ಬುಧ ಸಂಚಾರ ಸಿಂಹ ರಾಶಿಯಲ್ಲಿ - Mercury Transit in Leo in Kannada (17 August 2020)
ಬುಧ ಸಂಚಾರವು 17 ಆಗಸ್ಟ್ 2020 ರಂದು 8 ಗಂಟೆ 18 ನಿಮಿಷಕ್ಕೆ ಕರ್ಕದಿಂದ ಸಿಂಹ ರಾಶಿಗೆ ಪ್ರವೇಶಿಸಲಿದೆ ಮತ್ತು ಈ ರಾಶಿಯಲ್ಲಿ ಬುಧ ಗ್ರಹವು 2 ಸೆಪ್ಟೆಂಬರ್ 2020, 11ಗಂಟೆ 52 ನಿಮಿಷದ ವರೆಗೆ ಇರುತ್ತದೆ. ಈ ಸಾಗಿವಿಕೆ ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.
ಯಾವುದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ. ನಿವಾರಣೆಗಾಗಿ ಜ್ಯೋತಿಷಿಯೊಂದಿಗೆ ಪ್ರಶ್ನೆ ಕೇಳಿ
ಸೂರ್ಯನಿಗೆ ಅತ್ಯಂತ ಹತ್ತಿರವಿರುವ ಬುಧನಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಯುವರಾಜನ ಸ್ಥಾನಮಾನ ನೀಡಲಾಗಿದೆ. ಬುಧ ಗ್ರಹವನ್ನು ವ್ಯಾಪಾರ, ಧ್ವನಿ, ಶಿಕ್ಷಣ ಇತ್ಯಾದಿಗಳ ಅಂಶ ಗ್ರಹವೆಂದು ಪರಿಗಣಿಸಲಾಗಿದೆ. ಇದನ್ನು ತರಸ್ಥ ಗ್ರಹವೆಂದು ಸಹ ಕರೆಯಲಾಗುತ್ತದೆ. ಏಕೆಂದರೆ ಅದು ಹ್ಯಾವ ಗ್ರಹದೊಂದಿಗೆ ಸಂಯೋಜನೆ ಮಾಡುತ್ತದೆಯೋ, ಅದರಂತೆಯೇ ಫಲಿತಾಂಶವನ್ನು ಒದಗಿಸಲು ಆರಂಭಿಸುತ್ತದೆ. ಜಾತಕದಲ್ಲಿ ಬುಧ ಗ್ರಹವು ಬಲವಾದ ಸ್ಥಾನದಲ್ಲಿದ್ದರೆ, ಇದು ನಿಮ್ಮನ್ನು ತಾರ್ಕಿಕ ಬುದ್ಧಿವಂತಿಕೆ, ಗಣಿತ ವಿಷಯಗಳಲ್ಲಿ ಉತ್ತಮ ತಿಳುವಳಿಕೆ ಮತ್ತು ಉತ್ತಮ ಉದ್ಯಮಿಗಳನ್ನಾಗಿ ಮಾಡುತ್ತದೆ. ಜಾತಕದಲ್ಲಿ ಬುಧವು ಅಸಹ್ಯಕರವಾಗಿದ್ದರೆ, ಚರ್ಮಕ್ಕೆ ಸಮಬಂಧಿಸಿದ ರೋಗಗಳು ಸಂಭವವಿಸಬಹುದು ಮತ್ತು ಅಂತಹ ವ್ಯಕ್ತಿ ತಮ್ಮ ಮಾತುಗಳನ್ನು ಸಪಷ್ಟವಾಗಿ ಜನರ ಮುಂದಿಡಲು ಸಹ ಸಾಧ್ಯವಾಗುವುದಿಲ್ಲ. ಈ ಬುಧ ಗ್ರಹದ ಸಂಚಾರವು 17 ಆಗಸ್ಟ್ ರಂದು ಸಿಂಹ ರಾಶಿಯಲ್ಲಿ ಸಂಭವಿಸಲಿದೆ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ತಿಳಿಯಿರಿ ನಿಮ್ಮ ಚಂದ್ರ ರಾಶಿ
ಬುಧ ಸಂಚಾರ ಸಿಂಹ ರಾಶಿಯಲ್ಲಿ
- ಮೇಷ ರಾಶಿ
ಬುಧ ಸಂಚಾರವು ಮೇಷ ರಾಶಿಚಕ್ರದ ಐದನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ಬುದ್ಧಿ, ಮಕ್ಕಳು, ಜ್ಞಾನ, ಇತ್ಯಾದಿಗಳ ಬಗ್ಗೆ ಪರಿಗಣಿಸಲಗುತ್ತದೆ. ತಮ್ಮ ಸೃಜನಶೀಲಾ ಗುಣಗಳನ್ನು ತಮ್ಮ ವ್ಯಾಪಾರವಾಗಿ ಪರಿವರ್ತಿಸಲು ಬಯಸುತ್ತಿರುವ ಜನರಿಗೆ ಈ ಸಂಚಾರವು ಬಹಳ ಶುಭವಾಗಿರುತ್ತದೆ.
ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ. ಆದರೆ ಮಕ್ಕಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ನೀವು ಚಿಂತೆಕ್ಕೊಳಗಾಗಬಹುದು. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ. ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ಪ್ರೀತಿಪಾತ್ರರೊಂದಿಗೆ ಯಾವುದೇ ವಿಷಯದ ಬಗ್ಗೆ ವ್ಯತ್ಯಾಸಗಳು ಉಂಟಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಒಬ್ಬಂಟಿಯಾಗಿರುವವರು ಈ ಸಮಯದಲ್ಲಿ ಸಂದಿಗ್ಧ ಸ್ಥಿತಿಯಲ್ಲಿರುತ್ತಾರೆ. ಹೊಸ ಸಂಬಂಧವನ್ನು ಹೊಂದುವ ಆಲೋಚನೆ ಖಂಡಿತವಾಗಿಯೂ ನಿಮ್ಮ ಮನಸ್ಸಿನಲ್ಲಿ ಬರುತ್ತದೆ, ಆದರೆ ಇದರಿಂದ ಉಂಟಾಗುವ ನಷ್ಟ - ಪ್ರಯೋಜನಗಳಂ ಬಗ್ಗೆ ಯೋಚಿಸಿ ನೀವು ಹಿಂದೆ ಸರಿಯಬಹುದು.
ಕ್ರೀಡೆಗಳನ್ನು ಆಡುವ ಅಥವಾ ಮೆದುಳಿನ ಕ್ರೀಡೆ (ಚೆಸ್)ಆಡುವಂತಹ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು
ಯಶಸ್ವಿಯಾಗಲಿದೆ. ನೀವು ಭವಿಷ್ಯದ ಬಗ್ಗೆ ಯೋಜಿಸುತ್ತಿದ್ದರೆ, ಈ ಸಮಯ ಬಹಳ ಉತ್ತಮ. ಈ ಸಮಯದಲ್ಲಿ ನೀವು
ಭವಿಷ್ಯದ ಯೋಜನೆಗಳನ್ನು ಉತ್ತಮ ದೂರದೃಷ್ಟಿಯಂತೆ ಮಾಡುವಿರಿ. ಆದಾಗ್ಯೂ ಹೊಸ ಕಾರ್ಯ ಆರಂಭಿಸುವುದನ್ನು
ನೀವು ತಪ್ಪಿಸಬೇಕು ಮತ್ತು ಯಾರಿಂದಲೂ ಸಾಲ ತೆಗೆದುಕೊಳ್ಳಬಾರದು.
ಪರಿಹಾರ - ನಿಮ್ಮ ತಂಗಿ ಅಥವಾ ಅತ್ತೆಗೆ ಹಸಿರು ಬಣ್ಣದ ವಸ್ತುಗಳ ದಾನ ಮಾಡಿ.
- ವೃಷಭ ರಾಶಿ
ಬುಧ ಸಂಚಾರವು ವೃಷಭ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಈ ಸಂಚಾರದ ಕಾರಣದಿಂದಾಗಿ ಕುಟುಂಬ ಜೀವನದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಮನೆಯ ಮೂಲಕ ತಾಯಿ, ಸಂತೋಷ ಸಂಪನ್ಮೂಲಗಳ ಬಗ್ಗೆ ಪರಿಗಣಿಸಲಾಗುತ್ತದೆ.
ಈ ಸಾಗಣೆ ನಿಮ್ಮ ತಾಯಿಗೆ ಶುಭವೆಂದು ಸಾಬೀತುಪಡಿಸುತ್ತದೆ. ಅವರು ಉದ್ಯೋಗದಲ್ಲಿದ್ದರೆ, ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ನಿರ್ವಹಣಾ ಕ್ಷೇತ್ರಕ್ಕೆ ಸಂಬಂಧಿಸಿದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಬಯಸಿದ ಫಲಿತಾಂಶಗಳನ್ನು ಪಡೆಯಬಹುದು. ಪ್ರಾಥಮಿಕ ಶಿಕ್ಷಣ ಗಳಿಸುತ್ತಿರುವ ವಿದ್ಯಾರ್ಥಿಗಳು ಮನಸ್ಸನ್ನು ಹೊಂದು ಅಧ್ಯಯನ ಮಾಡಬೇಕೆಂದು ಸಲಹೆ ನೀಡಲಾಗಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸಲಾಗುತ್ತದೆ.
ಕುಟುಂಬ ಮತ್ತು ಕೆಲಸದ ಸ್ಥಳದ ಉತ್ತಮ ಸ್ಥಿತಿಯ ಕಾರಣದಿಂದಾಗಿ ನಿಮ್ಮ ಮನಸ್ಸಿನಲ್ಲಿ ಶಾಂತಿ ಉಳಿದಿರುತ್ತದೆ. ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಹೊಸ ಆಭೂಷಣಗಳನ್ನು ಖರೀದಿಸಲು ನಿಮ್ಮನ್ನು ಕೇಳಬಹುದು. ಮತ್ತೊಂದೆಡೆ ಕೆಲವು ಸ್ಥಳೀಯರು ಈ ಸಮಯದಲ್ಲಿನ ಹೊಸ ವಾಹನವನ್ನು ಖರೀದಿಸಲು ಸಹ ಆಲೋಚಿಸಬಹುದು. ಆದಾಗ್ಯೂ ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಶೀತದಂತಹ ಸಣ್ಣ ಪುಟ್ಟ ಕಾಯಿಲೆಗಳು ನಿಮ್ಮನ್ನು ಕಾಡಬಹುದು.
ಪರಿಹಾರ - ಬುಧವಾರದಂದು ಶ್ರೀ ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.
