ಕುಟುಂಬ ರಾಶಿ ಭವಿಷ್ಯ 2020 - Family Horoscope 2020 in Kannada

ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನವನ್ನು ನವೀಕರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾನೆ ಮತ್ತು ತನ್ನ ಭವಿಷ್ಯದ ಬಗ್ಗೆಯೂ ಚಿಂತೆ ಮಾಡುತ್ತಾನೆ. ಅನೇಕ ಬಾರಿ ಶ್ರಮಿಸಿದರೂ, ಫಲಿತಾಂಶಗಳನ್ನು ಸಾಧಿಸಲಾಗುವುದಿಲ್ಲ, ಇದು ವ್ಯಕ್ತಿಯನ್ನು ನಿರಾಶೆಗೊಳಿಸುತ್ತದೆ. ಪ್ರತಿಯೊಬ್ಬ ಮನುಷ್ಯನು ಮುಂದಿನ ಸಮಯ ಮತ್ತು ಜೀವನದ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗಲು ಇದು ಕಾರಣವಾಗಿದೆ. ಜ್ಯೋತಿಷ್ಯವು ಅವನ ಕುತೂಹಲವನ್ನು ಶಾಂತಗೊಳಿಸುವ ಮತ್ತು ಭವಿಷ್ಯದ ಬಗ್ಗೆ ಭರವಸೆಯಿಡುವ ಕೆಲಸವನ್ನು ಮಾಡುತ್ತದೆ.

ಈ ರಾಶಿ ಭವಿಷ್ಯ 2020 ವೈದಿಕ ಜ್ಯೋತಿಷ್ಯದ ತತ್ವದ ಮೇಲೆ ಆಧಾರಿತವಾಗಿದೆ. ಇದರಲ್ಲಿ ನೀವು ಜೀವನದ ಎಲ್ಲಾ ಅಂಶಗಳ ಬಗ್ಗೆ ವಿವರವಾಗಿ ತಿಳಿಯಲಿದ್ದೀರಿ ಅಂದರೆ ಗಮನಾರ್ಹವಾಗಿ ನಿಮ್ಮ ಕೌಟುಂಬಿಕ ಜೀವನ ಹೇಗಿರುತ್ತದೆ ಎಂದು ತಿಳಿಯಬಹುದು. ಈ ರಾಶಿ ಭವಿಷ್ಯವು ನಿಮ್ಮ ಜೀವನದ ಸಾಮಾನ್ಯ ಮಾದರಿಯನ್ನು ತಿಳಿಸುತ್ತದೆ. ನಿಮ್ಮ ಜೀವನದ ವಿವಿಧ ಅಂಶಗಳನ್ನು ತಿಳಿಯಲು ರಾಶಿ ಭವಿಷ್ಯ 2020 ಓದಿ. ರಾಶಿ ಭವಿಷ್ಯ 2020 ರ ಮೂಲಕ ನೀವು ಮುಂಚಿತವಾಗಿ ಭವಿಷ್ಯವನ್ನು ಯೋಜಿಸಲು ಸಹಾಯ ಮಾಡುತ್ತದೆ. ಮುಂಚಿತವಾಗಿಯೇ ನಿಮ್ಮ ಕುಟುಂಬ ಜೀವನ ಹೇಗಿರುತ್ತದೆ ಎಂದು ತಿಳಿದ ನಂತರ ಜೀವನದಲ್ಲಿ ಮುಂಬರುವ ಎಲ್ಲವನ್ನು ಎದುರಿಸಲು ಸಿದ್ಧರಾಗಬಹುದು ಮತ್ತು ಪರಿಹಾರಗಳನ್ನು ಸಹ ಪಡೆಯಬಹುದು. ಈ ಜಾತಕದ ಮೂಲಕ ನೀವು ಕುಟುಂಬದಲ್ಲಿನ ಎಲ್ಲಾ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಹೇಗಿರುತ್ತದೆ ಮತ್ತು ಅದನ್ನು ಸುಧಾರಿಸಲು ಏನು ಮಾಡಬೇಕೆಂದು ಸಹ ತಿಳಿಯಬಹುದು. ಇದಲ್ಲದೆ ನಿಮ್ಮ ಕುಟುಂಬ ಜೀವನವು ಹೊಸ ಕ್ಷಣಗಳನ್ನು ನಿಮ್ಮ ಜೀವನದಲ್ಲಿ ಯಾವಾಗ ತರಲಿದೆ ಎಂದು ಈ ರಾಶಿ ಭವಿಷ್ಯದ ಮೂಲಕ ತಿಳಿಯಬಹುದು. ಒಂದು ನಿರ್ದಿಷ್ಟ ವರ್ಷದಲ್ಲಿ ಯಾವ ಗ್ರಹಗಳು ನಿಮ್ಮ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಆ ಪರಿಣಾಮವು ಅನುಕೂಲಕರವಾಗಿದೆಯೇ ಅಥವಾ ಪ್ರತಿಕೂಲವಾಗಿದೆಯೇ ಎಂದು ತಿಳಿಯುವುದು ಬಹಳ ಮುಖ್ಯ. ಈ ರಾಶಿ ಭವಿಷ್ಯ 2020 ರ ಸಹಾಯದಿಂದ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜನರ ಕುಟುಂಬ ಜೀವನದಲ್ಲಿ ಯಾವ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ , ಈ ಮಾಹಿತಿಯನ್ನು ನಿಮಗೆ ಪ್ರಸ್ತುತಪಡಿಸಲಿದೆ. ಆದ್ದರಿಂದ 2020 ರಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾದ ರಾಶಿಚಕ್ರಗಳು ಯಾವುವು ಮತ್ತು ಜೀವನದಲ್ಲಿ ಮುಂದುವರಿಯಲು ಅವಕಾಶವನ್ನು ಪಡೆಯುವ ರಾಶಿಚಕ್ರಗಳು ಯಾವುವು ಎಂದು ನಿಮಗೆ ತಿಳಿಯುತ್ತದೆ.

ಈ ರಾಶಿ ಭವಿಷ್ಯ 2020 ರ ಮೂಲಕ ನೀವು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ: ಪೋಷಕರೊಂದಿಗಿನ ನಿಮ್ಮ ಸಂಬಂಧವು ಹೇಗಿರುತ್ತದೆ ಮತ್ತು ಅವರ ಆರೋಗ್ಯ ಯಾವ ಸಮಯದಲ್ಲಿ ಹೇಗಿರುತ್ತದೆ ಎಂದು ಮುನ್ನೋಟವನ್ನು ಪಡೆಯಬಹುದು. ಇದಲ್ಲದೆ ಪೋಷಕರ ಆರ್ಥಿಕ ಜೀವನ ನಿಮ್ಮ ಕುಟುಂಬ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದು. ಒಡಹುಟ್ಟಿದವರೊಂದಿಗಿನ ಸಂಬಂಧದ ಬಗ್ಗೆ ತಿಳಿಯಬಹುದು. ಅವರು ಹಿರಿಯವರಾಗಿರಲಿ ಅಥವಾ ಕಿರಿಯವರಾಗಿರಲಿ, ನಿಮ್ಮೊಂದಿಗೆ ಅವರ ವ್ಯವಹಾರ ಹೇಗಿರುತ್ತದೆ ಮತ್ತು ನೀವು ಕೂಡ ಅವರೊಂದಿಗೆ ಹೇಗೆ ವರ್ತಿಸಬೇಕು ಎಂದು ತಿಳಿಯಬಹುದು. ಯಾವ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ಸಂಭವಿಸುತ್ತವೆ? ಯಾವ ಸಮಯದಲ್ಲಿ ನೀವು ಸ್ಥಳಾಂತರ ಮಾಡಬಹುದು? ಯಾವ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಹೊಸ ಅತಿಥಿಗಳು ಬರುತ್ತಾರೆ? ಯಾವ ಸಮಯದಲ್ಲಿ ವಿಶೇಷ ಲಾಭವನ್ನು ಪಡೆಯುತ್ತೀರಿ? ಎಂಬುದನ್ನು ಸಹ ಈ ರಾಶಿ ಭವಿಷ್ಯ 2020 ರಲ್ಲಿ ತಿಳಿಯಬಹುದು. ಇದಲ್ಲದೆ ನಿಮ್ಮ ನೆರೆಹೊರೆಯರೊಂದಿಗೆ ಯಾವ ಸಮಯದಲ್ಲಿ ಸಂಬಂಧವು ಹದಗೆಡುವ ಸಾಧ್ಯತೆ ಇರುತ್ತದೆ ಅಥವಾ ಅವರಿಂದ ನಿಮ್ಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಪೋಷಕರಿಂದ, ಸಹೋದರ ಸಹೋದರಿಯರಿಂದ, ಜೇವನ ಸಂಗಾತಿಯಿಂದ ಅಥವಾ ಸ್ನೇಹಿತರಿಂದ ಯಾವ ಸಮಯದಲ್ಲಿ ಯಾವ ರೀತಿಯ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ ಎಂಬುದನ್ನು ಸಹ ತಿಳಿಯಬಹುದು. ಈ ಎಲ್ಲಾ ಮುನ್ಸೂಚನೆಗಳಿಂದ ನೀವು ನಿಮ್ಮ ಕುಟುಂಬ ಜೀವನವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ.

