂದಿಗೆ ಮತ್ತೊಮ್ಮೆ ಸೇರಲಿಕ್ಕೆ ಈ ಸಮಯವೂ ಉತ್ತಮವೆಂದು ಸಾಬೀತುಪಡಿಸಬಹುದು. ಅವರ ಮೂಲಕ ನೀಡಲಾಗಿರುವ ಯಾವುದೇ ಸಲಹೆ ನಿಮಗೆ ಸಹಕಾರವೆಂದು ಸಾಬೀತುಪಡಿಸುತ್ತದೆ. ಇದಲ್ಲದೆ, ಈ ಸಮಯವೂ ಆಧ್ಯಾತ್ಮಿಕಗೆ ಉತ್ತಮವಾದ್ದು. ಆದ್ದರಿಂದ ಈ ಸಮಯದಲ್ಲಿ ಆಧ್ಯಾತ್ಮಿಕ ಮತ್ತು ಪ್ರೇರೇಪಿಸುವ ಪುಸ್ತಕಗಳನ್ನು ಓದಿ.
ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಗುರು ಮಂತ್ರವನ್ನು ಜಪಿಸುತ್ತ ಧ್ಯಾನ ಮಾಡಿ.
- ವೃಷಭ ರಾಶಿ ಭವಿಷ್ಯ
ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಈ ಸಮಯ ಉತ್ತಮವಾಗಿಲ್ಲ ಏಕೆಂದರೆ ಈ ಸಮಯದ್ಲಲಿ ಮಾಡಲಾಗುವ ನಿಮ್ಮ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡಲು ಸಾಧ್ಯವಿಲ್ಲ, ಇದರಿಂದ ನೀವು ಹತಾಶೆ ಮತ್ತು ಚಿಂತೆಕ್ಕೊಳಗಾಗಬಹುದು.
ಇದಲ್ಲದೆ ಆರೋಗ್ಯದ ದೃಷ್ಠಿಯಿಂದ ಈ ಸಂಚಾರವು ಹೆಚ್ಚು ಅನುಕೂಲಕರವೆಂದು ಸಾಬೀತುಪಡಿಸಲಾಗುವುದಿಲ್ಲ. ಆದ್ದರಿಂದ ನೀವು ನಿಮ್ಮನ್ನು ಯಾವುದೇ ರೀತಿಯ ಸೋಂಕು, ವಿಶೇಷವಾಗಿ ನೀರಿನಿಂದ ಉಂಟಾಗುವ ಸೋಂಕಿನಿಂದ ತಪ್ಪಿಸಲು ಕೆಲವು ಪರಿಹಾರಗಳನ್ನು ಮಾಡುವ ಅಗತ್ಯವಿದೆ. ಇದಲ್ಲದೆ ಈ ಗ್ರಹಣದ ಸಮಯದಲ್ಲಿ ಕುಟುಂಬ ಮತ್ತು ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿಯಂತ್ರಿಸಬೇಕು. ಹಣವನ್ನು ಸಂಪಾದಿಸಲು ಯಾವುದೇ ಕಿರುಹಾದಿಯನ್ನು ಅಳವಡಿಸಿಕೊಳ್ಳಬೇಡಿ. ಆದಾಗ್ಯೂ ಜ್ಯೋತಿಷ್ಯ, ಅತೀಂದ್ರೀಯದಂತಹ ವಿಷಯಗಳ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಈ ವಿಷಯಗಳಲ್ಲಿ ಅಧ್ಯಯನ ಮಾಡಲು ಇದು ಉತ್ತಮ ಸಮಯ.
ಪರಿಹಾರ - ಗ್ರಹಣದ ಸಮಯದಲ್ಲಿ “ಸೋಮಾಯ್ ನಮಃ “ ಮಂತ್ರವನ್ನು ಜಪಿಸಿ.