- ಮಿಥುನ ರಾಶಿ
ಬುಧ ದೇವ ಮಿಥುನ ರಾಶಿಚಕ್ರದ ಮೂರನೇ ಮನೆಗೆ ಸಾಗಾಣಿಸುತ್ತಾರೆ. ಈ ಮನೆಯ ಮೂಲಕ ನಿಮ್ಮ ಧೈರ್ಯ, ಪರಾಕ್ರಮ, ಕಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧ, ಸಣ್ಣ ಪ್ರಯಾಣಗಳು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧವನ್ನು ಸಂವಹನ ಗ್ರಹವೆಂದು ಪರಿಗಣಿಸಲಾಗಿದೆ ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಧ್ವನಿಯಿಂದ ಜನರನ್ನು ಮೆಚ್ಚುಸುವಲ್ಲಿ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ಈ ರಾಶಿಚಕ್ರದ ಜನರು ಪ್ರವಾಸಗಳನ್ನು ಮಾಡುವುದು ಶುಭಾವೈಗುರುತದೆ. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಿದರೆ, ನಿಮಗೆ ಪ್ರಯೋಜನವಾಗಬಹುದು.
ಉದ್ಯೋಗದಲ್ಲಿರುವ ಈ ರಾಶಿಚಕ್ರದ ಜನರಿಗೆ ಈ ಸಮಯ ಉತ್ತಮವಾಗಿರುತ್ತದೆ ಆದರೆ ನೀವು ನಿಮ್ಮ ಅಹಂಕಾರದ ಭಾವನೆಯನ್ನು ನಿಯಂತ್ರಿಸುವ ಅಗತ್ಯವಿದೆ. ನೀವು ನಿಮ್ಮನ್ನು ಉತ್ತಮವೆಂದು ತೋರಿಸಲು ಪ್ರಯತ್ನಿಸುತ್ತಿದ್ದರೆ, ಸಹೋದ್ಯೋಗಿಗಳೊಂದಿಗೆ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ. ಎಲ್ಲರನ್ನು ಒಂದೇ ಸಮಾನವಾಗಿ ನೋಡುವುದನ್ನು ಕಲಿಯಿರಿ. ಅದನ್ನು ಮಾಡುವುದರಿಂದ ವಿರೋಧಾಭಾಸವನ್ನು ಪರಿಹರಿಸಬಹುದು. ಸೃಜಶೀಲ ಕೆಲಸದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಜೀವನದಲ್ಲಿ ಪ್ರತಿಯನ್ನು ಪಡೆಯಬಹುದು.
ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಬೇಕು. ಯಾವುದೇ ಕಾರಣದಿಂದ ಸಹೋದರ ಸಹೋದರಿಯರೊಂದಿಗಿನ ಸಂಬಂಧದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ಯಾವುದೇ ಹೊಸ ಒಪ್ಪಂದವನ್ನು ಎಚ್ಚರಿಕೆಯಿಂದ ಮಾಡಬೇಕು. ಯಾವುದೇ ರೀತಿಯ ಅಪಾಯವನ್ನು ತುಂಬಾ ಯೋಚಿಸಿ ತೆಗೆದುಕೊಳ್ಳಿ. ಅನುಭವಿ ಜನರ ಸಲಹೆಯನ್ನು ಪಡೆದುಕೊಂಡು ಮುಂದುವರಿಯುವುದು ನಿಮಗೆ ಉತ್ತಮವಾಗಿರುತ್ತದೆ.
ಪರಿಹಾರ - ಬುಧವಾರದಂದು ತುಪ್ಪದ ದೀಪವನ್ನು ಬೆಳಗಿಸಿ ಮತ್ತು ವಿಷ್ಣು ದೇವರನ್ನು ಪೂಜಿಸಿ.
- ಕರ್ಕ ರಾಶಿ
ಬುಧ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯು ನಿಮ್ಮ ಸಂಪತ್ತು, ಕುಟುಂಬ, ಧ್ವನಿ, ಉದ್ದೇಶ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಸಂಚಾರದ ಸಮಯದಲ್ಲಿ ಕುಟುಂಬ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮನೆಯ ಒಬ್ಬ ಸದಸ್ಯರ ಕಳಪೆ ಆರೋಗ್ಯವು ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅಂತಹ ಸಮಯದಲ್ಲಿ ಆ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
ಈ ಸಂಚಾರದ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಕೂಡ ದುರ್ಬಲಗೊಳ್ಳಬಹುದು. ಆದಾಯದ ಹೆಚ್ಚಳಕ್ಕಾಗಿ ನೀವು ಆಶಿಸಿದ್ದು ಈ ತಿಂಗಳು ಸಿಗದಿರಬಹುದು. ಇದರ ಹೊರೆತಾಗಿಯೂ ನೀವು ಹೆದರಬಾರದು ಮತ್ತು ಸಾಧ್ಯವಾದಷ್ಟು ಉಳಿತಾಯದ ಬಗ್ಗೆ ಗಮನ ಹರಿಸಬೇಕು. ಅನಗತ್ಯ ವೆಚ್ಚಗಳನ್ನು ತಡೆಯಲು ಉತ್ತಮ ಬಜೆಟ್ ಅನ್ನು ಯೋಜಿಸಬೇಕು. ಈ ಸಮಯದಲ್ಲಿ, ನೀವು ಜನರೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೆ, ಅವುಗಳನ್ನು ತಾಳ್ಮೆಯಿಂದ ಪರಿಹರಿಸಿ ಮತ್ತು ಮಾತನಾಡುವ ರೀತಿಯಲ್ಲಿ ಬದಲಾವಣೆಯನ್ನು ಮಾಡಿ.
ನಿಮ್ಮ ಸಹೋದರ ಸಹೋದರಿಯರು ಈ ಸಮಯದಲ್ಲಿ ವಿದೇಶದಿಂದ ಲಾಭವನ್ನು ಪಡೆಯಬಹುದು. ವಿದೇಶದಲ್ಲಿ ಅವರು ಉತ್ತಮ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ. ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ನೀವು ತಾಳ್ಮೆಯನ್ನು ಇಟ್ಟುಕೊಂಡು ಸ್ಥಿತಿಗಳನ್ನು ಧೈರ್ಯವಾಗಿ ಎದುರಿಸಿದರೆ, ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.