2020 ರ ಜಾತಕವು 12 ನಕ್ಷತ್ರ ಚಿಹ್ನೆಗಳಿಗೆ ವರ್ಷವು ಹೇಗೆ ಹೊರಹೊಮ್ಮುತ್ತದೆ ಎಂಬುದರ ಕುರಿತು ಆಳವಾದ ಒಳನೋಟವನ್ನು ನೀಡುತ್ತದೆ. 2019 ರಲ್ಲಿ ನೀವು ಅದೃಷ್ಟಶಾಲಿಯಾಗಿಲ್ಲದಿದ್ದರೆ, ನಿಮಗೆ 2020 ಕೆಟ್ಟದ್ದಾಗಿರುತ್ತದೆ ಎಂಬುದು ಅನಿವಾರ್ಯವಲ್ಲ. ಒಬ್ಬರ ಜೀವನದಲ್ಲಿ ನಿಮ್ಮ ಜೀವಿತಾವಧಿಯಲ್ಲಿ ನಿಮ್ಮ ನಕ್ಷತ್ರಗಳು ಮತ್ತು ಗ್ರಹಗಳು ನಿಯಂತ್ರಿಸುತ್ತವೆ.

ಜಾತಕ 2020 ಮುನ್ಸೂಚನೆಗಳು ಮುಂಬರುವ ಹೊಸ ವರ್ಷದ ಶುಭ ಮತ್ತು ಕೆಟ್ಟ ಘಟನೆಗಳ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತವೆ. ಇದು ಭವಿಷ್ಯಕ್ಕಾಗಿ ಸಿದ್ಧರಾಗಿರಲು ನಿಮ್ಮನ್ನು ಸಿದ್ಧಪಡಿಸುತ್ತದೆ ಮತ್ತು ಅದೇ ಸಮಯದಲ್ಲಿ, ನಿಮ್ಮ ದಾರಿಯಲ್ಲಿ ನಿಲ್ಲುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿರುತ್ತದೆ.

ಮೇಷ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Aries Family Horoscope 2020 Kannadaಮೇಷ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಕೌಟುಂಬಿಕ ಜೇವನವು ಏರಿಳಿತಗಳಿಂದ ತುಂಬಿರಬಹುದು. ವಿಶೇಷವಾಗಿ ನಿಮ್ಮ ತಂದೆಯು ಅರೋಗ್ಯ ಸಮಯೆಗಳನ್ನು ಎದುರಿಸಬೇಕಾಗುತ್ತದೆ. ಅವರ ಬಗ್ಗೆ ಕಾಳಜಿವಹಿಸುವುದು ಅಗತ್ಯವಾಗಲಿದೆ. ಈ ವರ್ಷದ ಆರಂಭದಲ್ಲಿ ನೀವು ನಿಮ್ಮ ಉತ್ತಮ ಕೌಟುಂಬಿಕ ಜೀವನವನ್ನು ಆನಂದಿಸುವಿರಿ ಮತ್ತು ಸುಖ ಶಾಂತಿಯುತವಾಗಿ ಜೀವನವನ್ನು ಕಳೆಯುವಿರಿ.

ಜನವರಿಯ ನಂತರ ನೀವು ಸ್ಥಳವನ್ನು ಬದಲಾಯಿಸಬಹುದು ಅಂದರೆ ನೀವು ನಿಮ್ಮ ಪ್ರಸ್ತುತ ಸ್ಥಳವನ್ನು ಬಿಟ್ಟು ಎಲ್ಲ್ಲಾದರೂ ದೂರ ಹೋಗಿ ವಾಸಿಸುವ ಸಾಧ್ಯತೆ ಕಂಡುಬರುತ್ತಿದೆ. ನೀವು ಸಂಪೂರ್ಣ ವರ್ಷ ಬಹಳಷ್ಟು ಶ್ರಮಿಸುತ್ತಿರಿ ಈ ಕಾರಣದಿಂದ ಕುಟುಂಬಕ್ಕೆ ಕಡಿಮೆ ಸಮಯ ನೀಡಲಾಗುತ್ತದೆ ಮತ್ತು ಕುಟುಂಬವು ನಿಮಗೆ ದೂರು ನೀಡುತ್ತದೆ

ಏಪ್ರಿಲ್ ರಿಂದ ಆಗಸ್ಟ್ ಮಧ್ಯೆ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಶುಭ ಕಾರ್ಯ ಸಂಭವಿಸಬಹುದು. ಈ ಕಾರಣದಿಂದ ಕುಟುಂಬದಲ್ಲಿ ಹಬ್ಬದಂತರ ವಾತಾವರದ ಇರುತ್ತದೆ ಮತ್ತು ಎಲ್ಲಾರು ಸಂತೋಷವಾಗಿರುತ್ತಾರೆ. ಈ ಸಮಯದಲ್ಲಿ ಮದುವೆ ಅಥವಾ ಮಗುವಿನ ಜನನದಂತಹ ಯಾವುದೇ ಮಾಂಗಳಿಕ ಕಾರ್ಯಕ್ರಮ ಮನೆಯಲ್ಲಿ ಮಾಡಲು ಸಹ ಸಾಧ್ಯವಿದೆ.

ಏಪ್ರಿಲ್ ಇಂದ ಜೂನ್ ಮತ್ತು ಅದರ ನಂತರ ಡಿಸೆಂಬರ್ ತಿಂಗಳಲ್ಲಿ ನಿಮ್ಮ ತಾಯಿಗೆ ಆರೋಗ್ಯದ ಸಮಸ್ಯೆಗಳು ತೊಂದರೆ ನೀಡಬಹುದು. ವಿಶೇಷವಾಗಿ ಜೂನ್ ತಿಂಗಳು ನಿಮ್ಮ ತಂದೆ-ತಾಯಿ ಇಬ್ಬರಿಗೂ ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ. ಆದರೆ ಈ ತಿಂಗಳಲ್ಲಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ನೀವು ವಿದೇಶದಲ್ಲಿ ವಾಸಿಸಲು ಬಯಸುತ್ತಿದ್ದರೆ, ನಿಮ್ಮ ಜಾತಕದಲ್ಲಿ ಇದರ ಬಗ್ಗೆ ಯೋಗವಿದೆ ಮತ್ತು ಅನುಕೂಲಕರ ಸಮಯ ಉಂಟಾಗುತ್ತಿದೆ. ಈ ವರ್ಷ ಈ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬಹುದು. ಇದಕ್ಕಾಗಿ ವಿಶೇಷವಾದ ಸಮಯ ಜೂಲೈ ಇಂದ ನವೆಂಬರ್ ನಡುವೆ ಇರುತ್ತದೆ. ಆದರೆ ಈ ಸಮಯದಲ್ಲಿ ನೀವು ಪ್ರಯತ್ನಿಸಿದರೆ, ನೀವು ವಿಶೇಷ ಲಾಭವನ್ನು ಪಡೆಯಬಹುದು. ವಿದೇಶದಲ್ಲಿ ನೆಲೆಸುವ ನಿಮ್ಮ ಕನಸನ್ನು ಈಡೇರಿಸಲು ನಿಮಗೆ ಸಾಧ್ಯವಾಗುತ್ತದೆ.

ಸ್ವಂತ ಮನೆಯನ್ನು ತೆಗೆದುಕೊಳ್ಳಲು ಬಯಸುತ್ತಿರುವ ಜನರು ಇನ್ನಷ್ಟು ಕಾಯಬೇಕಾಗುತ್ತದೆ ಮತ್ತು ಇದಕ್ಕಾಗಿ ಸಮಯ ಅನುಕೂಲಕರವಾಗಿ ಕಂಡುಬರುತ್ತಿಲ್ಲ. ಆದಾಗ್ಯೂ, ನಿಮ್ಮಲ್ಲಿ ಕೆಲವರು ಏಪ್ರಿಲ್ ತಿಂಗಳಲ್ಲಿ ತಮ್ಮ ಸ್ವಂತ ಮಣಿಯನ್ನು ಖರೀದಿಸುವಲ್ಲಿ ಯಶಸ್ಸನ್ನು ಪಡೆಯಬಹುದು. ವಿದೇಶದಿಂದ ವ್ಯಾಪಾರ ಮಾಡುವ ಜನರು ಈ ವರ್ಷ ದೇಶದ ಹೊರಗೆ ತಮ್ಮ ಮನೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಮೇಷ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮೇಷ ರಾಶಿ ಭವಿಷ್ಯ

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Taurus Family Horoscope 2020 Kannadaವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಕೌಟುಂಬಿಕ ಜೇವನ ಹೆಚ್ಚು ಅನುಕೂಲವಾಗಿ ಉಳಿಯುವ ಸಾಧ್ಯತೆ ಇಲ್ಲ. ಎರಡನೇ ಮನೆಯಲ್ಲಿ ಇರುವ ರಾಹು ನಿಮ್ಮ ಕೌಟುಂಬಿಕ ಜೀವನಕ್ಕೆ ಹೆಚ್ಚು ಅನುಕೂಲಕರ ಎಂದು ಹೇಳಲಾಗುವುದಿಲ್ಲ. ಇದರ ಉಪಸ್ಥಿತಿಯಿಂದ ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ ಮತ್ತು ಅಸಹಿಷ್ಣು ಮನೋಭಾವವನ್ನು ಹೊಂದಿರುವುದರಿಂದ ಕುಟುಂಬದಲ್ಲಿ ಅಸಮಾಧಾನ ಉಂಟಾಗಬಹುದು. ಕುಟುಂಬದ ಕೆಲವು ಸದಸ್ಯರ ವರ್ತನೆಯು ಸರಿಯಾಗಿರುವುದಿಲ್ಲ.