- ಮಿಥುನ ರಾಶಿ ಭವಿಷ್ಯ
ಈ ಚಂದ್ರ ಗ್ರಹಣವು ನಿಮ್ಮ ಮತ್ತು ನಿಮ್ಮ ಜೇವನ ಸಂಗಾತಿಯ ಸಂಬಂಧಕ್ಕೆ ಒಂದು ಹೊಸ ಆಯಾಮವನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ತಮ್ಮ ಸಂಬಂಧದಲ್ಲಿ ನೆಲೆಗೊಳ್ಳಲು ಬಯಸುತ್ತಿರುವವರಿಗೆ, ಈ ಸಮಯವು ಅವರ ಆಸೆಗಳನ್ನು ಈಡೇರಿಸಲು ಸಹಕಾರಿಯಾಗುತ್ತದೆ. ಇದರೊಂದಿಗೆ ೫ತಮ್ಮ ಮುಖ್ಯ ವೃತ್ತಿಯೊಂದಿಗೆ ಪಕ್ಕದ ವ್ಯವಹಾರದಲ್ಲಿ ಕೈ ಹಾಕಲು ಬಯಸುತಿರುವವರಿಗೆ ಕೂಡ ಈ ಗ್ರಹಣವು ಉತ್ತಮ ಸುದ್ಧಿಯನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಸಂವಾದಾತ್ಮಕ ಕಲೆ ಮತ್ತು ನಿಮ್ಮ ಸಾಮಾಜಿಕ ಕೌಶಲ್ಯವು ಮೇಲ್ಭಾಗದಲ್ಲಿರುತ್ತವೆ. ಇದು ನಿಮ್ಮ ವ್ಯವಹಾರ ಮತ್ತು ವೃತ್ತಿಗೆ ಹೊಸ ಗ್ರಾಹಕರನ್ನು ಸೇರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ ಜೀವನದ ಯಾವುದೇ ಕೆಲಸದಲ್ಲಿ ಈ ಸಮಯದಲ್ಲಿ ತುರಾತೂರಿ ತೋರಿಸುವುದನ್ನು ತಪ್ಪಿಸಿ. ಒಟ್ಟಾರೆಯಾಗಿ ಹೇಳಿದರೆ, ಈ ಗ್ರಹಣವು ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಸಾಧ್ಯತೆಗಳನ್ನು ತರಲಿದೆ.
ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ 108 ಬಾರು ಬುಧ ಆ=ಮಂತ್ರವನ್ನು ಪಠಿಸಿ.
- ಕರ್ಕ ರಾಶಿ ಭವಿಷ್ಯ
ಕರ್ಕ ರಾಶಿಚಕ್ರದ ಸ್ಥಳೀಯರು ಈ ಚಂದ್ರ ಗ್ರಹಣದ ಸಮಯದಲ್ಲಿ ತಮ್ಮಲ್ಲಿ ಭಾವನಾತ್ಮಕ ಶಕ್ತಿಯ ಒಂದು ಹೊಸ ಮನೋಭಾವವನ್ನು ಅನುಭವಿಸುತ್ತಾರೆ. ಸಾಧ್ಯವಾದರೆ ಈ ಶಕ್ತಿಯನ್ನು ನಿಮ್ಮ ಅರೋಗ್ಯ ಅತಃವ ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ಯಾವುದೇ ದಿನಚರಿಯಲ್ಲಿ ಹೊಸ ಮತ್ತು ಸಕಾರಾತ್ಮಕ ಬದಲಾವಣೆ ತರುವಲ್ಲಿ ಬಳಸಿ. ನಿಮ್ಮ ಕೆಲಸದ ಪರಿಸ್ಥಿತಿಯಲ್ಲಿ ಯಾವುದೇ ವಿಷಯವು ನಿಮಗೆ ತಪ್ಪು ಎಂದು ಅನಿಸಿದರೆ ಅಥವಾ ನಿಮಗೆ ತೊಂದರೆ ನೀಡುತ್ತಿದ್ದರೆ, ಅದರಲ್ಲಿ ಸರಿಯಾದ ಬದಲಾವಣೆ ಅಥವಾ ಅದರ ಪುನರ್ರಚನೆಗೆ ಇದು ಉತ್ತಮ ಸಮಯವಾಗಿದೆ.
ಯಾವುದೇ ಹೊಸ ವ್ಯಾಯಾವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಏಕೆಂದರೆ ಇದು ನಿಮ್ಮಭಾವನೆಗಳನ್ನು ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚು ಸಮತೋಲನವನ್ನು ಅನುಭವಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ವೃತ್ತಿಪರ ಜನರಿಗೆ ಹೊಸ ಕಾರ್ಯಗಳು ಸಿಗಬಹುದು.ಅಥವಾ ನಿಮ್ಮಲ್ಲಿ ಕೆಲವರು ಹೊಸ ಅವಕಾಶಗಳನ್ನು ಸಹ ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ ವಾದ ವಿವಾದ ಅಥವಾ ಯಾವುದೇ ಜಗಳದಲ್ಲಿ ಬೀಳಲು ಗ್ರಹಣದ ಈ ಸಮಯವೂ ಸರಿಯಾಗಿಲ್ಲ. ಇದನ್ನು ಮಾಡುವುದನ್ನು ತಪ್ಪಿಸಿ.