ಪರಿಹಾರ - ಬುಧವಾರದಂದು ಅಗತ್ಯವಿರುವವರಿಗೆ ದಾನ ಮಾಡಿ.
- ಸಿಂಹ ರಾಶಿ
ಬುಧ ಗ್ರಹವು ಸಿಂಹ ರಾಶಿಚಕ್ರದ ಲಗ್ನದ ಮನೆಗೆ ಸಾಗಣಿಸಲಿದೆ. ಲಗ್ನದ ಮನೆಯ ಮೂಲಕ ನಿಮ್ಮ ವ್ಯಕ್ತಿತ್ವ, ಆತ್ಮ, ದೇಹ, ಅರೋಗ್ಯ, ಚಿತ್ರ, ಬುದ್ಧಿ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಬುಧ ಸಂಚಾರದಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಮಹತ್ವಾಕಾಂಕ್ಷೆಗಳು ಹೆಚ್ಚಾಗುತ್ತವೆ ಮತ್ತು ಅವುಗಳನ್ನು ಪಡೆಯಲು ಕೂಡ ನೀವು ಸಂಪೂರ್ಣವಾಗಿ ಪ್ರಯತ್ನಿಸುತ್ತೀರಿ. ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯವೂ ತುಂಬಾ ಅನುಕೂಲಕರವಾಗಿರುತ್ತದೆ, ನೀವು ಹೊಸ ವಿಷಯಗಳನ್ನು ಕಲಿಯಲು ಬಯಸುವಿರಿ. ತಮ್ಮ ಶಿಕ್ಷಣವನ್ನು ಮುಂದುವರಿಸಲು ಬಯಸುತ್ತಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವೂ ಉತ್ತಮವಾಗಿರುತ್ತದೆ.
ಪರಿಸ್ಥಿತಿ ಮತ್ತು ವಿಷಯಗಳನ್ನು ಅರ್ತಿಮಾಡಿಕೊಳ್ಳುವ ನಿಮ್ಮ ಸಾಮರ್ಥ್ಯವು ಈ ಸಮಯದಲ್ಲಿ ಹೆಚ್ಚಾಗುತ್ತದೆ. ನೀವು ಹಾಡುವುದು, ನುಡಿಸುವುದು, ನೃತ್ಯ ಮಾಡುವುದು ಮುಂತಾದ ಕೆಲವು ಸೃಜನಶೀಲ ಕೆಲಸಗಳನ್ನು ಮಾಡುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ಕಲೆಯಲ್ಲಿ ಹೆಚ್ಚು ಹೊಳಪು ನೋಡಬಹುದು. ಈ ರಾಶಿಚಕ್ರದ ವೃತ್ತಿಪರರು ಮತ್ತು ವ್ಯಾಪಾರಸ್ಥರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ ಆದರೆ ನೀವು ಯಾರನ್ನಾದರೂ ವ್ಯಂಗ್ಯ ಮಾಡುವುದನ್ನು ತಪ್ಪಿಸಬೇಕು, ನಿಮ್ಮ ಯಾವುದೇ ಮಾತು ಇನ್ನೊಬರ ಹೃದಯವನ್ನು ನೋಯಿಸಬಹುದು. ನಿಮ್ಮ ಆರ್ಥಿಕ ಭಾಗದ ಬಗ್ಗೆ ಮಾತನಾಡಿದರೆ, ಈ ಸಮಯ ಸಾಮಾನ್ಯವಾಗಿರುತ್ತದೆ. ಹೂಡಿಕೆ ಮಾಡಲು ಬಯಸುತ್ತಿದ್ದರೆ, ಅನುಭವಿ ವ್ಯಕ್ತಿಯ ಸಲಹೆಯನ್ನು ಪಡೆಯಿರಿ. ಸಾಮಾಜಿಕ ಜೀವನದಲ್ಲಿ ಬುಧ ಸಂಚಾರದಿಂದ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ, ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
ಪರಿಸ್ಥಿತಿ - ಬುಧವಾರದಂದು ಹತ್ತು ವರ್ಷಕ್ಕಿಂತ ಚಿಕ್ಕ ಹುಡುಗಿಯರಿಗೆ ಉಡುಗೊರೆಯನ್ನು ನೀಡಿ.
- ಕನ್ಯಾ ರಾಶಿ
ಬುಧ ಸಂಚಾರವು ಕನ್ಯಾ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ. ಇದು ನಷ್ಟ, ಅನಗತ್ಯ ವೆಚ್ಚ ಇತ್ಯಾದಿಯ ಮನೆಯಾಗಿದೆ. ಬುಧ ಸಂಚಾರದ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರು ತುಂಬಾ ಜಾಗರೂಕತೆಯಿಂದ ಇರಬೇಕು. ನೀವು ತಪ್ಪು ಹೇಳುವುದನ್ನು ತಪ್ಪಿಸಬೇಕು ಮತ್ತು ಕೆಟ್ಟ ಸಹವಾಸದಿಂದ ದೂರವಿರಬೇಕು. ನೀವು ಕೆಟ್ಟ ಜನರೊಂದಿಗೆ ಇದ್ದರೆ, ಯಾವುದೇ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ಆತ್ಮ ವಿಶ್ವಾಸದಲ್ಲಿ ಕೊರತೆ ಉಂಟಾಗುತ್ತದೆ. ಈ ಕಾರಣದಿಂದ ನಿಮ್ಮ ಅನೇಕ ಅವಶ್ಯಕ ಕೆಲಸಗಳು ಸಿಲುಕಿಕೊಳ್ಳುತ್ತವೆ.