ನೀವು ಹಣದ ಹಿಂದೆ ಹೆಚ್ಚು ಓಡಿದರೆ ಕುಟುಂಬದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತದೆ ಮತ್ತು ನೀವು ಕೌಟುಂಬಿಕ ತೊಂದರೆಗಳನ್ನು ಎದುರಿಸಿದರೆ ಹಣಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು. ಆದರೆ ನೀವು ನಿಮ್ಮ ವ್ಯಾಪಾರ ಅಥವಾ ಯಾವುದೇ ಇತರ ಕೆಲಸಗಳಿಂದಾಗಿ ಕುಟುಂಬದಿಂದ ದೂರವಿದ್ದರೆ ಬಹಳಷ್ಟು ಮಟ್ಟಿಗೆ ನೀವು ಈ ತೊಂದರೆಗಳಿಂದ ಮುಕ್ತರಾಗಬಹುದು. ನಿಮ್ಮ ಮಾತಿನ ಶಕ್ತಿಯಿಂದ ಜನರನ್ನು ನಿಮ್ಮದಾಗಿಸುವಿರಿ ಮತ್ತು ಅವರ ಮನಸ್ಸಿನ ಕೊಳೆಯನ್ನು ತೆರೆವುಗೊಳಿಸಿ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬಹುದು.

ಸೆಪ್ಟೆಂಬರ್ ಮಧ್ಯದ ನಂತರ ರಾಹು ವೃಷಭ ರಾಶಿಚಕ್ರದಲ್ಲಿ ಪ್ರವೇಶಿಸಿದಾಗ, ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ ಮತ್ತು ಪರಸ್ಪರ ಪ್ರೀತಿ ಮತ್ತು ಸಹೋದರತ್ವದ ಭಾವನೆ ರೂಪುಗೊಳ್ಳುತ್ತದೆ. ನಿಮ್ಮ ಕುಟುಂಬದ ಸಾಮಾಜಿಕ ಪರಿಸ್ಥಿತಿ ಬಲವಾಗಿರುತ್ತದೆ ಮತ್ತು ಪ್ರತಿಷ್ಠೆ ಸಿಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಜನರೊಂದಿಗೆ ಸೇರಿ ಸಮಾಜದ ಒಳ್ಳೆಯದಕ್ಕಾಗಿ ಯಾವುದೇ ಕೆಲಸವನ್ನು ಮಾಡಬಹುದು. ಇದರಿಂದ ನಿಮ್ಮ ಗೌರವದಲ್ಲಿ ಅತ್ಯಂತ ಹೆಚ್ಚಳವಾಗುತ್ತದೆ.

ಅಕ್ಟೋಬರ್ ನಡುವೆಯಿಂದ ನವೆಂಬರ್ ಸಮಯ ನಿಮ್ಮ ತಾಯಿಯ ಆರೋಗ್ಯಕ್ಕೆ ವಿರುದ್ಧವಾಗಿ ಉಳಿಯಬಹುದು. ಈ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಸಾಧ್ಯವಾದರೆ ವೈದ್ಯಕೀಯ ಸಲಹೆಯನ್ನು ಸಹ ಪಡೆಯಿರಿ. ನೀವು ಕಾಲ ಕಾಲಕ್ಕೆ ಸಹೋದರ-ಸಹೋದರಿಯರ ಬೆಂಬಲವನ್ನು ಪಡೆಯುತ್ತಿರುತ್ತೀರಿ. ಮೇ ಮಧ್ಯದಿಂದ ಸೆಪ್ಟೆಂಬರ್ ಕೊನೆಯ ವರೆಗೆ ತಂದೆಯ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು. ಆದಾಗ್ಯೂ ಈ ಸಮಯದಲ್ಲಿ ಯಾವುದೇ ದೊಡ್ಡ ಸಮಸ್ಯೆ ಕಂಡುಬರುತ್ತಿಲ್ಲ.

ನಿಮ್ಮ ಕುಟುಂಬ ಸದಸ್ಯರ ಆರೋಗ್ಯವನ್ನು ವಿಶೇಷವಾಗಿ ಮೇ, ಜೂನ್ ಮತ್ತು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ನೀವು ನೋಡಿಕೊಳ್ಳಬೇಕು. ಕೌಟುಂಬಿಕ ವಿವಾದ ನಡೆಯುತ್ತಿದ್ದರೆ, ಅದು ನವೆಂಬರ್-ಡಿಸೆಂಬರ್‌ನಲ್ಲಿ ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಆದಾಗ್ಯೂ, ಯಾವುದೇ ವಿವಾದಗಳು ಉಲ್ಬಣಗೊಳ್ಳದಂತೆ ನೀವು ಪ್ರಯತ್ನಿಸಬೇಕು. ಕಾಲಕಾಲಕ್ಕೆ, ಪೋಷಕರು ತಮ್ಮ ಆಶೀರ್ವಾದದಿಂದ ನಿಮ್ಮನ್ನು ಪೂರೈಸುತ್ತಾರೆ ಮತ್ತು ಕುಟುಂಬ ಜೀವನವು ಸುಗಮವಾಗಿ ಮುಂದುವರಿಯುತ್ತದೆ.

ವೃಷಭ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ವೃಷಭ ರಾಶಿ ಭವಿಷ್ಯ

ಮಿಥುನ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Gemini Family Horoscope 2020 Kannadaಮಿಥುನ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ಕಟುಂಬಿಕ ಜೇವನಕ್ಕಾಗಿ ಸಾಮಾನ್ಯವಾಗಿ ಅನುಕೂಲಕರವಾಗಿರುತ್ತದೆ. ವರ್ಷದ ಆರಂಭದಲ್ಲಿ ಕುಟುಂಬ ಜೀವನಕ್ಕಾಗಿ ಬಹಳಷ್ಟು ಉತ್ತಮವಾಗಲಿದೆ ಮತ್ತು ಈ ಸಮಯದಲ್ಲಿ ಕುಟುಂಬ ಸದಸ್ಯರ ನಡುವೆ ಉತ್ತಮ ಸಾಮರಸ್ಯವನ್ನು ನೋಡಲಾಗುತ್ತದೆ. ಇದರ ಪರಿಣಾಮವಾಗಿ ನೀವು ಪ್ರತಿಯೊಂದು ಕೆಲಸದಲ್ಲಿ ನಿಮ್ಮ ಮನಸ್ಪೂರ್ತಿಯಾಗಿ ಭಾಗವಹಿಸಲು ಸಹ್ಯವಾಗುತ್ತದೆ ಮತ್ತು ಕುಟುಂಬದ ಸಹಕಾರದಿಂದ ಯಶಸ್ಸನ್ನು ಪಡೆಯುತ್ತೀರಿ.

ಏಪ್ರಿಲ್ ಇಂದ ಜೂಲೈ ಮಧ್ಯೆ ಗುರುವಿನ ಸಾಗಣೆ ನಿಮ್ಮ ಎಂಟನೇ ಮನೆಯಲ್ಲಿ ಇರುತ್ತದೆ, ಅಲ್ಲಿ ಮೊದಲಿನಿಂದಲೇ ಶನಿದೇವ ಕುಳಿತಿದ್ದಾರೆ, ಈ ಕಾರಣದಿಂದ ನಿಮ್ಮ ಕುಟುಂಬದಲ್ಲಿ ಶಾಂತಿ ಇರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ಹಣದ ಬಗ್ಗೆ ಕೆಲವು ತೊಂದರೆಗಳನ್ನು ಹೊಂದಿರಬಹುದು. ಈ ನಡುವೆ ಕುಟುಂಬದ ಸದಸ್ಯರ ನಡುವೆ ಯಾವುದೇ ವಿಷಯದಿಂದಾಗಿ ತಪ್ಪುತಿಳುವಳಿಕೆಗಳು ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಕೆಲವು ಅವಾಂತರಗಳು ಸಹ ಸಂಭವಿಸಬಹುದು. ಆದಾಗ್ಯೂ ಇದರ ಹೊರೆತಾಗಿಯೂ ಜೂಲೈ ವರೆಗೆ ಕುಟುಂಬದ ವಾತಾವರಣವುಬಹಳಷ್ಟು ಉತ್ತಮವಾಗಿರುತ್ತದೆ. ಮತ್ತು ನೀವು ನೆಮ್ಮದಿಯನ್ನು ಪಡೆಯುತ್ತೀರಿ.

ಜುಲೈನಿಂದ, ಕುಟುಂಬ ಸಂಬಂಧದಲ್ಲಿ ಕೆಲವು ಸಮಸ್ಯೆಗಳಿರಬಹುದು ಮತ್ತು ಕೆಲವು ಸಂದರ್ಭಗಳು ಉದ್ಭವಿಸುತ್ತವೆ, ಇದು ಕುಟುಂಬ ಸದಸ್ಯರ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಈ ಮುಂಬರುವ ಸನ್ನಿವೇಶಗಳನ್ನು ಎದುರಿಸಲು ನೀವು ಮೊದಲೇ ತಯಾರಿ ಮಾಡುವುದು ಅಗತ್ಯವಾಗಿರುತ್ತದೆ ಮತ್ತು ಈ ಸಂದರ್ಭಗಳ ಮುಂದೆ ನಿಮ್ಮನ್ನು ಬಿಟ್ಟುಕೊಡಲು ನಿಮ್ಮನ್ನು ಅನುಮತಿಸಬೇಡಿ. ಕುಟುಂಬ ಜೀವನವನ್ನು ಉತ್ತಮಗೊಳಿಸಲು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಿ.