ಪರಿಹಾರ - ಗ್ರಹಣದ ಸಮಯದಲ್ಲಿ ದೇವಿ ಮಹಾಗೌರಿಯ ಮಂತ್ರವನ್ನು ಪಠಿಸಿ.
- ಸಿಂಹ ರಾಶಿ ಭವಿಷ್ಯ
ತಮ್ಮ ಕುಟುಂಬವನ್ನು ಮುಂದುವರಿಸಲು ಬಯಸುತ್ತಿರುವ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಶುಭ ಫಲಿತಾಂಶಗಳನ್ನು ತರುತ್ತದೆ ಎಂದು ಸಾಬೀತುಪಯಿಸುತ್ತದೆ. ಮತ್ತೊಂದೆಡೆ ಪ್ರೀತಿಯಲ್ಲಿರುವ ಈ ರಾಶಿಚಕ್ರದ ಸ್ಥಳೀಯರ ಸಂಬಂಧದಲ್ಲಿ ಈ ಸಮಯದಲ್ಲಿ ಸ್ವಲ್ಪ ಹುಳಿ ಬರಬಹುದು. ಆದರೆ ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ವಿವಾಹಿತ ಜನರು ಸಾಧ್ಯವಾದಷ್ಟು ಈ ಸಮಯವನ್ನು ತಮ್ಮ ಮಕ್ಕಳೊಂದಿಗೆ ಕಳೆಯಿರಿ ಎಂದು ಸಲಹೆ ನೀಡಲಾಗಿದೆ, ಏಕೆಂದರೆ ಅವರ ಜೀವನದಲ್ಲಿ ಬಹಳಷ್ಟು ಗೊಂದಲದ ಪರಿಸ್ಥಿತಿ ಇರಲಿದೆ. ವ್ಯವಸಾಯಿಕವಾಗಿ, ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಹಂಚಿಕೊಳ್ಳಲು ಸಮಯ ತುಂಬಾ ಉತ್ತಮವಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು
ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ 108 ಬಾರಿ ಗಾಯತ್ರಿ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.
- ಕನ್ಯಾ ರಾಶಿ ಭವಿಷ್ಯ
ಈ ಚಂದ್ರ ಗ್ರಹಣವು ಕೆಲವು ದೇಶಿಯ ವಿಷಯಗಳನ್ನು ಮೇಲೆ ತರುವ ಕೆಲಸ ಮಾಡುತ್ತದೆ. ವಿಶೇಷವಾಗಿ ನಿಮ್ಮ ತಾಯಿಗೆ ಸಂಬಂಧಿಸಿದ ವಿಷಯ ಮತ್ತು ಇದರೊಂದಿಗೆ ಆದರ ಪರಿಹರಿಸುವ ಅವಕಾಶವನ್ನು ಸಹ ಒದಗಿಸುತ್ತದೆ. ಆಸ್ತಿಗೆ ಸಂಬಂಧಿಸಿದ ಕೆಲವು ಮಾರಾಟ - ಖರೀದಿ ವಿಷಯಗಳಲ್ಲಿ ವೇಗ ಬರುವ ಸಾಧ್ಯತೆ ಇದೆ, ಇದರಿಂದ ಈ ವಿಷಯದ ಬಗ್ಗೆ ನೀವು ಗಮನ ಹರಿಸುವ ಅಗತ್ಯವಿದೆ. ವೃತ್ತಿಪರವಾಗಿ, ದೀರ್ಘಕಾಲದಿಂದ ನಿಂತಿರುವ ಯಾವುದೇ ಪ್ರಮುಖ ವೃತ್ತಿ ಯೋಜನೆಯನ್ನು ಪೂರ್ಣಗೊಳಿಸಲು ಈ ಸಮಯವೂ ಶುಭವೆಂದು ಸಾಬೀತುಪಡಿಸುತ್ತದೆ.
ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಗುರು ಮಂತ್ರವನ್ನು ಜಪಿಸುವುದು ನಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.