ಈ ಸಮಯದಲ್ಲಿ ನಿಮ್ಮ ಮನೋಬಲವನ್ನು ಹೆಚ್ಚಿಸಲು ನೀವು ಯೋಗ ಧ್ಯಾನವನ್ನು ಆಶ್ರಯಿಸಬೇಕು. ವ್ಯಾಪಾರಸ್ಥರು ಮತ್ತು ವೃತ್ತಿಪರರಿಗೆ ಕೂಡ ಬುಧ ಸಂಚಾರವು ಸವಾಲುಗಳಿಂದ ತುಂಬಿರಲಿದೆ, ಆದರೆ ವಿದೇಶದೊಂದಿಗೆ ವ್ಯಾಪಾರದಲ್ಲಿ ತೊಡಗಿರುವ ಅಥವಾ ವಿದೇಶಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರು ಈ ಅವಧಿಯಲ್ಲಿ ಶುಭ ಸಂದೇಶವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಆರ್ಥಿಕ ಭಾಗವನ್ನು ಬಲಪಡಿಸಲು ಪ್ರಯತ್ನಿಸುತ್ತೀರಿ. ಈ ರಾಶಿಚಕ್ರದ ಕೆಲವು ಸ್ಥಳೀಯರ ಆರೋಗ್ಯವು ಈ ಸಮಯದಲ್ಲಿ ಹದಗೆಡಬಹುದು, ಹೊಟ್ಟೆ ಮತ್ತು ಚರ್ಮಕ್ಕೆ ಸಮಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಕೈಗೆ ತೆಗೆದುಕೊಳ್ಳಬೇಡಿ, ಇದು ನಿಮಗೆ ಉತ್ತಮವಾಗಿರುತ್ತದೆ.
ಪರಿಹಾರ - ಬುಧ ಗ್ರಹ ಶುಭ ಪರಿಣಾಮವನ್ನು ಪಡೆಯಲು ಬುಧ ಬೀಜ ಮಂತ್ರವನ್ನು ಜಪಿಸಿ.
- ತುಲಾ ರಾಶಿ
ತುಲಾ ರಾಶಿಚಕ್ರದ ಹನ್ನೊಂದನೇ ಮನೆಯಲ್ಲಿ ಬುಧ ಗ್ರಹವು ಸಂಚರಿಸಲಿದೆ. ಈ ಮನೆಯನ್ನು ಲಾಭದ ಮನೆಯೆಂದು ಸಹ ಕರೆಯಲಗುತದೆ, ಇದರ ಮೂಲಕ ನಿಮ್ಮ ಬಯಕೆಗಳು, ಸ್ನೇಹಿತರು ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ತುಲಾ ರಾಶಿಚಕ್ರದ ಜನರಿಗೆ ಬುಧ ಗ್ರಹವು ಅನೇಕ ಉಡುಗೊರೆಗಳನ್ನು ತರಲಿದೆ. ನೀವು ಆಮದು-ರಾಫ್ತಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ನಿಮ್ಮ ಐದು ಬೆರಳುಗಳು ತುಪ್ಪದಲ್ಲಿರಬಹುದು. ಈ ಸಮಯದಲ್ಲಿ ನಿಮ್ಮ ಆಸೆಗಳು ಈಡೇರುತ್ತವೆ. ಈ ಸಮಯದಲ್ಲಿ ಈ ರಾಶಿಚಕ್ರದ ಅನೇಕ ಜನರು ತಮ್ಮ ತಂದೆ ಅಥವಾ ಸರ್ಕಾರದ ಮೂಲಕ ಲಾಭವನ್ನು ಪಡೆಯಬಹುದು.
ನಿಮ್ಮ ತಂದೆಯ ಬೆಂಬಲವು ನಿಮ್ಮ ಅನೇಕ ಸಮಸ್ಯೆಗಳನ್ನು ಈ ಸಮಯದಲ್ಲಿ ನಿವಾರಿಸಬಹುದು. ಆದಾಗ್ಯೂ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಲಾಭಕ್ಕಾಗಿ ನೀವು ಅಳತೆ ಮಾಡುವುದನ್ನು ಕಾಣಲಾಗುತ್ತದೆ. ಇದನ್ನು ಮಾಡುವುದರಿಂದ ಮುಂಬರುವ ಸಮಯದಲ್ಲಿ ನಿಮಗೆ ಹಾನಿಕಾರಕವಾಗಬಹುದು. ಆದ್ದರಿಂದ ಅದನ್ನು ಮಾಡದಿರುವುದು ನಿಮಗೆ ಉತ್ತಮ. ನೀವು ನಿಮ್ಮ ನಡವಳಿಕೆಯಲ್ಲಿ ಅಹಂಕಾರವನ್ನು ಕಡಿಮೆ ಮಾಡಿದರೆ ಈ ಸಮಯದಲ್ಲಿ ಸಮಾಜದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ತುಲಾ ರಾಶಿಚಕ್ರದ ಜನರು ತಮ್ಮ ಆಪ್ತರ ಮೂಲಕ ಈ ಸಮಯದಲ್ಲಿ ಲಾಭವನ್ನು ಪಡೆಯಬಹುದು.