ಮಿಥುನ ರಾಶಿ ಭವಿಷ್ಯ 2020 (Mithun Rashi 2020) ಪ್ರಕಾರ ಏಪ್ರಿಲ್, ಆಗಸ್ಟ್ ಮತ್ತು ನವೆಂಬರ್ ತಿಂಗಳುಗಳಲ್ಲಿ ನಿಮ್ಮ ತಾಯಿಯ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಅಗತ್ಯವಿದ್ದರೆ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ನಿಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸಬೇಕು ಮತ್ತು ಜನವರಿಯ ನಂತರ ಈ ವರ್ಷದುದ್ದಕ್ಕೂ ಅವರ ಆರೋಗ್ಯದ ಮೇಲೆ ಕಣ್ಣಿಡಿ, ಏಕೆಂದರೆ ಈ ವರ್ಷ ಅವರ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುವುದಿಲ್ಲ.

ಕಾಲಕಾಲಕ್ಕೆ, ನಿಮ್ಮ ಒಡಹುಟ್ಟಿದವರ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತು ಅವರ ಸಹಾಯದಿಂದ ನಿಮ್ಮ ಕುಟುಂಬ ಜೀವನವನ್ನು ಸುಗಮವಾಗಿ ನಡೆಸಲು ನಿಮಗೆ ಸಾಧ್ಯವಾಗುತ್ತದೆ. ಜನವರಿ ಮಧ್ಯದಿಂದ ಫೆಬ್ರವರಿ ಮಧ್ಯದವರೆಗೆ ಅವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ ಮತ್ತು ಈ ಅವಧಿಯಲ್ಲಿ ಅವರಿಗೆ ಆರೋಗ್ಯ ಸಮಸ್ಯೆಗಳಿರಬಹುದು ಎಂದು ನೋಡಿಕೊಳ್ಳಿ. ಇದಲ್ಲದೆ, ಯಾವುದೇ ದೊಡ್ಡ ಸಮಸ್ಯೆಗಳಿಲ್ಲ ಮತ್ತು ನೀವು ಸಾಮಾನ್ಯ ಕುಟುಂಬ ಜೀವನವನ್ನು ನಿರೀಕ್ಷಿಸಬಹುದು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ, ನೀವು ಕುಟುಂಬಕ್ಕಾಗಿ ಹೊಸ ಮನೆಯನ್ನು ಖರೀದಿಸಬಹುದು ಅಥವಾ ನಿಮ್ಮ ಹಳೆಯ ಮನೆಯನ್ನು ಸುಂದರವಾಗಿ ಮತ್ತು ಕ್ರಮಬದ್ಧವಾಗಿ ಮಾಡಬಹುದು. ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ, ನಿಮ್ಮ ಮನೆಯ ಅಲಂಕಾರಕ್ಕಾಗಿ ನೀವು ಖರ್ಚು ಮಾಡುತ್ತೀರಿ. ಮಾರ್ಚ್ ಮಧ್ಯದಿಂದ ಮೇ ನಡುವೆ, ನೀವು ಇದ್ದಕ್ಕಿದ್ದಂತೆ ಯಾವುದೇ ರಿಯಲ್ ಎಸ್ಟೇಟ್ ಪಡೆಯಬಹುದು. ನೀವು ಪ್ರಾಯೋಗಿಕ ವ್ಯಕ್ತಿ, ಆದ್ದರಿಂದ ಕುಟುಂಬದ ಸಾಮರಸ್ಯವನ್ನು ಉಳಿಸಿಕೊಳ್ಳಲು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಿ.

ಮಿಥುನ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮಿಥುನ ರಾಶಿ ಭವಿಷ್ಯ

ಕರ್ಕ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Cancer Family Horoscope 2020 Kannadaಕರ್ಕ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬ ಜೀವನಕ್ಕೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನೀವು ಅನೇಕ ಹುಳಿ ಸಿಹಿ ಅನುಭವಗಳನ್ನು ಹೊಂದಿರುತ್ತೀರಿ. ಶನಿಯ ಸ್ಥಾನವು ನಿಮ್ಮನ್ನು ನಿಮ್ಮ ಕುಟುಂಬದಿಂದ ದೂರ ಸಹ ಮಾಡಬಹುದು ಮತ್ತು ಕೌಟುಂಬಿಕ ಜೀವನದಲ್ಲಿ ಒತ್ತಡ ಮತ್ತು ಏರಿಳಿತವನ್ನು ತರುತ್ತದೆ. ಇದರ ಪರಿಣಾಮದಿಂದಾಗಿ ನಿಮ್ಮ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಎಂದಿಗೂ ಕಾಳಜಿ ವಹಿಸಿ. ನೀವು ನಿಮ್ಮ ಕುಟುಂಬದ ವಾತಾವರಣದಲ್ಲಿ ಹೆಚ್ಚು ಉತ್ತಮವಾಗಿ ಅನುಭವಿಸುವುದಿಲ್ಲ ಮತ್ತು ನೀವು ಶಾಂತಿಯ ಕೊರತೆಯನ್ನು ಅನುಭವಿಸುವಿರಿ. ಸೆಪ್ಟೆಂಬರ್ ಕೊನೆಯ ವರೆಗೂ ರಾಹುವಿನ ಹನ್ನೆರಡನೇ ಮನೆಯಲ್ಲಿ ಉಪಸ್ಥಿತಿ ನಿಮ್ಮನ್ನು ಮಾನಸಿಕವಾಗಿ ಚಿಂತೆಗೊಳಿಸುತ್ತದೆ ಮತ್ತು ಮನೆಯಿಂದ ದೂರ ಸಹ ಮಾಡಬಹುದು. ಈ ಕಾರಣದಿಂದಾಗಿ ನೀವು ನಿಮ್ಮ ಕುಟುಂಬ ಜೀವನದ ಹೆಚ್ಚಿನ ಸಂತೋಷವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.

ಕರ್ಕ ರಾಶಿ ಭವಿಷ್ಯ 2020 (Kark Rashi 2020) ರ ಪ್ರಕಾರ ಏಪ್ರಿಲ್ ಮಧ್ಯದಿಂದ ಜೂನ್ ವರೆಗೆ ಮತ್ತು ನಂತರ ನವೆಂಬರ್ ಮಧ್ಯದಿಂದ ವರ್ಷದ ಅಂತ್ಯದವರೆಗೆ ಏಳನೇ ಮನೆಯಲ್ಲಿ ಗುರು ಮತ್ತು ಶನಿಯ ಸಂಯೋಜಿತ ಸಾಗಣೆಯಿಂದಾಗಿ, ನಿಮ್ಮ ಮದುವೆಯ ಯೋಗವು ರೂಪುಗೊಳ್ಳುತ್ತದೆ ಮತ್ತು ನೀವು ಇದಕ್ಕೆ ಪ್ರಯತ್ನಿಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು ಮತ್ತು ನಿಮ್ಮ ಮದುವೆಯಾಗಬಹುದು. ಜೂಲೈ ಮಧ್ಯದಿಂದ ನವೆಂಬರ್ ವರೆಗಿನ ಸಮಯವೂ ಸ್ವಲ್ಪ ಪ್ರತಿಕೂಲವಾಗಿ ಉಳಿಯಬಹುದು, ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡಿ ಮತ್ತು ಅವರ ಅಗತ್ಯಗಳ ಬಗ್ಗೆ ಮಾತನಾಡಿದರೆ, ಅದು ಆರ್ಥಿಕವಾಗಿರಲಿ, ಸಾಮಾಜಿಕವಾಗಿರಲಿ ಅಥವಾ ಮನಸಿಕವಾಗಿರಲಿ, ಅವರನ್ನು ಕೇಳಿ ಮತ್ತು ಅರ್ಥಮಾಡಿಕೊಳ್ಳಿ. ಕುಟುಂಬದಲ್ಲಿ ಸಾಮರಸ್ಯವನ್ನು ಸ್ಥಾಪಿಸಲು ಪ್ರಯತ್ನಿಸಿ.

ಕರ್ಕ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಕರ್ಕ ರಾಶಿ ಭವಿಷ್ಯ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Leo Family Horoscope 2020 Kannadaಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬ ಜೀವನಕ್ಕೆ ಕೆಲವು ಸವಾಲುಗಳನ್ನು ತರುವ ಸಾಧ್ಯತೆ ಇದೆ. ವರ್ಷದ ಆರಂಭವು ಉತ್ತಮವಾಗಿರುತ್ತದೆ ಮತ್ತು ಕುರಂಭದಲ್ಲಿ ಹೊಸ ಸದಸ್ಯರೂ ಬರುವ ಸಾಧ್ಯತೆ ಇದೆ. ನೀವು ನಿಮ್ಮ ಸಹೋದರ-ಸಹೋದರಿಯರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ ಮತ್ತು ಸಮಾಜದಲ್ಲೋ ನಿಮ್ಮ ಮತ್ತು ನಿಮ್ಮ ಕುಟುಂಬದ ಗೌರವ ಹೆಚ್ಚಾಗುತ್ತದೆ. ನೀವು ನಿಮ್ಮ ಕುಟುಂಬದ ಅಗತ್ಯಗಳ ಬಗ್ಗೆ ಗಮನ ಹರಿಸಿ ಕೆಲಸ ಮಾಡಬೇಕು. ಇದು ಕೆಲವೊಮ್ಮೆ ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ ಮತ್ತು ಇದಕ್ಕಾಗಿ ನೀವು ಅಸಮಾಧಾನಗೊಳ್ಳುತ್ತೀರಿ. ಈ ವರ್ಷ ಕೆಲವು ಜನರ ತಮ್ಮ ಕುಟುಂಬದಿಂದ ಪ್ರತ್ಯೇಕತೆಯು ಸಂಭವಿಸಬಹುದು. ಇದಲ್ಲದೆ ಈ ವರ್ಷ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕಾರ್ಯ ನಿರತರಾಗಿರುವ ಕಾರಣದಿಂದ ಮತ್ತು ಜೀವನದ ಇತರ ಅಂಶಗಳಿಗೆ ಹೆಚ್ಚಿನ ಸಮಯವನ್ನು ನೀಡುವುದರಿಂದ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ, ಇದರ ಕೊರತೆಯು ನಿಮ್ಮ ಕುಟುಂಬ ಸದಸ್ಯರನ್ನು ತೊಂದರೆಗೊಳಿಸುತ್ತದೆ.