- ತುಲಾ ರಾಶಿ ಭವಿಷ್ಯ
5 ಜೂಲೈ 2020 ರಂದು ಸಂಭವಿಸಲಿರುವ ಚಂದ್ರ ಗ್ರಹಣವು ತುಲಾ ರಾಶಿಚಕ್ರದ ಮೂರನೇ ಮನೆಯಲ್ಲಿರುತ್ತದೆ, ಇದರಿಂದ ಧೈರ್ಯ, ಸಂವಹನ ಮತ್ತಿ ಸಹೋದರ ಸಹೋದರಿಯರನ್ನು ಪ್ರತಿನಿಧಿಸಲಾಗುತ್ತದೆ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಮಾಡಲಾಗುವ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವೂ ಹಾಳಾಗುವುದಿಲ್ಲ. ಆದ್ದರಿಂದ ನಿಮ್ಮ ದೃಷ್ಟಿಕೋನದಲ್ಲಿ ನಿರಂತರವಾಗಿ ಬಲವಾಗಿ ಮತ್ತು ಸ್ಥಿರವಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಹೇಗಾದರೂ, ಸಾಧ್ಯವಾದಷ್ಟು ಬೇಗೆ ಯಾವುದೇ ಫಲಿತಾಂಶವನ್ನು ಪಡೆಯಲು ಅನಗತ್ಯ ಅಪಾಯವನ್ನು ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನೀವು ನಿಮಗಾಗಿ ಯಾವುವಿದೆ ಸಮಸ್ಯೆಯನ್ನು ರಚಿಸಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಜನರೊಂದಿಗೆ ಹೆಚ್ಚು ಮಾತನಾಡಲು ಪ್ರಯತ್ನಿಸಿ. ವಿಶೇಷವಾಗಿ ಉನ್ನತ ಅಧಿಕಾರದ ಸ್ಥಳದಲ್ಲಿರುವ ಉತ್ತಮ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿ. ಈ ಗ್ರಹಣದ ಸಮಯದಲ್ಲಿ ಸಹೋದರ ಸಹೋದರಿಯರನ್ನು ಗಮನಸಿವುದು ಸಹ ಬಹಳ ಮುಖ್ಯವಾಗಿದೆ. ಒತಾರೆಯಾಗಿ ಹೇಳಿದರೆ ಈ ಗ್ರಹಣವು ತುಲಾ ರಾಶಿಚಕ್ರದ ಸ್ಥಳೀಯರಿಗೆ ಸಕಾರಾತ್ಮಕ ಮತ್ತು ಜೀವನದಲ್ಲಿ ಸರಿಯಾದ ದಿಕ್ಕನ್ನು ಒದಗಿಸಲು ಸಹಾಯ ಮಾಡುತ್ತದೆ.
ಪರಿಹಾರ - ಗ್ರಹಣದ ಸಮಯದಲ್ಲಿ ಶುಕ್ರ ಮಂತ್ರವನ್ನು ಜಪಿಸುತ್ತ ಧ್ಯಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.
- ವೃಶ್ಚಿಕ ರಾಶಿ ಭವಿಷ್ಯ
ವೃಶ್ಚಿಕ ರಾಶಿಚಕ್ರದ ಶತಾಳೀಯರಿಗೆ ಈ ಚಂದ್ರ ಗ್ರಹಾವು ಅವರ ಎರಡನೇ ಮನೆಯಲ್ಲಿ ಸಂಭವಿಸಲಿದೆ. ಇದು ಅವರ ವೃತ್ತಿಪರ ಮತ್ತು ಆರ್ಥಿಕ ಜೀವನವನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರ್ಥಿಕ ಭಾಗದ ಬಗ್ಗೆ ಚಿಂತೆಕ್ಕೊಳಗಾಗಬಹುದು. ಏಕೆಂದರೆ ಈ ಸಮಯದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಆದ್ದರಿಂದ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಅವುಗಳ ಬಗ್ಗೆ ಗಮನ ಹರಿಸಲು ನಿಮಗೆ ಸಲಹೆ ನೀಡಲಾಗಿದೆ. ಇದರೊಂದಿಗೆ ಈ ಸಮಯದಲ್ಲಿ ನೀವು ನಿಮ್ಮ ಆದಾಯ ಮತ್ತು ವೆಚ್ಚದ ಮಧ್ಯೆ ಪ್ರಭಾವಿತ ಸಮತೋಲನವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ನಿಮ್ಮ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಶೀಘ್ರದಲ್ಲೇ ಒಬ್ಬ ಉತ್ತಮ ವೈದ್ಯರನ್ನು ಸಂಪರ್ಕಿಸಿ.