ಪರಿಹಾರ - ಬುಧವಾರದಂದು ವಿಷ್ಣು ದೇವರನ್ನು ಪೂಜಿಸಿದರೆ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
- ವೃಶ್ಚಿಕ ರಾಶಿ
ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಗೆ ಸಾಗಲಿದೆ. ಈ ಮನೆಯ ಮೂಲಕ ನಿಮ್ಮ ಕರ್ಮದ ಬಗ್ಗೆ ಪರಿಗಣಿಸಲಾಗುತ್ತದೆ ಮತ್ತು ಇದರೊಂದಿಗೆ ನಿಮ್ಮ ಕೆಲಸದ ಸ್ಥಳ, ನಾಯಕತ್ವದ ಗುಣಗಳು, ಗೌರವ, ಯಶಸ್ಸು ಇತ್ಯಾದಿಗಳ ಬಗ್ಗೆ ಕೂಡ ಪರಿಗಣಿಸಲಾಗುತ್ತದೆ. ಸಾರ್ವಜನಿಕ ವ್ಯಹಾರದಲ್ಲಿ ತೊಡಗಿರುವಂತಹ ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ತುಂಬಾ ಉತ್ತಮವಾಗಿರುತ್ತದೆ. ಇದರೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಸಮಬಂಧಿಸಿದ ಜನರಿಗೆ ಸಹ ಈ ಸಮಯ ಉತ್ತಮವಾಗಿದೆ, ನಿಮ್ಮ ಮಾತುಗಳ ಮೂಲಕ ನೀವು ಜನರ ಮೇಲೆ ಪರಿಣಾಮ ಬೀರಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ರಾಶಿಚಕ್ರದ ಸ್ಥಳೀಯರ ಆರ್ಥಿಕ ಭಾಗದ ಬಗ್ಗೆ ಮಾತನಾಡಿದರೆ, ಅದು ಸಹ ಸುಧಾರಿಸುತ್ತದೆ. ನೀವು ಶೇರ್ ಮಾರುಕಟ್ಟೆಯಲ್ಲಿ ಹಣಕಾಸಿನ ಹೂಡಿಕೆ ಮಾಡಿದರೆ, ಈ ಸಮಯದಲ್ಲಿ ನಿಮಗೆ ಲಾಭವನ್ನು ಗಳಿಸಬಹುದು. .
ವೃತ್ತಿಪರ ಮತ್ತು ವ್ಯಾಪಾರಸ್ಥರು ಕೂಡ ಈ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಆದಾಗ್ಯೂ ಉದ್ಯೋಗದಲ್ಲಿ ಜನರು ಈ ಸಮಯದಲ್ಲಿ ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಯಾವುದೇ ರೀತಿಯ ವಿವಾದವನ್ನು ತಪ್ಪಿಸಬೇಕು. ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಜನರು ಈ ಸಮಯದಲ್ಲಿ ತಮ್ಮ ಕೆಲಸದ ಬಗ್ಗೆ ಪ್ರಶಂಸೆಯನ್ನು ಪಡೆಯಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ ಆದರೆ ತಾಯಿಯ ಆರೋಗ್ಯದಲ್ಲಿ ಕೊರತೆ ಉಂಟಾಗಬಹುದು, ಈ ಸಮಯದಲ್ಲಿ ನೀವು ನಿಮ್ಮ ತಾಯಿಯೊಂದಿಗೆ ಸಮಯವನ್ನು ಕಳೆಯಬೇಕು ಮತ್ತು ಉತ್ತಮ ವೈದ್ಯರಿಂದ ಅವರಿಗೆ ಚಿಕಿತ್ಸೆ ಮಾಡಿಸಬೇಕು. ನಿರುದ್ಯೋಗಿಗಳು ಈ ಸಮಯದಲ್ಲಿ ಬಯಸುವ ಉದ್ಯೋಗವನ್ನು ಪಡೆಯಬಹುದು.
ಪರಿಹಾರ - ಬುಧವಾರದಂದು ಹಸಿವಿಗೆ ಹಸಿರು ಮೇವು ತಿನ್ನಿಸಿದರೆ ಸಕಾರಾತ್ಮಕತೆ ಬರುತ್ತದೆ.
- ಧನು ರಾಶಿ
ಬುಧ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಸಾಗಾಣಿಸುತ್ತದೆ. ಇದನ್ನು ಧರ್ಮ ಮತ್ತು ಅದೃಷ್ಟದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯಲ್ಲಿ ಬುಧ ಸಂಚಾರದಿಂದ ಧನು ರಾಶಿಚಕ್ರದ ಜನರು ಜೀವನದ ಅನೇಕ ಕ್ಷೇತ್ರಗಳಲ್ಲಿ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಸಿಲುಕಿಕೊಂಡಿರುವ ಕೆಲಸಗಳು ಪೂರ್ಣಗೊಳ್ಳಬಹುದು, ಇದರಿಂದಾಗಿ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬ ಜೀವನದಲ್ಲಿ ಇತರ ಸದಸ್ಯರೊಂದಿಗೆ ವಿರೋಧಾಭಾವಿದ್ದರೆ ಈ ಸಮಯದಲ್ಲಿ ಅದು ದೂರವಾಗಬಹುದು. ಇದರಿಂದ ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ.