ನೀವು ಕುಟುಂಬವನ್ನು ಒಟ್ಟಿಗೆ ಇರಿಸಲು ಬಯಸಿದರೆ ನಿಮ್ಮ ಜೀವನದಲ್ಲಿ ಕೆಲವು ಹೊಂದಾಣಿಕೆಗಳಿಗೆ ನೀವು ಸಿದ್ಧರಾಗಿರಬೇಕು. ಇಲ್ಲದಿದ್ದರೆ ಪರಿಸ್ಥಿತಿ ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ನೀವು ನಿಮ್ಮ ಕುಟುಂಬದೊಂದಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ನಿಮ್ಮ ಕಡೆಯಿಂದ ಹೆಚ್ಚು ಕೊಡುಗೆ ನೀಡಲು ಸಿದ್ಧರಾಗಿರಬೇಕು. ಆದ್ದರಿಂದ, ಯಾವುದೇ ನಿರ್ಧಾರಕ್ಕೆ ಮುಂಚಿತವಾಗಿ ನೀವು ಪೂರ್ಣ ಸಮಯ ತೆಗೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ಚಿಂತನಶೀಲವಾಗಿ ಪರಿಹರಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಸಂಪನ್ಮೂಲಗಳನ್ನು ಸಜ್ಜುಗೊಳಿಸುವುದು ನಿಮಗೆ ಅಗತ್ಯವಾಗಿರುತ್ತದೆ. ವರ್ಷದ ಮಧ್ಯದಲ್ಲಿ ಕುಟುಂಬ ಜೀವನದಲ್ಲಿ ಕಳವಳಗಳು ಹೆಚ್ಚಾಗಬಹುದು. ಆದರೆ ನೀವು ಎಲ್ಲರನ್ನೂ ಒಟ್ಟಾಗಿ ಸೇರಿಸಿ ನಡೆದರೆ, ಕ್ರಮೇಣ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಪೂರ್ತಿ ವರ್ಷ ನೀವು ಕುಟುಂಬ ಜೀವನದಲ್ಲಿ ಮಿಶ್ರಿತ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಧಾನವಾಗಿ, ಆದರೆ ವಿವಿಧ ಸಮಸ್ಯೆಗಳ ಹೊರತಾಗಿಯೂ, ಕುಟುಂಬದಲ್ಲಿ ಶಾಂತಿಯ ವಾತಾವರಣ ನಿಧಾನವಾಗಿ ಬೆಳೆಯುತ್ತದೆ. ಏಪ್ರಿಲ್ ನಿಂದ ಜೂಲೈ ಮಧ್ಯೆ ಗುರು ಮತ್ತು ಶನಿಯ ಆರನೇ ಮನೆಯಲ್ಲಿ ಇರುವ ಕಾರಣದಿಂದ ನೀವು ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಇದರೊಂದಿಗೆ, ಸಾಮಾಜಿಕ ಸೇವೆಯ ಕೆಲವು ಕಾರ್ಯಗಳನ್ನು ನೈತಿಕ ಕಟ್ಟುಪಾಡುಗಳಾಗಿ ನಿರ್ವಹಿಸುತ್ತೀರಿ.

ಸಿಂಹ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಸಿಂಹ ರಾಶಿ ಭವಿಷ್ಯ

ಕನ್ಯಾ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Virgo Family Horoscope 2020 Kannadaಕನ್ಯಾ ರಾಶಿ ಜಾತಕ 2020 ರ ಪ್ರಕಾರ, ಈ ವರ್ಷವು ನಿಮ್ಮ ಕುಟುಂಬ ಜೀವನಕ್ಕೆ ಬಹಳ ಶುಭಕರವಾಗಿರುತ್ತದೆ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಬಲಗೊಳ್ಳುತ್ತದೆ ಮತ್ತು ಪರಸ್ಪರರ ಸಹಾಯದಿಂದ ಕುಟುಂಬವು ಸಮೃದ್ಧಿಯನ್ನು ಸಾಧಿಸುತ್ತದೆ ಮತ್ತು ಪರಸ್ಪರ ಬಗ್ಗೆ ಗೌರವವೂ ಹೆಚ್ಚಾಗುತ್ತದೆ. ವರ್ಷದ ಆರಂಭದಲ್ಲಿ, ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಮತ್ತು ಸದ್ಭಾವನೆಯ ವಾತಾವರಣವಿರುತ್ತದೆ ಮತ್ತು ನೀವೂ ಸಹ ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕುಟುಂಬದ ಕಡೆಗೆ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸುತ್ತೀರಿ. ಕುಟುಂಬದಲ್ಲಿ ದೀರ್ಘಕಾಲದ ಸಮಸ್ಯೆ ಇದ್ದರೆ, ಅದನ್ನು ನಿವಾರಿಸಲಾಗುತ್ತದೆ. ಜುಲೈ ಮತ್ತು ನವೆಂಬರ್ ನಡುವೆ ನೀವು ಅನೇಕ ಕುಟುಂಬ ಜವಾಬ್ದಾರಿಗಳನ್ನು ಪೂರೈಸುವಿರಿ ಅದು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ ಮತ್ತು ಸಮಾಜದಲ್ಲಿ ನಿಮಗೆ ಗೌರವವೂ ಸಿಗುತ್ತದೆ ಮತ್ತು ನಿಮ್ಮನ್ನು ಪ್ರಸಿದ್ಧ ವ್ಯಕ್ತಿ ಎಂದು ಕರೆಯಲಾಗುತ್ತದೆ.

ಕನ್ಯಾ ರಾಶಿ 2020 ರ ಪ್ರಕಾರ, ಈ ವರ್ಷ ನೀವು ಮುಂದೆ ಹೋಗಿ ನಿಮ್ಮ ಕುಟುಂಬದ ಬಗೆಗಿನ ನಿಮ್ಮ ನೈತಿಕ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಬೇಕು ಮತ್ತು ನಿಮ್ಮ ಕುಟುಂಬ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು ಮತ್ತು ಅದಕ್ಕೆ ಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಲು ಸಿದ್ಧರಾಗಿರಬೇಕು. ಕುಟುಂಬ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿ ಮತ್ತು ನೀವು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆದರೆ, ನಿಮ್ಮ ಬಗ್ಗೆ ಪ್ರೀತಿಯ ಭಾವನೆಯನ್ನು ಬೆಳೆಸಿಕೊಳ್ಳುತ್ತೀರಿ, ಇದು ನಿಮ್ಮ ಕುಟುಂಬ ಜೀವನದ ಬೆಳವಣಿಗೆಗೆ ಅವಶ್ಯಕವಾಗಿದೆ. ನಿಮ್ಮ ಕುಟುಂಬದ ಅಗತ್ಯಗಳಿಗೆ ನೀವು ಹೆಚ್ಚು ಜವಾಬ್ದಾರಿಯುತ ಮತ್ತು ಜವಾಬ್ದಾರರಾಗಿರುತ್ತೀರಿ. ಆದರೆ ಮತ್ತೊಂದೆಡೆ ನೀವು ಚಿಂತೆಗಳಿಂದ ದೂರವಿರಬೇಕು, ಅದು ನಿಮ್ಮನ್ನು ಬಹಳ ಮಟ್ಟಿಗೆ ವಿಚಲಿತಗೊಳಿಸುತ್ತದೆ. ನಿಮ್ಮ ವೈಯಕ್ತಿಕ ಮತ್ತು ಕುಟುಂಬ ಜೀವನದಲ್ಲಿ ಯಾವುದೇ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಇದರೊಂದಿಗೆ, ನಿಮ್ಮ ಕುಟುಂಬ ಜೀವನವು ಸುಗಮವಾಗಿ ಸಾಗುವುದು ಮಾತ್ರವಲ್ಲದೆ ನೀವು ತೃಪ್ತಿಯಿಂದ ಉಸಿರಾಡುವಿರಿ.