ಪರಿಹಾರ - ಗ್ರಹಣದ ಸಮಯದಲ್ಲಿ 108 ಬಾರಿ ಲಕ್ಷ್ಮಿ ಮಂತ್ರವನ್ನು ಪಠಿಸಿ, ಏಕೆಂದರೆ ಇದರಿಂದ ನೀವು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಫ್ಲಿಅಂಶಗಳನ್ನು ಪಡೆಯಲು ಸಹಾಯ ಸಿಗುತ್ತದೆ.
- ಧನು ರಾಶಿ ಭವಿಷ್ಯ
ಈ ಚಂದ್ರ ಗ್ರಹಣವು ಧನು ರಾಶಿಯಲ್ಲೇ ಸಂಭವಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ ಧನು ರಾಶಿಚಕ್ರದ ಸ್ಥಳೀಯರು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಎಂದು ಸಲಹೆ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ವಿಷಯಗಳನ್ನು ಸಹ ನಿರ್ಲಕ್ಷಿಸಬೇಡಿ ಏಕೆಂದರೆ ಇದು ಭವಿಷ್ಯದಲ್ಲಿ ದೊಡ್ಡ ಕಾಯಿಲೆಯ ರೂಪವನ್ನು ತೆಗೆದುಕೊಳ್ಳಬಹುದು. ಇದಲ್ಲದೆ ಈ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ, ಏಕೆಂದರೆ ಈ ಸಮಯದಲ್ಲಿ ಆರ್ಥಿಕ ವಿಷಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ನಿಮ್ಮ ಹಿಂದಿನ ಪಾವಲಿಗಳು, ಬಾಕಿ ಉತ್ಯಾದಿಗಳನ್ನು ಪಡೆಯುವ ವಿಸಹಾಯದಲ್ಲಿ ಸಹ ನೀವು ಅನಗತ್ಯ ವಿಳಂಬವನ್ನು ಎದುರಿಸಬೇಕಾಗಬಹುದು. ಇದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು ಮತ್ತು ಯೋಜನೆಗಳಲ್ಲಿ ವಿಳಂಬವಾಗಬಹುದು. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಮೊದಲಿನಿಂದಲೇ ತಯಾರಾಗಿರಿ, ನಿಮ್ಮ ತಂತ್ರಕ್ಕೆ ಅನುಗುಣವಾಗಿ ತಯಾರಾಗಿರಿ. ಒತ್ತಡ ಮತ್ತು ಚಿಂತೆಯನ್ನು ತೆಗೆದುಕೊಳ್ಳಬೇಡಿ.
ಪರಿಹಾರ - ಗ್ರಹಣದ ಸಮಯದಲ್ಲಿ ಓಂ ನಮೋ ಭಾಗವತೇ ವಾಸುದೇವಾಯ ಮಂತ್ರವನ್ನು ಜಪಿಸುತ್ತ ಧ್ಯಾನ ಮಾಡಿ.
- ಮಕರ ರಾಶಿ ಭವಿಷ್ಯ
ಈ ಚಂದ್ರ ಗ್ರಹಣವು ಮಕರ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ. ಇದರಿಂದ ನಿಮ್ಮ ವೈಯಕ್ತಿಕ ಜೀವನ ಪ್ರಭಾವಿತವಾಗುತ್ತದೆ ಎಂಬುದರ ಬಗ್ಗೆ ಇದು ಸೂಚಿಸುತ್ತಿದೆ. ಇದರೊಂದಿಗೆ ಜೀವನ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳು ಸಹ ಉಂಟಾಗಬಹುದು. ಅರೋಗ್ಯ ಮತ್ತು ಆರ್ಥಿಕ ದೃಷ್ಟಿಯಿಂದ ಕೂಡ ಈ ಗ್ರಹಣವು ಹೆಚ್ಚು ಅನುಕೂಲಕರವಾಗಿಲ ಎಂಡ್ ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ಒತ್ತಡ ಮತ್ತು ಗೊಂದಲವು ನಿಮ್ಮನ್ನು ಕಾಡಬಹುದು. ಆದಾಗ್ಯೂ, ವಿದೇಶದಲ್ಲಿ ಅವ್ಗಕಾಶಗಳನ್ನು ಹುಡುಕುತ್ತಿರುವ ಜನರಿಗೆ ಈ ಗ್ರಹಣವು ಉತ್ತಮವೆಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ಅವರು ಈ ವಿಷಯದ ಬಗ್ಗೆ ಕೆಲವು ಸಕಾರಾತ್ಮಕ ಸುದ್ಧಿಯನ್ನು ಪಡೆಯಬಹುದು.