ತಂದೆ ತಾಯಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ಈ ರಾಶಿಚಕ್ರದ ಉದ್ಯೋಗದಲ್ಲಿರುವ ಜನರು ವೃತ್ತಿ ಜೇವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ವರ್ತನೆಯನ್ನು ಉತ್ತಮವಾಗಿರಿಸಲು ಪ್ರಯತ್ನಿಸಿ. ಬುಧ ಗ್ರಹವು ಒಂಬತ್ತನೇ ಮನೆಗೆ ಸಾಗುವ ಕಾರಣದಿಂದಾಗಿ ನಿಮ್ಮ ಧಾರ್ಮಿಕ ಪ್ರವೃತ್ತಿಯಲ್ಲಿ ಕೊರತೆ ಉಂಟಾಗಬಹುದು. ಇದು ನಿಮ್ಮ ಪ್ರಾಯೋಗಿಕ ಗುಣಗಳಿಗಿಂತ ಭಿನ್ನವಾಗಿದೆ. ಆದ್ದರಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಡೆಯಬೇಡಿ. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಸಂಚಾರದ ಈ ಸಮಯದಲ್ಲಿ ಯಶಸ್ವಿಯಾಗುತ್ತಾರೆ. ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಈ ಸಮಯದಲ್ಲಿ ನೀವು ಯೋಗ ಧ್ಯಾನವನ್ನು ಆಶ್ರಯಿಸಬೇಕು.
ಪರಿಹಾರ - ಬುಧವಾರದಂದು ಬೆಲ್ಲದ ದಾನ ಮಾಡುವುಡ್ ನಿಮಗೆ ಶುಭವಾಗಿರುತ್ತದೆ.
- ಮಕರ ರಾಶಿ
ಬುಧ ಗ್ರಹವು ಶನಿ ಸ್ವಾಮಿತ್ವದ ಮಕರ ರಾಶಿಚಕ್ರದ ಎಂಟನೇ ಮನೆಗೆ ಸಾಗಾಣಿಸುತ್ತದೆ. ಇದರ ಮೂಲಕ ನಿಮ್ಮ ಕೀವಾಣದಲ್ಲಿ ಬರುವ ಅಡೆತಡೆಗಳು, ಸಂಶೋಧನೆ, ಅಪಘಾತ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಯಾವುದೇ ರೀತಿಯ ಸಂಶೋಧನೆಯಲ್ಲಿ ತೊಡಗಿರುವ ಜನರಿಗೆ ಈ ಮನೆಯಲ್ಲಿ ಬುಧ ಸಂಚಾರವು ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ತಂತ್ರ ಮಂತ್ರದಂತಹ ಗೂಢ ವಿಧ್ಯಾಯನ್ನು ಕಲಿಯುವ ಬಗ್ಗೆ ಈ ಸಮಯದಲ್ಲಿ ಆಕರ್ಷಿತರಾಗಬಹುದು. ಆದಾಗ್ಯೂ ಅಂತಹ ವಿಧ್ಯೆಯನ್ನು ಬಹಳ ಯೋಚಿಸಿ ಅರ್ಥಮಾಡಿಕೊಂಡು ಮಾತ್ರ ಕಲಿಯಲು ಪ್ರಯತ್ನಿಸಬೇಕು. ವೃತ್ತಿಪರರು ಮತ್ತು ವ್ಯಾಪಾರಸ್ಥರು ಈ ಸಮಯದಲ್ಲಿ ತಮ್ಮ ಶತ್ರುಗಳಿಂದ ತುಂಬಾ ಎಚ್ಚರದಿಂದಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಶತ್ರುಗಳು ಸಕ್ರಿಯರಾಗಬಹುದು.
ಕೆಲವು ಜನರು ಅರೋಗ್ಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ನಿರಂತರ ಪ್ರಯತ್ನಗಳನ್ನು ಮಾಡಬೇಕಾಗಿದೆ. ಈ ಸಮಯದಲ್ಲಿ ಹೊರಗಿನ ಹುರಿದ ಮತ್ತು ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಬೇಕು. ಬುಧ ಗ್ರಹದ ಈ ಸಂಚಾರದ ಸಮಯದಲ್ಲಿ ನೀವು ಸಾಲದ ವಹಿವಾಟುಗಳನ್ನು ತಪ್ಪಿಸಬೇಕು, ಇಲ್ಲದಿದ್ದರೆ ಹಣಕಾಸಿನ ಹಾನಿಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಪ್ರಯಾಣಿಸಲು ಹೋಗುತ್ತಿದ್ದರೆ, ನಿಮ್ಮ ಸಾಮಾನುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಕಳ್ಳತನದ ಸಾಧ್ಯತೆ ಇದೆ. ಪ್ರಯಾಣದಲ್ಲಿ ಹೆಚ್ಚು ದುಬಾರಿ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ,
ಪರಿಹಾರ - ಬುಧವಾರದಂದು ನಪುಂಸಕರ ಆಶೀರ್ವಾದವನ್ನು ಪಡೆಯಿರಿ.
- ಕುಂಭ ರಾಶಿ
ಬುಧ ಗ್ರಹವು ವಾಯು ಅಂಶದ ಕುಂಭ ರಾಶಿಚಕ್ರದ ಸ್ಥಳೀಯರ ಏಳನೇ ಮನೆಗೆ ಸಾಗಾಣಿಸಲಿದೆ. ಇದು ಮದುವೆ ಮತ್ತು ಜೀವನದಲ್ಲಿ ಉಂಟಾಗುವ ಪಾಲುದಾರಿಕೆಯ ಮನೆಯಾಗಿದೆ. ಬುಧ ಸಂಚಾರದ ಸಮಯದಲ್ಲಿ ನೀವು ಹೊಸ ಜನರೊಂದಿಗೆ ಸೇರಬಹುದು ಮತ್ತು ಅವರಿಂದ ಹೊಸ ವಿಷಯಗಳನ್ನು ಕಲಿಯಬಹುದು. ಕೆಲಸದ ವಿಷಯದಲ್ಲಿ ಪ್ರಯಾಣಿಸುತ್ತಿರುವ ಈ ರಾಶಿಚಕ್ರದ ಜನರು ಲಾಭವನ್ನು ಪಡೆಯಬಹುದು. ಉದ್ಯೋಗದಲ್ಲಿರುವ ಜನರಿಗೆ ಈ ಸಂಚಾರವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೆ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರ ಜೀವನದಲ್ಲಿ ಬಿಕ್ಕಟ್ಟುಗಳು ಉಂಟಾಗಬಹುದು. ಯಾವುದೇ ವಿಷಯದ ಬಗ್ಗೆ ಪಾಲುದಾರರೊಂದಿಗೆ ವಿರೋಧಾಬಾಸ ಉಂಟಾಗಬಹುದು ಆದ್ದರಿಂದ ಅವರೊಂದಿಗೆ ಸ್ಪಷ್ಟವಾಗಿ ಮಾತನಾಡಿದರೆ ಪರಿಹಾರವನ್ನು ಪಡೆಯಬಹುದು. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ವರ್ತನೆಯಲ್ಲಿ ತುರಾತುರಿಯನ್ನು ಕಾಣಲಾಗುತ್ತದೆ. ಇದರಿಂದಾಗಿ ನಿಮ್ಮ ಅನೇಕ ಕೆಲಸಗಳು ಹದಗೆಡಬಹುದು. ಆದ್ದರಿಂದ ಮನಸ್ಸನ್ನು ಸ್ಥಿರವಾಗಿರಿಸಲು ಧ್ಯಾನವನ್ನು ಆಶ್ರಯಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಆರ್ಥಿಕ ಭಾಗ ಸಾಮಾನ್ಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಯಾವುದೇ ಕಾರಣದಿಂದಾಗಿ ದೀರ್ಘಕಾಲದಿಂದ ಸಿಲುಕಿಕೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಲು ಈ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ಯಾವುದೇ ರೀತಿಯ ಹೊಸ ಕೆಲಸ ಆರಂಭಿಸುವುದನ್ನು ತಪ್ಪಿಸಿ.
ಪರಿಹಾರ - ಬುಧವಾರದಂದು ವಿಷ್ಣು ದೇವರನ್ನು ಪೂಜಿಸಿ ಮತ್ತು ಅವರ ವಿಗ್ರಹ ಅಥವಾ ಚಿತ್ರಕ್ಕೆ ಶ್ರೀಗಂಧದ ತಿಲಕವನ್ನು ಹಚ್ಚಿಸಿ.
- ಮೀನಾ ರಾಶಿ
ಬುಧ ಗ್ರಹವು ಮೀನಾ ರಾಶಿಚಕ್ರದ ಸ್ಥಳೀಯರ ಆರನೇ ಮನೆಗೆ ಸಾಗಲಿದೆ. ಆರನೇ ಮನೆಯನ್ನು ರಿಪು ಮನೆಯೆಂದು ಸಹ ಕರೆಯಲಾಗುತ್ತದೆ. ಮತ್ತು ಇದರ ಮೂಲಕ ಋಣ, ವಿವಾದ, ಕೊರತೆ, ಗಯಾ, ಅವಮಾನ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಆರನೇ ಮನೆಯಲ್ಲಿ ಬುಧ ಸಂಚಾರದ ಸಮಯದಲ್ಲಿ ನೀವು ನಿಮ್ಮ ತಂದೆ ತಾಯಿಯ ಆರೋಗ್ಯದ ಬಗ್ಗೆ ವಿಶೇಶ ಕಾಳಜಿ ವಹಿಸಬೇಕು. ಅವರ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ. ಅವರಿಗೆ ಏನಾದರು ತೊಂದರೆ ಉಂಟಾದರೆ ತಕ್ಷಣವೇ ಯಾರಾದರೂ ಅನುಭವಿ ವೈದ್ಯರ ಸಲಹೆಯನ್ನು ಪಡೆಯಿರಿ. ಪ್ರಾಪರ್ಟಿ ಖರೀದಿಸಲು ಅಥವಾ ಮಾರಾಟ ಮಾಡಲು ಈ ಸಮಯ ಉತ್ತಮವಾಗಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗದಲ್ಲಿರುವ ಈ ರಾಶಿಚಕ್ರದ ಸಂಚಾರದ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರಸ್ಥರು ಈ ಸಮಯದಲ್ಲಿ ಯಾವುದೇ ವಹಿವಾಟು ಅಥವಾ ಯಾವುದೇ ನಿರ್ಧಾರವನ್ನು ತುಂಬಾ ಜಾಗರೂಕತೆಯಿಂದ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಹಾನಿಯಾಗುವ ಸಾಧ್ಯತೆ ಇದೆ.
ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಮೀನಾ ರಾಶಿಚಕ್ರದ ವಿದ್ಯಾರ್ಥಿಗಳು ಬುಧ ಸಂಚಾರದ ಸಮಯದಲ್ಲಿ ಯಶಸ್ಸು ಪಡೆಯಬಹುದು. ವಿವಾಹಿತ ಜನರ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ವಿಷಯಗಳನ್ನು ಸಪಷ್ಟಪಡಿಸುವುದು ಎಷ್ಟು ಮುಖ್ಯ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ನೀವು ನಿಮ್ಮ ಮಾತುಕತೆಯಲ್ಲಿ ಸ್ಪಷ್ಟತೆಯನ್ನು ತಾದಾಗ, ಪರಿಸ್ಥಿಯು ಸ್ವತಃ ಸುಧಾರಿಸುತ್ತದೆ. ಒಟ್ಟಾರೆಯಾಗಿ, ಮೀನಾ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
ಪರಿಹಾರ - ಬುಧವಾರದಂದು ಬ್ರಾಹ್ಮಣರಿಗೆ ಹಣ್ಣುಗಳ ದಾನ ಮಾಡಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025