ಕನ್ಯಾ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಕನ್ಯಾ ರಾಶಿ ಭವಿಷ್ಯ

ತುಲಾ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Libra Family Horoscope 2020 Kannadaತುಲಾ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬ ಜೀವನವು ಸಾಕಷ್ಟು ಮಟ್ಟಿಗೆ ಸರಾಗವಾಗಿ ಹೋಗುತ್ತದೆ.ನೀವು ಯಾವುದೇ ಕೆಲಸದ ವಿಷ್ಯದನ್ನು ನಿಮ್ಮ ಕುಟುಂಬದಿಂದ ಇಂದಿನವರೆಗೂ ದೂರ ವಾಸಿಸುತ್ತಿದ್ದರೆ, ಈ ನೀವು ನಿಮ್ಮ ಮನೆಗೆ ಮರಳಿ ಬರುತ್ತಿರಿ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ವಲ್ಪ ಕಳೆಯಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ, ನೀವು ಇಂದಿನವರೆಗೂ ಕುಟುಂಬದಲ್ಲಿ ಇದ್ದು ಕೆಲಸ ಮಾಡುತ್ತಿದ್ದರೆ , ಈಗ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಮತ್ತು ನೀವು ಮನೆಯಿಂದ ದೂರ ಹೋಗಿ ವಾಸಿಸಲು ಪ್ರಾರಂಭಿಸಬಹುದು. ಕುಟುಂಬ ಹಿರಿಯರೊಂದಿಗಿನ ನಿಮ್ಮ ಸಂಬಂಧ ಹದಗೆಡಬಹುದು ಅಥವಾ ನಿಮ್ಮ ಆಲೋಚನೆಗಳಲ್ಲಿ ಸಾಕಷ್ಟು ವ್ಯತ್ಯಾಸ ಬರಬಹುದು. ಆದರೆ ಏಪ್ರಿಲ್ ನಿಂದ ಜೂಲೈ ಮಧ್ಯದ ವರೆಗಿನ ಸಮಯವೂ ನಿಮ್ಮ ಕುಟುಂಬ ಜೀವನಕ್ಕೆ ಬಹಳಷ್ಟು ಅನುಕೂಲಕರವಾಗಿರಬಹುದು ಮತ್ತು ಈ ಸಮಯದಲ್ಲಿ ಕುಟುಂಬದ ಸದಸ್ಯರಲ್ಲಿ ಕೌಟುಂಬಿಕ ಸಾಮರಸ್ಯವೂ ಹೆಚ್ಚಾಗಬಹುದು ಮತ್ತು ಕುಟುಂಬದ ವಾತಾವರಣ ಅನುಕೂಲಕರವಾಗಿರುತ್ತದೆ.

ತುಲಾ ರಾಶಿ ಭವಿಷ್ಯ 2020 (Tula Rashi 2020) ರ ಪ್ರಕಾರ, ಮಾರ್ಚ್ ನಂತರ ಕುಟುಂಬವು ಸಮಾಜದಲ್ಲಿ ಉತ್ತಮ ಖ್ಯಾತಿಯನ್ನು ಪಡೆಯುತ್ತದೆ ಮತ್ತು ಕುಟುಂಬದ ವಾತಾವರಣವು ಸೌಹಾರ್ದಯುತವಾಗಿ ಉಳಿಯುತ್ತದೆ. ಆದರೆ ಇದಕ್ಕಾಗಿ ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಏಕೆಂದರೆ ನಿಮಗೆ ಮುಖ್ಯವಾಗಿ ಕೆಲಸದ ಕ್ಷೇತ್ರ ಮತ್ತು ಕುಟುಂಬ ಜೀವನ ಎರಡರಲ್ಲೂ ಅಗತ್ಯವಿರುತ್ತದೆ ಮತ್ತು ನೀವು ಎರಡರಲ್ಲೂ ವೇಗವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ನಿಮ್ಮ ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ಎಲ್ಲ ಪ್ರಯತ್ನಗಳನ್ನು ಮಾಡಿ ಮತ್ತು ಮನೆಯಲ್ಲಿ ಯಾವುದೇ ಚರ್ಚೆ ಇಲ್ಲದಿದ್ದರೆ ಅದು ಉತ್ತಮವಾಗಿರುತ್ತದೆ. ಹಣ ಮತ್ತು ಕಾನೂನಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನಿಮ್ಮ ಕುಟುಂಬಕ್ಕೆ ಪ್ರಸ್ತುತಪಡಿಸಬಹುದು, ಆದರೆ ಅವುಗಳಿಂದ ಭಯಪಡುವ ಅಗತ್ಯವಿಲ್ಲ, ತಾಳ್ಮೆಯನ್ನು ಪ್ರಸ್ತುತಪಡಿಸುವಾಗ ನೀವು ನಿರ್ಧಾರಗಳನ್ನು ತೆಗೆದುಕೊಂಡರೆ, ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕುಟುಂಬ ಸದಸ್ಯರು ನಿಮ್ಮೊಂದಿಗೆ ಸೇರಿಕೊಂಡರೆ ಮತ್ತು ನೀವು ಅವರಿಗೆ ಸಮಾನ ಗೌರವ ಮತ್ತು ಆತಿಥ್ಯವನ್ನು ನೀಡಿದರೆ, ಹೆಚ್ಚಿನ ಮಟ್ಟಿಗೆ ನೀವು ತೊಂದರೆಗಳ ಸುಂಟರಗಾಳಿಯಿಂದ ಹೊರಬರಲು ಸಾಧ್ಯವಾಗುತ್ತದೆ.

ತುಲಾ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ತುಲಾ ರಾಶಿ ಭವಿಷ್ಯ

ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Scorpio Family Horoscope 2020 Kannadaವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬ ಜೀವನವು ಉತ್ತಮವಾಗಿರಬಹುದು , ಆದರೂ ಕೇತುವಿನ ಸೆಪ್ಟೆಂಬರ್ ತನಕ ಎರಡನೇ ಮನೆಯಲ್ಲಿ ಸ್ಥಾನವು ನಡುವೆ ಒತ್ತಡವನ್ನು ಹೆಚ್ಚಿಸುವ ಕೆಲಸ ಮಾಡಬಹುದು. ಎರಡನೇ ಮನೆಯಲ್ಲೇ ಗುರುವು ಇರುವುದರ ಕಾರಣದಿಂದಾಗಿ , ಹೊಸ ಸದಸ್ಯ ಕುಟುಂಬಕ್ಕೆ ಬರಬಹುದು. ಯಾರೊಬ್ಬರ ಮದುವೆ ಅಥವಾ ಮಗುವಿನ ಜನನದಂತೆ. ತಂದೆಯ ಆರೋಗ್ಯ ಸ್ವಲ್ಪ ದುರ್ಬಲವಾಗಿರಬಹುದು, ಆದ್ದರಿಂದ ಅವರನ್ನು ನೋಡಿಕೊಳ್ಳುವುದು ಉತ್ತಮ. ಗುರು ಮತ್ತು ಶನಿಯ ಸ್ಥಾನವು ನಿಮ್ಮನ್ನು ಸಾಮಾಜಿಕವಾಗಿ ಗೌರವಿಸುವ ವ್ಯಕ್ತಿಯಾಗಿ ಸ್ಥಾಪಿಸುತ್ತದೆ ಮತ್ತು ಅದು ನಿಮ್ಮ ಹೆಸರಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ನೀವು ತೀರ್ಥಯಾತ್ರೆಗೆ ಹೋಗುತ್ತೀರಿ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ತೊಡಗುತ್ತೀರಿ. ಸಮಾಜಕ್ಕೆ ಆಸಕ್ತಿಯಿರುವ ಯಾವುದನ್ನಾದರೂ ನೀವು ಮಾಡುತ್ತೀರಿ.

ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ಪ್ರಕಾರ, 2020 ರ ವರ್ಷಕ್ಕೆ ವೃಶ್ಚಿಕ ರಾಶಿಚಕ್ರದ ಜನರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಅದಕ್ಕಾಗಿ ನಿಮಗೆ ಧೈರ್ಯದ ಅಗತ್ಯವಿರುತ್ತದೆ. ಆದರೆ ಒಮ್ಮೆ ನೀವು ನಿರ್ಧಾರ ತೆಗೆದುಕೊಂಡರೆ, ಆ ನಿರ್ಧಾರದ ಫಲಿತಾಂಶದ ಬಗ್ಗೆ ನಿಮಗೆ ಖಚಿತವಾಗುತ್ತದೆ, ಅದು ಹೆಚ್ಚು ಉತ್ತಮವಾಗಿರುತ್ತದೆ. ಆದರೆ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬಾರದು ಎಂದು ನೆನಪಿನಲ್ಲಿಡಿ ಮತ್ತು ಕೇವಲ ಯೋಚಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕು. ಜೂನ್ ನಂತರ, ಪರಿಸ್ಥಿತಿಗಳು ಸಾಕಷ್ಟು ಮಟ್ಟಿಗೆ ಉತ್ತಮಗೊಳ್ಳುತ್ತವೆ ಮತ್ತು ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಸಾಕಷ್ಟು ಅವಕಾಶವಿರುತ್ತದೆ, ಅದು ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಈ ವರ್ಷದಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಸಂಬಂಧವು ಪ್ರೀತಿ ಮತ್ತು ಮಾಧುರ್ಯದಲ್ಲಿ ಬೆಳೆಯುತ್ತದೆ.