ಪರಿಹಾರ - ಗ್ರಹಣದ ಸಮಯದಲ್ಲಿ ಶನಿ ಮಂತ್ರವನ್ನು ಪಠಿಸುವುದು ನಿಮಗೆ ಉತ್ತಮ.
- ಕುಂಭ ರಾಶಿ ಭವಿಷ್ಯ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಅವರ ಆದಾಯ ಮತ್ತು ಗೌರವ ಸ್ಥಾನಮಾನದಲ್ಲಿ ಹೆಚ್ಚಳದ ದೃಷ್ಟಿಯಿಂದ ಈ ಗ್ರಹಣವು ಸಾಕಷ್ಟು ಶುಭವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಅನೇಕ ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ನೆಟ್ವರ್ಕಿಂಗ್ ಮತ್ತು ಸಾಮಾಜಿಕ ಕೌಶಲ್ಯಗಳು ಹೊಸ ಗ್ರಾಹಕರು ಮತ್ತು ವ್ಯವಹಾರಗಳನ್ನು ಪಡೆಯುವಲ್ಲಿ ನಿಮಗೆ ಸಂಪೂರ್ಣ ಸಹಾಯ ಮಾಡುತ್ತಾರೆ. ಇದಲ್ಲದೆ ಹೊಸ ಪ್ರದೇಶಗಳ ವಿಸ್ತರಣೆ ಮತ್ತು ಪರಿಶೋಧನೆಗೆ ಸಹ ಇದು ಉತ್ತಮ ಸಮಯ. ಅಲ್ಲದೆ, ನಿಮ್ಮ ಸಾಲ ಮತ್ತು ಭಾದ್ಯತೆಗಳನ್ನು ಪಾವತಿಸಲು ಕೂಡ ಈ ಸಮಯವೂ ನಿಮಗೆ ಸಹಕಾರವೆಂದು ಸಾಬೀತುಪಡಿಸುತ್ತದೆ.
ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಭಗವಂತ ಗಣೇಶನ ಮಂತ್ರವನ್ನು 108 ಬಾರಿ ಪಠಿಸುವುದು ನಿಮಗೆ ಉತ್ತಮವಾಗಿರುತ್ತದೆ.
- ಮೀನಾ ರಾಶಿ ಭವಿಷ್ಯ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ಈ ಚಂದ್ರ ಗ್ರಹಣವು ಅವರ ಹತ್ತನೇ ಮನೆಯಲ್ಲಿ ಸಂಭವಿಸಲಿದೆ. ಇದು ಕೆಲಸ - ಆಧಾರಿತ ಮತ್ತು ನಿಮ್ಮ ವೃತ್ತಿ ಜೀವನದ ಗುರಿಗಳನ್ನು ಪರಿಶೀಲಿಸಲು ಉತ್ತಮ ಸಮಯ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತುಂಗದಲ್ಲಿರುತ್ತದೆ. ನಿಮ್ಮ ಹತ್ತನೇ ಮನೆಯಲ್ಲಾಗುತ್ತಿರುವ ಈ ಚಂದ್ರ ಗ್ರಹಣವು ನೀವು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ,ಮತ್ತು ಮುಂದುವರಿಯುವ ಸರಿಯಾದ ದಿಕ್ಕನ್ನು ಒದಗಿಸುತ್ತದೆ. ಇದರೊಂದಿಗೆ ನಿಮ್ಮ ಆಕಾಂಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಅರಿತುಕೊಳ್ಳಲು ಇದು ಸರಿಯಾದ ಸಮಯ ಆದ್ದರಿಂದ ನಿಮ್ಮ ಉತ್ತಮ ಕಾರ್ಯಕ್ಷಮತೆಯನ್ನು ನೀಡಿ ಮತ್ತು ನಿಮ್ಮ ಸಾಮರ್ಥ್ಯವನ್ನು ತೋರಿಸಲು ಸಿದ್ಧರಾಗಿರಿ.
ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಓಂ ನಮಃ ಶಿವಾಯ್ ಮಂತ್ರವನ್ನು ಜಪಿಸುತ್ತ ಧ್ಯಾನ ಮಾಡಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025