ವೃಶ್ಚಿಕ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ವೃಶ್ಚಿಕ ರಾಶಿ ಭವಿಷ್ಯ

ಧನು ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Sagittarius Family Horoscope 2020 Kannadaಧನು ರಾಶಿ ಭವಿಷ್ಯ 2020 ರ ಪ್ರಕಾರ, ವರ್ಷದ ಆರಂಭ ನಿಮ್ಮ ಕೌಟುಂಬಿಕ ಜೀವನಕ್ಕೆ ಸಾಕಷ್ಟು ಅನುಕೂಲಕರವಾಗಲಿದೆ ಮತ್ತು ಇದರ ನಂತರ ಪರಿಸ್ಥಿತಿಗಳು ನಿಮ್ಮ ಪರವಾಗಿ ಇರುತ್ತವೆ. ನೀವು ಆಸ್ತಿಗೆ ಸಂಬಂಧಿಸಿದ ಲಾಭವನ್ನು ಹೊಂದಿದ್ದೀರಿ. ಈ ವರ್ಷ ನೀವು ಕೆಲವು ಆಸ್ತಿಯನ್ನು ಮಾಡುತ್ತೀರಿ. ಕೆಲವು ಆಸ್ತಿಯನ್ನು ಮಾರಾಟ ಮಾಡಿ ಅಥವಾ ಬಾಡಿಗೆಗೆ ಕೊಟ್ಟು ಅದರಿಂದ ಹಣವನ್ನು ಗಳಿಸುತ್ತೀರಿ. ಎರಡನೇ ಮನೆಯಲ್ಲಿ ಶನಿ ದೇವರ ಉಪಸ್ಥಿತಿ ಇರುವುದರಿಂದ ನೀವು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಮತ್ತು ಶನಿಯ ಶುಭವು ನಿಮಗೆ ಕೌಟುಂಬಿಕ ಸಂತೋಷವನ್ನು ನೀಡುತ್ತದೆ. 30 ಮಾರ್ಚ್ ನಿಂದ 30 ಜೂನ್ ಮತ್ತು ಅದರ ನಂತರ 20 ನವೆಂಬರ್ ನಂತರ ಗಮನಾರ್ಹವಾಗಿ ಗುರುವಿನ ಸಾಗಣೆ ನಿಮ್ಮ ಎರಡನೇ ಮನೆಯಲ್ಲಿ ಇದ್ದಾಗ ನಿಮ್ಮ ಕೌಟುಂಬಿಕ ಜೀವನಕ್ಕೆ ಸಮಯ ಅನುಕೂಲಕರವಾಗಲಿದೆ. ಈ ಸಮಯದಲ್ಲಿ ಪರಸ್ಪ ಸಮಬಂಧದಲ್ಲಿ ತೀವ್ರತೆ ಬರುತ್ತದೆ.

ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, ಕುಟುಂಬದಲ್ಲಿ ಯಾವುದಾದರು ಹಬ್ಬ ಅಥವಾ ಕಾರ್ಯಕ್ರಮ ಸಂಭವಿಸಬಹುದು. ಇದಲ್ಲದೆ ಹೊಸ ಸದಸ್ಯ ಬರುವುದರಿಂದಲೂ ನಿಮ್ಮ ಕುಟುಂಬದಲ್ಲಿ ಸಂತೋಷದ ಮಳೆಯಾಗುತ್ತದೆ. ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ ಮತ್ತು ಎಲ್ಲರು ಪರಸ್ಪರ ಬಗ್ಗೆ ಗೌರವದ ಭಾವನೆಯನ್ನು ಹೊಂದಿರುತ್ತಾರೆ. ಇದರಿಂದ ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಹರಳುತ್ತದೆ. ಆದಾಗ್ಯೂ ಮತ್ತೊಂದೆಡೆ 24 ಜನವರಿ ನಂತರ ಶನಿಯ ಎರಡನೇ ಮನೆಯಲ್ಲಿ ಹೋಗುವುದು, ನಿಮ್ಮ ಸ್ಥಳವನ್ನು ಸಹ ಬದಲಾಯಿಸಬಹುದು. ಸ್ವಲ್ಪ ಸಮಯದಕ್ಕಾಗಿ ನೀವು ನಿಮ್ಮ ಕುಟುಂಬದಿಂದ ದೂರ ಹೋಗುವ ಸಾಧ್ಯತೆಯೂ ಇದೆ. ಆದರೆ ಈ ಸಮಯದಲ್ಲಿ ನೀವು ಉತ್ತಮ ಮತ್ತು ಸುಖದಿಂದ ತುಂಬಿರುವ ಜೀವನವನ್ನು ಆನಂದಿಸುವ ಸಾಧ್ಯತೆಯೂ ಇದೆ.

ಧನು ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಧನು ರಾಶಿ ಭವಿಷ್ಯ

ಮಕರ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Capricorn Family Horoscope 2020 Kannadaಮಕರ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಕೌಟುಂಬಿಕ ಜೀವನ ಸಾಮಾನ್ಯವಾಗಿರುವ ಸಾಧ್ಯತೆ ಇದೆ. ಈ ವರ್ಷ ನಿಮ್ಮ ಕುಟುಂಬದ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ಕುಟುಂಬದಲ್ಲಿ ಯಾರಿದಾದರೂ ಮದುವೆ ಆಗುವ ಕಾರಣದಿಂದ ಸಾಮಾಜಿಕವಾಗಿ ನಿಮ್ಮ ಕುಟುಂಬ ಬೆಳೆಯುತ್ತದೆ. ನೀವು ಈ ವರ್ಷ ಸ್ವಲ್ಪ ಹೆಚ್ಚು ಕಾರ್ಯನಿರತರಾಗಿರುತ್ತೀರಿ. ನಿಮ್ಮ ಕುಟುಂಬಕ್ಕೆ ಕಡಿಮೆ ಸಮಯ ನೀಡುತ್ತಿರಿ ಅಥವಾ ಕುಟುಂಬದಿಂದ ದೂರವಿರುತ್ತೀರಿ, ಇದರ ಕಾರಣದಿಂದ ಆಂತರಿಕವಾಗಿ ನೀವು ತೃಪ್ತರಾಗಿರುವುದಿಲ್ಲ. ನೀವು ಒಬ್ಬಂಟಿಯಾಗಿದ್ದರೆ 30 ಮಾರ್ಚ್ ರಿಂದ 30 ಜೂನ್ ಮಧ್ಯ ಮತ್ತು 20 ನವೆಂಬರ್ ನಂತರ ನಿಮ್ಮ ಮದುವೆಯ ಕಾರಣದಿಂದ ಕುಟುಂಬದ ಸದಸ್ಯರು ಕಾರ್ಯನಿರತರಾಗಿರುತ್ತಾರೆ ಮತ್ತು ಕುಟುಂಬದಲ್ಲಿ ನಗು ಮತ್ತು ಸಂತೋಷದ ವಾತಾವರಣ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ ಮತ್ತು ನೀವು ಅವರ ಬಗ್ಗೆ ಕೃತಜ್ಞತೆಯ ಭಾವನೆಯನ್ನು ಹೊಂದಿರುತ್ತೀರಿ.

ಮಕರ ರಾಶಿ ಭವಿಷ್ಯ 2020 ರ ಪ್ರಕಾರ, 18 ರಿಂದ 16 ಆಗಸ್ಟ್ ವರೆಗಿನ ಸಮಯ ನಿಮ್ಮ ತಂದೆ ತಾಯಿ ಮತ್ತು ಸಹೋದರ- ಸಹೋದರಿಯರ ಆರೋಗ್ಯಕ್ಕೆ ಶುಭವಾಗಿಲ್ಲ. ಇದರ ನಂತರ 16 ಆಗಸ್ಟ್ ರಿಂದ 4 ಅಕ್ಟೋಬರ್ ವರೆಗಿನ ಸಮಯವು ಕೌಟುಂಬಿಕ ಜೀವನಕ್ಕೆ ಬಹಳಷ್ಟು ಮಟ್ಟಿಗೆ ಉತ್ತಮವಾಗಲಿದೆ ಮತ್ತು ಈ ಸಮಯದಲ್ಲಿ ನೀವು ಯಾವುದಾದರು ಆಸ್ತಿ ಅಥವಾ ವಾಹನವನ್ನು ಖರೀದಿಸಬಹುದು. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು. ಈ ವರ್ಷ ನೀವು ಮಿಶ್ರಿತ ಅನುಭವಗಳನ್ನು ಅಪಡೆಯುತ್ತೀರಿ ಮತ್ತು ನೀವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಂತಹ ಅನೇಕ ಆಕಾಶಗಳು ಸಹ ಬರುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಆದರೆ ನೀವು ನಿಮ್ಮ ಬುದ್ಧಿವಂತಿಕೆಯ ಆಧಾರದ ಮೇಲೆ ಈ ಎಲ್ಲಾ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತೀರಿ.

ಮಕರ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮಕರ ರಾಶಿ ಭವಿಷ್ಯ

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Aquarius Family Horoscope 2020 Kannadaಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಕುಟುಂಬ ಜೀವನಕ್ಕೆ ಮಿಶ್ರಿತ ಫಲಿತಾಂಶಗಳನ್ನು ತಂದಿದೆ.ವರ್ಷದ ಪೂರ್ವಾರ್ಧದಲ್ಲಿ ಒಂದೆಡೆ ಕುಟುಂಬ ಸಾಮರಸ್ಯ ಇದ್ದರೆ, ನಿಮಮ್ ಮಕ್ಕಳಿಗೆ ಕೆಲವು ಸಮಸ್ಯೆಗಳು ಬರುತ್ತವೆ ಆಹತವ ಅವರ ಅರೋಗ್ಯ ಹದಗೆಡಬಹುದು. ಅದೇ ಸಮಯದಲ್ಲಿ ವರ್ಷದ ಉತ್ತರಾರ್ಧದಲ್ಲಿ ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಪೋಷಕರ ಅರೋಗ್ಯವು ಚಿಂತೆಗೊಳಿಸಬಹುದು. ಇದಲ್ಲದೆ ನೀವು ನಿಮ್ಮ ಕೆಲಸದಲ್ಲಿಯೂ ಹೆಚ್ಚು ಕಾರ್ಯನಿರತರಾಗಿರುತ್ತೀರಿ, ಇದರಿಂದ ಕುಂಭಕ್ಕೆ ಕಡಿಮೆ ಸಮಯವನ್ನು ನೀಡಲಾಗುತ್ತದೆ. ಇದಕ್ಕಾಗಿ ನಿಮ್ಮ ಕುಟುಂಬವು ನಿಮಗೆ ದೂರು ನೀಡುತ್ತದೆ. ಆದಾಗ್ಯೂ ವರ್ಷದ ಆರಂಭವು ಅದ್ಭುತವಾಗಿರುತ್ತದೆ ಮತ್ತು ಆಪ್ತರೊಂದಿಗೆ ಸೇರಿ ತಮ್ಮ ಲಾಭವನ್ನು ಹಂಚಿಕೊಳ್ಳುತ್ತೀರಿ. ಕೌಟುಂಬಿಕ ಜೀವನದಲ್ಲಿ ಸುಖ ಮತ್ತು ಶಾಂತಿ ಉಳಿದಿರುತ್ತದೆ.

ಕುಂಭ ರಾಶಿ ಭವಿಷ್ಯ 2020 (Kumbh Rashi 2020) ರ ಪ್ರಕಾರ ನಿಮ್ಮ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ ಮತ್ತು ಅವರೊಂದಿಗಿನ ನಿಮ್ಮ ಸಂಬಂಧ ಸುಧಾರಿಸುತ್ತದೆ, ಇದರಿಂದ ನಿಮ್ಮ ಕುಟುಂಬದಲ್ಲಿ ಶಾಂತಿ ಬರುತ್ತದೆ. ಸೆಪ್ಟೆಂಬರ್ ಮಧ್ಯದ ನಂತರ ರಾಹುವಿನ ಸಾಗಣೆ ನಿಮ್ಮ ನಾಲ್ಕನೇ ಮನೆಯಲ್ಲಿ ಇರುವುದರಿಂದಾಗಿ ಕೌಟುಂಬಿಕ ಶಾಂತಿಯಲ್ಲಿ ಗ್ರಹಣ ಅಂಟಿಕೊಳ್ಳಬಹುದು. ಆದ್ದರಿಂದ ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಮತ್ತು ವಿಶೇಷವಾಗಿ ನಿಮ್ಮ ತಾಯಿಯ ಆರೋಗ್ಯದ ಬೆಗ್ಗೆ ಕಾಳಜಿ ವಹಿಸಿ. ಏಕೆಂದರೆ ಈ ಸಮಯದಲ್ಲಿ, ಅವರ ಅರೋಗ್ಯವು ಕ್ಷೀಣಿಸಬಹುದು. 28 ಮಾರ್ಚ್ ರಿಂದ 1 ಆಗಸ್ಟ್ ಮಧ್ಯ ನೀವು ವಾಹನವನ್ನು ಖರೀದಿಸುವ ಯೋಗವಿದೆ.

ಕುಂಭ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಕುಂಭ ರಾಶಿ ಭವಿಷ್ಯ

ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ

Pisces Family Horoscope 2020 Kannadaಮೀನಾ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ಕುಟುಂಬ ಜೀವನವು ಏರಿಳಿತಗಳಿಂದ , ಏಕೆಂದರೆ ನಿಮ್ಮ ನಾಲ್ಕನೇ ಮನೆಯಲ್ಲಿ ಸೆಪ್ಟೆಂಬರ್ ಮಧ್ಯದ ವರೆಗೆ ರಾಹುವಿನ ಉಪಸ್ಥಿತಿ ಇರುತ್ತದೆ. ಇದು ನಿಮ್ಮನ್ನು ಸಂಪೂರ್ಣವಾಗಿ ಮನೆಯ ಸುಖವನ್ನು ತೆಗೆದುಕೊಳ್ಳಲು ತಡೆಯಲು ಪ್ರಯತ್ನಿಸುತ್ತದೆ. ನೀವು ಕೆಲಸದಲ್ಲಿ ಹೆಚ್ಚು ಕಾರ್ಯನಿರತರಾಗಿರುತ್ತೀರಿ, ಇದರಿಂದಾಗಿ ಕುಟುಂಬಕ್ಕೆ ಕಡಿಮೆ ಸಮಯ ನೀಡಲಾಗುತ್ತದೆ. ಕೆಅಲ್ವು ಜನರು ತಮ್ಮ ಮನೆಯ ಜಾಗದಲ್ಲಿ ಬಾಡಿಗೆ ಮನೆಯಲ್ಲಿ ಸಂತೋಷವನ್ನು ಕಾಣಬಹುದು.

ಸೆಪ್ಟೆಂಬರ್ ಮಧ್ಯದ ನಂತರ ರಾಹುವಿನ ಸಾಗಣೆ ಮೂರನೇ ಮನೆಯಲ್ಲಿ ಕುಟುಂಬ ಜೀವನದಲ್ಲಿ ಸಂತೋಷವು ಹಿಂತಿರುಗುತ್ತದೆ. ಆದಾಗ್ಯೂ ಮೊದಲು ಗುರು ದೇವರ ದೃಷ್ಟಿ ಮಾರ್ಚ್ ಕೊನೆಯ ವರೆಗೆ ನಿಮ್ಮ ನಾಲ್ಕನೇ ಮನೆಯ ಮೇಲೆ ಉಳಿದಿರುತ್ತದೆ, ಈ ಕಾರಣದಿಂದಾಗಿ ನಿಮ್ಮ ಕುಟುಂಬ ಬೆಳೆಯುವ ಸಾಧ್ಯತೆ ಇದೆ. ಈ ಹೆಚ್ಚಳವು ವ್ಯಕ್ತಿಯ ಮದುವೆ ಅಥವಾ ಶಿಶುವಿನ ಜನನದ ಕಾರಣದಿಂದಾಗಿರಬಹುದು. ಇದರಿಂದ ನಿಮ್ಮ ಕುಟುಂಬದಲ್ಲಿ ಹಬ್ಬದ ವಾತಾವರಣ ಇರುತ್ತದೆ ಮತ್ತು ಎಲ್ಲರು ಸಂತೋಷವಾಗಿ ಕಾಣುತ್ತಾರೆ. ಸೆಪ್ಟೆಂಬರ್ ಮಧ್ಯದ ನಂತರ ನೀವು ಸಮಾಜದಲ್ಲಿ ಗೌರವನ್ನು ಹೊಂದಿರುತ್ತೀರಿ, ಆದಾಗ್ಯೂ ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರ ಆರೋಗ್ಯವು ದುರ್ಬಲವಾಗಿರಬಹುದು. ಈ ಅವಧಿಯಲ್ಲಿ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಮುಂದುವರಿದು ಭಾಗವಹಿಸುತ್ತೀರಿ ಮತ್ತು ಸಂಬಂಧಿಕರೊಂದಿಗೆ ಯಾವುದಾದರು ತೀರ್ಥ ಯಾತ್ರೆಗೆ ಸಹ ಹೋಗಬಹುದು.

ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ, ವರ್ಷದ ಆರಂಭವು ಹೆಚ್ಚು ಉತ್ತಮವಾಗಿರುವುದಿಲ್ಲ. ಏಕೆಂದರೆ ನಿಮ್ಮ ನಾಲ್ಕನೇ ಮನೆಯ ಮೇಲೆ ಐದು ಗ್ರಹಗಳ ಪ್ರಭಾವ ಇರುತ್ತದೆ, ಇದರಿಂದ ಕುಟುಂಬ ಸದಸ್ಯರು ಸಂಘರ್ಷದ ಪರಿಸ್ಥಿತಿಯನ್ನು ಹೊಂದಿರಬಹುದು ಮತ್ತು ನಿಮ್ಮ ತಂದೆ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮೇ ರಿಂದ ಆಗಸ್ಟ್ ವರೆಗಿನ ಸಮಯ ನಿಮ್ಮ ಕೌಟುಂಬಿಕ ಜೀವನಕ್ಕೆ ಬಹಳಷ್ಟು ಉತ್ತಮವಾಗಲಿದೆ ಮತ್ತು ಈ ಅವಧಿಯಲ್ಲಿ ನೀವು ಯಾವುದಾದರು ವಾಹನ ಅಥವಾ ಆಸ್ತಿಯನ್ನುಖರೀದಿಸಲು ಯೋಜಿಸಬಹುದು. ಕುಟುಂಬದ ಸದಸ್ಯರಲ್ಲಿ ಹೆಚ್ಚಿನ ಜನರು ಪರಸ್ಪರ ಮೇಲೆ ಆರೋಪಿಸಬಹುದು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ ಮತ್ತು ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಿ. ಶ್ರೇಷ್ಠತೆಯನ್ನು ತೋರಿಸಿ ಮತ್ತು ಕುಟುಂಬವನ್ನು ಒಟ್ಟಾಗಿ ತೆಗೆದುಕೊಂಡು ನಡೆಯಲು ಪ್ರಯತ್ನಿಸಿ.

ಮೀನಾ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮೀನಾ ರಾಶಿ ಭವಿಷ್ಯ

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer